ಇಂದಿನಿಂದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ
ಕೊಡಗು

ಇಂದಿನಿಂದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ

January 2, 2020

ಮಡಿಕೇರಿ, ಜ.1- ಸಮಗ್ರ ಶಿಕ್ಷಣ ಕರ್ನಾಟಕ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ(ಬಿಜಿವಿಎಸ್) ಸಂಯುಕ್ತಾಶ್ರಯ ದಲ್ಲಿ ರಾಷ್ಟ್ರೀಯ ಆವಿಷ್ಕಾರ ಯೋಜನೆ ಅಡಿಯಲ್ಲಿ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮವು ಜನವರಿ 2 ರಿಂದ ಮೂರು ದಿನಗಳ ಕಾಲ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಯಲ್ಲಿ ನಡೆಯಲಿದೆ ಎಂದು ಸಾರ್ವ ಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ ಅವರು ತಿಳಿಸಿದ್ದಾರೆ.

ಮೂರು ದಿನಗಳ ಕಾಲ ನಡೆಯುವ ವಿಜ್ಞಾನ ಹಬ್ಬದಲ್ಲಿ ಜಿಲ್ಲೆಯ ವಿವಿಧ ಕ್ಲಸ್ಟರ್ ವ್ಯಾಪ್ತಿಯ ಆಯ್ದ ಸರ್ಕಾರಿ ಪ್ರಾಥಮಿಕ ಶಾಲೆಗಳಿಂದ 6, 7 ಮತ್ತು 8 ನೇ ತರಗತಿಯ ಒಟ್ಟು 250 ವಿದ್ಯಾರ್ಥಿಗಳು ಭಾಗವಹಿಸಲಿ ದ್ದಾರೆ. ಮಕ್ಕಳಿಗೆ ವಿವಿಧ ಚಟುವಟಿಕೆಗಳ ಕುರಿತು ತರಬೇತಿ ನೀಡಲು 20 ಮಂದಿ ಸಂಪನ್ಮೂಲ ಶಿಕ್ಷಕರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಮಕ್ಕಳಲ್ಲಿ ಕಲಿಕೆಯ ಪ್ರೇರಣೆ, ಕುತೂ ಹಲ, ಕ್ರಿಯಾಶೀಲತೆ ಹಾಗೂ ಸೃಜನ ಶೀಲತೆ ಬೆಳೆಸುವುದರೊಂದಿಗೆ ಅವರಲ್ಲಿ ತಾರ್ಕಿಕತೆ, ಸಂಶೋಧನಾ ಪ್ರವೃತ್ತಿ ಬೆಳೆ ಸುವ ದಿಸೆಯಲ್ಲಿ ತರಗತಿಯ ಚಟುವಟಿಕೆ ಗಳಿಗೆ ಪೂರಕವಾಗಿ ಪಠ್ಯೇತರ ಚಟುವಟಿಕೆ ಗಳ ಮೂಲಕ ತಮ್ಮ ಕಲಿಕೆ ಉತ್ತಮಪಡಿಸಿ ಕೊಂಡು ಭವಿಷ್ಯದ ಉತ್ತಮ ನಾಗರಿಕ ರಾಗಿ ರೂಪುಗೊಳ್ಳಲು ಈ ಹಬ್ಬವು ಪ್ರೇರಣೆಯಾಗಲಿದೆ. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಈ ಹಬ್ಬವು ಸಹಕಾರಿ ಯಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬವನ್ನು ಯಶಸ್ವಿಯಾಗಿ ಸಂಘಟಿಸುವ ಕುರಿತು ಡಿಡಿಪಿಐ ಪಿ.ಎಸ್.ಮಚ್ಚಾಡೋ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸ ಲಾಯಿತು. ಸಭೆಯಲ್ಲಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಕಾಶೀನಾಥ್, ಕಾರ್ಯಕ್ರಮದ ಸಂಯೋಜಕಿ ಗಂಗಮ್ಮ, ವಿಷಯ ಪರಿವೀಕ್ಷಕಿ ಕೆ.ಆರ್.ಬಿಂದು ಇತರರು ಇದ್ದರು.

ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಬ್ಬ ಸಂಘಟನೆ ಕುರಿತು ಕಾರ್ಯಕ್ರಮದ ಸಂಚಾಲಕಿ ಗಂಗಮ್ಮ ಸಂಪನ್ಮೂಲ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದರು. ವಿಷಯ ಪರಿವೀಕ್ಷಕಿ ಕೆ.ಆರ್.ಬಿಂದು, ಶಾಲೆಯ ಮುಖ್ಯ ಶಿಕ್ಷಕ ಬಿ.ಶಿವರಾಂ, ಸಂಪನ್ಮೂಲ ಶಿಕ್ಷಕರಾದ ಟಿ.ಜಿ.ಪ್ರೇಮಕುಮಾರ್, ಕೆ.ಯು.ರಂಜಿತ್, ಮಾರುತಿ, ಲಲಿತಾ, ಜನಿತಾ, ವಿಲಾಸಿನಿ, ಸಂದೇಶ್, ಶ್ರೀನಿವಾಸ್, ಡಿ.ಎಂ.ರೇವತಿ ಇತರರು ಇದ್ದರು.

ಮಕ್ಕಳ ಟೋಪಿ ತಯಾರಿ: ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಯಲ್ಲಿ ಮಕ್ಕಳ ವಿಜ್ಞಾನ ಹಬ್ಬದ ಪ್ರಮುಖ ಆಕರ್ಷಣೆಯಾದ ಮಕ್ಕಳ ಟೋಪಿ (ವಿಜ್ಞಾನ ಟೋಪಿ)ಯನ್ನು ಶಿಕ್ಷಕರ ಮಾರ್ಗ ದರ್ಶನದಲ್ಲಿ ಮಕ್ಕಳೇ ಕಾಗದದಿಂದ ತಯಾರು ಮಾಡುವ ಮೂಲಕ ಗಮನ ಸೆಳೆದರು.

Translate »