ಸಚಿವ ಪುಟ್ಟರಂಗಶೆಟ್ಟಿ ವಿರುದ್ಧ ಅಸಂವಿಧಾನಿಕ  ಪದ ಬಳಕೆ:ಉಪ್ಪಾರರ ಸಂಘ ಖಂಡನೆ-ಪ್ರತಿಭಟನೆ
ಮೈಸೂರು

ಸಚಿವ ಪುಟ್ಟರಂಗಶೆಟ್ಟಿ ವಿರುದ್ಧ ಅಸಂವಿಧಾನಿಕ ಪದ ಬಳಕೆ:ಉಪ್ಪಾರರ ಸಂಘ ಖಂಡನೆ-ಪ್ರತಿಭಟನೆ

January 12, 2019

ಮೈಸೂರು: ವಿಧಾನ ಸೌಧದಲ್ಲಿ ಸಿಬ್ಬಂದಿಯೊಬ್ಬ ಹಣ ದೊಂದಿಗೆ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಕೆಲ ವಾಹಿನಿಗಳ ಸುದ್ದಿವಾಚಕರು ಸಚಿವ ಪುಟ್ಟರಂಗಶೆಟ್ಟಿ ವಿರುದ್ದ ಅಸಂವಿ ಧಾನಿಕ ಪದ ಬಳಸಿದ್ದಾರೆ ಎಂದು ಆರೋ ಪಿಸಿ ಉಪ್ಪಾರರ ಸಂಘದ ಕಾರ್ಯಕರ್ತರು ಮೈಸೂರಿನ ಡಿಸಿ ಕಚೇರಿ ಬಳಿ ಇಂದು ಮಧ್ಯಾಹ್ನ ಭಾರೀ ಪ್ರತಿಭಟನೆ ನಡೆಸಿದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಪ್ಪಾರರ ಸಂಘದ ಕಾರ್ಯ ಕರ್ತರು, ಕೆಲವು ವಾಹಿನಿಗಳ ಸುದ್ದಿ ವಾಚಕರ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಪುಟ್ಟ ರಂಗಶೆಟ್ಟಿ ಕಚೇರಿ ಸಿಬ್ಬಂದಿ ಬಳಿ ಹಣ ಸಿಕ್ಕಿರುವ ಬಗ್ಗೆ ಎಸಿಬಿ ತನಿಖೆ ನಡೆಸುತ್ತಿದೆ. ಕೆಲ ಖಾಸಗಿ ವಾಹಿನಿಯ ನಿರೂಪಕರು ಪೂರ್ವಾಗ್ರಹ ಪೀಡಿತರಾಗಿ ಸಚಿವ ಪುಟ್ಟ ರಂಗಶೆಟ್ಟಿ ಅವರಿಗೆ ಅಗೌರವ ತೋರು ವಂತಹ ಪದ ಪ್ರಯೋಗ ಮಾಡುತ್ತಿರು ವುದು ಖಂಡನೀಯ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಪುಟ್ಟರಂಗಶೆಟ್ಟಿ ಮೇಲಿನ ಆರೋಪ ಸಾಬೀತಾದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಿ. ಅದಕ್ಕೆ ನಮ್ಮ ಅಭ್ಯಂತರ ವಿಲ್ಲ. ಅದನ್ನು ಬಿಟ್ಟು ಓರ್ವ ಜನಪ್ರತಿನಿಧಿ, ಅದೂ ಸಚಿವ ಸ್ಥಾನದಲ್ಲಿರುವವರಿಗೆ ದಡ್ಡ, ಮೂರ್ಖ ಎಂಬ ಪದ ಪ್ರಯೋಗ ಮಾಡುವುದು ಅಸಂವಿಧಾನಿಕವಾಗಿದೆ. ಈ ಕೂಡಲೇ ಇಂತಹ ಪದ ಪ್ರಯೋಗಿಸಿರುವ ವಾಹಿನಿಯ ನಿರೂಪಕರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಉಪ್ಪಾರರ ಸಂಘದ ಕಾರ್ಯಾಧ್ಯಕ್ಷ ಪಿ.ಎಸ್.ವಿಷಕಂಠಯ್ಯ, ಚಾ.ನಗರ ಜಿ.ಪಂ.ಮಾಜಿ ಅಧ್ಯಕ್ಷ ಸಿ.ಎ. ಮಹಾದೇವಶೆಟ್ಟಿ, ಲತಾಸಿದ್ದಶೆಟ್ಟಿ, ನಿವೃತ್ತ ಡಿವೈಎಸ್‍ಪಿ ಮರಿಶೆಟ್ಟಿ, ರಂಗಪ್ಪ, ಎಸ್. ಮಹದೇವ, ಎಂ.ಲಕ್ಕಶೆಟ್ಟಿ, ಸಣ್ಣ ಮಾದ ಶೆಟ್ಟಿ, ಜಿ.ಸಿ.ಕೃಷ್ಣಸ್ವಾಮಿ, ನಾರಾಯಣ, ಎಚ್.ಜೆ.ಗೋಪಾಲ್, ಶ್ರೀನಿವಾಸ ಉಪ್ಪಾರ, ಎನ್.ಕಾಮರಾಜು, ಕೆ.ಸೋಮ ಶೇಖರ್, ಗೋವಿಂದಶೆಟ್ಟಿ, ಚ.ಹ. ಶಿವರಾಜು, ಕೆ.ಬಿ.ಸ್ವಾಮಿ, ನೂರೊಂದು ಶೆಟ್ಟಿ, ಲಿಂಗಣ್ಣ, ಮಂಜುನಾಥಶೆಟ್ಟಿ, ಶಾಂತರಾಜು, ನಾಗರಾಜ ಉಪ್ಪಾರ, ಧರಣೇಶ್, ಜಗವಾಲ್, ಎಸ್.ಸಿದ್ದ ಶೆಟ್ಟಿ, ನಾರಾಯಣ್, ಮಹದೇವಶೆಟ್ಟಿ, ಪಿ.ಪ್ರಕಾಶ್, ಎನ್.ಉಮೇಶ್ ಇನ್ನಿತರರು ಪಾಲ್ಗೊಂಡಿದ್ದರು.

Translate »