ಮೈಸೂರು: ಎಕ್ಸೈಡ್ ಲೈಫ್ ಇನ್ಸೂರೆನ್ಸ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮ ಅಂಗವಾಗಿ ಮೈಸೂರ ನಗರ ಸಂಚಾರ ಪೊಲೀಸರು ಮತ್ತು ಆಯ್ದ ನಗರದ ಶಾಲೆಯ ವಿದ್ಯಾರ್ಥಿಗಳ ಜೊತೆಗೂಡಿ ಹೆಲ್ಮೆಟ್ ಸುರಕ್ಷತೆ ಕುರಿತು ಜಾಗೃತಿ ಅಭಿಯಾನ ನಡೆಸಿತು. ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಡೆದ ಹೆಲ್ಮೆಟ್ ಸೇವ್ಸ್ ಚಿಲ್ಡ್ರನ್ಸ್ ಅಭಿಯಾನವು ರಸ್ತೆ ಸುರಕ್ಷತೆ ಕ್ರಮವಾಗಿ ಹೆಲ್ಮೆಟ್ ಧರಿಸುವ ಪ್ರಾಮುಖ್ಯತೆಯನ್ನು ಕುರಿತು ಅರಿವು ಮೂಡಿಸಿತು. ಜಾಗೃತಿ ಅಭಿಯಾನವನ್ನು ನಗರದ ಸಹಾಯಕ ಪೊಲೀಸ್ ಆಯುಕ್ತ (ಸಂಚಾರ) ಜಿ.ಎನ್.ಮೋಹನ್, ಡಾ.ವಿಕ್ರಂ ಅಮಟೆ…
`ಕರ್ನಾಟಕ ದರ್ಶನ’ ಪ್ರವಾಸಕ್ಕೆ ಶಾಸಕ ರಾಮದಾಸ್ ಚಾಲನೆ
February 6, 2019ಮೈಸೂರು: ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವತಿಯಿಂದ ಸರ್ಕಾರಿ ಪ್ರೌಢಶಾಲೆಗಳ 52 ಮಕ್ಕಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಐದು ದಿನಗಳ `ಕರ್ನಾಟಕ ದರ್ಶನ’ ಪ್ರವಾಸಕ್ಕೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಮಂಗಳವಾರ ಹಸಿರು ನಿಶಾನೆ ತೋರಿಸಿ, ಚಾಲನೆ ನೀಡಿದರು. ಮೇಲುಕೋಟೆ, ಯಡಿಯೂರು, ಚಿತ್ರದುರ್ಗ, ಟಿ.ಬಿ.ಡ್ಯಾಂ, ಕೂಡಲ ಸಂಗಮ, ಆಲಮಟ್ಟಿ, ವಿಜಯಪುರ, ಬಾದಾಮಿ, ಪಟ್ಟದಕಲ್ಲು, ಹಂಪೆ ಇನ್ನಿತರ ಪ್ರವಾಸಿ ಸ್ಥಳಗಳಿಗೆ ಈ ವಿದ್ಯಾರ್ಥಿಗಳು ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪ್ರವಾಸ ಸಂದರ್ಭದಲ್ಲಿ…
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಮೈಸೂರಲ್ಲಿ ಮುಕ್ತ ಮ್ಯಾರಥಾನ್ ಓಟದ ಸ್ಪರ್ಧೆ
February 6, 2019ಮೈಸೂರು: 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗ ವಾಗಿ ಮೈಸೂರಲ್ಲಿ ಮುಕ್ತ ಮ್ಯಾರಥಾನ್ ಓಟದ ಸ್ಪರ್ಧೆ ಇಂದು ನಡೆಯಿತು. ಮೈಸೂರು ನಗರ ಪೊಲೀಸ್ ವತಿಯಿಂದ ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಅಪರಾಧ ಮತ್ತು ಸಂಚಾರ ಡಿಸಿಪಿ ಡಾ.ವಿಕ್ರಂ ಪಿ.ಅಮಟೆ ಅವರು ಹಸಿರು ನಿಶಾನೆ ತೋರುವ ಮೂಲಕ ಮ್ಯಾರಥಾನ್‍ಗೆ ಇಂದು ಮುಂಜಾನೆ 6.40ಕ್ಕೆ ಚಾಲನೆ ನೀಡಿದರು. ಸಂಚಾರ ವಿಭಾಗದ ಎಸಿಪಿ ಜಿ.ಎನ್. ಮೋಹನ್ ನೇತೃತ್ವದಲ್ಲಿ ನಡೆದ ಮ್ಯಾರ ಥಾನ್‍ನಲ್ಲಿ ಭಾಗವಹಿಸಿದ್ದ 150ಕ್ಕೂ…
ಶ್ರೀ ಶ್ರೀಕಂಠೇಶ್ವರಸ್ವಾಮಿಯವರ ಪಂಚ ಮಹಾ ರಥೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಪೂರ್ವ ಸಿದ್ದತಾ ಸಭೆ
February 5, 2019ನಂಜನಗೂಡು: ಮಾರ್ಚ 19ರಂದು ನಡೆಯಲಿರುವ ಪಂಚ ಮಹಾ ರಥೋತ್ಸವ (ದೊಡ್ಡ ಜಾತ್ರೆ) ಹಿನ್ನಲೆಯಲ್ಲಿ ಸೋಮವಾರ ಶ್ರೀ ಶ್ರೀಕಂಠೇಶ್ವರ ದೇವಸ್ಥಾನದ ದಾಸೋಹ ಭವನದಲ್ಲಿ ಉನ್ನತ ಶಿಕ್ಷಣಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ,ದೇವೇಗೌಡರವರ ಅಧ್ಯಕ್ಷತೆ ಸಭೆ ಪೂರ್ವ ಸಿದ್ದತಾ ಸಭೆ ನಡೆಯಿತು. ಸಭೆಯಲ್ಲಿ ಉಸ್ತುವಾರಿ ಸಚಿವರು ಸುಗುಮವಾಗಿ ರಥೋತ್ಸವ ನಡೆಯಲು ಕೈಗೊಳ್ಳಬೇಕಾದ ಅಗತ್ಯ ಕ್ರಮ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಮುಕ್ತವಾಗಿ ಚೆರ್ಚಿಸಿದರು. ನಂತರ ಸಚಿವ ಜಿ,ಟಿ ದೇವೆಗೌಡರು ಮಾತನಾಡಿ ಪಂಚಮಹಾರಥೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲರು ಶ್ರಮಿಸಬೇಕು ರಾಜ್ಯದ ವಿವಿಧ…
ಆದಿವಾಸಿಗಳಿಗೆ ಮಧ್ಯವರ್ತಿಗಳೇ ತಡೆಗೋಡೆ: ದೇವನೂರು ವಿಷಾದ
February 5, 2019ಹುಣಸೂರು: ಸ್ವತಂತ್ರ್ಯ, ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ ಎನ್ನುವ ಭಾರತದ ಎಲ್ಲಾ ಪ್ರಜೆಗಳಿಗೂ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸಿಕೊಡಲು ವಿವಿಧ ಹಂತಗಳಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಿಂದ ಗ್ರಾಮ ಸ್ವರಾಜ್ಯದವರೆಗೆ ಅಧಿಕಾರ ವಿಕೇಂದ್ರೀಕರಣಗೊಂಡಿದ್ದರೂ ಆದಿವಾಸಿ, ಬುಡಕಟ್ಟು, ಅಲೆಮಾರಿ ಸಮುದಾಯಗಳು ಶಕ್ತಿ ಕೇಂದ್ರದ ಕಡೆಗೆ ಮುಖ ಮಾಡಲು ಸಾಧ್ಯವಾಗದಂತೆ ಮಧ್ಯವರ್ತಿಗಳು ತಡೆಗೋಡೆ ನಿರ್ಮಿಸಿದ್ದಾರೆ ಎಂದು ಹಿರಿಯ ಸಾಹಿತಿ ದೇವನೂರು ಮಹದೇವು ವಿಷಾದ ವ್ಯಕ್ತಪಡಿಸಿದರು. ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ…
`ರೂಸ’ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
February 4, 2019ಮೈಸೂರು: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯದ `ರೂಸ’ ಯೋಜನೆ(ರಾಷ್ಟ್ರೀಯ ಉಚ್ಛತರ್ ಶಿಕ್ಷಾ ಅಭಿಯಾನ) ಯಡಿ ಜಮ್ಮು ಮತ್ತು ಕಾಶ್ಮೀರದಿಂದ ದೇಶಾದ್ಯಂತ ನೂತನ 70 ಕೆರಿಯರ್ ಹಬ್ ಕೇಂದ್ರ ಗಳಿಗೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾನುವಾರ ಚಾಲನೆ ನೀಡಿದರು. ಕರ್ನಾಟಕದಿಂದ ಆಯ್ಕೆಯಾದ ಮೈಸೂರಿನ ಸೆಂಟ್ ಫಿಲೋ ಮಿನಾ ಕಾಲೇಜು, ಮೈಸೂರು ವಿವಿ, ಸರಸ್ವತಿಪುರಂ ಜೆಎಸ್‍ಎಸ್ ಮಹಿಳಾ ಕಾಲೇಜುಗಳಲ್ಲಿ ನೂತನವಾಗಿ ಆರಂಭವಾಗಿರುವ ಕೆರಿಯರ್ ಹಬ್ ಕೇಂದ್ರಗಳಿಗೆ ಚಾಲನೆ ಸಿಕ್ಕಿತು. ಮೈಸೂರಿನ ರಾಣಿಬಹದ್ದೂರ್…
ವಿಜೃಂಭಣೆಯ ಸುತ್ತೂರು ಮಹಾ ರಥೋತ್ಸವ
February 4, 2019ಸುತ್ತೂರು: ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಶ್ರೀ ಶಿವಯೋಗಿಗಳ ಉತ್ಸವ ಮೂರ್ತಿಯ ರಥೋತ್ಸವವು ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆ ಯಿಂದ ನೆರವೇರಿತು. ರಥೋತ್ಸವವನ್ನು ಕಣ್ತುಂಬಿ ಕೊಳ್ಳಲು ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ರಥಕ್ಕೆ ಹಣ್ಣು-ಜವನ ಎಸೆದು ಸಾಕ್ಷಿಯಾದರು. ಬೆಳಗ್ಗೆ ರಥೋತ್ಸವಕ್ಕೂ ಮುನ್ನ ಗದ್ದುಗೆಯಿಂದ ಶ್ರೀ ಶಿವಯೋಗಿಗಳ ಉತ್ಸವ ಮೂರ್ತಿಯನ್ನು ರಥ ದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಬೆಳಗ್ಗೆ 10.50ಕ್ಕೆ ಸರಿಯಾಗಿ ಸುತ್ತೂರು ಶ್ರೀಗಳು, ಸಿದ್ಧಗಂಗಾ…
ಮೈಸೂರು ವರ್ತಕನ ಅಪಹರಿಸಿ ಹತ್ಯೆ: ಆರು ಮಂದಿ ಬಂಧನ
February 4, 2019ತಿ.ನರಸೀಪುರ: ಮೈಸೂರಿನ ಫಾಮ್ ಆಯಿಲ್ (ತಾಳೆ ಎಣ್ಣೆ) ಅಡಿಗೆ ಎಣ್ಣೆ ವರ್ತಕನ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ತಿರುವು ದೊರೆತ್ತಿದ್ದು, ಈತನನ್ನು ಅಪಹರಿಸಿ ಹತ್ಯೆ ಮಾಡಿದ್ದ 6 ಮಂದಿಯನ್ನು ಬಂಧಿಸುವಲ್ಲಿ ಬನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಕೆ.ಆರ್. ಮೊಹಲ್ಲಾದ ಶ್ರೀಧರ, ಮೇಟಗಳ್ಳಿಯ ಮಂಜುನಾಥ ಅಲಿಯಾಸ್ ಚೋಳು, ಕುಂಬಾರಕೊಪ್ಪಲಿನ ಮಂಜು ಅಲಿಯಾಸ್ ಮಂಜು ನಾಥ್, ಇಟ್ಟಿಗೆಗೂಡಿನ ಸಂತೋಷ್, ಬನ್ನೂರು ಪಟ್ಟಣದ ಇಮ್ರಾನ್ ಪಾಷ ಅಲಿಯಾಸ್ ಮಾಯಿ, ಇಮ್ರಾನ್ ಅಲಿಯಾಸ್ ಗಬ್ಬರ್ ಬಂಧಿತ ಆರೋಪಿಗಳು. ಮೈಸೂರಿನ ವೀಣೆಶೇಷಣ್ಣ ನಿವಾಸಿ ಶಿವರಾಂಪೇಟೆ ಯಲ್ಲಿ…
ಫೆ.6ಕ್ಕೆ ಜಂಟಿ ಶಾಸಕಾಂಗ ಪಕ್ಷದ ಸಭೆ
February 4, 2019ಬೆಂಗಳೂರು: ಆಪರೇಷನ್ ಕಮಲ ಕರಿನೆರಳು ಹಾಗೂ ಸರ್ಕಾರದ ಪತನದ ಭೀತಿ ನಡುವೆ ತಮ್ಮ ಶಾಸಕ ರನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿ ಶಾಸಕಾಂಗ ಪಕ್ಷದ ಸಭೆ ಯನ್ನು ಫೆ.6ರಂದು ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಉಭಯ ಪಕ್ಷಗಳ ಮುಖಂ ಡರು ಕರೆದಿದ್ದಾರೆ. ಈ ನಡುವೆ ಕಾಂಗ್ರೆಸ್‍ನ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜ ರಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿ ಹೊಳಿ, ಶಾಸಕರಾದ ಮಹೇಶ್, ಉಮೇಶ್ ಜಾದವ್ ಮತ್ತು ಬಿ.ನಾಗೇಂದ್ರ ಸೇರಿದಂತೆ ನಾಲ್ವರನ್ನು ಅನರ್ಹಗೊಳಿಸಲು ವಿಧಾನಸಭಾಧ್ಯಕ್ಷರಿಗೆ ಅರ್ಜಿ…
ಯುವಕ ನೀರು ಪಾಲು
February 4, 2019ಮಡಿಕೇರಿ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಮೈಸೂರಿನ ಯುವಕ ನೋರ್ವ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲ ಪಾತದ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ ಪ್ರಸಾದ್ ಎಂಬುವರ ಪುತ್ರ, ಹಾಲಿ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಸ್ಕಂದ (24) ಮೃತ ಯುವಕನಾಗಿದ್ದು, ಸ್ಥಳೀಯ ಗ್ರಾಮಸ್ಥರು ನೀರಿನಲ್ಲಿ ಶೋಧ ನಡೆಸಿ ಮೃತದೇಹ ವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ವಿವರ: ಮೈಸೂರಿನ ನಿವಾಸಿಯಾದ ಸ್ಕಂದ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು, ವೀಕೆಂಡ್ ರಜೆಯ ಹಿನ್ನೆಲೆಯಲ್ಲಿ ಇಂದು…