ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ: ಹಿರಿಯ ಪುರುಷರ ವಿಭಾಗದ ಡಿಸ್ಕಸ್, ಗುಂಡು ಎಸೆತದಲ್ಲಿ ತಿ.ನರಸೀಪುರದ ಕೆ.ಬಿ.ಅಯ್ಯಪ್ಪ ಪರಾಕ್ರಮ
ಮೈಸೂರು

ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ: ಹಿರಿಯ ಪುರುಷರ ವಿಭಾಗದ ಡಿಸ್ಕಸ್, ಗುಂಡು ಎಸೆತದಲ್ಲಿ ತಿ.ನರಸೀಪುರದ ಕೆ.ಬಿ.ಅಯ್ಯಪ್ಪ ಪರಾಕ್ರಮ

January 5, 2020

ಮೈಸೂರು,ಜ.4(ವೈಡಿಎಸ್)-ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ 50-60 ವರ್ಷ ಮೇಲ್ಪಟ್ಟ ಪುರು ಷರ ವಿಭಾಗದ ಡಿಸ್ಕಸ್ ಥ್ರೋ ಮತ್ತು ಗುಂಡು ಎಸೆತದಲ್ಲಿ ತಿ.ನರಸೀಪುರ ಶಿಕ್ಷಣ ಇಲಾಖೆಯ ಕೆ.ಬಿ.ಅಯ್ಯಪ್ಪ ಪ್ರಥಮ ಸ್ಥಾನ ಪಡೆದಿದ್ದಾರೆ.

ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟದ 50-60 ವರ್ಷ ಮೇಲ್ಪಟ್ಟ ಪುರುಷರ ವಿಭಾಗದ ಡಿಸ್ಕಸ್ ಥ್ರೋ(1.5ಕೆಜಿ)ನಲ್ಲಿ ತಿ.ನರಸೀಪುರ ಶಿಕ್ಷಣ ಇಲಾಖೆಯ ಕೆ.ಬಿ.ಅಯ್ಯಪ್ಪ(ಪ್ರ), ಎನ್.ಕೆ. ಮಂಜುನಾಥ್(ದ್ವಿ), ಕೆ.ಲೋಕೇಶ್(ತೃ) ಬಹುಮಾನ ಪಡೆದಿದ್ದಾರೆ. ಉಳಿದಂತೆ ಗುಂಡು ಎಸೆತ(5ಕೆಜಿ)ದಲ್ಲಿ ತಿ.ನರಸೀಪುರ ಶಿಕ್ಷಣ ಇಲಾಖೆಯ ಕೆ.ಬಿ.ಅಯ್ಯಪ್ಪ (ಪ್ರ), ಮೈಸೂರು ಶಿಕ್ಷಣ ಇಲಾಖೆಯ ಕೆ.ಲೋಕೇಶ್ (ದ್ವಿ), ನಂಜನಗೂಡು ಶಿಕ್ಷಣ ಇಲಾಖೆಯ ಪಿ.ಎಸ್. ಹರೀಶ್(ತೃ) ಸ್ಥಾನ ಪಡೆದಿದ್ದಾರೆ.

ಫಲಿತಾಂಶ: ಅಥ್ಲೆಟಿಕ್ಸ್ ಪುರುಷರ ವಿಭಾಗ: 40ವರ್ಷದೊಳಗಿನವರ 200ಮೀ. ಓಟ: ಅಬಕಾರಿ ಇಲಾಖೆಯ ಹೆಚ್.ಬಿ.ಲೋಕೇಶ್(ಪ್ರ), ಮಹ ದೇವ್(ದ್ವಿ), ಪರಶಿವಮೂರ್ತಿ(ತೃ). 1500ಮೀ. ಓಟ: ಸರ್ವೆ ಇಲಾಖೆಯ ಕೆ.ಎಸ್.ಭೈರೇಶ್(ಪ್ರ), ಬಿಸಿಡ್ಲ್ಯೂಡಿ ಇಲಾಖೆಯ ಎ.ಎಸ್.ಉದಗಟ್ಟಿ(ದ್ವಿ), ಕಂದಾಯ ಇಲಾಖೆಯ ಕೆ.ಎಂ.ರಜಿತ್(ತೃ). 110 ಮೀ.ಹರ್ಡಲ್ಸ್: ಶಿಕ್ಷಣ ಇಲಾಖೆಯ ಎಸ್.ಸಂತೋಷ್(ಪ್ರ), ಅಬಕಾರಿ ಇಲಾಖೆಯ ಎನ್.ಸಂತೋಷ್(ದ್ವಿ), ಕಂದಾಯ ಇಲಾಖೆಯ ಪ್ರಭು(ತೃ). 400 ಮೀ. ಹರ್ಡಲ್ಸ್: ಕಂದಾಯ ಇಲಾಖೆಯ ರಾಜೇಶ್(ಪ್ರ), ಶಿವರಾಜ್(ದ್ವಿ), ಪ್ರಭುಕುಮಾರ್(ತೃ). 5000 ಮೀ.ಓಟ: ಶಿಕ್ಷಣ ಇಲಾಖೆಯ ಉದಯ್‍ಗೌಡ(ಪ್ರ), ವಾಣಿಜ್ಯ ತೆರಿಗೆ ಇಲಾಖೆಯ ಜಿ.ಎಸ್.ಗಣೇಶ್(ದ್ವಿ), ಅಬಕಾರಿ ಇಲಾಖೆಯ ಎಂ.ಮಹಾಲಿಂಗಪ್ಪ(ತೃ), 10,000 ಮೀ.ಓಟ: ಶಿಕ್ಷಣ ಇಲಾಖೆಯ ಉದಯ್ ಕುಮಾರ್(ಪ್ರ), ಅಬಕಾರಿ ಇಲಾಖೆಯ ಮಹಾ ಲಿಂಗಪ್ಪ(ದ್ವಿ), ಶಿಕ್ಷಣ ಇಲಾಖೆಯ ಹನುಮಂತಪ್ಪ(ತೃ).

ಮಹಿಳೆಯರ ವಿಭಾಗ: 35 ವರ್ಷದೊಳಗಿನವರ 200ಮೀ.ಓಟ: ಸಮಾಜ ಕಲ್ಯಾಣ ಇಲಾಖೆಯ ಆರ್.ವಿ.ಮನು(ಪ್ರ), ವಾಣಿಜ್ಯ ತೆರಿಗೆ ಇಲಾಖೆಯ ಲತಾ(ದ್ವಿ), ಸಮಾಜ ಕಲ್ಯಾಣ ಇಲಾಖೆಯ ಸುಷ್ಮಿತಾ(ತೃ). 800 ಮೀ. ಓಟ: ಶಿಕ್ಷಣ ಇಲಾಖೆಯ ಎಂ.ಎಸ್.ಸರೋಜಾ(ಪ್ರ), ಮಂಜುಳಾ(ದ್ವಿ), ವಾಣಿಜ್ಯ ತೆರಿಗೆ ಇಲಾಖೆಯ ಭವ್ಯ(ತೃ). 100 ಮೀ. ಹರ್ಡಲ್ಸ್: ಸಮಾಜ ಕಲ್ಯಾಣ ಇಲಾಖೆಯ ಎಂ.ಶಿಲ್ಪಶ್ರೀ(ಪ್ರ), ಕೆ.ಸೌಮ್ಯ(ದ್ವಿ). ಎತ್ತರ ಜಿಗಿತ: ಸಮಾಜ ಕಲ್ಯಾಣ ಇಲಾಖೆಯ ಕೆ.ಸೌಮ್ಯ(ಪ್ರ), ಶಿಲ್ಪಶ್ರೀ(ದ್ವಿ), ಬಿ.ಮಂಜುಳಾ(ತೃ). ಜಾವಲೀನ್ ಥ್ರೋ: ಅಬಕಾರಿ ಇಲಾಖೆಯ ವಸಂತ್(ಪ್ರ), ಹೆಚ್.ಡಿ.ಕೋಟೆಯ ಮಂಜುಳಾ(ದ್ವಿ), ಕಂದಾಯ ಇಲಾಖೆಯ ಅಶ್ವಿನಿ (ತೃ). ಡಿಸ್ಕಸ್ ಥ್ರೋ: ಅಬಕಾರಿ ಇಲಾಖೆಯ ವಸಂತಾ(ಪ್ರ), ಸಮಾಜ ಕಲ್ಯಾಣ ಇಲಾಖೆಯ ಮಂಜುಳಾ(ದ್ವಿ), ಮನು(ತೃ). ಗುಂಡು ಎಸೆತ(4ಕೆಜಿ): ಅಬಕಾರಿ ಇಲಾಖೆಯ ವಸಂತಾ(ಪ್ರ), ಸಮಾಜ ಕಲ್ಯಾಣ ಇಲಾಖೆಯ ಮಂಜುಳಾ(ದ್ವಿ), ಮನು(ತೃ). 4*100ಮೀ ರಿಲೇ: ಆರೋಗ್ಯ ಇಲಾಖೆ(ಪ್ರ), ಸಮಾಜ ಕಲ್ಯಾಣ ಇಲಾಖೆ(ದ್ವಿ), ವಾಣಿಜ್ಯ ತೆರಿಗೆ ಇಲಾಖೆ(ತೃ) ಬಹುಮಾನ ಪಡೆದುಕೊಂಡಿದೆ.

ಸಾಂಸ್ಕøತಿಕ ಸ್ಪರ್ಧೆ: ಹಿಂದೂಸ್ತಾನಿ ಸಂಗೀತ ಮೌಖಿಕ (ಕ್ಲಾಸಿಕಲ್): ಶಿಕ್ಷಣ ಇಲಾಖೆಯ ಪಿ.ಎಸ್. ಪದ್ಮವತಿ(ಪ್ರ). ಲಘು ಶಾಸ್ತ್ರಿಯ ಸಂಗೀತ ಮೌಖಿಕ (ಕ್ಲಾಸಿಕ್): ನ್ಯಾಯಾಲಯ ಇಲಾಖೆಯ ಪನ್ನಗ(ಪ್ರ), ಶಿಕ್ಷಣ ಇಲಾಖೆಯ ಪದ್ಮಲತಾ(ದ್ವಿ), ಪರ್ವಿನ್‍ತಾಜ್ (ತೃ). ಕರ್ನಾಟಕ ಶಾಸ್ತ್ರೀಯ ಸಂಗೀತ: ನ್ಯಾಯಾಲಯ ಇಲಾಖೆಯ ಆರ್.ಎಸ್. ಪನ್ನತ(ಪ್ರ), ಧನಂಜಯ (ದ್ವಿ), ಶಿಕ್ಷಣ ಇಲಾಖೆಯ ಲಲಿತಾ(ತೃ).

ಶನಿವಾರ ಸಂಜೆ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ ವಿಜೇತರಿಗೆ ಬಹುಮಾನ ವಿತರಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಕೆ.ರಾಮು, ಎಡಿಸಿ ಪೂರ್ಣಿಮಾ, ಮತ್ತಿತರರು ಉಪಸ್ಥಿತರಿದ್ದರು.

Translate »