ಪಾಲಿಕೆಯಿಂದ 3 ದಿನ ಮೈಸೂರು  ಸ್ವಚ್ಛತಾ ಅಭಿಯಾನ; ಗುತ್ತಿಗೆದಾರರ  ಸಂಘದಿಂದ 285 ವಾಹನಗಳ ನೆರವು
ಮೈಸೂರು

ಪಾಲಿಕೆಯಿಂದ 3 ದಿನ ಮೈಸೂರು ಸ್ವಚ್ಛತಾ ಅಭಿಯಾನ; ಗುತ್ತಿಗೆದಾರರ ಸಂಘದಿಂದ 285 ವಾಹನಗಳ ನೆರವು

January 11, 2019

ಮೈಸೂರು: ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೊಮ್ಮೆ ಸ್ವಚ್ಛ ನಗರಿ ಪಟ್ಟ ದೊರಕಿಸುವ ನಿಟ್ಟಿನಲ್ಲಿ ಪಾಲಿಕೆಯೊಂದಿಗೆ ಗುತ್ತಿಗೆದಾರರ ಸಂಘ ಕೈಜೋಡಿಸಿದ್ದು, 75 ಜೆಸಿಬಿ, 100 ಟಿಪ್ಪರ್, 100 ಟ್ರ್ಯಾಕ್ಟರ್ ಹಾಗೂ 10 ಇಟಾಚಿಗಳ ಸೇವೆಯನ್ನು ಮೂರು ದಿನ ಉಚಿತವಾಗಿ ನೀಡಿದೆ.

ಮೈಸೂರು ನಗರ ಪಾಲಿಕೆ ಬುಧವಾರ ದಿಂದ ಮೂರು ದಿನಗಳ ಕಾಲ ನಗರದ 65 ವಾರ್ಡ್‍ಗಳಲ್ಲಿಯೂ ವಿಶೇಷವಾದ ಸ್ವಚ್ಛತಾ ಅಭಿಯಾನ ನಡೆಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪಾಲಿಕೆ ಗುತ್ತಿಗೆದಾರರ ಸಂಘವು ಆಯುಕ್ತರ ಮನವಿ ಮೇರೆಗೆ ಸ್ವಚ್ಛತಾ ಕಾರ್ಯಕ್ಕೆ ಉಚಿತವಾಗಿ ವಾಹನಗಳನ್ನು ನೀಡಿ ಸಹಕರಿಸಿದೆ.

ಅಭಿಯಾನಕ್ಕೆ ಚಾಲನೆ: ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ಇಂದು ಬೆಳಿಗ್ಗೆ ನಡೆದ ವಿಶೇಷ ಸ್ವಚ್ಛತಾ ಅಭಿಯಾನಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಈ ಹಿಂದೆ ನಾನು ಉಪ ಮೇಯರ್ ಆಗಿ ದ್ದಾಗ ಒಮ್ಮೆ ವಿಶೇಷವಾದ ಸ್ವಚ್ಛತಾ ಅಭಿ ಯಾನ ನಡೆಸಿದ್ದೆ. ಇದೀಗ ಮೇಯರ್ ಆಗಿ 3 ದಿನ ವಿಶೇಷ ಅಭಿಯಾನ ನಡೆಸು ತ್ತಿರುವುದು ಸಂತೋಷ ತಂದಿದೆ. ಮೈಸೂರು ನಗರಕ್ಕೆ ಮತ್ತೊಮ್ಮೆ ಸ್ವಚ್ಛತಾ ನಗರಿ ಎಂಬ ಬಿರುದು ಬರುವುದಕ್ಕೆ ನಾಗರಿಕರು ಕೈಜೋಡಿ ಸಬೇಕು. ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ನಾಗರಿಕರು ಮುಂದಾಗ ಬೇಕು. ಎಲ್ಲೆಂದರಲ್ಲಿ ಕಸ ಬಿಸಾಡದೆ, ಸ್ವಚ್ಛತೆ ಕಾಯ್ದುಕೊಳ್ಳಲು ಸಹಕರಿಸ ಬೇಕೆಂದು ಮನವಿ ಮಾಡಿದರು.

ಸಾರ್ವಜನಿಕರ ಸಹಕಾರ ಅಗತ್ಯ: ಇದೇ ವೇಳೆ ಪಾಲಿಕೆ ಆಯುಕ್ತ ಕೆ.ಹೆಚ್.ಜಗ ದೀಶ್ ಮಾತನಾಡಿ, ಇಂದಿನಿಂದ 3 ದಿನ ವಿಶೇಷ ಸ್ವಚ್ಛತಾ ಅಭಿಯಾನ ಹಮ್ಮಿ ಕೊಂಡಿದ್ದು, ಪಾಲಿಕೆಯ 65 ವಾರ್ಡ್ ಗಳಲ್ಲಿಯೂ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಲಾಗುತ್ತದೆ. ಪೌರ ಕಾರ್ಮಿಕರು ಮೈಸೂರಿಗೆ ಸ್ವಚ್ಛ ನಗರಿ ಬಿರುದನ್ನು ತಂದು ಕೊಡುವ ನಿಟ್ಟಿನಲ್ಲಿ ಅವಿರತ ಶ್ರಮಿಸುತ್ತಿದ್ದಾರೆ. ಇವರಿಗೆ ಸಾರ್ವ ಜನಿಕರ ಸಹಕಾರ ಅತ್ಯಗತ್ಯ. ಸ್ವಚ್ಛ ಸರ್ವೇ ಕ್ಷಣೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಫೀಡ್‍ಬ್ಯಾಕ್ ನೀಡಬೇಕು ಎಂದು ಮನವಿ ಮಾಡಿದರು. ಪಾಲಿಕೆಯ 3 ದಿನ ವಿಶೇಷ ಸ್ವಚ್ಛತಾ ಅಭಿಯಾನಕ್ಕೆ ಸಹಕರಿಸುವಂತೆ ಗುತ್ತಿಗೆದಾರರ ಸಂಘಕ್ಕೆ ಮನವಿ ಸಲ್ಲಿಸಲಾಗಿತ್ತು. ಅವರು ಉತ್ತಮ ವಾಗಿ ಸ್ಪಂದಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಚಿತ ಸೇವೆ: ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತ ನಾಡಿ, ಮೈಸೂರು ನಗರಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಮೈಸೂರು ನಗರ ಪಾಲಿಕೆ ಗುತ್ತಿಗೆದಾರರ ಸಂಘವು ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿ ಸಿದೆ. 75 ಜೆಸಿಬಿ, 100 ಟ್ರಾಕ್ಟರ್, 100 ಟಿಪ್ಪರ್ ಹಾಗೂ 10 ಹಿಟಾಚಿಗಳನ್ನು 3 ದಿನ ಪಾಲಿಕೆಯ ವಶಕ್ಕೆ ನೀಡಿದ್ದೇವೆ. ಪ್ರತಿದಿನ ಹಿಟಾಚಿವೊಂದಕ್ಕೆ 5 ಸಾವಿರ ರೂ. ಡೀಸೆಲ್, ಟಿಪ್ಪರ್‍ವೊಂದಕ್ಕೆ 3 ಸಾವಿರ ರೂ, ಜೆಸಿಬಿ ವೊಂದಕ್ಕೆ 3 ಸಾವಿರ ರೂ, ಟ್ರ್ಯಾಕ್ಟರ್ ವೊಂದಕ್ಕೆ 1500 ರೂ. ಡೀಸೆಲ್ ಬೇಕಾಗು ತ್ತದೆ. ಎಲ್ಲವನ್ನೂ ನಾವೇ ಭರಿಸುತ್ತಿದ್ದೇವೆ. ಅಧಿಕಾರಿಗಳು, ಪಾಲಿಕೆ ಸದಸ್ಯರು ಈ ವಾಹನಗಳನ್ನು ಹಂಚಿಕೆ ಮಾಡಿಕೊಂಡು ಎಲ್ಲೆಲ್ಲಿ ಬಳಸಿಕೊಳ್ಳಬೇಕೆನ್ನುವುದನ್ನು ನಿರ್ಧರಿಸುತ್ತಾರೆ ಎಂದರು. ಈ ಸಂದರ್ಭ ದಲ್ಲಿ ಉಪ ಮೇಯರ್ ಷಫಿ ಅಹ್ಮದ್, ಪಾಲಿಕೆ ಸದಸ್ಯರಾದ ಬಿ.ವಿ.ಮಂಜು ನಾಥ್, ರಮೇಶ್, ಕೆ.ವಿ.ಶ್ರೀಧರ್, ಶಿವಕುಮಾರ್, ಸತೀಶ್, ಗುತ್ತಿಗೆದಾರರ ಸಂಘದ ಗೌರ ವಾಧ್ಯಕ್ಷ ಸಿ.ವೆಂಕಟೇಶಪ್ಪ, ಕಾರ್ಯದರ್ಶಿ ಹರ್ಷವರ್ಧನ, ನಿರ್ದೇಶಕ ರಾಮೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »