`ಸಂಕಲ್ಪ-2020’ ರೋಟರಿ  ವಾರ್ಷಿಕ ಜಿಲ್ಲಾ ಸಮಾವೇಶ
ಮೈಸೂರು

`ಸಂಕಲ್ಪ-2020’ ರೋಟರಿ  ವಾರ್ಷಿಕ ಜಿಲ್ಲಾ ಸಮಾವೇಶ

January 2, 2020

ರೋಟರಿ ಶತಮಾನೋತ್ಸವದ ಅಂಗವಾಗಿ ಮೈಸೂರಲ್ಲಿ ನಾಳೆಯಿಂದ
ಮೈಸೂರು, ಜ.1(ಆರ್‍ಕೆಬಿ)- ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಭಾರತಕ್ಕೆ ಪಾದಾರ್ಪಣೆ ಮಾಡಿ ನೂರು ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ರೋಟರಿ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಮೈಸೂರಿನಲ್ಲಿ ಜ.3ರಿಂದ 5ರವರೆಗೆ `ಸಂಕಲ್ಪ-2020’ ರೋಟರಿ ಜಿಲ್ಲಾ ಸಮಾವೇಶ ಆಯೋಜಿಸಿದೆ.

ಮೈಸೂರಿನ ಆರ್.ಟಿ.ನಗರದ ಡಾ.ಶಿವೇಗೌಡರ ಯುಎಸ್‍ಎ ಫಾರ್ಮ್‍ನಲ್ಲಿ ನಡೆ ಯುವ ಸಮಾವೇಶದಲ್ಲಿ ರೋಟರಿ ಜಿಲ್ಲೆ 3181 ವ್ಯಾಪ್ತಿಗೆ ಒಳಪಡುವ ದಕ್ಷಿಣ ಕನ್ನಡ, ಮಡಿಕೇರಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸುಮಾರು 2 ಸಾವಿರ ಮಂದಿ ರೋಟರಿ ಸದಸ್ಯರು, ಅವರ ಕುಟುಂಬದವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಮಾವೇಶದ ಕೋ-ಛೇರ್ಮನ್ ಎ.ಆರ್.ರವೀಂದ್ರ ಭಟ್ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜ.3ರಂದು ಸಂಜೆ 5 ಗಂಟೆಗೆ ಅಂತಾರಾಷ್ಟ್ರೀಯ ರೋಟರಿ ಅಧ್ಯಕ್ಷರಾಗಲು ನಾಮನಿರ್ದೇಶನಗೊಂಡಿರುವ ಶೇಖರ್ ಮೆಹ್ತಾ ಉದ್ಘಾಟನೆ ನೆರವೇರಿಸುವರು. ಬೆಂಗಳೂರಿನ ರವಿಶಂಕರ್ ದಕೋಜಿ ಅತಿಥಿಯಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ರೋಟರಿ ಸಂಸ್ಥೆ ಕೈಗೊಂಡ ಮಾನವೀಯ ಸೇವೆಗಳ ವಿವರಗಳನ್ನು ಒಳಗೊಂಡ `ಕಾಫಿ ಟೇಬಲ್’ ಪುಸ್ತಕವನ್ನು ಬಿಡುಗಡೆ ಮಾಡ ಲಾಗುವುದು. 4ರಂದು ಬೆಳಗಿನ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ರೋಟರಿ ಅಧ್ಯಕ್ಷರ ಪ್ರತಿನಿಧಿ ಧಮನ್ ಜೀವ್‍ಸಿಂಗ್, ಮಾಜಿ ರಾಯಭಾರಿ ಪ್ರಭುದಯಾಳ್, ಅದಮ್ಯ ಚೇತನ ಸಂಸ್ಥೆ ರೂವಾರಿ ತೇಜಸ್ವಿನಿ ಅನಂತಕುಮಾರ್, ಹಾಸ್ಯಕವಿ ದುಂಡಿರಾಜ್, ಅರೇಕ ಟೀ ಸಂಶೋಧಕ ನಿವೇದನ್ ನೆಂಪೆ, ವಿಶೇಷ ಚೇತನ ವಿಕ್ರಮ್ ಭಾಗವಹಿಸುವರು.

ಜ5ರಂದು ಬೆಳಿಗ್ಗೆ 9.30 ಗಂಟೆಗೆ ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್, ಕಸಾಪ ಅಧ್ಯಕ್ಷ ಮನು ಬಳಿಗಾರ್, ಪತ್ರಕರ್ತ ರಂಗನಾಥ್, ಯೋಗಗುರು ಶರತ್ ಜೋಯಸ್, ಮೈಸೂರಿನ ಯುವ ಪ್ರತಿಭೆ ಪ್ರಣವಿ ಅರಸ್ ಭಾಗವಹಿಸುವರು. ಜಿಲ್ಲಾ ಗೌರ್ನರ್ ಜೋಸೆಫ್ ಮ್ಯಾಥ್ಯೂ ಅಧ್ಯಕ್ಷ ವಹಿಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಸಮಾವೇಶದ ಅಧ್ಯಕ್ಷ ಸ್ಯಾಮ್ ಚೆರಿಯನ್, ಕಾರ್ಯದರ್ಶಿ ಆರ್.ವೆಂಕಟೇಶ್, ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೂ, ಮಾಧ್ಯಮ ಸಮಿತಿ ಛೇರ್ಮನ್ ರಾಜಶೇಖರ ಕದಂಬ ಉಪಸ್ಥಿತರಿದ್ದರು.

Translate »