ಕೋರಂ ಅಭಾವದಿಂದ  ವಿಶೇಷ ಸಭೆ ಮುಂದೂಡಿಕೆ
ಮೈಸೂರು

ಕೋರಂ ಅಭಾವದಿಂದ ವಿಶೇಷ ಸಭೆ ಮುಂದೂಡಿಕೆ

January 11, 2019

ಮೈಸೂರು: ಕೋರಂ ಕೊರತೆಯಿಂದಾಗಿ ಗುರುವಾರವೂ ಮೈಸೂರು ತಾಲೂಕು ಪಂಚಾಯ್ತಿ ವಿಶೇಷ ಸಭೆ ಮುಂದೂಡಲ್ಪಟ್ಟಿತು. ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆಗೆ 11.35 ಆದರೂ ಕೋರಂ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂ ಡಿರುವುದಾಗಿ ಅಧ್ಯಕ್ಷೆ ಕಾಳಮ್ಮ ಕೆಂಪ ರಾಮಯ್ಯ ಪ್ರಕಟಿಸಿದರು. ಮುಂದಿನ ಸಭೆಯನ್ನು ಜ.17ರಂದು ಬೆಳಿಗ್ಗೆ 11 ಗಂಟೆಗೆ ಕರೆದಿರುವುದಾಗಿ ತಿಳಿಸಿದರು.
38 ಸದಸ್ಯ ಬಲದ ತಾಲೂಕು ಪಂಚಾ ಯಿತಿಯಲ್ಲಿ ಇಂದು ಕಾಂಗ್ರೆಸ್‍ನ 13 ಸದ ಸ್ಯರು ಮಾತ್ರ ಭಾಗವಹಿಸಿದ್ದರು. ಅರ್ಧ ಗಂಟೆಗೂ ಹೆಚ್ಚು ಕಾಲ ಕಾದಿದ್ದರೂ ಸ್ವಪ ಕ್ಷೀಯ ಜೆಡಿಎಸ್ ಮತ್ತು ಬಿಜೆಪಿ ಸದ ಸ್ಯರು ಸಭೆಗೆ ಬಾರದೆ ಹೊರಗುಳಿದಿದ್ದರು. ಹಾಗಾಗಿ ಕೋರಂ ಕೊರತೆ ಕಂಡು ಬಂದಿತು.

ಮೈಸೂರು ತಾಲೂಕು ಪಂಚಾಯಿತಿ ಗದ್ದುಗೆ ಹಿಡಿದಿದ್ದ ಜೆಡಿಎಸ್ ಒಪ್ಪಂದ ದಂತೆ ಮೊದಲ ಅವಧಿಗೆ ಕಾಳಮ್ಮ ಕೆಂಪ ರಾಮಯ್ಯ ಅವರನ್ನು ಅಧ್ಯಕ್ಷೆಯನ್ನಾಗಿ ಹಾಗೂ ಎನ್.ಬಿ.ಮಂಜು ಅವರನ್ನು ಉಪಾಧ್ಯಕ್ಷರಾಗಿ ಅಧಿಕಾರ ಪಡೆದಿದ್ದರು. ಒಪ್ಪಂದದಂತೆ 2016ರ ಮೇ 21ರಂದು ಅಧಿಕಾರಕ್ಕೇರಿದ್ದ ಕಾಳಮ್ಮ 2018ರ ಮೇ ತಿಂಗಳಲ್ಲಿಯೇ ಅಧ್ಯಕ್ಷ ಸ್ಥಾನಕ್ಕೆ ರಾಜೀ ನಾಮೆ ನೀಡುವಂತೆ ಸ್ವಪಕ್ಷೀಯ ಸದಸ್ಯರು ಒತ್ತಾಯಿಸಿದ್ದರು. ಆದರೆ ಕಾಳಮ್ಮ ಕೆಂಪ ರಾಮಯ್ಯ ನಿರಾಕರಿಸಿದ್ದರು.

ಇದು ಸಹಜವಾಗಿ ಸ್ವಪಕ್ಷೀಯ ಸದಸ್ಯ ರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಅಧ್ಯಕ್ಷರ ವಿರುದ್ಧ ಅಸಮಾಧಾನ ಹೊರ ಹಾಕುತ್ತಲೇ ಇದ್ದರು. ಹೀಗಾಗಿ ಕಳೆದ ಡಿ.19ರಂದು ಅಧ್ಯಕ್ಷರು ಕರೆದಿದ್ದ ಸಾಮಾನ್ಯ ಸಭೆಗೆ ಸ್ವಪಕ್ಷ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಗೈರು ಹಾಜರಾಗಿದ್ದರು.

ಒಪ್ಪಂದದಂತೆ ನಡೆಯದ ಅಧ್ಯಕ್ಷರನ್ನು ಕೆಳಗಿಳಿಸಲು ಸ್ವಪಕ್ಷ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿದ್ದರು. ಡಿ.19ರ ಮಧ್ಯಾಹ್ನ 12 ಗಂಟೆಗೆ ವಿಶೇಷ ಸಭೆ ಕರೆ ದಿದ್ದ ಅಂದಿನ ವಿಶೇಷ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಭಾಗವಹಿಸಿದ್ದರು.

ಆದರೆ ಜೆಡಿಎಸ್ ಮತ್ತು ಬಿಜೆಪಿ ಸದ ಸ್ಯರು ಸಭೆಯಿಂದ ದೂರ ಉಳಿದಿದ್ದರು. ತಾಪÀಂ ಇಓ ಲಿಂಗರಾಜಯ್ಯ ಹೆಚ್ಚುವರಿ ಯಾಗಿ 30 ನಿಮಿಷ ನೀಡಿದ್ದರೂ ಆಡಳಿತ ಪಕ್ಷದ ಸದಸ್ಯರು ಬಾರದ ಹಿನ್ನೆಲೆಯಲ್ಲಿ ಅವಿಶ್ವಾಸ ಗೊತ್ತುವಳಿ ಸಭೆ ವಿಫಲವಾಗಿದ್ದು, ಅಧ್ಯಕ್ಷೆ ಕಾಳಮ್ಮ ಅಧಿಕಾರದಲ್ಲಿ ಮುಂದುವರೆದಿದ್ದರು.

ಪಂಚಾಯತ್ ರಾಜ್ ನಿಯಮ 140/3ರ ಪ್ರಕಾರ ಒಮ್ಮೆ ಅವಿಶ್ವಾಸ ಗೊತ್ತುವಳಿ ಮಂಡಿಸಿದರೆ ಮತ್ತೇ 2 ವರ್ಷಗಳವರೆಗೂ ಗೊತ್ತುವಳಿ ಮಂಡಿ ಸಲು ಸಾಧ್ಯವಿಲ್ಲ. ಹಾಗಾಗಿ ಮುಂದಿನ 2 ವರ್ಷ ಕಾಳಮ್ಮ ಕೆಂಪರಾಮಯ್ಯ ನವರೇ ಅಧ್ಯಕ್ಷರಾಗಿ ಮುಂದುವರೆಯ ಬಹುದು ಎಂದು ಪ್ರಕಟಿಸಿದ್ದರು.

ಈ ಮಧ್ಯೆ ಕಾಳಮ್ಮ ಕಾಂಗ್ರೆಸ್ ವಲಯದಲ್ಲಿ ಕಾಣಿಸಿಕೊಂಡಿರುವುದ ರಿಂದ ಜೆಡಿಎಸ್ ಹಾಗೂ ಬಿಜೆಪಿ ಸದ ಸ್ಯರು ಅವರಿಗೆ ಸೆಡ್ಡು ಹೊಡೆದಿದ್ದಾರೆ. ಸಭೆಗೆ ಗೈರು ಹಾಜರಾಗುವ ಮೂಲಕ ಕೋರಂ ಉಂಟು ಮಾಡಿ ಸಭೆ ನಡೆ ಯದಂತೆ ಮಾಡುವಲ್ಲಿ ಸಫಲರಾದರು.

ತಪ್ಪು ಗ್ರಹಿಕೆಗೆ ತಲೆಯೇ ಉರುಳಿತು…!
ಮೈಸೂರು: ತಪ್ಪು ಗ್ರಹಿಕೆಯಿಂದ ಸ್ನೇಹಿತನನ್ನು ಬಾಯಿಗೆ ಬಂದ ಹಾಗೆ ಬೈದದ್ದೇ ಎಂ.ಸಿ.ಹುಂಡಿ ಫಾರಂ ಹೌಸ್ ಮಾಲೀಕ ಪ್ರಶಾಂತನ ತಲೆ ದಂಡಕ್ಕೆ ಕಾರಣವಾಯಿತು ಎಂಬುದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.

ಕಳೆದ ಭಾನುವಾರದಂದು ಎಂ.ಸಿ. ಹುಂಡಿ ಫಾರಂ ಹೌಸ್ ಮಾಲೀಕ ಪ್ರಶಾಂತ್‍ನನ್ನು ಹತ್ಯೆ ಮಾಡಿದ್ದ ಲೋಕೇಶ ಮತ್ತು ವೇದಾಂತ ಪ್ರಮೋದ್ ಅವರುಗಳನ್ನು ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಕರೀಂ ರಾವುತರ್ ನೇತೃತ್ವದ ತಂಡ ವಿಚಾರಣೆಗೊಳಪಡಿಸಿದ ವೇಳೆ ಪ್ರಶಾಂತ್ ಬೈದದ್ದೇ ಆತನ ಹತ್ಯೆಗೆ ಕಾರಣವಾಯಿತು ಎಂಬುದು ಬಯಲಾಗಿದೆ.

ಬೆಂಗಳೂರಿನ ವರ್ತೂರಿನವನಾದ ಪ್ರಶಾಂತ್ ಮೊದಲು ಕಿರುಗಾವಲಿನಲ್ಲಿ ಜಮೀನು ಖರೀದಿಸಿದ್ದ. ನಂತರ ಅದನ್ನು ಮಾರಾಟ ಮಾಡಿ ಎಂ.ಸಿ.ಹುಂಡಿಯಲ್ಲಿ ಜಮೀನು ಖರೀದಿಸಿ ಹಂದಿ ಸಾಕಣೆ ಮಾಡುತ್ತಿದ್ದ. ಆತನನ್ನು ಹತ್ಯೆ ಮಾಡಿದ ಲೋಕೇಶ ಎಂ.ಸಿ.ಹುಂಡಿಯ ಬೀರಯ್ಯ ಎಂಬುವರ ಪುತ್ರನಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದ. 2014ರಲ್ಲಿ ಆತನ ತಂದೆ ಮೃತರಾದ ನಂತರ ಸ್ವಗ್ರಾಮಕ್ಕೆ ಬಂದು ನೆಲೆಸಿದ. ಈತ ಬೆಂಗಳೂರಿ ನಲ್ಲಿದ್ದಾಗ ಪ್ರಶಾಂತ್‍ನ ಜೊತೆ ಗೆಳೆತನ ಬೆಳೆದಿದೆ.

ಪ್ರಶಾಂತ್ ಜೊತೆ ಆತ್ಮೀಯವಾಗಿದ್ದ ಲೋಕೇಶ ಪ್ರತಿನಿತ್ಯ ಆತನ ಫಾರಂ ಹೌಸ್‍ಗೆ ಹೋಗುತ್ತಿದ್ದ. ಆತನಿಗೆ ಬೇಕಾದ ಕೆಲಸ-ಕಾರ್ಯಗಳನ್ನೆಲ್ಲಾ ಮಾಡಿಕೊಡುತ್ತಿದ್ದ. ಫಾರಂ ಹೌಸ್‍ಗೆ ಕೆಲಸದಾಳುಗಳನ್ನೂ ಕೂಡ ಲೋಕೇಶನೇ ನೇಮಕ ಮಾಡಿ ಕೊಡುತ್ತಿದ್ದ. ಹಂತಕರಲ್ಲಿ ಒಬ್ಬನಾದ ವೇದಾಂತ ಪ್ರಮೋದ್ ನನ್ನೂ ಕೂಡ ಲೋಕೇಶನೇ ಪ್ರಶಾಂತನ ಬಳಿ ಕೆಲಸಕ್ಕೆ ಸೇರಿಸಿದ್ದ. ಪ್ರಶಾಂತ್ ಮತ್ತು ಲೋಕೇಶನ ನಡುವೆ ಆತ್ಮೀಯ ಗೆಳೆತನವಿತ್ತು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಪ್ರಶಾಂತನ ಫಾರಂಹೌಸ್‍ಗೆ ಹೊಂದಿಕೊಂಡಂತಿರುವ ಸೋಮಣ್ಣ ಮತ್ತು ಭೈರ ಎಂಬುವರ ಜಮೀನನ್ನು ಖರೀದಿ ಮಾಡಲು ಪ್ರಶಾಂತ ನಿರ್ಧರಿಸಿದಾಗ ಲೋಕೇಶನೇ ಮುಂದೆ ನಿಂತು ಅವರಿಬ್ಬರ ಜೊತೆ ವ್ಯವಹಾರ ಕುದುರಿಸಿ 30 ಲಕ್ಷ ರೂ.ಗಳಿಗೆ ಬೆಲೆ ನಿಗದಿಪಡಿಸಿದ್ದ. ಒಬ್ಬರಿಗೆ ಎರಡು ಲಕ್ಷ, ಮತ್ತೊಬ್ಬರಿಗೆ 1.5 ಲಕ್ಷ ರೂ. ಮುಂಗಡ ನೀಡಿ ಜಮೀನು ಖರೀದಿ ಒಪ್ಪಂದ ಪತ್ರವನ್ನೂ ಕೂಡ ಮಾಡಲಾಗಿತ್ತು. ಈ ವೇಳೆ ಲೋಕೇಶ ಪ್ರಶಾಂತನಿಂದ 50 ಸಾವಿರ ರೂ. ಪಡೆದಿದ್ದ ಎಂದು ಹೇಳಲಾಗಿದೆ.

ಆದರೆ ನಿಗದಿತ ಸಮಯದಲ್ಲಿ ಉಳಿಕೆ ಹಣವನ್ನೂ ನೀಡಿ ಸೋಮಣ್ಣ ಮತ್ತು ಭೈರ ಅವರಿಂದ ಪ್ರಶಾಂತ ಜಮೀನು ಖರೀದಿಸದೇ ದಿನಗಳನ್ನು ತಳ್ಳುತ್ತಿದ್ದ ಎಂದು ಹೇಳಲಾಗಿದೆ. ಈ ಮಧ್ಯೆ ಪ್ರಶಾಂತನ ಬಳಿ ಲೋಕೇಶ 10 ಸಾವಿರ ರೂ. ಕೇಳಲಾಗಿ ಆತ ಹಣ ಕೊಡಲು ನಿರಾಕರಿಸಿದ್ದಾನೆ. ಆತ್ಮೀಯನಾಗಿದ್ದು, ತನ್ನಿಂದ ಎಲ್ಲಾ ಕೆಲಸ ಗಳನ್ನು ಮಾಡಿಸಿಕೊಳ್ಳುತ್ತಿರುವ ಪ್ರಶಾಂತ, 10 ಸಾವಿರ ರೂ. ಕೊಡಲಿಲ್ಲವಲ್ಲಾ ಎಂದು ಲೋಕೇಶ ಅಂದಿನಿಂದ ಆತನ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದ.
ಆತನ ಫಾರಂ ಹೌಸ್‍ಗೂ ಕೂಡ ಹೋಗುತ್ತಿರಲಿಲ್ಲ. ಪ್ರಶಾಂತ ಜಮೀನು ಖರೀದಿಸಲು ವಿಳಂಬ ಮಾಡುತ್ತಿದ್ದರಿಂದ ಆತನಿಗೆ ಆಸಕ್ತಿ ಇಲ್ಲವೆಂದು ಭಾವಿಸಿದ್ದ ಸೋಮಣ್ಣ ಅವರು ತಮ್ಮ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಲು ಪ್ರಯತ್ನಿ ಸುತ್ತಿದ್ದರು ಎಂದು ಹೇಳಲಾಗಿದೆ.

ತಾನು ಒಪ್ಪಂದ ಮಾಡಿಕೊಂಡಿರುವ ಜಮೀನು ಬೇರೆಯವ ರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಅರಿತ ಪ್ರಶಾಂತ, ತಾನು 10 ಸಾವಿರ ರೂ. ಕೊಡದ ಕಾರಣ ಲೋಕೇ ಶನೇ ಸೋಮಣ್ಣನ ಜಮೀನನ್ನು ಹೆಚ್ಚಿನ ಬೆಲೆಗೆ ಬೇರೆಯವರಿಗೆ ಮಾರಾಟ ಮಾಡಿಸುತ್ತಿದ್ದಾನೆ ಎಂಬ ತಪ್ಪು ಗ್ರಹಿಕೆಯಿಂದ ಕಳೆದ ಶುಕ್ರವಾರದಂದು ಲೋಕೇಶನನ್ನು ಕರೆಸಿಕೊಂಡು ಬಾಯಿಗೆ ಬಂದ ಹಾಗೆ ಬೈದಿದ್ದಾನೆ. ಇದರಿಂದಾಗಿ ಕೆರಳಿದ ಲೋಕೇಶ, ಭಾನುವಾರದಂದು ತಾನೇ ಪ್ರಶಾಂತನ ಬಳಿ ಕೆಲಸಕ್ಕೆ ಸೇರಿಸಿದ್ದ ವೇದಾಂತ ಪ್ರಮೋದನೊಡಗೂಡಿ ಪ್ರಶಾಂತನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ ಎಂಬುದು ಪೊಲೀಸರ ವಿಚಾರಣೆ ಯಲ್ಲಿ ತಿಳಿದು ಬಂದಿದೆ. ಆರೋಪಿಗಳಿಬ್ಬರನ್ನೂ ಸುದೀರ್ಘ ವಿಚಾರಣೆಗೊಳಪಡಿಸಿದ ಪೊಲೀಸರು, ಇಂದು ಸಂಜೆ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Translate »