`ಕರ್ನಾಟಕ ದರ್ಶನ’ ಪ್ರವಾಸಕ್ಕೆ ಶಾಸಕ ರಾಮದಾಸ್ ಚಾಲನೆ
ಮೈಸೂರು

`ಕರ್ನಾಟಕ ದರ್ಶನ’ ಪ್ರವಾಸಕ್ಕೆ ಶಾಸಕ ರಾಮದಾಸ್ ಚಾಲನೆ

February 6, 2019

ಮೈಸೂರು: ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವತಿಯಿಂದ ಸರ್ಕಾರಿ ಪ್ರೌಢಶಾಲೆಗಳ 52 ಮಕ್ಕಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಐದು ದಿನಗಳ `ಕರ್ನಾಟಕ ದರ್ಶನ’ ಪ್ರವಾಸಕ್ಕೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಮಂಗಳವಾರ ಹಸಿರು ನಿಶಾನೆ ತೋರಿಸಿ, ಚಾಲನೆ ನೀಡಿದರು.

ಮೇಲುಕೋಟೆ, ಯಡಿಯೂರು, ಚಿತ್ರದುರ್ಗ, ಟಿ.ಬಿ.ಡ್ಯಾಂ, ಕೂಡಲ ಸಂಗಮ, ಆಲಮಟ್ಟಿ, ವಿಜಯಪುರ, ಬಾದಾಮಿ, ಪಟ್ಟದಕಲ್ಲು, ಹಂಪೆ ಇನ್ನಿತರ ಪ್ರವಾಸಿ ಸ್ಥಳಗಳಿಗೆ ಈ ವಿದ್ಯಾರ್ಥಿಗಳು ಭೇಟಿ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪ್ರವಾಸ ಸಂದರ್ಭದಲ್ಲಿ ವಿದ್ಯಾರ್ಥಿ ಗಳು ಎಲ್ಲಾ ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಂತೆ ಅತ್ಯುತ್ತಮ ವರದಿ ಬರೆದು ನೀಡುವ ಐವರು ಪ್ರತಿಭಾವಂತ ಮಕ್ಕಳಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. ನಗರಪಾಲಿಕೆ ಸದಸ್ಯೆ ಸೌಮ್ಯ ಉಮೇಶ್, ದಕ್ಷಿಣ ವಲಯ ಬಿಇಓ ಶಿವಕುಮಾರ್, ಬಿಆರ್‍ಸಿ ನಾಗೇಶ್, ಮನೋಹರ್ ಮತ್ತು ಮುಖ್ಯೋಪಾಧ್ಯಯರು, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.

Translate »