ಲಾಂಗ್ ತೋರಿಸಿ ಆಭರಣ ದೋಚಲು ಯತ್ನ
ಮೈಸೂರು

ಲಾಂಗ್ ತೋರಿಸಿ ಆಭರಣ ದೋಚಲು ಯತ್ನ

January 4, 2020

ಮೈಸೂರು,ಜ.3(ಆರ್‍ಕೆ)-ಆಭರಣದ ಅಂಗಡಿಗೆ ನುಗ್ಗಿದ ಯುವಕನೋರ್ವ ಲಾಂಗ್ ತೋರಿಸಿ ಚಿನ್ನಾ ಭರಣ ದೋಚಲು ಯತ್ನಿಸಿರುವ ಘಟನೆ ಶುಕ್ರವಾರ ಹಾಡಹಗಲೇ ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆ ಯಲ್ಲಿ ಸಂಭವಿಸಿದೆ. ಡಿಯೋ ಸ್ಕೂಟರ್‍ನಲ್ಲಿ ಬಂದ ಯುವಕ, ಹೆಲ್ಮೆಟ್ ಧರಿಸಿಯೇ ಮೇಗಾ ಜುವೆಲ್ಸ್ ಅಂಗಡಿ ಪ್ರವೇಶಿಸಿ, ಆಭರಣ ತೋರಿಸುವಂತೆ ಕೇಳಿ ದ್ದಾನೆ. ಆದರೆ ಮಾಲೀಕ ರಾಜೇಶ್, ಲಾಕರ್‍ಗಳಿಗೆ ಬೀಗ ಹಾಕಿಕೊಂಡು, ಊಟಕ್ಕೆ ಮನೆಗೆ ಹೋಗಿದ್ದಾ ರೆಂದು ಅಲ್ಲಿದ್ದ ನೌಕರ ಮಹೇಶ್ ತಿಳಿಸಿ, 10 ನಿಮಿಷ ಕಾಯುವಂತೆ ಮನವಿ ಮಾಡಿದ್ದಾರೆ. ತಕ್ಷಣ ಲಾಂಗ್ ತೋರಿಸಿ ಬೆದರಿಸಿದ ಖದೀಮ, ಜಿರಲೆಗೆ ಸಿಂಪಡಿಸುವ ಊIಖಿ ರಸಾಯನಿಕ ಸ್ಪ್ರೇ ಮಾಡಿ, ಲೈಟರ್‍ನಿಂದ ಬೆಂಕಿ ಹೊತ್ತಿಸಿದ್ದಾನೆ. ಇದರಿಂದ ಹೆದರಿದ ಮಹೇಶ ಹಾಗೂ ಮತ್ತೋರ್ವ ಸಿಬ್ಬಂದಿ, ಕುರ್ಚಿಯನ್ನು  ಖದೀಮ ನತ್ತ ತೂರಿ, ಪ್ರತಿರೋಧಿಸಿದ್ದಾರೆ. ಕೂಗಾಟ ಕೇಳಿದ್ದ ರಿಂದ ಅಕ್ಕಪಕ್ಕದ ಅಂಗಡಿಯವರು ಧಾವಿಸಿದ್ದಾರೆ. ಆದರೆ ಅವರಿಗೂ ಲಾಂಗ್ ತೋರಿಸಿ, ಕೇವಲ 10 ಸೆಕೆಂಡ್‍ಗಳಲ್ಲೇ ಲಾಂಗ್ ಅಲ್ಲೇ ಬಿಸಾಡಿ, ಸ್ಕೂಟರ್ ನಲ್ಲಿ ಪರಾರಿಯಾಗಿದ್ದಾನೆ. ಘಟನೆಯಿಂದ ಆತಂಕ ಗೊಂಡ ಜನರು, ಏನಾಯಿತೆಂದು ತಿಳಿಯದೆ ದಿಗ್ಮೂಢ ರಾಗಿ ನಿಂತಿದ್ದರು. ವಿಷಯ ತಿಳಿದ ಕೆ.ಆರ್.ಠಾಣೆ ಪೊಲೀ ಸರು, ಮಹಜರು ನಡೆಸಿ, ಅಂಗಡಿಯ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳ ಫುಟೇಜ್ ಸಂಗ್ರಹಿಸಿ, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಆತ ಬಂದಿದ್ದ ಡಿಯೋ ಸ್ಕೂಟರ್ ನೋಂದಣಿ ಸಂಖ್ಯೆ ಹಾಗೂ ಯುವಕನ ಚಹರೆ ಪತ್ತೆಗೆ ಸಮೀಪದ ಅಂಗಡಿಗಳ ಮುಂದೆ ಅಳವಡಿಸಿರುವ ಸಿಸಿ ಕ್ಯಾಮರಾಗಳ ಪರಿಶೀಲಿಸಿ ದ್ದಾರೆ. ಅಂಗಡಿ ನೌಕರ ಮಹೇಶ್‍ನಿಂದ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ. ಸದಾ ಜನ, ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಹಾಡಹಗಲೇ ನಡೆದಿ ರುವ ಈ ಕೃತ್ಯದಿಂದ ಜನರು ಭಯಭೀತರಾಗಿದ್ದಾರೆ.

 

Translate »