ರೈತರ ಧರಣಿ ಅಂತ್ಯ
ಮೈಸೂರು

ರೈತರ ಧರಣಿ ಅಂತ್ಯ

January 4, 2020

ಮೈಸೂರು, ಜ. 3(ಆರ್‍ಕೆ)- ಜನವರಿ 11ರಂದು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮೈಸೂರಿನ ಡಿಸಿ ಕಚೇರಿ ಬಳಿ 5 ದಿನಗಳಿಂದ ಪವರ್ ಗ್ರಿಡ್ ಮಾರ್ಗ ಬದಲಿಸಲು ಒತ್ತಾಯಿಸಿ ರೈತರು ನಡೆಸುತ್ತಿದ್ದ ಪ್ರತಿಭಟನಾ ಧರಣಿ ಅಂತ್ಯಗೊಂಡಿದೆ.

ರೈತರ ಒತ್ತಾಯದ ಮೇರೆಗೆ ಇಂದು ಮಧ್ಯಾಹ್ನ 3.30 ಗಂಟೆ ವೇಳೆಗೆ ಧರಣಿ ನಿರತ ರೈತರ ಬಳಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‍ರೊಂದಿಗೆ ಆಗಮಿ ಸಿದ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು, 10 ನಿಮಿಷಗಳ ಕಾಲ ರೈತರ ಬೇಡಿಕೆಗಳ ಆಲಿಸಿದರು.

ಈ ಸಂದರ್ಭ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲ ಪುರ ನಾಗೇಂದ್ರ ಅವರು, ಹಿರಿಯೂರಿನಿಂದ ಹಾಸನ ಮಾರ್ಗವಾಗಿ ಹೊಳೆನರಸೀಪುರ, ಕೆ.ಆರ್.ನಗರ ಮೂಲಕ ಮೈಸೂರಿಗೆ 440 ಕೆವಿ ಸಾಮಥ್ರ್ಯದ ಪವರ್ ಗ್ರಿಡ್ ಲೈನ್ ಹಾದು ಬರುತ್ತಿದೆ. ಮಾರ್ಗ ಮಧ್ಯೆ ಮೈಸೂರು ತಾಲೂಕಿನ ಯಾಚೇನಹಳ್ಳಿ, ಹೊಸಕೋಟೆ, ದೊಡ್ಡೇಗೌಡನಕೊಪ್ಪಲು, ಕಲ್ಲೂರು ನಾಗನಹಳ್ಳಿ, ಆನಂದೂರು, ಚಿಕ್ಕನಹಳ್ಳಿ, ಮೇಗಲಾಪುರ, ಮೈದನಹಳ್ಳಿ ಗ್ರಾಮಗಳ ಫಲವತ್ತಾದ ಜಮೀನುಗಳ ಮೇಲೆ ವಿದ್ಯುತ್ ಮಾರ್ಗ ಹಾದು ಹೋಗುತ್ತಿದೆ ಎಂದರು.

ಈ ಹಿಂದೆ ಗುಂಗ್ರಾಲ್ ಛತ್ರದ ಮಾರ್ಗ ಮೂರು ಗ್ರಾಮಗಳು ಸೇರಿದಂತೆ ಈ ಯೋಜನೆಗೆ ಗುರುತಿಸ ಲಾಗಿತ್ತು. ಅಲ್ಲಿ ಒಣಭೂಮಿ ಇದ್ದು, ಬೆಳೆ, ತೆಂಗು, ಮಾವು ಫಸಲಿರಲಿಲ್ಲ. ಆದರೆ ಡೆವಲಪರ್, ರಿಯಲ್ ಎಸ್ಟೇಟ್‍ನವರ ಒತ್ತಡಕ್ಕೆ ಮಣಿದು ಫಲವತ್ತಾದ ತೋಟಗಳ ಮೇಲೆ ಈಗ ಹಾದು ಹೋಗುವಂತೆ ಮಾಡಿದ್ದಾರೆ ಎಂದು ನಾಗೇಂದ್ರ ಆರೋಪಿಸಿದರು.

ಈ ಕುರಿತು ಹಲವು ಬಾರಿ ಸಂಸದರ ಸಮ್ಮುಖ ದಲ್ಲಿ ಸಭೆ ನಡೆದಾಗ ನಾವು ಮಾರ್ಗ ಬದಲಿಸುವಂತೆ ಒತ್ತಾಯಿಸಿದ್ದರೂ, ಆ ಜಾಗದಲ್ಲಿ ಪವರ್ ಗ್ರಿಡ್ ನಿಗಮದ ಅಧಿಕಾರಿಗಳು ಅಳತೆ ಮಾಡಿ ಕಲ್ಲು ನೆಟ್ಟು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಬೆಳೆ ಬೆಳೆಯದ ಒಣ ಭೂಮಿಯಲ್ಲಿ ಯೋಜನೆ ಮಾಡಿ, ಮನೆ, ತೆಂಗಿನ ತೋಟ, ಮಾವು ಮರಗಳಿರುವ ಫಲವತ್ತಾದ ಜಮೀನು ಕಿತ್ತುಕೊಂಡು ರೈತರನ್ನು ಬೀದಿಗೆ ತಳ್ಳಬೇಡಿ ಎಂದು ಅವರು ಒತ್ತಾಯಿಸಿದರು.

ಕಳೆದ 5 ದಿನಗಳಿಂದ ಅನಿರ್ದಿಷ್ಠಾವಧಿ ಧರಣಿ ಮಾಡುತ್ತಿರುವ ರೈತರ ಬಳಿಗೆ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಬರಲಿಲ್ಲ. ವಿಷಯದ ಬಗ್ಗೆ ಚರ್ಚಿಸದಿರುವುದರಿಂದ ಮಾರ್ಗ ಬದಲಿಸುವ ತೀರ್ಮಾನ ಮಾಡುವವರೆಗೂ ಧರಣಿ ನಿಲ್ಲಿಸುವು ದಿಲ್ಲ ಎಂದು ಅವರು ತಿಳಿಸಿದರು.

ಭತ್ತ ಖರೀದಿಗೆ ವಿಧಿಸಿರುವ ನಿಬಂಧನೆ ಸಡಿಲಿ ಸಬೇಕು, ಭತ್ತ ಕಟಾವು ಯಂತ್ರಗಳನ್ನು ಒದಗಿಸಬೇಕು, ತಂಬಾಕು ರೈತನ ಸಮಸ್ಯೆ ನಿವಾರಿಸಬೇಕು, ಬಣ್ಣಾರಿ ಅಮ್ಮನ್ ಕಾರ್ಖಾನೆಯಲ್ಲಿ ಕಬ್ಬು ಖರೀದಿಸಿ ಹಣ ಪಾವತಿಸಲು ಕ್ರಮ ವಹಿಸಬೇಕೆಂದು ನಾಗೇಂದ್ರ ಒತ್ತಾಯಿಸಿದರು. ಕೆಂಚಲಗೂಡಿನಲ್ಲಿ ಗೃಹ ಮಂಡಳಿ ಯಿಂದ ಸ್ವಾಧೀನಪಡಿಸಿಕೊಂಡ ಭೂ ಮಾಲೀಕರಿಗೆ ಎಕರೆಗೊಂದರಂತೆ ನಿವೇಶನ ನೀಡಬೇಕು ಎಂದು ಅವರು ಸಚಿವರಲ್ಲಿ ಮನವಿ ಮಾಡಿದರು.

ಅವರ ಬೇಡಿಕೆ ಆಲಿಸಿದ ವಿ. ಸೋಮಣ್ಣ, ನಾಳೆ ಬೆಳಿಗ್ಗೆ ಸಂಸದರು, ಡಿಸಿಯವರೊಂದಿಗೆ ರೈತ ಮುಖಂ ಡರು ಕುಳಿತು ಚರ್ಚಿಸಿ ಒಂದು ನಿರ್ಣಯಕ್ಕೆ ಬನ್ನಿ. ನಂತರ ನಾನು ಸರ್ಕಾರದೊಂದಿಗೆ ಸಮಾಲೋಚಿಸಿ ಕ್ರಮ ವಹಿಸಲು ವ್ಯವಸ್ಥೆ ಮಾಡುತ್ತೇನೆ ಎಂದರಾ ದರೂ, ಅದಕ್ಕೆ ಒಪ್ಪದ ರೈತರು, ನೀವೇ ಬಂದು ಮಾರ್ಗದಲ್ಲಿ ಪರಿಶೀಲನೆ ನಡೆಸಿದರೆ ಮಾತ್ರ ಸಮಸ್ಯೆ ಬಗೆಹರಿಯುತ್ತದೆ ಎಂದು ಪಟ್ಟು ಹಿಡಿದರು.

ಕಡೆಗೆ ಜನವರಿ 11ರಂದು ಬೆಳಿಗ್ಗೆ 10.30 ಗಂಟೆಗೆ ಸ್ಥಳಕ್ಕೆ ತೆರಳಿ ವೀಕ್ಷಿಸಿದ ನಂತರ ಮೈಸೂರಿನಲ್ಲಿ ಸಭೆ ನಡೆಸಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರಲ್ಲದೆ, ಉಳಿದ ಬೇಡಿಕೆಗಳ ಬಗ್ಗೆಯೂ ತಾವು ಆಸಕ್ತಿ ವಹಿಸಿ ಈಡೇರಿ ಸುವುದಾಗಿಯೂ ಭರವಸೆ ನೀಡಿದರು.

ಅಲ್ಲಿಯವರೆಗೆ ಸ್ಥಳದಲ್ಲಿ ಯಾವುದೇ ಕೆಲಸ ಮಾಡಬಾರದು ಎಂಬ ಷರತ್ತು ವಿಧಿಸಿ ರೈತರು ಧರಣಿ ಯನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಿದರು. 5ನೇ ದಿನವಾದ ಇಂದು ದನಕರು, ಆಡು-ಕುರಿಗಳೊಂದಿಗೆ ಸುಮಾರು 150 ಮಂದಿ ರೈತರು ಮೈಸೂರಿನ ಡಿಸಿ ಕಚೇರಿ ಬಳಿ ಧರಣಿ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ರೈತ ಮುಖಂಡರಾದ ಸುನಿತಾ ಪುಟ್ಟಣ್ಣಯ್ಯ, ಹೊಸ ಕೋಟೆ ಬಸವರಾಜು, ಅಶ್ವಥನಾರಾಯಣ ರಾಜೇ ಅರಸ್, ಲೋಕೇಶ್‍ರಾಜೇ ಅರಸ್, ಹೊಸೂರು ಕುಮಾರ್, ಪಿ. ಮರಂಕಯ್ಯ, ಪ್ರಕಾಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಎಸ್ಪಿ ಸಿ.ಬಿ. ರಿಷ್ಯಂತ್, ಡಿಸಿಪಿ ಎಂ.ಮುತ್ತುರಾಜ್ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಬಂದಾಗ ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Translate »