ಅಧಿಕಾರ ಸ್ವೀಕರಿಸಿದ ಬಳಿಕ ತಾಲೂಕು ಆಸ್ಪತ್ರೆಗೆ ದಿಢೀರ್ ಭೇಟಿ, ಹಾಸ್ಟೆಲ್ ಪರಿಶೀಲನೆ ಹುಣಸೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮತ್ತು ಹಾಸ್ಟೆಲ್‍ಗಳಿಗೆ ದಿಢೀರ್ ಭೇಟಿ ನೀಡಿದ ಜಿಪಂ ಪ್ರಭಾರ ಅಧ್ಯಕ್ಷ ಸಾ.ರಾ.ನಂದೀಶ್ ಅಲ್ಲಿನ ಅವ್ಯವಸ್ಥೆ ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಗುರುವಾರ ರಾತ್ರಿ ಸಾ.ರಾ.ನಂದೀಶ್, ನಗರದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದಾಗ ರೋಗಿಗಳು ಹಾಗೂ ಸಾರ್ವಜನಿಕರು ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ದರ್ಶನ ಮಾಡಿಸಿದರು. ಬಳಿಕ ಗಿರಿಜನ ಹಾಗೂ ಹಿಂದುಳಿದ ವರ್ಗಗಳ ಹಾಸ್ಟೆಲ್‍ನ…
ಸರಗೂರಲ್ಲಿ ರಾಗಿ ಮೆದೆಗೆ ಬೆಂಕಿ: ಒಂದು ಮೆದೆ ಭಸ್ಮ
January 13, 2019ಸರಗೂರು: ಸರಗೂರು ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಗಿ ಮೆದೆಯೊಂದು ಬೆಂಕಿಯಲ್ಲಿ ಭಸ್ಮವಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು, ಅಂಬೇಡ್ಕರ್ ಯುವಕ ಸಂಘದವರು ಹಾಗೂ ಆಟೋ ಚಾಲಕರು ನೀರು ಸುರಿದು ಬೆಂಕಿ ಆರಿಸಲು ಯತ್ನಿಸಿದರು. ಬೆಂಕಿ ಮತ್ತಷ್ಟು ಹೆಚ್ಚಾದ ಕಾರಣ ಅಗ್ನಿಶಾಮಕದಳದವರಿಗೆ ಕರೆ ಮಾಡಿದರು. ಆಗ್ನಿಶಾಮಕ ದಳದ ಸಿಬ್ಬಂದಿ ಬರುವ ವೇಳೆಗಾಗಲೇ ಎರಡು ರಾಗಿ ಮೆದೆಗಳಲ್ಲಿ ಒಂದು ಮೆದೆ ಪೂರ್ಣ ಸುಟ್ಟು ಹೋಗಿದೆ. ಘಟನೆ ಅಕಸ್ಮಿಕವೋ ಅಥವಾ ಕಿಡಿಗೇಡಿನ ಕೃತ್ಯವೋ ಎಂಬುದು ಇನ್ನಷ್ಟೇತಿಳಿಯಬೇಕಾಗಿದೆ. ವಿವರ:…
ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ದಾಳಿ, ಮೂವರ ಸೆರೆ
January 13, 2019ಮೈಸೂರು: ಸ್ಪಾವೊಂದರ ಮೇಲೆ ಶುಕ್ರವಾರ ದಾಳಿ ನಡೆಸಿದ ಪೊಲೀಸರು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿ ಕೊಲ್ಕತ್ತಾ ಮೂಲದ ಇಬ್ಬರು ಮಹಿಳೆಯ ರನ್ನು ರಕ್ಷಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಯಡತಾಳು ಗ್ರಾಮದ ಎಂ.ಡಿ. ರಘುನಂದ, ಬೆಂಗಳೂರಿನ ಮೂಡ್ಲು ಪಾಳ್ಯದ ಗೋವಿಂದ ಹಾಗೂ ಚಿತ್ರದುರ್ಗ ಜಿಲ್ಲೆಯ ಹುಲ್ಲೂರು ಗ್ರಾಮದ ಮಧುಕುಮಾರ್ ಬಂಧಿತರು. ಮೈಸೂರಿನ ಲಷ್ಕರ್ ಠಾಣಾ ವ್ಯಾಪ್ತಿಯ ಹೋಟೆಲ್ ಮೈಸೂರು ಕಾಂಪ್ಲೆಕ್ಸ್ ಕಟ್ಟಡದ ಸ್ಪಾವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು, ಬಾಡಿ ಮಸಾಜ್ ಮಾಡುವ ನೆಪದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದುದು…
ಸೀತೆ ಆಹಾರ ಕ್ರಮದ ಬಗ್ಗೆ ವಿವಾದಿತ ಹೇಳಿಕೆ: ಕಲೈ ಸೆಲ್ವಿ ವಿರುದ್ಧ ಪೊಲೀಸರಿಗೆ ದೂರು
January 13, 2019ಮೈಸೂರು: ಶ್ರೀರಾಮನ ಕುರಿತು ವಿವಾದಿತ ಹೇಳಿಕೆಗಳ ಬೆನ್ನಲ್ಲೇ ಸೀತೆಯ ಆಹಾರ ಕ್ರಮದ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಪೆರಿಯಾರ್ ಚಿಂತಕಿ ಕಲೈ ಸೆಲ್ವಿ ವಿರುದ್ಧ ಜಯಲಕ್ಷ್ಮೀಪುರಂ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದೆ. ಸೀತೆ ಬಗ್ಗೆ ನಿಂಧನಾತ್ಮಕ ಹೇಳಿಕೆ ನೀಡುವ ಮೂಲಕ ಬಹುಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಶ್ರೀರಾಮಸೇನೆ ಮೈಸೂರು ನಗರ ಘಟಕದ ಅಧ್ಯಕ್ಷ ಎಂ. ಸಂಜಯ್ ದೂರಿನಲ್ಲಿ ಆರೋಪಿಸಿದ್ದಾರೆ. ನಗರದ ಕಲಾಮಂದಿದರ ಕಿರು ರಂಗಮಂದಿರದಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಕಲೈ ಸೆಲ್ವಿ ಭಾಗವಹಿಸಿ,…
ಡಿ.ಗ್ರೂಪ್ ನೌಕರರಿಗೆ ಗೃಹ ನಿರ್ಮಾಣ, ನಿವೇಶನ ಖರೀದಿಗೆ ಅನುದಾನ ಹೆಚ್ಚಿಸಲು ಆಗ್ರಹ
January 12, 2019ಮೈಸೂರು: ಗೃಹ ನಿರ್ಮಾಣ ಅಥವಾ ನಿವೇಶನ ಖರೀದಿಗೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸುವುದರೊಂದಿಗೆ ಹಳೆ ಪಿಂಚಣಿ ಪದ್ಧತಿಯನ್ನೇ ಮುಂದುವರೆಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಿ-ಗ್ರೂಪ್ ನೌಕರರ ಸಂಘದ ಪಿ.ಕೆಂಪರಾಜು ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಿ-ಗ್ರೂಪ್ ನೌಕರರ ಸಂಘದ 2019ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ, ಡಿ ಗ್ರೂಪ್ ನೌಕರರಿಗೆ ಮನೆ ನಿರ್ಮಾಣ ಅಥವಾ ನಿವೇಶನ ಖರೀದಿಗೆ 2,80 ಲಕ್ಷರೂ…
ಮೈಸೂರಲ್ಲಿದೆ ವೃದ್ಧೆಯರ ಚಿನ್ನಾಭರಣ ದೋಚುವ ಖದೀಮರ ತಂಡ
January 12, 2019ಮೈಸೂರು: ವೃದ್ಧ ಮಹಿಳೆಯರನ್ನು ವಂಚಿಸಿ, ಚಿನ್ನಾ ಭರಣ ದೋಚುವ ಜಾಲವೊಂದು ಮೈಸೂ ರಿನಲ್ಲಿ ಸಕ್ರಿಯವಾಗಿದ್ದು, ಯಾವ ನೆಪ ದಲ್ಲಾದರೂ ನಿಮ್ಮನ್ನು ಮೋಸದ ಖೆಡ್ಡಾಗೆ ಕೆಡವಿ, ಕ್ಷಣಾರ್ಧದಲ್ಲಿ ಕಣ್ಮರೆ ಯಾಗುತ್ತಾರೆ ಎಚ್ಚರ… ಎಚ್ಚರ… ಪತಿಯ ವೈದ್ಯಕೀಯ ಪರೀಕ್ಷೆಯ ರಿಪೋರ್ಟ್ ತೆಗೆದುಕೊಂಡು ಮನೆಗೆ ಹೋಗುತ್ತಿದ್ದ ವೃದ್ಧೆಯೊಬ್ಬರನ್ನು ಇಬ್ಬರು ಖದೀಮರು ವಂಚಿಸಿ, ಸುಮಾರು 45 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ, ಪರಾರಿಯಾಗಿರುವ ಘಟನೆಯೇ ಇದ ಕ್ಕೊಂದು ತಾಜಾ ಉದಾಹರಣೆ. ಮೈಸೂ ರಿನ ಚಾಮರಾಜಪುರಂನ ಹಾಡ್ರ್ವಿಕ್ ಶಾಲೆ ಹಿಂಭಾಗದ ನಿವಾಸಿ ರಾಮ ರಾವ್…
ನಗರಪಾಲಿಕೆ ವಲಯ ಕಚೇರಿ ಬಳಿ ಯಾದವಗಿರಿ ನಿವಾಸಿಗಳ ಪ್ರತಿಭಟನೆ
January 12, 2019ಮೈಸೂರು: ಹಲವು ಬಾರಿ ಕೋರಿಕೊಂಡರೂ ಪಾಲಿಕೆ ಆರೋ ಗ್ಯಾಧಿಕಾರಿಗಳು ಬಡಾವಣೆಗೆ ಭೇಟಿ ನೀಡಿಲ್ಲ, ಸ್ವಚ್ಛತೆಗೆ ಗಮನಹರಿಸಿಲ್ಲ ಎಂದು ಆರೋ ಪಿಸಿ 18ನೇ ವಾರ್ಡಿನ ಕಾರ್ಪೊರೇಟರ್ ಗಿರಿ ವಿನಾಯಕ್, ಯಾದವಗಿರಿ ಕ್ಷೇಮಾ ಭಿವೃದ್ಧಿ ಸಂಘದ ಸಂಚಾಲಕ ಎಸ್.ಕೆ. ದಿನೇಶ್ ನೇತೃತ್ವದಲ್ಲಿ ಬಡಾವಣೆ ನಿವಾಸಿಗಳು ಇಂದು ಯಾದವಗಿರಿಯ ಪಾಲಿಕೆ ವಲಯ ಕಚೇರಿ 4ರ ಬಳಿ ಪ್ರತಿಭಟನೆ ನಡೆಸಿದರು. ಬಡಾವಣೆಯಾದ್ಯಂತ ಹೆಚ್ಚು ಮರಗಳಿ ರುವುದರಿಂದ ಅವುಗಳ ಎಲೆ ಯಥೇಚ್ಛ ವಾಗಿ ಉದುರುತ್ತಿದ್ದು, ಕಳೆದ 6 ತಿಂಗ ಳಿಂದ ಪಾಲಿಕೆ ಸಿಬ್ಬಂದಿ ಸ್ವಚ್ಛಗೊಳಿಸದ…
ಸಚಿವ ಪುಟ್ಟರಂಗಶೆಟ್ಟಿ ವಿರುದ್ಧ ಅಸಂವಿಧಾನಿಕ ಪದ ಬಳಕೆ:ಉಪ್ಪಾರರ ಸಂಘ ಖಂಡನೆ-ಪ್ರತಿಭಟನೆ
January 12, 2019ಮೈಸೂರು: ವಿಧಾನ ಸೌಧದಲ್ಲಿ ಸಿಬ್ಬಂದಿಯೊಬ್ಬ ಹಣ ದೊಂದಿಗೆ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಕೆಲ ವಾಹಿನಿಗಳ ಸುದ್ದಿವಾಚಕರು ಸಚಿವ ಪುಟ್ಟರಂಗಶೆಟ್ಟಿ ವಿರುದ್ದ ಅಸಂವಿ ಧಾನಿಕ ಪದ ಬಳಸಿದ್ದಾರೆ ಎಂದು ಆರೋ ಪಿಸಿ ಉಪ್ಪಾರರ ಸಂಘದ ಕಾರ್ಯಕರ್ತರು ಮೈಸೂರಿನ ಡಿಸಿ ಕಚೇರಿ ಬಳಿ ಇಂದು ಮಧ್ಯಾಹ್ನ ಭಾರೀ ಪ್ರತಿಭಟನೆ ನಡೆಸಿದರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಪ್ಪಾರರ ಸಂಘದ ಕಾರ್ಯ ಕರ್ತರು, ಕೆಲವು ವಾಹಿನಿಗಳ ಸುದ್ದಿ ವಾಚಕರ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಪುಟ್ಟ ರಂಗಶೆಟ್ಟಿ…
ನುಗ್ಗೆಕಾಯಿ ಕೆಜಿಗೆ 160 ರೂ.! ಶುಂಠಿ ಬೆಲೆಯೂ ಹೆಚ್ಚಳ
January 12, 2019ಮೈಸೂರು: ನಿತ್ಯ ಬಳ ಸುವ ತರಕಾರಿ ಪೈಕಿ ನುಗ್ಗೆಕಾಯಿ ಮತ್ತು ಶುಂಠಿ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಮೈಸೂರಿನ ದೇವರಾಜ ಮಾರುಕಟ್ಟೆ, ಕೆ.ಆರ್.ಮಾರ್ಕೆಟ್ ಹಾಗೂ ಎಪಿಎಂಸಿ ಮಾರುಕಟ್ಟೆಗಳಲ್ಲಿ ಶುಂಠಿ ಕೆಜಿಗೆ 100 ರೂ. ಹಾಗೂ ನುಗ್ಗೆಕಾಯಿ ಬೆಲೆ ಕೆಜಿಗೆ 160 ರೂ. ಇತ್ತು. ಮೂರು ದಿನಗಳ ಹಿಂದೆ ಶುಂಠಿ 60 ರೂ. ಇತ್ತು. ಆದರೆ ಇದು ಸೀಜನ್ ಇಲ್ಲದಿರುವುದರಿಂದ ನುಗ್ಗೆಕಾಯಿ ಬೆಲೆ ಗಗನಕ್ಕೇರಿದ್ದು, ಒಂದೂವರೆ ತಿಂಗಳ ಹಿಂದೆ ಕೆಜಿಗೆ 50 ರೂ. ಇತ್ತು ಎಂದು ದೇವರಾಜ ಮಾರುಕಟ್ಟೆ ತರಕಾರಿ…
ಮೈಸೂರಲ್ಲಿ ಶಾಲಾ ಮಕ್ಕಳ ಸ್ವಚ್ಛತಾ ಜಾಗೃತಿ ಜಾಥಾ
January 12, 2019ಮೈಸೂರು: ಪ್ಲಾಸ್ಟಿಕ್ ತ್ಯಜಿಸಿ, ಪೇಪರ್ ಮತ್ತು ಬಟ್ಟೆ ಬ್ಯಾಗ್ ಬಳಸಿ ಸಂದೇಶದೊಂದಿಗೆ ಶಾಲಾ ಮಕ್ಕಳು ಇಂದು ಮೈಸೂರಲ್ಲಿ ಬೃಹತ್ ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಮೈಸೂರು ಮಹಾನಗರ ಪಾಲಿಕೆ ವತಿ ಯಿಂದ ಸ್ವಚ್ಛ ಭಾರತ ಅಭಿಯಾನದಡಿ ಏರ್ಪಡಿಸಿದ್ದ ಜಾಥಾಗೆ ಪ್ಲಾಸ್ಟಿಕ್ ತ್ಯಜಿಸಿ ನಿಸರ್ಗ ಉಳಿಸಿ ಅಭಿಯಾನ ನಡೆಸುತ್ತಿ ರುವ ನಾಲ್ಕು ವರ್ಷದ ಇಷಾನ್ ಚೇತನ್ ಅರಮನೆ ಉತ್ತರ ದ್ವಾರದ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ….