ನಗುವನಹಳ್ಳಿ ಗ್ರಾಪಂನಲ್ಲಿ ವೆಬ್‍ಸೈಟ್ ಆರಂಭ
ಮೈಸೂರು

ನಗುವನಹಳ್ಳಿ ಗ್ರಾಪಂನಲ್ಲಿ ವೆಬ್‍ಸೈಟ್ ಆರಂಭ

January 2, 2020

* ಎರಡು ಬಾರಿ ಗಾಂಧಿ ಪುರಸ್ಕಾರ ಪಡೆದ ಗ್ರಾಪಂಗೆ ಮತ್ತೊಂದು ಗರಿ

* ಗ್ರಾಪಂನ ಸಮಗ್ರ ಮಾಹಿತಿ ವೆಬ್‍ಸೈಟ್‍ನಲ್ಲಿ ಲಭ್ಯ

* ಸ್ವಂತ ವೆಬ್‍ಸೈಟ್ ಹೊಂದಿರುವ ಜಿಲ್ಲೆಯ ಮೊದಲ ಪಂಚಾಯಿತಿ ಎಂಬ ಹೆಗ್ಗಳಿಕೆ

ಮಂಡ್ಯ, ಜ.1(ನಾಗಯ್ಯ)- ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ `ಗ್ರಾಮ ಪಂಚಾಯಿತಿಯ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ವೆಬ್‍ಸೈಟ್ (http://naguvanahalligp.in) ಆರಂಭಿಸಲಾಯಿತು.

ಉತ್ತಮ ಆಡಳಿತ ನೀಡಿದ ಫಲವಾಗಿ ಈ ಹಿಂದೆ ನಗುವನಹಳ್ಳಿ ಗ್ರಾಮ ಪಂಚಾ ಯಿತಿಯು ಎರಡು ಬಾರಿ ಗಾಂಧಿ ಪುರಸ್ಕಾರ ಹಾಗೂ ಒಂದು ಬಾರಿ ಸ್ವಚ್ಛ ಗ್ರಾಮ ಪುರ ಸ್ಕಾರ ಪಡೆಯುವ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆಯುವತ್ತ ಹೆಜ್ಜೆ ಇಟ್ಟಿದೆ. ತಾಲೂಕಿನ ಅತ್ಯುತ್ತಮ ಗ್ರಾಮ ಪಂಚಾಯಿತಿ ಎಂದು ಹೆಸರು ಪಡೆದಿರುವ ನಗುವನಹಳ್ಳಿ ಪಂಚಾ ಯಿತಿ ಇದೀಗ ವೆಬ್‍ಸೈಟ್ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳುವುದರೊಂದಿಗೆ ಇತರ ಪಂಚಾಯಿತಿಗಳಿಗೆ ಮಾದರಿಯಾಗಿದೆ.

ಬೆಳಿಗ್ಗೆ ತಾಪಂ ಕಾರ್ಯನಿರ್ವಹಣಾ ಧಿಕಾರಿ ನಾಗವೇಣಿ ಪಂಚಾಯಿತಿಯ ನೂತನ ವೆಬ್‍ಸೈಟ್‍ಗೆ ಚಾಲನೆ ನೀಡಿ ದರು. ಬಳಿಕ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ವೆಬ್‍ಸೈಟ್ ಆರಂಭಿಸ ಲಾಗಿದೆ. ಸ್ವಂತ ವೆಬ್‍ಸೈಟ್ ಹೊಂದಿರುವ ಜಿಲ್ಲೆಯ ಮೊದಲ ಗ್ರಾಮ ಪಂಚಾಯಿತಿ ಇದಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ನಂದಕುಮಾರ್ ಮಾತ ನಾಡಿ, ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿ ಸಲು ವಾಹನ ಖರೀದಿಸಲಾಗಿದೆ. ಶವ ಸಾಗಿಸಲು ವಾಹನ ಖರೀದಿ ಪ್ರಯತ್ನ ನಡೆಯುತ್ತಿದೆ. ಸ್ಮಶಾನದಲ್ಲಿ ಆಸನ ವ್ಯವಸ್ಥೆ ಅಳವಡಿಸಿದ್ದೇವೆ. ಪ್ಲಾಸ್ಟಿಕ್ ಮುಕ್ತ ಗ್ರಾಮ ಪಂಚಾಯಿತಿ ಮಾಡಲು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಗ್ರಾಪಂ ಕಾರ್ಯದರ್ಶಿ ಶಿವಲಿಂಗಯ್ಯ ಮಾತನಾಡಿ, ನಗುವನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಸಂಪೂರ್ಣ ಸೋಲಾರ್ ಶಕ್ತಿ ಆಧಾರಿತ ಕಚೇರಿಯಾಗಿದೆ. ಪರಿಶಿಷ್ಟರ ಕಾಲೋನಿ ಗಳಿಗೆ ಸೋಲಾರ್ ದೀಪ ಅಳವಡಿಸ ಲಾಗಿದೆ. ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಿದ್ದು, ಹಸಿ ಮತ್ತು ಒಣ ಕಸ ಪ್ರತ್ಯೇಕಿಸುವ ಪ್ರಕ್ರಿಯೆ ಆರಂಭವಾಗಿದೆ. ಇ-ಗ್ರಂಥಾ ಲಯ ಆರಂಭಿಸಲು ಸಿದ್ಧತೆ ನಡೆದಿದೆ. ತೆರಿಗೆ ವಸೂಲಿಯಲ್ಲಿ ಶೇ. 80 ರಷ್ಟು ಸಾಧನೆ ಮಾಡಿದ್ದು, ತಾಲೂಕಿನಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಯೋಗೇಶ್, ಸದಸ್ಯ ರಾದ ನಾಗೇಂದ್ರ, ಭಾಸ್ಕರ್, ಮೋಹನ ಕುಮಾರ್, ರಮೇಶ್, ಎನ್.ಯೋಗೇಶ್, ವಸಂತ, ವನಜಾಕ್ಷಿ, ದೇವಮ್ಮ, ಮುಖಂಡರಾದ ಎನ್.ಪ್ರಕಾಶ್, ಎನ್.ವಿ. ಚಲುವರಾಜು, ವೆಂಕಟೇಶ್, ಎನ್.ಶಿವ ಸ್ವಾಮಿ, ವಾಸು, ಕೃಷ್ಣÀ್ಣಪ್ಪ, ಜಯರಾಂ ಇದ್ದರು. ಈ ವೇಳೆ ಗ್ರಾಪಂ ಸಿಬ್ಬಂದಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.

ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಕೈಗೊಂಡಿರುವ ಕಾಮಗಾರಿಗಳು, ಪ್ರಗತಿಯಲ್ಲಿರುವ ಅಭಿವೃದ್ಧಿ ಕಾರ್ಯ, ವಸತಿ ಮತ್ತು ನರೇಗಾ ಯೋಜನೆ, ಶಾಲೆಗಳು, ಅಂಗನವಾಡಿ, ಜನಸಂಖ್ಯೆ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಗ್ರ ಮಾಹಿತಿ ಈ ವೆಬ್ ಸೈಟ್‍ನಲ್ಲಿ ದೊರೆಯಲಿದೆ. – ನಾಗವೇಣಿ, ತಾಪಂ ಇಓ

Translate »