ಇನ್ನೆರಡು ದಿನದಲ್ಲಿ ಪ್ರಧಾನಿಯಿಂದ ನೆರೆ `ಪರಿಹಾರ’ ಸಿಹಿ ಸುದ್ದಿ: ಸೋಮಣ್ಣ
ಮೈಸೂರು

ಇನ್ನೆರಡು ದಿನದಲ್ಲಿ ಪ್ರಧಾನಿಯಿಂದ ನೆರೆ `ಪರಿಹಾರ’ ಸಿಹಿ ಸುದ್ದಿ: ಸೋಮಣ್ಣ

January 4, 2020

ಮೈಸೂರು,ಜ.3(ಎಂಟಿವೈ)- ನೆರೆಪೀಡಿತ ಪ್ರದೇಶದ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ಇನ್ನೆರಡು ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಒಳ್ಳೆ ಸುದ್ದಿ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ನೆರೆ ಪರಿಹಾರ ಕುರಿತು ಕಾಂಗ್ರೆಸ್ ನಾಯಕÀರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಸಿದ್ದಗಂಗಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣವನ್ನು ಟೀಕಿಸುತ್ತಿz್ದÁರೆ. ಕಾಂಗ್ರೆಸಿ ಗರು ಹಾಗೂ ಕುಮಾರಸ್ವಾಮಿ ಅವರಿಗೆ ಸುಮ್ಮನೆ ಮೈ ಪರಚಿಕೊಳ್ಳುವ ಅಭ್ಯಾಸವಿದೆ. ಮಾಧ್ಯಮಗಳಲ್ಲಿ ಪ್ರಧಾನಿ ಭಾಷಣಕ್ಕೆ ಸಿಕ್ಕ ಪ್ರಚಾರ ನೋಡಿ ಅವರುಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕುಟುಕಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿದ್ದವರು. ಅವರು ಯಾವುದೋ ವಿಚಾರಕ್ಕೆ ಇನ್ನೇನೋ ಸೇರಿಸಿ ಮಾತನಾಡಬಾರದು. ಮೋದಿ ಅವರು ಮಾತನಾಡಿರುವುದರಲ್ಲಿ ತಪ್ಪೇನಿದೆ? ಎರಡು ಬಾರಿ ಪ್ರಧಾನ ಮಂತ್ರಿಗಳು ಸಿದ್ಧಗಂಗಾ ಮಠಕ್ಕೆ ಬಂದಿರುವುದು ಹೆಮ್ಮೆಯ ಸಂಗತಿ ಎಂದರು.

ವ್ಯವಸ್ಥೆ ಬದಲಿಸಬೇಕು: ಬೆಂಗಳೂರಿನ ಚರ್ಚ್ ಸ್ಟ್ರೀಟ್ ರಸ್ತೆ ಹಾಗೂ ಎಂ.ಜಿ ರಸ್ತೆಯಲ್ಲಿ ಪ್ರತಿ ವರ್ಷ ಹೊಸ ವರ್ಷಾಚರಣೆ ಮಾಡುವುದು ಫ್ಯಾಷನ್ ಆಗಿದೆ. ಕೇವಲ ಒಂದು ದಿನ ಮಾತ್ರ ಆಚರಿಸಲು ಬರುತ್ತಾರೆ. ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ನಡೆದ ಘಟನೆ ಸಂಬಂಧ ವರದಿ ಕೇಳಿಲ್ಲ. ಬದಲಾಗಿ ಈ ಎರಡು ರಸ್ತೆಗಳಲ್ಲಿ ಹೊಸ ವರ್ಷ ಆಚರಿಸುವುದನ್ನು ಬೇರೆಡೆ ಸ್ಥಳಾಂತರ ಮಾಡಬಹುದೇ ಎಂಬ ಉದ್ದೇಶದಿಂದ ಮಾಹಿತಿ ಕೇಳಿದ್ದೇನೆ. ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿ ಎಂ.ಜಿ ರಸ್ತೆಯಲ್ಲಿ ಹೊಸ ವರ್ಷಾ ಚರಣೆ ಮಾಡುವುದನ್ನು ರದ್ದು ಪಡಿಸಿ ಬೇರೆ ವ್ಯವಸ್ಥೆ ಮಾಡಬೇಕೆಂಬ ಆಲೋಚನೆ ಇದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಂಸದ ಪ್ರತಾಪ್ ಸಿಂಹ ಮಾತ ನಾಡಿ, ದೇಶದ ಪ್ರಧಾನಿಯಾಗಿರುವ ಹಿನ್ನೆಲೆಯಲ್ಲಿ ಮೋದಿ ಅವರು ಸಿದ್ದಗಂಗಾ ಕ್ಷೇತ್ರದಲ್ಲಿ ಮಕ್ಕಳನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಮೋದಿ ಅವರು ರಾಜಕೀಯ ಭಾಷಣ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಾರೆ. ದೇಶದ ಭವಿಷ್ಯದಲ್ಲಿ ಬಹುಮುಖ್ಯ ಪಾತ್ರವಹಿ ಸುವ ಮಕ್ಕಳಿಗೆ ಅಗತ್ಯವಾಗಿರುವ ವಿಷಯವನ್ನೇ ತಿಳಿಹೇಳಿ ದ್ದಾರೆ. ಕಾಂಗ್ರೆಸ್ ನಾಯಕರು ಅಸಹಾಯಕರಂತೆ ಟೀಕೆಯ ಟ್ವೀಟ್ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನೆರೆ ಸಂತ್ರಸ್ತರಿಗೆ ನೆರವು ನೀಡುವ ಸಂಬಂಧ ಮಾತ ನಾಡಲು ಬಿಜೆಪಿ ಸಂಸದರು ಭಯ ಪಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಎಐಸಿಸಿ ವರಿಷ್ಠೆ ಸೋನಿಯಾಗಾಂಧಿ ಮುಂದೆ ಈಗಲೂ ಕಾಂಗ್ರೆಸ್ ನಾಯಕರು ಮಂಡಿ ಯೂರಿ ಕುಳಿತು ಮಾತನಾಡುವ ಸ್ಥಿತಿ ಇದೆ. ಅಂತಹ ದಯನೀಯ ಸ್ಥಿತಿ ಬಿಜೆಪಿಯವರಿಗೆ ಬಂದಿಲ್ಲ. 1998 ರಿಂದಲೂ ರಾಜ್ಯದ ಜನ ನಮ್ಮ ಪಕ್ಷದ ಸಂಸದರ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಇದ್ದಾರೆ. ಮೋದಿ ಅವರು ಯಾವಾಗಲು ರಾಜ್ಯದ ಪರ ಇz್ದÁರೆ ಎಂದರು.

ಡಿಕೆ ಯೇಸುಕುಮಾರ ಆಗುತ್ತಿದ್ದಾರೆ: ಕಾಂಗ್ರೆಸ್ ನಾಯಕ ರಿಗೆ ಕಾಲಭೈರವನ ಮೇಲೆ ನಂಬಿಕೆಯಿಲ್ಲ. ಕಪಾಲಿ ಅಥವಾ ಕಪಾಲ ಬೆಟ್ಟ ತನ್ನದೇ ಆದ ಪರಂಪರೆ ಹೊಂದಿದೆ. ಅದನ್ನೂ ಶಿವನ ಬೆಟ್ಟ ಎಂದೇ ಕರೆಯಲಾಗುತ್ತದೆ. ಅಂತಹ ಪುಣ್ಯ ಕ್ಷೇತ್ರವನ್ನು ಡಿ.ಕೆ.ಶಿವಕುಮಾರ್ ಯೇಸು ಬೆಟ್ಟವನ್ನಾಗಿ ಪರಿವರ್ತಿಸಿ, ಯೇಸುಕುಮಾರ ಎನಿಸಿ ಕೊಳ್ಳಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

Translate »