ಸದೃಢ ಸಮಾಜ ನಿರ್ಮಾಣಕ್ಕೆ ಆರ್‍ಎಸ್‍ಎಸ್ ಕಟಿಬದ್ಧ
ಕೊಡಗು

ಸದೃಢ ಸಮಾಜ ನಿರ್ಮಾಣಕ್ಕೆ ಆರ್‍ಎಸ್‍ಎಸ್ ಕಟಿಬದ್ಧ

January 2, 2020

ವಿರಾಜಪೇಟೆ, ಜ.1- ಸಮಾಜ ಕಲ್ಯಾಣ, ವ್ಯಕ್ತಿ ವಿಕಸನ ಮತ್ತು ಸಧೃಡ ಸಮಾಜ ನಿರ್ಮಾಣಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಟಿಬದ್ಧವಾಗಿದೆ ಎಂದು ಸಂಘದ ಜಿಲ್ಲಾ ಸಂಪರ್ಕ ಪ್ರಮುಖ್ ಅರುಣ್ ಕುಮಾರ್ ಅಭಿಮತ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರಾಜಪೇಟೆ ನಗರ ಶಾಖಾ ವಾರ್ಷಿಕೋ ತ್ಸವದ ಪ್ರಮುಖ್ಯತೆ ಬಗ್ಗೆ ಬೌದಿಕ್ ನೀಡಲು ಆಗಮಿಸಿದ್ದ ಅರುಣ್ ಕುಮಾರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಟತ್ಮಾಕ ಕಾರ್ಯಗಳು ಶಾಖೆಯ ಮೂಲಕವೇ ನಡೆಯುತ್ತದೆ ಎಂದು ಹೇಳಿದರು.

ಪ್ರತಿಯೊಂದು ಶಾಖೆಯು ಸಾರ್ವ ಜನಿಕ ಬಯಲು ಸ್ಥಳಗಳಲ್ಲಿ ಒಂದು ಗಂಟೆಯ ಕಾಲ ನಿಗಧಿತ ಸಮಯದಲ್ಲಿ ನಡೆಯುತ್ತಿರುವುದೇ ಒಂದು ವಿಶೇಷ. ಶಾಖೆಯು ಸ್ವಯಂ ಸೇವಕರಿಗೆ ರಾಷ್ಟ್ರ ಭಕ್ತಿ, ಮೌಲ್ಯಯುತವಾದ ಜೀವನ ಸಾಗಿ ಸುವ ವಿಧಾನ, ಶಾರೀರಿಕ ವ್ಯಾಯಮ ಗಳು, ಬೌದಿಕ್, ತುರ್ತು ಸಂದರ್ಭ ಎದುರಿಸುವ ವಿಧಾನಗಳು, ಸ್ವಚ್ಚತೆ ಬಗ್ಗೆ ತಿಳುವಳಿಕೆ, ದೇಶಭಕ್ತಿ ಗಾಯನ ಹೀಗೆ ಹಲವಾರು ವಿಚಾರಗಳನ್ನು ಸ್ವಯಂ ಸೇವಕರಿಗೆ ಶಾಖೆಯಲ್ಲಿ ತಿಳಿಸಿಕೊಡ ಲಾಗುತ್ತಿದೆ. ಅಂಕಿ ಅಂಶಗಳ ಪ್ರಕಾರ ದೇಶ ಮತ್ತು ವಿದೇಶಗಳಲ್ಲಿ ಒಟ್ಟು 50 ಸಾವಿರ ನಿತ್ಯ ಶಾಖೆಗಳು ಕಾರ್ಯನಿರ್ವಹಿಸು ತ್ತಿದ್ದು, ಉತ್ತಮ ಸಮಾಜ ನಿರ್ಮಾಣ ಮಾಡಲು ಕಂಕಣ ಬದ್ದವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು. ನವ ಭಾರತ ನಿರ್ಮಾಣದ ಪರಿಕಲ್ಪನೆ ಕನಸು ಸಾಕಾರ ಗೊಳಿಸುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅರುಣ್ ಕುಮಾರ್ ಹೇಳಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಗಮಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತಾಲೂಕು ಸಂಘ ಚಾಲಕ್ ಪ್ರಿನ್ಸ್ ಗಣಪತಿ, ಸ್ವಯಂ ಸೇವಕರು ಸಂಘದ ತತ್ವ ಸಿದ್ದಾಂತಗಳ ಅವಲಂಬಿಸಿ ಕೊಂಡು ಮುಂದುವರಿಯಬೇಕು. ಶಾಖೆ ಯಲ್ಲಿ ಸ್ವಯಂ ಸೇವಕರ ಸಂಖ್ಯೆ ಹೆಚ್ಚಾಗ ಬೇಕು. ಸಮಾಜ ನಿರ್ಮಾಣದಲ್ಲಿ ಸಂಘಟಿತ ವಾಗಿ ಮುನ್ನಡೆಯಬೇಕು ಎಂದು ಸಲಹೆ ನೀಡಿ ದರು. ಚಾಮುಂಡಿ ಶಾಖಾ ವಾರ್ಷಿಕೊತ್ಸವ ದಲ್ಲಿ ಬಾಲಕ ಸ್ವಯಂ ಸೇವಕರಿಂದ ಶಾರೀರಿಕ್, ದಂಡ ಪ್ರಯೋಗ, ಪಥ ಸಂಚ ಲನ, ಯೋಗ ನಿಯುದ್ದ ಮತ್ತು ದೇಶಭಕ್ತಿ ಗಾಯನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಶಾಖೆಯ ಸ್ವಯಂ ಸೇವಕರು, ಶಾಖಾ ವಿದ್ಯಾರ್ಥಿಗಳ ಪೋಷ ಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Translate »