ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಮೈಸೂರಲ್ಲಿ ಮುಕ್ತ ಮ್ಯಾರಥಾನ್ ಓಟದ ಸ್ಪರ್ಧೆ
ಮೈಸೂರು

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಮೈಸೂರಲ್ಲಿ ಮುಕ್ತ ಮ್ಯಾರಥಾನ್ ಓಟದ ಸ್ಪರ್ಧೆ

February 6, 2019

ಮೈಸೂರು: 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗ ವಾಗಿ ಮೈಸೂರಲ್ಲಿ ಮುಕ್ತ ಮ್ಯಾರಥಾನ್ ಓಟದ ಸ್ಪರ್ಧೆ ಇಂದು ನಡೆಯಿತು.

ಮೈಸೂರು ನಗರ ಪೊಲೀಸ್ ವತಿಯಿಂದ ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಅಪರಾಧ ಮತ್ತು ಸಂಚಾರ ಡಿಸಿಪಿ ಡಾ.ವಿಕ್ರಂ ಪಿ.ಅಮಟೆ ಅವರು ಹಸಿರು ನಿಶಾನೆ ತೋರುವ ಮೂಲಕ ಮ್ಯಾರಥಾನ್‍ಗೆ ಇಂದು ಮುಂಜಾನೆ 6.40ಕ್ಕೆ ಚಾಲನೆ ನೀಡಿದರು.

ಸಂಚಾರ ವಿಭಾಗದ ಎಸಿಪಿ ಜಿ.ಎನ್. ಮೋಹನ್ ನೇತೃತ್ವದಲ್ಲಿ ನಡೆದ ಮ್ಯಾರ ಥಾನ್‍ನಲ್ಲಿ ಭಾಗವಹಿಸಿದ್ದ 150ಕ್ಕೂ ಹೆಚ್ಚು ಸಾರ್ವಜನಿಕರು, ಜೈಲರ್ ಪ್ರಶಿಕ್ಷಣಾರ್ಥಿ ಗಳೂ ಸೇರಿದಂತೆ 300 ಕ್ಕೂ ಹೆಚ್ಚು ಮಂದಿ ಪೊಲೀಸರು ಭಾಗವಹಿಸಿದ್ದರು.

ಕೆ.ಆರ್. ಸರ್ಕಲ್, ಡಿ. ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ರಾಮಸ್ವಾಮಿ ಸರ್ಕಲ್, ಚಾಮರಾಜ ಜೋಡಿ ರಸ್ತೆ, ಸರ್ಕಾರಿ ಸಂಸ್ಕøತ ಪಾಠಶಾಲೆ, ಗನ್‍ಹೌಸ್ ಮೂಲಕ ಸಾಗಿದ ಸ್ಪರ್ಧಿಗಳು, ಹಾರ್ಡಿಂಜ್ ಸರ್ಕಲ್ ದಾಟಿ ಮರಳಿ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ 5.2 ಕಿ.ಮೀ. ಕ್ರಮಿಸಿ ಬೆಳಿಗ್ಗೆ 7.30 ಗಂಟೆ ವೇಳೆಗೆ ಓಟ ಅಂತ್ಯಗೊಂಡಿತು. ಪುರುಷರ ವಿಭಾಗದಲ್ಲಿ ಜೈಲರ್ ಪ್ರಶಿಕ್ಷಣಾರ್ಥಿಗಳಾದ ನಾನೂ ಜಿ. ನಾಯಕ್ (ಪ್ರಥಮ) ಹಾಗೂ ಕುಮಾರ್ ರಾಥೋಡ್ (ತೃತೀಯ) ಹಾಗೂ ಮೈಸೂರಿನ ಮಹಾಜನ ಕಾಲೇಜು ಉಪನ್ಯಾಸಕ ಚೆಲುವೇಗೌಡ (ದ್ವಿತೀಯ) ಬಹುಮಾನ ಪಡೆದುಕೊಂಡರೆ ಮಹಿಳಾ ವಿಭಾಗದಲ್ಲಿ ಜೈಲರ್ ಪ್ರಶಿಕ್ಷಣಾರ್ಥಿಗಳಾದ ಹೇಮಾವತಿ, ದೀಪಿಕಾ ಅತ್ತಾರ್ ಹಾಗೂ ಅಹಲ್ಯ ಅವರು ಕ್ರಮವಾಗಿ 1, 2, 3ನೇ ಬಹುಮಾನ ಗಳಿಸಿದರು. ಎಸಿಪಿಗಳಾದ ಗಜೇಂದ್ರ ಪ್ರಸಾದ್, ಸಿ. ಗೋಪಾಲ್, ಧರ್ಮಪ್ಪ ಎಲ್ಲಾ ಸಂಚಾರ ಮತ್ತು ಸಿವಿಲ್ ಠಾಣೆಗಳ ಪೊಲೀಸ್ ಸಬ್ ಇನ್ಸ್‍ಪೆಕ್ಟರ್‍ಗಳು ಮ್ಯಾರಥಾನ್‍ನಲ್ಲಿ ಪಾಲ್ಗೊಂಡಿದ್ದರು.

Translate »