ಶ್ರೀ ಶ್ರೀಕಂಠೇಶ್ವರಸ್ವಾಮಿಯವರ ಪಂಚ ಮಹಾ ರಥೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಪೂರ್ವ ಸಿದ್ದತಾ ಸಭೆ
ಮೈಸೂರು

ಶ್ರೀ ಶ್ರೀಕಂಠೇಶ್ವರಸ್ವಾಮಿಯವರ ಪಂಚ ಮಹಾ ರಥೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಪೂರ್ವ ಸಿದ್ದತಾ ಸಭೆ

February 5, 2019

ನಂಜನಗೂಡು: ಮಾರ್ಚ 19ರಂದು ನಡೆಯಲಿರುವ ಪಂಚ ಮಹಾ ರಥೋತ್ಸವ (ದೊಡ್ಡ ಜಾತ್ರೆ) ಹಿನ್ನಲೆಯಲ್ಲಿ ಸೋಮವಾರ ಶ್ರೀ ಶ್ರೀಕಂಠೇಶ್ವರ ದೇವಸ್ಥಾನದ ದಾಸೋಹ ಭವನದಲ್ಲಿ ಉನ್ನತ ಶಿಕ್ಷಣಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ,ದೇವೇಗೌಡರವರ ಅಧ್ಯಕ್ಷತೆ ಸಭೆ ಪೂರ್ವ ಸಿದ್ದತಾ ಸಭೆ ನಡೆಯಿತು.

ಸಭೆಯಲ್ಲಿ ಉಸ್ತುವಾರಿ ಸಚಿವರು ಸುಗುಮವಾಗಿ ರಥೋತ್ಸವ ನಡೆಯಲು ಕೈಗೊಳ್ಳಬೇಕಾದ ಅಗತ್ಯ ಕ್ರಮ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಮುಕ್ತವಾಗಿ ಚೆರ್ಚಿಸಿದರು.
ನಂತರ ಸಚಿವ ಜಿ,ಟಿ ದೇವೆಗೌಡರು ಮಾತನಾಡಿ ಪಂಚಮಹಾರಥೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲರು ಶ್ರಮಿಸಬೇಕು ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತಾದಿಗಳು ಬರುವ ನಿರೀಕ್ಷೆ ಇರುವುದರಿಂದ ಭಕ್ತರಿಗೆ ಯಾವುದೇ ರೀತಿಯ ಲೋಪವಾಗದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯವಾಗಿ ರಥಗಳು ಚಲಿಸುವ ಮಾರ್ಗದಲ್ಲಿ ಯಾವುದೇ ಅಡೆತಡೆಗಳಿರದಂತೆ ರಸ್ತೆಗಳನ್ನು ಸುಗುಮವಾಗಿ ಇಡುವಂತೆ ಸೂಚಿಸಿದ ಅವರು ಸಮೃದ್ದ ಕುಡಿಯುವ ನೀರು ಉತ್ತಮ ಬಸ್ ಸೌಕರ್ಯ ಒದಗಿಸುವಂತೆ ಅಧಿಕಾರಿ ಹೇಳಿದರು.

ಭಕ್ತರು ಅತ್ಯಧಿಕ ಸಂಖ್ಯೆಯಲ್ಲಿ ಬಂದು ಪವಿತ್ರವಾದ ಕಪಿಲ ನದಿ ಸ್ನಾನ ಮಾಡುವುದರಿಂದ ನದಿಯ ದಡದಲ್ಲಿ ಸೋಪಾನ ಘಟ್ಟಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ದೇವಾಲಯದ ಸುತ್ತಾ ಮುತ್ತಾ ಪ್ರದೇಶದಲ್ಲಿ ನೈರ್ಮಲ್ಯ ಬಗ್ಗೆ ಎಚ್ಚರವಹಿಸಬೇಕು, ಅಲ್ಲಲ್ಲಿ ಕಸದ ತೊಟ್ಟಿ ಹಾಕುವಂತೆ ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕೆಂದು ತಾಖೀತು ಮಾಡಿದರು.
ಜಾತ್ರೆಗೆ ಬರುವ ಭಕ್ತಾಧಿಗಳಿಗೆ ದೇವಸ್ಥಾನ ವತಿಯಿಂದ ಗುಣಮಟ್ಟದ ಪ್ರಸಾದ ವಿತರಿಸಬೇಕು ಸೇರ್ವಾರ್ಥದಾರರು ಇತರೆ ಸಂಘ-ಸಂಸ್ಥೆಗಳು ಪ್ರಸಾಧ ವಿತರಿಸಲು ಖಡ್ಡಾಯ ಅನುಮತಿ ಪಡೆಯಲೇ ಬೇಕು, ಪ್ರಸಾದ ನೀಡುವವರಿಂದ ಅರ್ಜಿಯನ್ನು ಸ್ವೀಕರಿಸಿ ಅವರಿಗೆ ಶರತ್ತನ್ನು ವಿದಿಸಬೇಕೆಂದು ಆರೋಗ್ಯ ಅಧಿಕಾರಿ ತಾಕೀತು ಮಾಡಿದ ಅವರು ಸಾಂಕ್ರಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ನಗರಸಭಾ ವ್ಯಾಪ್ತಿ ಹಾಗೂ ನದಿ ದಡದಲ್ಲಿ ದೇವಾಲಯದ ಆವರಣ ಮುಂತಾದ ಕಡೆಗಳಲ್ಲಿ ವಿದ್ಯುತ್ ದ್ವೀಪಗಳು. ಸಿ.ಸಿ. ಟಿ.ವಿ, ಅಳವಡಿಸುವಂತೆ ಸೂಚಿಸಿದರಲ್ಲದೇ ರಥೋತ್ಸವ ವೇಳೆಯಲ್ಲಿ ಸೂಕ್ತ ಬಂದೋಬಸ್ತು ಏರ್ಪಡಿಸಬೇಕೆಂದು ಪೊಲೀಸ್ ಅಧಿಕಾರಿ ಸೂಚಿಸಿದರು.

ಒಟ್ಟಾರೆ ಪ್ರತಿ ವರ್ಷದಂತೆ ಈ ವರ್ಷವು ದೊಡ್ಡ ಜಾತ್ರೆ ಯು ಯಶಸ್ವಿಯಾಗಿ ನಡೆಯಲು ಬೇಕಾದ ಸಿದ್ದತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಲು ಅಧಿಕಾರಿಗಳಿಗೆ ಉಸ್ತುವಾರಿ ಸಚಿವ ಜಿ,ಟಿ.ದೇವೇಗೌಡ ತಿಳಿಸಿದರು.

ಇಂತಹ ಮಹತ್ವದ ಸಭೆಗೆ ಬಾರದ ನೀರಾವರಿ ಇಲಾಖೆ ಸೇರಿದಂತೆ ಇತರೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸಿದರು. ನಗರದ ಪ್ರಮುಖ ರಸ್ತೆಯಾದ ಆರ್,ಪಿ ರಸ್ತೆಯ ಕಾಮಗಾರಿಯನ್ನು ಪೂರ್ಣಗಿಳಿಸಿ ಫೆಬ್ರವರಿ 28ರೊಳಗೆ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಬೇಕೆಂದು ಲೋಕೊಪಯೋಗಿ ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೂ ಮುನ್ನಾ ದೇಗುಲಕ್ಕೆ ತೆರಳಿ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದರ್ಶನ ಪಡೆದರು.
ಸಭೆಯಲ್ಲಿ; ಶಾಸಕ ಬಿ.ಹರ್ಷವರ್ಧನ್. ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್. ತಾ.ಪಂ,ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಡಿ.ಹೆಚ್,ಓ, ಡಾ.ಬಸವರಾಜು, ಟಿ,ಹೆಚ್.ಓ ಡಾ,ಕಲಾವತಿ. ಎಎಸ್‍ಪಿ ಸ್ನೇಹ. ಡಿವೈಎಸ್ಪಿ ಮಲ್ಲಿಕ್, ನಗರಸಭೆ ಅದ್ಯಕ್ಷೆ ಪುಷ್ವಲತಾ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪುಟ್ಟಲಿಂಗಶಟ್ಟಿ, ಪ್ರಧಾನ ಆಗಮಿಕರಾದ ನಾಗಚಂದ್ರ ದೀಕ್ಷೀತ್, ತಹಸಿಲ್ಧಾರ್ ಮಹೇಶ್‍ಕುಮಾರ್. ತಾ.ಪಂ, ಈಓ ಶ್ರೀಕಂಠೇರಾಜೇಅರಸ್, ದೇವಸ್ಥಾನ ಆಡಳಿತ ಅಧಿಕಾರಿ ಕುಮಾರಸ್ವಾಮಿ, ಎಈಓ ಗಂಗಯ್ಯ, ಆಯುಕ್ತರಾದ ವಿಜಯ, ಎಈಈ ಮದನ್‍ಮೋಹನ್, ವಾರ್ತ ಮತ್ತು ಪ್ರಚಾರ ಇಲಾಖೆ ಅಧಿಕಾರಿ ರಾಜು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎನ್.ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಆರ್.ವಿ.ಮಹದೇವಸ್ವಾಮಿ ಸಮಾಜಸೇವಕ ಯು,ಎನ್ ಪದ್ಮನಾಭರಾವ್, ವ್ಯವಸ್ಥಾಪನ ಸಮಿತಿ ಸದಸ್ಯರುಗಳಾದ ಮಂಜುಳಾ ಮಧು, ಶ್ರೀಧರ್, ಇಂದನ್‍ಬಾಬು, ಮಾದೇಶ್ ನಾಯಕ, ಶಿವನಂಜಯ್ಯ, ಗಿರೀಶ್, ಶಶೀರೇಖಾ, ನಗರಸಭಾ ಸದಸ್ಯರಾದ ಮಹದೇವಸ್ವಾಮಿ, ಮಂಗಳಾ, ಬಿಜೆಪಿ ನಗರಾಧ್ಯಕ್ಷ ಬಾಲಚಂದ್ರು, ಶ್ರೀರಾಂಪುರ ಸ್ವಾಮಿ, ಶಂಕರಪುರ ರಂಗಸ್ವಾಮಿ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಧನ್ಯ, ಗುರುಪ್ರಸನ್ನ, ದೇವರಸನಹಳ್ಳಿ ಆನಂದ, ಜೆಡಿಎಸ್ ಯುವ ಘಟಕ ಅಧ್ಯಕ್ಷ ಸಂಜಯ್‍ಗೌಡ, ನಗರಾಧ್ಯಕ್ಷ ಭಾಸ್ಕರ್‍ಗೌಡ, ಜಿ,ಬಸವರಾಜು, ಉಮೇಶ್, ರಜತ್ ಗೌಡ, ಸೇರಿದಂತೆ ಏಳು ಗ್ರಾಮದ ಮುಖಂಡರು. ಸಂಘ-ಸಂಸ್ಥೆ ಅಧ್ಯಕ್ಷರು ಹಾಗೂ ಪಧಾಧಿಕಾರಿಗಳು ಭಾಗವಹಿಸಿದ್ದರು.

Translate »