ಇಂದು ಉಸ್ತುವಾರಿ ಸಚಿವ ಜಿಟಿಡಿ ಜಿಲ್ಲಾ ಪ್ರವಾಸ
ಮೈಸೂರು

ಇಂದು ಉಸ್ತುವಾರಿ ಸಚಿವ ಜಿಟಿಡಿ ಜಿಲ್ಲಾ ಪ್ರವಾಸ

January 11, 2019

ಮೈಸೂರು: ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಜ.11 ರಂದು ಮೈಸೂರು ತಾಲೂಕಿನ ಇಲವಾಲ ಮತ್ತು ಜಯಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಿದ್ದಾರೆ. ಜ.11ರಂದು ಬೆಳಿಗ್ಗೆ 7 ಗಂಟೆಗೆ ಮೈಸೂರು ತಾಲೂಕು ಇಲವಾಲ ಹೋಬಳಿ ಶೆಟ್ಟೆನಾಯಕನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಿದ್ದಾರೆ. ನಂತರ ಅಂಗನವಾಡಿ ಹಾಗೂ ಗ್ರಂಥಾಲಯ ಕಟ್ಟಡ ಉದ್ಘಾ ಟಿಸಲಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಮಾಣಿಕ್ಯಪುರ ಗ್ರಾಮದಲ್ಲಿ, 8.30ಕ್ಕೆ ಕರಮಹಳ್ಳಿ ಗ್ರಾಮದಲ್ಲಿ, 9.30ಕ್ಕೆ ದೊಡ್ಡ ಮಾರನ ಗೌಡನಹಳ್ಳಿ ಗ್ರಾಮದಲ್ಲಿ, ಬೆಳಿಗ್ಗೆ 10.30ಕ್ಕೆ ಮಾರಯ್ಯನ ಹುಂಡಿ ಗ್ರಾಮದಲ್ಲಿ, ಬೆಳಿಗ್ಗೆ 11.30ಕ್ಕೆ ನುಗ್ಗಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಜಯಪುರ ಹೋಬಳಿ ಮಾದಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ಹಾಗೂ ಗ್ರಾಮ ವಿಕಾಸ ಯೋಜನೆಯಡಿ ಕಾಮಗಾರಿಗೆ ಚಾಲನೆ ಹಾಗೂ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಜಯ ಪುರ ಹೋಬಳಿ ಅನಗನಹಳ್ಳಿಯಲ್ಲಿ ಸಾರ್ವಜನಿಕ ಸಂಪರ್ಕ ಸಭೆ ಹಾಗೂ ಗ್ರಾಮ ವಿಕಾಸ ಯೋಜನೆಯಡಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಜಯಪುರ ಹೋಬಳಿ ತಿಬ್ಬಯ್ಯನಹುಂಡಿ ಗ್ರಾಮದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ಮತ್ತು ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಜಯಪುರ ಹೋಬಳಿಯ ಮೂಗನಹುಂಡಿ ಹಾಗೂ ನಗರ್ತಹಳ್ಳಿ ಗ್ರಾಮಗಳ ರಸ್ತೆಯಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಜಯಪುರ ಹೋಬ ಳಿಯ ದೇವಗಳ್ಳಿ ಗ್ರಾಮದಲ್ಲಿ ಸಂಜೆ 4 ಗಂಟೆಗೆ ಮುಳ್ಳೂರು ಗ್ರಾಮ ಹಾಗೂ ಸಂಜೆ 5 ಗಂಟೆಗೆ ಗೋಪಾಲಪುರ ಗ್ರಾಮದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಿದ್ದಾರೆ.

Translate »