ಡಿಎಆರ್ ಪೊಲೀಸ್‍ಗೆ ಸಮಗ್ರ ಪ್ರಶಸ್ತಿ
ಮೈಸೂರು

ಡಿಎಆರ್ ಪೊಲೀಸ್‍ಗೆ ಸಮಗ್ರ ಪ್ರಶಸ್ತಿ

January 2, 2020

ಮೈಸೂರು,ಜ.1(ವೈಡಿಎಸ್)- ಜ್ಯೋತಿ ನಗರದ ಡಿಎಆರ್ ಮೈದಾನದಲ್ಲಿ ಬುಧ ವಾರ ನಡೆದ 2019ನೇ ಸಾಲಿನ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ `ಸಮಗ್ರ ಪ್ರಶಸ್ತಿ’ ತನ್ನದಾಗಿಸಿಕೊಂಡಿತು.

ಮೈಸೂರು ಜಿಲ್ಲಾ ಪೊಲೀಸ್ ವತಿ ಯಿಂದ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಎಲ್ಲಾ ಕ್ರೀಡೆಗಳಲ್ಲೂ ಉತ್ತಮ ಆಟ ಪ್ರದ ರ್ಶಿಸಿ 91 ಅಂಕಗಳನ್ನು ಪಡೆದ ಜಿಲ್ಲಾ ಸಶಸ್ತ್ರ ಮೀಸಲು ಪಡೆ(ಡಿಎಆರ್‍ಪಿ) ಪ್ರಶಸ್ತಿ ಪಡೆದುಕೊಳ್ಳುವ ಜತೆಗೆ `ಉತ್ತಮ ಕ್ರೀಡಾ ತಂಡ’ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

100-400-800ಮೀ ಓಟ, ಉದ್ದ-ಎತ್ತರ ಜಿಗಿತದಲ್ಲಿ 25 ಅಂಕ ಪಡೆದ ಡಿಎ ಆರ್‍ನ ಸಶಸ್ತ್ರ ಪೊಲೀಸ್ ಪೇದೆ ರಘು ನಂದನ್ `ಉತ್ತಮ ಪುರುಷ ಕ್ರೀಡಾಪಟು’ ಹಾಗೂ ಶಾಟ್‍ಪುಟ್, ಡಿಸ್ಕರ್ಸ್ ಥ್ರೋ, ಜಾವಲಿನ್ ಥ್ರೋನಲ್ಲಿ 15 ಅಂಕ ಪಡೆದ ವರುಣಾ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಸುಮಾ `ಉತ್ತಮ ಮಹಿಳಾ ಕ್ರೀಡಾ ಪಟು’ ಪ್ರಶಸ್ತಿಗೆ ಭಾಜನರಾದರು.

ಸಮಗ್ರ ಫಲಿತಾಂಶ:

ಡಿವೈಎಸ್‍ಪಿ/ಎಎಸ್‍ಪಿ/ಎಸ್‍ಪಿ ವಿಭಾಗ: ಶಾಟ್‍ಪುಟ್: ಡಿಎಆರ್‍ನ ಹೆಚ್.ಪಿ.ಸತೀಶ್ (ಪ್ರ), ಹುಣಸೂರಿನ ಸುಂದರ್‍ರಾಜ್ (ದ್ವಿ), ಮೈಸೂರು ಜಿಲ್ಲಾ ಘಟಕದ ಸ್ನೇಹಾ (ತೃ). ಡಿಸ್ಕಸ್ ಥ್ರೋ: ಡಿಎಆರ್‍ನ ಹೆಚ್.ಪಿ. ಸತೀಶ್(ಪ್ರ), ಮೈಸೂರು ಜಿಲ್ಲಾ ಘಟಕದ ಸ್ನೇಹ(ದ್ವಿ), ಹುಣಸೂರು ವಿಭಾಗದ ಸುಂದರ್‍ರಾಜ್(ತೃ). ಪಿಸ್ತೂಲ್ ಶೂಟಿಂಗ್: ಮೈಸೂರು ಜಿಲ್ಲಾ ಘಟಕದ ಸ್ನೇಹಾ(ಪ್ರ), ಮೈಸೂರು ಗ್ರಾಮಾಂತರ ವಿಭಾಗದ ಕ್ಷಮಾ ಮಿತ್ರ(ದ್ವಿ), ನಂಜನಗೂಡಿನ ಪ್ರಭಾಕರ್ ರಾವ್ ಶಿಂಧೆ(ತೃ). ಪಿಎಸ್‍ಐ ಅಧಿಕಾರಿಗಳ ಶೆಟಲ್‍ಕಾಕ್(ಸಿಂಗಲ್ಸ್): ವರುಣಾದ ಮಹೇಶ್ ಕುಮಾರ್(ಪ್ರ), ಕೆ.ಆರ್.ನಗರ ರವಿಕುಮಾರ್(ದ್ವಿ). ಮೋಗ್ ಗಾಲ್ಫ್: ಅಡಿಷನಲ್ ಎಸ್‍ಪಿ ಪಿ.ವಿ.ಸ್ನೇಹಾ(ಪ್ರ), ಎಸ್‍ಪಿ ಸಿ.ಬಿ.ರಿಷ್ಯಂತ್(ದ್ವಿ).

ಪಿಎಸ್‍ಐ ಪೊಲೀಸ್ ಅಧಿಕಾರಿಗಳ ವಿಭಾಗ: 100ಮೀ.ಓಟ: ಡಿಎಆರ್‍ನ ಡಿ.ಎಂ. ಶಿವಣ್ಣ(ಪ್ರ), ಬಿಳಿಕೆರೆ ಠಾಣೆಯ ಜಯ ಪ್ರಕಾಶ್(ದ್ವಿ), ಪಿರಿಯಾಪಟ್ಟಣದ ಗಣೇಶ್ (ತೃ). ಶಾಟ್‍ಪುಟ್: ಪಿರಿಯಾಪಟ್ಟಣದ ಗಣೇಶ್(ಪ್ರ), ಕೆ.ಆರ್.ನಗರದ ಚೇತನ್ (ದ್ವಿ), ಬೆಟ್ಟದಪುರದ ಲೋಕೇಶ್(ತೃ). ಡಿಸ್ಕರ್ಸ್ ಥ್ರೋ: ಪಿರಿಯಾಪಟ್ಟಣದ ಗಣೇಶ್ (ಪ್ರ), ಬಿಳಿಕೆರೆಯ ಜಯಪ್ರಕಾಶ್(ದ್ವಿ), ಹುಣ ಸೂರು ಪಟ್ಟಣದ ಮಹೇಶ್(ತೃ). ಜಾವ ಲಿನ್‍ಥ್ರೋ: ಬಿಳಿಕೆರೆಯ ಯಶವಂತ್(ಪ್ರ), ಹುಲ್ಲಹಳ್ಳಿಯ ಸುರೇಂದ್ರ(ದ್ವಿ), ವರುಣಾದ ಜಯರಾಮ್ ನಾಯಕ್(ತೃ). ಪಿಸ್ತೂಲ್ ಶೂಟಿಂಗ್: ಸಿಐಡಿಯ ಭೀಮೇಶ್ ನಾಯಕ್(ಪ್ರ), ನಂ.ಗೂಡು ಗ್ರಾಮಾಂತರ ಠಾಣೆಯ ಟಿ.ಆರತಿ(ದ್ವಿ), ನಂಜನಗೂಡು ಪಟ್ಟಣ ಠಾಣೆಯ ಯಾಸ್ಮಿನ್‍ತಾಜ್(ತೃ).

ಅಧಿಕಾರಿಗಳಿಗೆ ಕ್ರಿಕೆಟ್: ಜಿಲ್ಲಾಧಿಕಾರಿ ಕಚೇರಿಯ ಕಂದಾಯ ಇಲಾಖೆ(ಪ್ರ), ಪೊಲೀಸ್ ಇಲಾಖೆ(ದ್ವಿ). ಲಿಪಿಕ ಸಿಬ್ಬಂದಿ ವರ್ಗ: 50ಮೀ.ಸ್ಟ್ರಿಂಟ್: ಕೃಷ್ಣಪ್ರಸಾದ್(ಪ್ರ), ಗಣೇಶ್ (ದ್ವಿ), ಬಸಪ್ಪ(ತೃ). 100ಮೀ. ವೇಗದ ನಡಿಗೆ (40ವರ್ಷ ಮೇಲ್ಪಟ್ಟವರು): ರಾಮಪ್ರಸಾದ್ (ಪ್ರ), ವೈ.ವೈ.ಬಗಲಿ(ದ್ವಿ), ಎಸ್.ಕುಮಾರ್ (ತೃ). ಶಾಟ್‍ಪುಟ್: ರಾಮಪ್ರಸಾದ್(ಪ್ರ), ಬಸಪ್ಪ(ದ್ವಿ), ಬೋಗೇಶ್(ತೃ). ಡಿಸ್ಕಸ್ ಥ್ರೋ: ಬಿ.ರಾಮಚಂದ್ರ(ಪ್ರ), ಬಸಪ್ಪ(ದ್ವಿ), ಬೋಗೇಶ್ (ತೃ). ಏಮಿಂಗ್ ದಿ ವಿಕೆಟ್: ರಾಮಪ್ರಸಾದ್ (ಪ್ರ), ಕೃಷ್ಣಪ್ರಸಾದ್(ದ್ವಿ), ಚಂದನ್ ಮಹೇಶ್(ತೃ). ಸ್ಲೋ ಬೈಕ್ ರೇಸ್: ಕೃಷ್ಣ ಕಾಂತ್(ಪ್ರ), ಶಿವಪ್ರಕಾಶ್(ದ್ವಿ), ಜಯ ಪ್ರಕಾಶ್(ತೃ). ಮಹಿಳಾ ವಿಭಾಗ: 100 ಮೀ.ಓಟ: ಮೈಸೂರು ದಕ್ಷಿಣ ಠಾಣೆಯ ಆಶಾ(ಪ್ರ), ವಿನಯಶ್ರೀ(ದ್ವಿ), ನಂಜನ ಗೂಡಿನ ಕವಿತಾ(ತೃ). ಉದ್ದ ಜಿಗಿತ: ನಂಜನ ಗೂಡಿನ ಭಾಗ್ಯಶ್ರೀ(ಪ್ರ), ಕವಿತಾ(ದ್ವಿ), ಮೈಸೂರು ದಕ್ಷಿಣದ ವಿನಯಶ್ರೀ(ತೃ). ಎತ್ತರ ಜಿಗಿತ: ನಂಜನಗೂಡಿನ ಕವಿತಾ (ಪ್ರ), ಮೈಸೂರು ದಕ್ಷಿಣದ ವಿನಯಶ್ರೀ (ದ್ವಿ), ನಂಜನಗೂಡಿನ ಸುಮಂಗಲ ಗಿನ್ನಿ(ತೃ). ಶಾಟ್ ಪುಟ್: ಮೈಸೂರು ದಕ್ಷಿಣದ ಎಸ್. ಸುಮಾ(ಪ್ರ), ಆಶಾ(ದ್ವಿ), ವಿಶೇಷ ವಿಭಾ ಗದ ರೇಖಾ(ತೃ). ಡಿಸ್ಕಸ್ ಥ್ರೋ: ಮೈಸೂರು ದಕ್ಷಿಣದ ಎಸ್.ಸುಮಾ(ಪ್ರ), ವಿಶೇಷ ವಿಭಾ ಗದ ರೇಖಾ(ದ್ವಿ), ಮೈಸೂರು ದಕ್ಷಿಣದ ಆಶಾ(ತೃ). ಸಂಜೆ ನಡೆದ ಸಮಾರೋಪದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಬಹುಮಾನ ವಿತರಿಸಿದರು. ಬಳಿಕ ಮಾತ ನಾಡಿ, ದಿನನಿತ್ಯ ಕರ್ತವ್ಯದಲ್ಲಿ ನಿರತರಾಗುವ ಸಿಬ್ಬಂದಿಗಳಿಗೆ ವಿಶ್ರಾಂತಿ ನೀಡಲು ಕ್ರೀಡಾ ಕೂಟ ಆಯೋಜಿಸುತ್ತಿದ್ದು, ಎಲ್ಲರೂ ಉತ್ಸಾಹ ದಿಂದ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ರೀತಿಯೂ ಭಾಗವಹಿಸಬೇಕು ಎಂದರು. ಮೈಸೂರು ವಲಯ-1ರ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಎನ್. ಸಂಜಯ್ ಗಾಂಧಿ, ಅಡಿಷನಲ್ ಎಸ್‍ಪಿ ಪಿ.ವಿ.ಸ್ನೇಹಾ ಉಪಸ್ಥಿತರಿದ್ದರು.

Translate »