ಫೆಬ್ರವರಿ ಅಂತ್ಯಕ್ಕೆ ಬಯೋಮೆಟ್ರಿಕ್ ನೀಡದಿದ್ದರೆ ಮಾರ್ಚ್‍ನಿಂದ ಪಡಿತರ ಬಂದ್
ಮೈಸೂರು

ಫೆಬ್ರವರಿ ಅಂತ್ಯಕ್ಕೆ ಬಯೋಮೆಟ್ರಿಕ್ ನೀಡದಿದ್ದರೆ ಮಾರ್ಚ್‍ನಿಂದ ಪಡಿತರ ಬಂದ್

January 5, 2020

ಮೈಸೂರು, ಜ.4(ಎಸ್‍ಬಿಡಿ)- ಪಡಿ ತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರೂ ಫೆಬ್ರವರಿ ಅಂತ್ಯದೊಳಗೆ ಬಯೋಮೆಟ್ರಿಕ್ (ಹೆಬ್ಬೆಟ್ಟು ಗುರುತು) ನೀಡದಿದ್ದರೆ, ಮಾರ್ಚ್ ನಿಂದ ಪಡಿತರ ಕಡಿತಗೊಳ್ಳಲಿದೆ.

ಪಡಿತರ ಚೀಟಿಯಲ್ಲಿರುವ ಮಾಹಿತಿ ಖಚಿತಪಡಿಸಿಕೊಳ್ಳಲು ಕಾರ್ಡ್‍ನಲ್ಲಿ ನಮೂ ದಾಗಿರುವ ಎಲ್ಲಾ ಸದಸ್ಯರು ಡಿಸೆಂಬರ್ ತಿಂಗಳೊಳಗೆ ಬಯೋಮೆಟ್ರಿಕ್ ನೀಡಬೇ ಕೆಂದು ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದರೆ ಇಲಾಖೆ ವೆಬ್‍ಸೈಟ್‍ನಲ್ಲಿ ಲೋಪಗಳ ಸರಿಪಡಿಸುವ ಉದ್ದೇಶದಿಂದ ಅಂತಿಮ ದಿನಾಂಕವನ್ನು ಫೆಬ್ರವರಿ ಅಂತ್ಯಕ್ಕೆ ಮುಂದೂಡಲಾಗಿದ್ದು, ನಂತರದಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳದ ಪಡಿತರದಾರರಿಗೆ ಸೌಲಭ್ಯ ಕಡಿತಗೊಳ್ಳಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಬಿಪಿಎಲ್ ಮತ್ತು ಎಪಿಎಲ್ ಸೇರಿದಂತೆ ಸುಮಾರು 7.30 ಲಕ್ಷ ಕಾರ್ಡ್ ನೀಡಿ, ಪಡಿ ತರ ವಿತರಿಸಲಾಗುತ್ತಿದೆ. ನೈಜ ಪಡಿತರದಾರ ರನ್ನು ಪತ್ತೆ ಹಚ್ಚುವ ಪ್ರಕ್ರಿಯೆ ರಾಜ್ಯದೆಲ್ಲೆಡೆ ನಡೆಯುತ್ತಿರುವಂತೆ ಮೈಸೂರು ಜಿಲ್ಲೆಯಲ್ಲೂ ಪ್ರಗತಿಯಲ್ಲಿದೆ. ಪಡಿತರ ಚೀಟಿಯಲ್ಲಿ ನಮೂ ದಾಗಿರುವ ಕುಟುಂಬದ ಎಲ್ಲಾ ಸದಸ್ಯರು, ಫೆ.29ರೊಳಗೆ ತಮ್ಮ ಆಧಾರ್ ಕಾರ್ಡ್ ನೊಂದಿಗೆ ಸಂಬಂಧಿಸಿದ ನ್ಯಾಯಬೆಲೆ ಅಂಗ ಡಿಗೆ ತೆರಳಿ, ತಮ್ಮ ಬಯೋಮೆಟ್ರಿಕ್ ನೀಡಿ, ನವೀಕರಣ (ಅಪ್ಡೇಟ್) ಮಾಡಿಸಿಕೊಳ್ಳ ಬೇಕು. ಇದು ಶುಲ್ಕ ರಹಿತ ಸೇವೆಯಾಗಿದ್ದು, ಯಾರಿಗೂ ಹಣ ನೀಡುವ ಅಗತ್ಯವಿಲ್ಲ.

ಪಡಿತರ ಚೀಟಿ ಪರಿಷ್ಕರಣೆ 5 ವರ್ಷ ಕ್ಕೊಮ್ಮೆ ನಡೆಸಬೇಕು. ಆದರೆ ಆನ್‍ಲೈನ್ ಮೂಲಕ ಪಡಿತರ ಚೀಟಿ ವಿತರಣೆ ಆರಂ ಭಿಸಿದ 7 ವರ್ಷಗಳಿಂದ ಪರಿಷ್ಕರಣೆ ಪ್ರಕ್ರಿಯೆ ನಡೆದಿರಲಿಲ್ಲ. ಇದರಿಂದ ಪಡಿತರ ಚೀಟಿಯ ಲ್ಲಿರುವ ಗೊಂದಲಗಳ ನಿವಾರಣೆ ಜೊತೆಗೆ ಪಡಿತರ ದುರ್ಬಳಕೆಯನ್ನು ತಡೆಯಬಹು ದಾಗಿದೆ. ಪಡಿತರ ಚೀಟಿದಾರರು ಜೀವಂತ ವಾಗಿದ್ದಾರೆಯೇ? ಅವರ ಹೆಸರಿನಲ್ಲಿ ಬೇರೆ ಯವರು ಅಕ್ರಮವಾಗಿ ಪಡಿತರ ಪಡೆಯುತ್ತಿ ದ್ದಾರೆಯೇ? ಕಾರ್ಡ್‍ನಲ್ಲಿರುವ ನಮೂದಿಸಿ ರುವ ಎಲ್ಲಾ ಸದಸ್ಯರೂ ಸೌಲಭ್ಯ ಪಡೆಯಲು ಅರ್ಹರೇ? ಇನ್ನಿತರ ಮಾಹಿತಿ, ಇ-ಕೆವೈಸಿ ಮೂಲಕ ಹೆಬ್ಬೆಟ್ಟು ಗುರುತು ಸಂಗ್ರಹಿಸುವ ಮೂಲಕ ಖಾತ್ರಿಯಾಗಲಿದೆ. ಪಡಿತರ ಚೀಟಿ ಪಡೆದಿರುವ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಜೋಡಣೆ ಸದ್ಯ ಆನ್ ಲೈನ್ ಮೂಲಕ ನಡೆದಿದೆ. ಇದೀಗ ಹೆಬ್ಬೆ ರಳು ಗುರುತು ಸಂಗ್ರಹಿಸಲು ಬಯೋ ಮೆಟ್ರಿಕ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಹಿಂದೆ ನೀಡಿದ್ದ ಕಾಲಾವಕಾಶ (ಡಿ.31)ದೊಳಗೆ ಜಿಲ್ಲೆಯಲ್ಲಿ ಶೇ.35ರಷ್ಟು ಸಾಧನೆಯಾ ಗಿತ್ತು. ಸದ್ಯ ಫೆಬ್ರವರಿ 29ರೊಳಗೆ ಹೆಬ್ಬೆ ರಳು ಗುರುತು ನೀಡದಿದ್ದರೆ ಪಡಿತರ ಸಿಗುವು ದಿಲ್ಲ ಎಂದು ಹೇಳಲಾಗುತ್ತದೆ. ಪಡಿತರ ಚೀಟಿದಾರರಿಗೆ ಅನುಕೂಲವಾಗುವಂತೆ ಪಡಿತರ ವಿತರಣೆ ಇಲ್ಲದ ದಿನಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಇ-ಕೆವೈಸಿ ಪ್ರಕ್ರಿಯೆ ನಡೆಯುತ್ತಿದೆ.

ಬಯೋಮೆಟ್ರಿಕ್ ಸಂಗ್ರಹ ಗೊಂದಲ
ಮೈಸೂರು,ಜ.4-ಪಡಿತರ ಚೀಟಿ ಸದಸ್ಯರ ಬಯೋ ಮೆಟ್ರಿಕ್ ಸಂಗ್ರಹ ಪ್ರಕ್ರಿಯೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಸಾರ್ವ ಜನಿಕರು ಪರಿತಪಿಸುವಂತಾಗಿದೆ. ಬಿಪಿಎಲ್ ಕಾರ್ಡ್‍ದಾರರು ಮಾತ್ರ ಹೆಬ್ಬೆರಳು ಗುರುತು ನೀಡಬೇಕೇ? ಅಥವಾ ಎಪಿಎಲ್ ಕಾರ್ಡ್‍ದಾರರಿಗೂ ಇದು ಕಡ್ಡಾಯವೇ? ಇದಕ್ಕೆ ಸರ್ಕಾರ ನಿಗದಿ ಪಡಿಸಿರುವ ಅಂತಿಮ ದಿನಾಂಕವೇನು? ಹೀಗೆ ಯಾವುದರ ಬಗ್ಗೆಯೂ ಮಾಹಿತಿ ಇಲ್ಲ. ಪಡಿತರ ಕೇಂದ್ರಗಳಲ್ಲೂ ಸಮರ್ಪ ಕವಾಗಿ ತಿಳಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಮೈಸೂರಿನ ಶ್ರೀರಾಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರುವ ಮಹದೇವಪುರ ಪಡಿತರ ಕೇಂದ್ರದಲ್ಲಿ `ಶನಿವಾರ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಇ-ಕೆವೈಸಿ ನಡೆಯಲಿದೆ’ ಎಂಬ ಸೂಚನಾ ಫಲಕ ಹಾಕಿದ್ದರಿಂದ ಮುಂಜಾನೆ 4 ಗಂಟೆಯಿಂದಲೇ ನೂರಾರು ಮಂದಿ ಕಾದು ನಿಂತಿದ್ದರು. ಮನೆಗೆಲಸ, ದಿನಗೂಲಿ ಮಾಡುವವರು, ತಮ್ಮ ಮಕ್ಕಳನ್ನೂ ಶಾಲೆಗೆ ರಜೆ ಹಾಕಿ ಕರೆ ತಂದಿದ್ದರು. ಆದರೆ ಪಡಿತರ ಕೇಂದ್ರ ತೆರೆಯುವುದು ತಡವಾದ್ದ ರಿಂದ ಕಂಗಾಲಾಗಿದ್ದರು. ವಿಷಯ ತಿಳಿದ ತಾಪಂ ಸದಸ್ಯ ಹನುಮಂತು ಸ್ಥಳಕ್ಕೆ ಬಂದು, ಅವ್ಯವಸ್ಥೆ ಬಗ್ಗೆ ಜಿಪಂ ಸಿಇಓ ಅವರಿಗೆ ದೂರವಾಣಿ ಮೂಲಕ ತಿಳಿಸಿದರಲ್ಲದೆ, 100 ಮಂದಿಗೆ ಟೋಕನ್ ವಿತರಣೆ ಮಾಡಿಸಿದರು.

ಇಚ್ಛಾನುಸಾರ ಕೆಲಸ: ಸಾರ್ವಜನಿಕರಿಗೆ ತೊಂದರೆಯಾಗದಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಆದರೆ ಇ-ಕೆವೈಸಿ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಸಾರ್ವಜನಿಕರು ಧಾವಂತದಿಂದ ಪಡಿತರ ಕೇಂದ್ರಗಳಿಗೆ ದೌಡಾಯಿಸುತ್ತಿದ್ದಾರೆ. ಮಹದೇವಪುರ ಪಡಿತರ ಕೇಂದ್ರದಲ್ಲೇ ಕೆಲವರಿಗೆ ಜ.10 ಕಡೇ ದಿನಾಂಕ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಒಂದು ದಿನ ಕೂಲಿ ಮಾಡದಿದ್ದರೆ ಜೀವನ ನಡೆಸುವುದು ಕಷ್ಟ ಎಂಬ ಪರಿಸ್ಥಿತಿಯಲ್ಲಿರುವವರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ಪಡಿತರ ಕೇಂದ್ರದವರು ತಮ್ಮ ಇಚ್ಛಾನುಸಾರ ಟೋಕನ್ ವಿತರಿಸುತ್ತಾರೆ. ತಮಗೆ ಅನುಕೂಲವಾಗು ವಂತೆ ಕಡೇ ದಿನಾಂಕವನ್ನು ತಾವೇ ನಿಗದಿ ಮಾಡಿಕೊಂಡು, ಸಾರ್ವಜನಿಕರ ಬೆದರಿಸುತ್ತಿದ್ದಾರೆ. ಕಡೇ ದಿನಾಂಕವನ್ನು ಯಾವ ಕೇಂದ್ರದ ಬಳಿಯೂ ಪ್ರದರ್ಶಿಸಿಲ್ಲ. ಕೆಲವೆಡೆ ಕಾರ್ಡ್‍ದಾರ ದಿಂದ ಹಣ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Translate »