ರೈತರ ಬದುಕು ಹಸನಾಗಿಸಲು ಪ್ರಾಮಾಣಿಕ ಯತ್ನ: ಬಿಎಸ್‍ವೈ
ಹಾಸನ

ರೈತರ ಬದುಕು ಹಸನಾಗಿಸಲು ಪ್ರಾಮಾಣಿಕ ಯತ್ನ: ಬಿಎಸ್‍ವೈ

January 5, 2020

ಹಾಸನ, ಜ.4- ರಾಜ್ಯದ ಎಲ್ಲಾ ಕೆರೆ ಗಳನ್ನು ತುಂಬಿಸುವ ಮೂಲಕ ರೈತರ ಬದುಕು ಹಸನಾಗಿಸಲು ಸರ್ಕಾರ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಪುಷ್ಪಗಿರಿ ಮಹಾ ಸಂಸ್ಥಾನದಿಂದ ಬೇಲೂರು ತಾಲೂಕು ಹಳೆಬೀಡಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಯೋಜನೆ ಲೋಕಾರ್ಪಣೆ ಹಾಗೂ ಪುಷ್ಪಗಿರಿ ರಾಷ್ಟ್ರೀಯ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆ ಉದ್ಘಾಟನೆ ಹಾಗೂ ಸ್ವಾಮೀಜಿ ದಶ ಮಾನೋತ್ಸವದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದರಲ್ಲದೆ, ಸೋಮ ಶೇಖರ ಸ್ವಾಮೀಜಿ ಅವರ ಸಾಮಾಜಿಕ ಕಳಕಳಿ ಮತ್ತು ನೀರಾವರಿ ಹೋರಾಟಗಳ ಬಗ್ಗೆ ಅವರು ಶ್ಲಾಘಿಸಿದರು.

ಪುಷ್ಪಗಿರಿ ಮಠ ಪ್ರಾರಂಭಿಸಿರುವ ಗ್ರಾಮೀಣಾಭಿವೃದ್ಧಿ ಯೋಜನೆಗಳ ಪ್ರೋತ್ಸಾಹಕ್ಕಾಗಿ ಸರ್ಕಾರದಿಂದ ಮೊದಲ ಕಂತಿನಲ್ಲಿ 5 ಕೋಟಿ ರೂಪಾಯಿ ಅನು ದಾನವನ್ನು ಶೀಘ್ರವಾಗಿ ಒದಗಿಸಲಾಗು ವುದು ಎಂದು ಅವರು ಹೇಳಿದರು.

ಬೇಲೂರು, ಹಳೆಬೀಡು ಕೆರೆಗಳಿಗೆ ನೀರು ಪೂರೈಸುವ ರಣಘಟ್ಟ ಯೋಜನೆಗೆ 126.26 ಕೋಟಿ ರೂ. ಕ್ರಿಯಾ ಯೋಜನೆ ಸಿದ್ಧವಾಗಿದ್ದು, ಶೀಘ್ರಲ್ಲೇ ಅನುಮೋದನೆ ಯೊಂದಿಗೆ ಕಾಮಗಾರಿ ಪ್ರಾರಂಭಿಸಲಾ ಗುವುದು. ತಾಲೂಕಿನ ಸಾಲಗಾಮೆ ಹೋಬಳಿ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಬೇಲೂರು ಹಾಗೂ ಹಳೇಬೀಡು ಪ್ರವಾಸೋದ್ಯಮದಲ್ಲಿ ದೇಶದ ಗಮನ ಸೆಳೆದಿದ್ದು, ಅವುಗಳ ಅಭಿವೃದ್ಧಿಯಾದಲ್ಲಿ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸ ಬಹುದು. ಜಿಲ್ಲಾ ಹಾಗೂ ರಾಜ್ಯದ ಸರ್ವ ತೋಮುಖ ಪ್ರಗತಿಗೆ ಶ್ರಮಿಸುವುದಾಗಿ ಮುಖ್ಯಮಂತ್ರಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧು ಸ್ವಾಮಿ ಮಾತನಾಡಿ, ಕರ್ನಾಟಕದ ಶೈಕ್ಷಣಿಕ ಪ್ರಗತಿಗೆ ಮಠ-ಮಾನ್ಯಗಳ ಕೊಡುಗೆ ಅಪಾರವಾಗಿದ್ದು, ಗ್ರಾಮೀಣಾಭಿವೃದ್ಧಿಗೂ ಮಠ ಮಾನ್ಯಗಳು ತೊಡಗುತ್ತಿರುವುದು ಅಭಿನಂದನಾರ್ಹ ಎಂದರು.

ಪ್ರವಾಸೋದ್ಯಮ ಸಚಿವರಾದ ಸಿ.ಟಿ. ರವಿ, ಖ್ಯಾತ ಚಲನ ಚಿತ್ರನಟ ಪುನೀತ್ ರಾಜ್‍ಕುಮಾರ್ ಮಾತನಾಡಿ ದರು. ಪುಷ್ಪಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಇದೇ ವೇಳೆ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಸಾಂಕೇತಿಕವಾಗಿ 5 ಸ್ವಸಹಾಯ ಸಂಘಗಳಿಗೆ 10 ಸಾವಿರ ರೂ. ಗಳ ಚೆಕ್ ವಿತರಿಸಲಾಯಿತು. ಶಾಸಕರಾದ ಲಿಂಗೇಶ್, ಪ್ರೀತಂ ಜೆ.ಗೌಡ, ಬೆಳ್ಳಿ ಪ್ರಕಾಶ್, ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್, ಮಾಜಿ ಶಾಸಕ ವಿಶ್ವನಾಥ್, ಮಾಜಿ ಸಚಿವ ಬಿ.ಶಿವರಾಂ, ಜ್ಯೋತಿ ಪ್ರಕಾಶ್ ಮಿರ್ಜಿ, ಹುಲ್ಲಹಳ್ಳಿ ಸುರೇಶ್ ಸೇರಿದಂತೆ ಇನ್ನಿತರರಿದ್ದರು.

Translate »