Tag: Mysuru

ನಿವೇಶನ ಕೊಡಿಸುವುದಾಗಿ  ಗೆಳೆಯನಿಂದಲೇ 20 ಲಕ್ಷ ವಂಚನೆ
ಮೈಸೂರು

ನಿವೇಶನ ಕೊಡಿಸುವುದಾಗಿ ಗೆಳೆಯನಿಂದಲೇ 20 ಲಕ್ಷ ವಂಚನೆ

January 12, 2019

ಮೈಸೂರು: ನಿವೇಶನ ಕೊಡಿಸುವುದಾಗಿ 20 ಲಕ್ಷ ರೂ. ಪಡೆದು ವಂಚಿಸಿರುವುದಾಗಿ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ತನ್ನ ಸ್ನೇಹಿತನ ವಿರುದ್ಧ ಮೈಸೂರಿನ ನಜರ್‍ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮಿಳುನಾಡಿನ ಈರೋಡು ಜಿಲ್ಲೆಯ ವಸಂತಕುಮಾರ್, ತನ್ನ ಸ್ನೇಹಿತ ಸಾವಕಟ್ಟು ಪಾಳ್ಯಂ ಗ್ರಾಮದ ಮುರುಗೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಮೈಸೂರಿನ ಒಳ್ಳೆಯ ಜಾಗದಲ್ಲಿ ನಿವೇಶನ ಕೊಡಿಸುವುದಾಗಿ ಸ್ನೇಹಿತ ಮುರುಗೇಶ್ ನಂಬಿಸಿ, ಎರಡು ಬಾರಿ ಕರೆತಂದು ಮಾಲ್ ಆಫ್ ಮೈಸೂರ್ ಹಿಂಭಾಗ ರೇಸ್‍ಕ್ಲಬ್ ರಸ್ತೆಯಲ್ಲಿರುವ ಖಾಲಿ ನಿವೇಶನವನ್ನು ತೋರಿಸಿದ್ದ. ಅವನ ಮಾತು…

ನಗರ್ಲೆ ಹಾಲು ಉತ್ಪಾದಕರ ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
ಮೈಸೂರು

ನಗರ್ಲೆ ಹಾಲು ಉತ್ಪಾದಕರ ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

January 12, 2019

ನಗರ್ಲೆ: ನಂಜನಗೂಡು ತಾಲೂಕು ನಗರ್ಲೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಆರ್.ಸರ್ವೇಶ್ ಹಾಗೂ ಉಪಾಧ್ಯಕ್ಷೆಯಾಗಿ ಜಯಮ್ಮ ನಾಗರಾಜು ಆಯ್ಕೆಯಾದರು. ನಂತರ ಅಧ್ಯಕ್ಷರಾದ ಸರ್ವೇಶ್ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದರಲ್ಲದೆ, ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಮಹದೇವಯ್ಯ, ರಾಜನಾಯಕ, ಎನ್.ಬಿ. ವೀರೇಂದ್ರಸುರೇಶ್, ಎನ್.ಎನ್.ಶಂಭು, ಚಿನ್ನಪ್ಪ, ಹೆಚ್.ಜಿ.ಪುಟ್ಟಸ್ವಾಮಿ, ಜಯಮ್ಮ, ಎನ್.ಇ.ಗುರುಸ್ವಾಮಿ, ಮಹೇಶ್ವರಿ, ಸಾಕಮ್ಮ ಹಾಗೂ ರಿಟರ್ನಿಂಗ್ ಆಫೀಸರ್, ಡಿ.ಶಂಕರ್, ಕಾರ್ಯದರ್ಶಿ ಮಹದೇವಪ್ಪ, ಹಾಲು ಪರೀಕ್ಷಕ…

ದೃಷ್ಟಿಹೀನ ವಿದ್ಯಾರ್ಥಿಗಳ ಸಹಾಯಾರ್ಥ  ಫೆ.16ಕ್ಕೆ `ಸ್ನೇಹ ಸ್ಫೂರ್ತಿ’ ಸಂಗೀತ ಸಂಜೆ
ಮೈಸೂರು

ದೃಷ್ಟಿಹೀನ ವಿದ್ಯಾರ್ಥಿಗಳ ಸಹಾಯಾರ್ಥ ಫೆ.16ಕ್ಕೆ `ಸ್ನೇಹ ಸ್ಫೂರ್ತಿ’ ಸಂಗೀತ ಸಂಜೆ

January 12, 2019

ಮೈಸೂರು: ದೃಷ್ಟಿಹೀನ ವಿದ್ಯಾರ್ಥಿಗಳ ಸಹಾಯಾರ್ಥ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ಫೆ.16ರಂದು ಸಂಜೆ 7ರಿಂದ `ಸ್ನೇಹ ಸ್ಫೂರ್ತಿ’ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಹನ ವಿಕಲಾಂಗರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಿ.ನರಸಿಂಹಯ್ಯ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾನ ಮನಸ್ಕ ಐವರು ದೃಷ್ಟಿ ವಿಕಲಚೇತನರಿಂದ ಕಳೆದ ಹದಿನೆಂಟು ವಷರ್Àಗಳ ಹಿಂದೆ ಸರಸ್ವತಿಪುರಂನಲ್ಲಿ ಸ್ಥಾಪನೆಯಾದ ಪ್ರತಿಷ್ಠಾನ ಅಂಧರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ದೃಷ್ಟಿಹೀನರನ್ನು ಮುಖ್ಯವಾಹಿನಿಗೆ ತರಲು ಶಾಲಾ ಪಠ್ಯಪುಸ್ತಕಗಳನ್ನು ಬ್ರೈಲ್ ಲಿಪಿಗೆ…

ಜ.18ರಂದು ‘ಟೆಸ್ಟಿಂಗ್ ಆಫ್  ಹೈಪೋಥೆಸಿಸ್’ ಕುರಿತು ಕಾರ್ಯಾಗಾರ
ಮೈಸೂರು

ಜ.18ರಂದು ‘ಟೆಸ್ಟಿಂಗ್ ಆಫ್ ಹೈಪೋಥೆಸಿಸ್’ ಕುರಿತು ಕಾರ್ಯಾಗಾರ

January 12, 2019

ಮೈಸೂರು: ಮೈಸೂರಿನ ಕುವೆಂಪುನಗರದ ಶ್ರೀ ಕಾವೇರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ಅಧ್ಯಯನ ವಿಭಾಗದ ವತಿಯಿಂದ ಜ.18ರಂದು ಬೆಳಿಗ್ಗೆ 10ಕ್ಕೆ ಕಾಲೇಜಿನ ಆಡಿಟೋರಿಯಂನಲ್ಲಿ ಮೈಸೂರು ವಿಶ್ವವಿದ್ಯಾ ನಿಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಹಾಗೂ ಸಂಪನ್ಮೂಲ ವ್ಯಕ್ತಿ ಡಾ.ಎನ್.ನಾಗರಾಜ ಅವರಿಂದ ‘ಟೆಸ್ಟಿಂಗ್ ಆಫ್ ಹೈಪೋಥೆಸಿಸ್’ ಕುರಿತು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಮುಖ್ಯ ಅತಿಥಿಯಾಗಿ ಮೈಸೂರು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಡಾ. ಬಿ.ಹೆಚ್. ಸುರೇಶ್ ಭಾಗವಹಿಸುವರು. ಗೌರವ ಅತಿಥಿಗಳಾಗಿ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಮಹಿಳಾ…

ಮಲ್ಪೆ ಬೀಚ್‍ನಿಂದ ನಾಪತ್ತೆಯಾದ  ಮೀನುಗಾರರ ಪತ್ತೆಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಮಲ್ಪೆ ಬೀಚ್‍ನಿಂದ ನಾಪತ್ತೆಯಾದ ಮೀನುಗಾರರ ಪತ್ತೆಗೆ ಆಗ್ರಹಿಸಿ ಪ್ರತಿಭಟನೆ

January 12, 2019

ಮೈಸೂರು: ಮಲ್ಪೆ ಬೀಚ್‍ನಿಂದ ನಾಪತ್ತೆಯಾಗಿರುವ ಏಳು ಮೀನುಗಾರರ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮೈಸೂರು ಜಿಲ್ಲಾ ಗಂಗಾ ಮತಸ್ಥರ ಸಂಘದ ಕಾರ್ಯಕರ್ತರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು. ಮೀನುಗಾರಿಕೆಗೆ ತೆರಳಿದ್ದ ಏಳು ಮಂದಿ ನಿಗೂಢ ರೀತಿ ನಾಪತ್ತೆಯಾಗಿದ್ದಾರೆ. ಮೀನುಗಾರರ ಭದ್ರತೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಣ್ಮರೆಯಾಗಿರುವ ಮೀನುಗಾರರನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸಬೇಕು. 26 ದಿನಗಳಾದರೂ ಮೀನುಗಾರರ ಸುಳಿವು ಪತ್ತೆಯಾಗಿಲ್ಲ. ಇದರಿಂದ ಇತರೆ ಮೀನು ಗಾರರಲ್ಲಿ ಭಯ ಆವರಿಸಿದೆ. ಮೀನುಗಾರಿಕೆ ಮಾಡುವುದು…

ಮೈಸೂರಲ್ಲಿ ವಿಭಾಗ ಮಟ್ಟದ ಡಿಸಿ,  ಎಸ್ಪಿಗಳೊಂದಿಗೆ ಚುನಾವಣಾ ಆಯುಕ್ತರ ಸಭೆ
ಮೈಸೂರು

ಮೈಸೂರಲ್ಲಿ ವಿಭಾಗ ಮಟ್ಟದ ಡಿಸಿ, ಎಸ್ಪಿಗಳೊಂದಿಗೆ ಚುನಾವಣಾ ಆಯುಕ್ತರ ಸಭೆ

January 11, 2019

ಮೈಸೂರು: ಹಲವು ಕಾರಣಗಳಿಂದ ಬಾಕಿ ಉಳಿದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಯಲ್ಲಿ ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ, ಇಂದು ಮೈಸೂರಲ್ಲಿ ವಿಭಾಗ ಮಟ್ಟದ ಏಳು ಜಿಲ್ಲೆಗಳ ಡಿಸಿ ಮತ್ತು ಎಸ್ಪಿಗಳೊಂದಿಗೆ ಪೂರ್ವ ಸಿದ್ಧತಾ ಸಭೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮೈಸೂರು ಕಂದಾಯ ವಿಭಾಗದ ವ್ಯಾಪ್ತಿಗೆ ಬರುವ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು, ಪುರಸಭೆ,…

ಸರ್ಕಾರದ ತಾರತಮ್ಯದಿಂದ ಶೇ.90ರಷ್ಟು  ವಿಶೇಷಚೇತನ ಮಕ್ಕಳು ಸೌಲಭ್ಯದಿಂದ ವಂಚಿತ
ಮೈಸೂರು

ಸರ್ಕಾರದ ತಾರತಮ್ಯದಿಂದ ಶೇ.90ರಷ್ಟು ವಿಶೇಷಚೇತನ ಮಕ್ಕಳು ಸೌಲಭ್ಯದಿಂದ ವಂಚಿತ

January 11, 2019

ಮೈಸೂರು: ಶೇ.90ರಷ್ಟು ಅಂಗವಿಕಲ ಮಕ್ಕಳಿಗೆ ಸೌಲಭ್ಯಗಳೇ ತಲುಪುತ್ತಿಲ್ಲ. ಆದರೆ ಸರ್ಕಾರಿ ಶಾಲಾ-ಕಾಲೇಜು ಗಳಲ್ಲಿ ನಿರ್ದಿಷ್ಟ ಸೌಲಭ್ಯ ಇಲ್ಲವಾದರೆ ಅವರು ಹೋರಾಟದ ಮೂಲಕ ಪಡೆದುಕೊಳ್ಳುತ್ತಾರೆ. ಆದರೆ, ಅಂಗವಿಕಲರಿಗೆ ಸರ್ಕಾರವೇ ತಾರತಮ್ಯ ಮಾಡಿದರೆ ಮಕ್ಕಳ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ರಾಜ್ಯ ಅಂಗವಿಕಲರ ಅಧಿನಿಯಮ ಆಯೋ ಗದ ಆಯುಕ್ತ ವಿ.ಎಸ್.ಬಸವರಾಜು ಪ್ರಶ್ನಿಸಿದರು. ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ‘ಉದ್ಯೋಗ ಮತ್ತು ಔದ್ಯೋ ಗಿಕ ತರಬೇತಿ: ಸಂವಹನ ಕೊರತೆ ಎದುರಿಸುತ್ತಿರುವವರಿಗೆ ಪುನರ್ವಸತಿ’ ಕಾರ್ಯಾಗಾರಕ್ಕೆ ಚಾಲನೆ…

ಪ್ರಭಾಕರ್ ಭಟ್ ಕೊಲೆಗೆ ಸಂಚು:   ಗುಪ್ತಚರ ಇಲಾಖೆ ಎಚ್ಚರಿಕೆ
ಮೈಸೂರು

ಪ್ರಭಾಕರ್ ಭಟ್ ಕೊಲೆಗೆ ಸಂಚು: ಗುಪ್ತಚರ ಇಲಾಖೆ ಎಚ್ಚರಿಕೆ

January 11, 2019

ಮಂಗಳೂರು: ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಕೆಲ ಹಿಂದೂ ಪರ ಸಂಘಟನೆಗಳ ಮುಖಂ ಡರ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಬುಧವಾರ ಬೆಂಗಳೂರಿಗೆ ರಸ್ತೆ ಮಾರ್ಗದ ಮೂಲಕ ತೆರಳಬೇಕಾಗಿದ್ದ ಪ್ರಭಾಕರ್ ಭಟ್ ಅವರು ಸುರಕ್ಷತೆ ದೃಷ್ಟಿಯಿಂದ ವಿಮಾನ ಮೂಲಕ ಪ್ರಯಾಣಿಸಿದ್ದಾರೆ ಎಂದು ತಿಳಿದುಬಂದಿದೆ. ಹಿಂದೂ ಪರ ಸಂಘಟನೆಗಳ ಮುಖಂಡರಾದ ಜಗದೀಶ ಶೇಣವ, ಭಜರಂಗದಳದ ಶರಣ್ ಪಂಪ್‍ವೆಲ್ ಅವರಿಗೂ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಹತ್ಯೆಗೆ ಸಂಚು ರೂಪಿಸಿದ್ದ ಶಂಕಿತರನ್ನು…

ಸಂಚಾರ ನಿಯಮ ಉಲ್ಲಂಘಿಸುವವರಲ್ಲಿ ಯುವಕರದ್ದೇ ಸಿಂಹಪಾಲು
ಮೈಸೂರು

ಸಂಚಾರ ನಿಯಮ ಉಲ್ಲಂಘಿಸುವವರಲ್ಲಿ ಯುವಕರದ್ದೇ ಸಿಂಹಪಾಲು

January 11, 2019

ಮೈಸೂರು: ಸಂಚಾರ ನಿಯಮ ಪಾಲಿಸದೇ ಅಪಘಾತಕ್ಕೆ ಸಿಲುಕು ವವರಲ್ಲಿ ಯುವ ಜನರೇ ಹೆಚ್ಚು ಎಂದು ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಕಾರ್ಯ ಕ್ರಮ ಸಂಯೋಜನಾಧಿಕಾರಿ ಡಾ.ಬಿ. ಚಂದ್ರಶೇಖರ್ ವಿಷಾದಿಸಿದರು. ಮೈಸೂರಿನ ಬಾಸುದೇವ ಸೋಮಾನಿ ಕಾಲೇಜಿನ ಎನ್‍ಎಸ್‍ಎಸ್ ಘಟಕ, ಮೈಸೂರು ವಿವಿ ಎನ್‍ಎಸ್‍ಎಸ್‍ನ ಜಂಟಿ ಆಶ್ರಯ ದಲ್ಲಿ ಕಾಲೇಜಿನ ಸಭಾಂಗಣದಲ್ಲಿ `ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳು’ ಕುರಿತು ಗುರುವಾರ ಹಮ್ಮಿಕೊಂಡಿದ್ದ ವಿವಿ ಮಟ್ಟದ ಒಂದು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿ ಯಾಗಿ ಅವರು…

ಇಂಧನ ತೆರಿಗೆ ಏರಿಕೆ ಖಂಡಿಸಿ, ಸಾರಿಗೆ   ದರ ಏರಿಸದಂತೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಇಂಧನ ತೆರಿಗೆ ಏರಿಕೆ ಖಂಡಿಸಿ, ಸಾರಿಗೆ ದರ ಏರಿಸದಂತೆ ಆಗ್ರಹಿಸಿ ಪ್ರತಿಭಟನೆ

January 11, 2019

ಮೈಸೂರು: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಗೊಳಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹಾಗೂ ಸಾರಿಗೆ ದರ ಹೆಚ್ಚಳ ಮಾಡದಂತೆ ಆಗ್ರಹಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಎದುರು ಜಮಾಯಿಸಿದ ಪ್ರತಿಭಟನಾ ಕಾರರು, ಸರ್ಕಾರದ ವಿರುದ್ಧ ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೊಸ ವರ್ಷದ ಆರಂಭದ¯್ಲÉೀ ರಾಜ್ಯ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್‍ಗೆ 2 ರೂ. ತೆರಿಗೆ ಏರಿಕೆ ಮಾಡುವ…

1 132 133 134 135 136 194
Translate »