ಮೈಸೂರು 55ನೇ ವಾರ್ಡ್ ವ್ಯಾಪ್ತಿಯ ಫಲಾನುಭವಿಗಳಿಗೆ ಉಚಿತ ಆರೋಗ್ಯ ಕಾರ್ಡ್ ವಿತರಿಸಿ ಹೊಸ ವರ್ಷಾಚರಣೆ
ಮೈಸೂರು

ಮೈಸೂರು 55ನೇ ವಾರ್ಡ್ ವ್ಯಾಪ್ತಿಯ ಫಲಾನುಭವಿಗಳಿಗೆ ಉಚಿತ ಆರೋಗ್ಯ ಕಾರ್ಡ್ ವಿತರಿಸಿ ಹೊಸ ವರ್ಷಾಚರಣೆ

January 2, 2020

ಮೈಸೂರು,ಜ.1(ಆರ್‍ಕೆಬಿ)- ಮೈಸೂ ರಿನ 55ನೇ ವಾರ್ಡ್ ವ್ಯಾಪ್ತಿಯ ವಿವಿಧ ಫಲಾನುಭವಿಗಳಿಗೆ ಬುಧವಾರ ಮೈಸೂ ರಿನ ಚಾಮುಂಡಿಪುರಂನ ತಗಡೂರು ರಾಮ ಚಂದ್ರರಾವ್ ಉದ್ಯಾನವನದಲ್ಲಿ ಉಚಿತ ಆರೋಗ್ಯ ಕಾರ್ಡ್, ಸಂಧ್ಯಾ ಸುರಕ್ಷಾ ಮತ್ತು ವಿಧವಾ ವೇತನ ಆದೇಶ ಪತ್ರ ಮತ್ತು ಶ್ರವಣದೋಷವುಳ್ಳವರಿಗೆ ಶ್ರವಣ ಯಂತ್ರ ಗಳನ್ನು ವಿತರಿಸುವ ಮೂಲಕ ಹೊಸ ವರ್ಷ ವನ್ನು ವಿಭಿನ್ನವಾಗಿ ಆಚರಿಸಲಾಯಿತು.

ವಾರ್ಡ್ ಸದಸ್ಯ ಮಾ.ವಿ.ರಾಮ ಪ್ರಸಾದ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 250 ಜನರಿಗೆ ಉಚಿತ ಆರೋಗ್ಯ ಕಾರ್ಡ್, 25 ಮಂದಿಗೆ ಸಂಧ್ಯಾ ಸುರಕ್ಷಾ ಮತ್ತು ವಿಧವಾ ವೇತನ ಆದೇಶಪತ್ರ ಹಾಗೂ ಶ್ರವಣ ದೋಷವುಳ್ಳ ಇಬ್ಬರಿಗೆ ತಲಾ 1 ಲಕ್ಷ ಮೌಲ್ಯದ ಶ್ರವಣದೋಷ ಉಪಕರಣವನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಜಿಎಸ್‍ಎಸ್ ಯೋಗ ಸಂಸ್ಥೆಯ ಶ್ರೀಹರಿ ವಿತರಿಸಿದರು.

ಈ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಅರೋಗ್ಯ ಚಿಕಿತ್ಸೆಗೆಂದು ಆರೋಗ್ಯ ಕಾರ್ಡ್ ನೀಡ ಲಾಗಿದ್ದು, ಆರೋಗ್ಯ ಚೆನ್ನಾಗಿಟ್ಟುಕೊಂಡರೆ ಈ ಕಾರ್ಡ್‍ನ ಉಪಯೋಗವೇ ಬರುವು ದಿಲ್ಲ. ಕಾರ್ಡ್ ಇದೆಯೆಂದು ಆರೋಗ್ಯ ಹಾಳು ಮಾಡಿಕೊಳ್ಳದೆ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವಂತೆ ಸಲಹೆ ನೀಡಿದರು.

ಪೌರ ಕಾರ್ಮಿಕರು ಸ್ವಚ್ಛತೆ ಸಂದರ್ಭ ದಲ್ಲಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸ ಬೇಕು. ಸ್ವಚ್ಛತಾ ಕಾರ್ಯ ಕೈಗೊಳ್ಳುವ ಸಂದರ್ಭದಲ್ಲಿ ಬಳಸಲೆಂದು ನಗರ ಪಾಲಿಕೆಯಿಂದ ನೀಡಲಾಗುವ ಕೈಚೀಲ, ಕಾಲು ಚೀಲ, ಮಾಸ್ಕ್‍ಗಳನ್ನು ಕಡ್ಡಾಯ ವಾಗಿ ಬಳಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಾರ್ಡ್ ಅಧ್ಯಕ್ಷ ಸಂದೀಪ್, ಧರ್ಮೇಂದ್ರ, ಮೈಕ್ ಚಂದ್ರು, ವಾಸು, ಶ್ರೀಕಂಠ, ಸುಬ್ರಹ್ಮಣ್ಯ ನಾಯಕ್, ಪುಟ್ಟಸ್ವಾಮಿ, ಭಾಸ್ಕರ್, ಶಿವು, ಲಲಿತಾಂಬ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »