ನಗರಪಾಲಿಕೆ ವಲಯ ಕಚೇರಿ ಬಳಿ ಯಾದವಗಿರಿ ನಿವಾಸಿಗಳ ಪ್ರತಿಭಟನೆ
ಮೈಸೂರು

ನಗರಪಾಲಿಕೆ ವಲಯ ಕಚೇರಿ ಬಳಿ ಯಾದವಗಿರಿ ನಿವಾಸಿಗಳ ಪ್ರತಿಭಟನೆ

January 12, 2019

ಮೈಸೂರು: ಹಲವು ಬಾರಿ ಕೋರಿಕೊಂಡರೂ ಪಾಲಿಕೆ ಆರೋ ಗ್ಯಾಧಿಕಾರಿಗಳು ಬಡಾವಣೆಗೆ ಭೇಟಿ ನೀಡಿಲ್ಲ, ಸ್ವಚ್ಛತೆಗೆ ಗಮನಹರಿಸಿಲ್ಲ ಎಂದು ಆರೋ ಪಿಸಿ 18ನೇ ವಾರ್ಡಿನ ಕಾರ್ಪೊರೇಟರ್ ಗಿರಿ ವಿನಾಯಕ್, ಯಾದವಗಿರಿ ಕ್ಷೇಮಾ ಭಿವೃದ್ಧಿ ಸಂಘದ ಸಂಚಾಲಕ ಎಸ್.ಕೆ. ದಿನೇಶ್ ನೇತೃತ್ವದಲ್ಲಿ ಬಡಾವಣೆ ನಿವಾಸಿಗಳು ಇಂದು ಯಾದವಗಿರಿಯ ಪಾಲಿಕೆ ವಲಯ ಕಚೇರಿ 4ರ ಬಳಿ ಪ್ರತಿಭಟನೆ ನಡೆಸಿದರು.

ಬಡಾವಣೆಯಾದ್ಯಂತ ಹೆಚ್ಚು ಮರಗಳಿ ರುವುದರಿಂದ ಅವುಗಳ ಎಲೆ ಯಥೇಚ್ಛ ವಾಗಿ ಉದುರುತ್ತಿದ್ದು, ಕಳೆದ 6 ತಿಂಗ ಳಿಂದ ಪಾಲಿಕೆ ಸಿಬ್ಬಂದಿ ಸ್ವಚ್ಛಗೊಳಿಸದ ಕಾರಣ ನಿವಾಸಿಗಳಿಗೆ ತೀವ್ರ ತೊಂದರೆಯಾಗು ತ್ತಿದೆ ಎಂದು ಎಸ್.ಕೆ.ದಿನೇಶ್ ದೂರಿದರು.
ತಾವು ಹಲವು ಬಾರಿ ದೂರು ನೀಡಿ ದರೂ ಪಾಲಿಕೆ ಆರೋಗ್ಯ ಸಿಬ್ಬಂದಿಗಳಾ ಗಲೀ, ಅಧಿಕಾರಿಗಳಾಗಲೀ ಗಮನಹರಿ ಸಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂ ತೆಯೇ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತ ಕೆ.ಹೆಚ್. ಜಗದೀಶ್ ಅವರು, ತಾವು ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದಾಗ, ನಿವಾಸಿಗಳು ಪ್ರತಿಭಟನೆ ಕೈಬಿಟ್ಟರು.

ವಿವಿಗಳಲ್ಲಿನ ಬ್ಯಾಕ್‍ಲಾಗ್ ಹುದ್ದೆಗಳ ಭರ್ತಿಗೆ ಆಗ್ರಹ
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಸೇರಿದಂತೆ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳದಿ ದ್ದರೆ ತಮಟೆ ಚಳುವಳಿ ಹಮ್ಮಿಕೊಳ್ಳುವುದಾಗಿ ಸಮತಾ ಸೈನಿಕ ದಳ ಮತ್ತು ಆರ್‍ಪಿಐ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಎಚ್ಚರಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಈಗಾಗಲೇ ತೀರ್ಪು ನೀಡಿದ್ದು, ವಿವಿಗಳಲ್ಲಿ ಖಾಲಿ ಇರುವ ಬ್ಯಾಕ್‍ಲಾಗ್ ಹುದ್ದೆಗಳ ಭರ್ತಿಗೆ ಸೂಚನೆ ನೀಡಿದೆ. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಜ.31ರೊಳಗೆ ಮೈಸೂರು ವಿವಿಯಲ್ಲಿ ಒಂದು ವರ್ಷದಿಂದ ಖಾಲಿ ಇರುವ 76 ಬ್ಯಾಕ್‍ಲಾಗ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಬೇಕು. ಇಲ್ಲದಿದ್ದರೆ ಫೆ.1ರಿಂದ ಮೈಸೂರು ವಿವಿ ಆಡಳಿತ ಕಚೇರಿ ಮುಂದೆ ತಮಟೆ ಚಳು ವಳಿ ನಡೆಸುವುದಾಗಿ ತಿಳಿಸಿದರು.
ಬೆಂಗಳೂರು, ಧಾರವಾಡ ವಿವಿಗಳ ಲ್ಲಿಯೂ ಬ್ಯಾಕ್‍ಲಾಗ್ ಹುದ್ದೆ ಭರ್ತಿ ಬಾಕಿ ಉಳಿದಿದೆ. ಈ ಹಿಂದೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಬೆಂಗಳೂರು, ಧಾರವಾಡ ವಿವಿಗಳಲ್ಲಿ ಖಾಲಿ ಇದ್ದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಮೈಸೂರು ವಿವಿ ಯಲ್ಲಿ ಹಿಂದಿನಿಂದಲೂ ದಲಿತ ಹಾಗೂ ಶೋಷಿತರ ದಮನ ನೀತಿ ಅನುಸರಿಸುತ್ತಾ ಬಂದಿರುವುದರಿಂದ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಸ್ಪಷ್ಟನೆ ಕೇಳಿದರೆ ಕುಲಪತಿಗಳು ರಾಜ್ಯಪಾಲರಿಗೆ ಪತ್ರ ಬರೆದಿರುವುದಾಗಿ ಸಬೂಬು ಹೇಳುತ್ತಾರೆ ಎಂದು ಆರೋಪಿ ಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವೈ.ಎಸ್. ದೇವೂರ್, ಎಂ.ಎಂ.ರಾಜು, ಬನಶಂಕರಿ ನಾಗು, ಸತೀಶ್, ಡಾ.ಮಧು ಇದ್ದರು.

Translate »