ಮೈಸೂರು: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಗೊಳಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹಾಗೂ ಸಾರಿಗೆ ದರ ಹೆಚ್ಚಳ ಮಾಡದಂತೆ ಆಗ್ರಹಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಎದುರು ಜಮಾಯಿಸಿದ ಪ್ರತಿಭಟನಾ ಕಾರರು, ಸರ್ಕಾರದ ವಿರುದ್ಧ ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೊಸ ವರ್ಷದ ಆರಂಭದ¯್ಲÉೀ ರಾಜ್ಯ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್‍ಗೆ 2 ರೂ. ತೆರಿಗೆ ಏರಿಕೆ ಮಾಡುವ ಮೂಲಕ ರಾಜ್ಯದ ಜನತೆಗೆ ಆಘಾತ ನೀಡಿದೆ. ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲï ಬೆಲೆ ಇಳಿಸಲು ಕ್ರಮ ಕೈಗೊಂಡರೆ, ರಾಜ್ಯ ಸರ್ಕಾರ ಇದರ ಲಾಭ ಪಡೆಯಲು ತೆರಿಗೆ ಹೆಚ್ಚಳಗೊಳಿಸಿದೆ. ಆ ಮೂಲಕ ಸರ್ಕಾರ ಬೊಕ್ಕಸ ತುಂಬಿಕೊಳ್ಳಲು ಜನಸಾಮಾನ್ಯರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಆರೋಪಿಸಿದರು. ಸೇನಾ ಪಡೆಯ ಜಿ¯್ಲÁಧ್ಯP್ಷÀ ತೇಜೇಶ್ ಲೋಕೇಶ್‍ಗೌಡ, ನಗರಾಧ್ಯP್ಷÀ ಪ್ರಜೀಶ್, ಪದಾಧಿಕಾರಿಗಳಾದ ಶಾಂತಮೂರ್ತಿ, ಪ್ರಭುಶಂಕರ್, ಶಾಂತರಾಜೇ ಅರಸ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.