ಸಂಚಾರ ನಿಯಮ ಉಲ್ಲಂಘಿಸುವವರಲ್ಲಿ ಯುವಕರದ್ದೇ ಸಿಂಹಪಾಲು
ಮೈಸೂರು

ಸಂಚಾರ ನಿಯಮ ಉಲ್ಲಂಘಿಸುವವರಲ್ಲಿ ಯುವಕರದ್ದೇ ಸಿಂಹಪಾಲು

January 11, 2019

ಮೈಸೂರು: ಸಂಚಾರ ನಿಯಮ ಪಾಲಿಸದೇ ಅಪಘಾತಕ್ಕೆ ಸಿಲುಕು ವವರಲ್ಲಿ ಯುವ ಜನರೇ ಹೆಚ್ಚು ಎಂದು ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಕಾರ್ಯ ಕ್ರಮ ಸಂಯೋಜನಾಧಿಕಾರಿ ಡಾ.ಬಿ. ಚಂದ್ರಶೇಖರ್ ವಿಷಾದಿಸಿದರು.

ಮೈಸೂರಿನ ಬಾಸುದೇವ ಸೋಮಾನಿ ಕಾಲೇಜಿನ ಎನ್‍ಎಸ್‍ಎಸ್ ಘಟಕ, ಮೈಸೂರು ವಿವಿ ಎನ್‍ಎಸ್‍ಎಸ್‍ನ ಜಂಟಿ ಆಶ್ರಯ ದಲ್ಲಿ ಕಾಲೇಜಿನ ಸಭಾಂಗಣದಲ್ಲಿ `ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳು’ ಕುರಿತು ಗುರುವಾರ ಹಮ್ಮಿಕೊಂಡಿದ್ದ ವಿವಿ ಮಟ್ಟದ ಒಂದು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿ ಯಾಗಿ ಅವರು ಮಾತನಾಡಿದರು.

ಹೆಲ್ಮೆಟ್ ಧರಿಸುವುದು ಸೇರಿದಂತೆ ಇನ್ನಿ ತರ ಸಣ್ಣ ಸಣ್ಣ ಸಂಚಾರ ನಿಯಮಗಳನ್ನು ಪಾಲಿಸದೇ ಅಪಘಾತಕ್ಕೆ ತುತ್ತಾಗುವವ ರಲ್ಲಿ ಯುವ ಸಮುದಾಯವೇ ಹೆಚ್ಚು. ಅದ ರಲ್ಲೂ 18ರಿಂದ 25 ವರ್ಷ ವಯೋ ಮಾನದ ಯುವ ಜನರು ಅನಾಹುತಗಳಿಗೆ ಸಿಲುಕಿ ಅಂಗಾಂಗಗಳ ಊನತೆಯಿಂದ ಬಳಲುವಂತಹ ಪರಿಸ್ಥಿತಿಯನ್ನು ತಮಗೇ ತಾವೇ ತಂದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಹತ್ತಿರದ ಸಂಬಂಧಿಯೊಬ್ಬರ ಪುತ್ರ ಬೈಕಿನಲ್ಲಿ ಸ್ನೇಹಿತರೊಂದಿಗೆ ಪ್ರವಾಸ ಕೈ ಗೊಂಡ ವೇಳೆ ಅಪಘಾತಕ್ಕೀಡಾದ. ಆತನ ತಲೆಗೆ ತೀವ್ರ ಗಾಯವಾಯಿತು. ಹೆಲ್ಮೆಟ್ ಧರಿಸಿದ್ದರೆ, ಇದರಿಂದ ಪಾರಾಗಬಹು ದಿತ್ತು. ಬೆನ್ನು ಮೂಳೆಯೂ ಮುರಿದ ಹಿನ್ನೆಲೆ ಯಲ್ಲಿ ಆತನೀಗ ಹಾಸಿಗೆ ಹಿಡಿದಿದ್ದಾನೆ. ಪೋಷಕರ ಇಳಿವಯಸ್ಸಿನಲ್ಲಿ ಆಸರೆ ಯಾಗಬೇಕಿದ್ದ ಈ 25 ವರ್ಷದ ಯುವಕ ನನ್ನು ವಯೋವೃದ್ಧ ಪೋಷಕರು ನೋಡಿ ಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಸಂಚಾರ ನಿಯಮಗಳನ್ನು ಪಾಲಿ ಸುವುದಕ್ಕೆ ಆದ್ಯತೆ ನೀಡುವ ಮೂಲಕ ನಮ್ಮ ಬದುಕನ್ನು ಅಪಘಾತಗಳಿಂದ ಮುಕ್ತ ವಾಗಿಸಬೇಕಿದೆ ಎಂದು ತಿಳಿಸಿದರು.

ಯುವ ಜನತೆ ಅಪಘಾತಕ್ಕೆ ಸಿಲುಕಿ ತಮ್ಮ ಬದುಕು ಬಲಿಕೊಟ್ಟರೆ ಒಂದೆಡೆ ಅವರ ಕುಟುಂಬಕ್ಕೆ ಹಾನಿಯಾದರೆ ಮತ್ತೊಂದೆಡೆ ಹೆಚ್ಚು ಯುವ ಜನತೆ ಹೊಂದಿರುವ ನಮ್ಮ ದೇಶದ ಅಭಿವೃದ್ಧಿಗೂ ಪರೋಕ್ಷವಾಗಿ ದುಷ್ಪ ರಿಣಾಮ ಉಂಟಾಗುತ್ತದೆ. ಸಿಗ್ನಲ್ ಜಂಪ್ ಮಾಡುವುದರಲ್ಲೂ ಯುವ ಜನರೇ ಹೆಚ್ಚಿದ್ದು, ಇದಕ್ಕೆ ಸ್ವಯಂ ಶಿಸ್ತಿನ ಕೊರತೆಯೇ ಕಾರಣ. ನಿಯಮಗಳಿರುವುದು ನಮ್ಮ ಒಳಿತಿಗಾಗಿ ಎಂಬುದನ್ನು ಅರಿತು ಪಾಲನೆ ಮಾಡ ಬೇಕು. ಕೆಲವರು ಸಂಚಾರ ನಿಯಮಗಳ ಬಗ್ಗೆ ಅರಿವಿಲ್ಲದೆ, ಉಲ್ಲಂಘಿಸಿದರೆ ಮತ್ತೆ ಕೆಲವರು ಅರಿವಿದ್ದೂ ಉಲ್ಲಂಘನೆ ಮಾಡು ತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮೈಸೂರು ವಿವಿ ಎನ್‍ಎಸ್‍ಎಸ್ ನಿವೃತ್ತ ಕಾರ್ಯಕ್ರಮ ಅಧಿಕಾರಿ ಪ್ರೊ.ಬಿ.ಕೆ.ಶಿವಣ್ಣ ಮಾತನಾಡಿ, ನಾನು, ನನಗಾಗಿ ಮಾತ್ರ ವಲ್ಲ, ನಮ್ಮೆಲ್ಲರಿಗಾಗಿ ಎಂಬ ಸಮಷ್ಟಿ ಪ್ರಜ್ಞೆ ಯನ್ನು ಮೂಡಿಸುವ ಮಹತ್ವದ ಉದ್ದೇಶ ವನ್ನು ಎನ್‍ಎಸ್‍ಎಸ್ ಹೊಂದಿದೆ. ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ನೆರೆಹೊರೆಯವರಿಗೂ ಈ ಬಗ್ಗೆ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

ಉದ್ಘಾಟನೆ ನೆರವೇರಿಸಿದ ಮೈಸೂರು ನಗರ ಸಂಚಾರ ವಿಭಾಗದ ಎಸಿಪಿ ಜಿ.ಎನ್. ಮೋಹನ್ ಮಾತನಾಡಿ, ಸಂಚಾರ ನಿಯಮ ಸೇರಿದಂತೆ ಯಾವುದೇ ನಿಯಮ-ಕಾನೂನೇ ಇರಲಿ ಅವುಗಳ ಪಾಲನೆಗೆ ಮೊದಲು ನಮ್ಮಲ್ಲಿ ಪ್ರಾಮಾಣಿಕತೆ ಇರ ಬೇಕು. ತಪ್ಪುಗಳನ್ನು ಖಂಡಿಸುವ ಹಾಗೂ ನೇರ ನಡೆ-ನುಡಿ ಬೆಳೆಸಿಕೊಳ್ಳಲು ನಮ್ಮ ಯುವ ಸಮುದಾಯ ಮುಂದಾಗಬೇಕು. ತಪ್ಪು ಮಾಡುವುದು ಸಹಜ. ಆದರೆ ಅದರ ಪುನಾರವರ್ತನೆ ಆಗದಂತೆ ಎಚ್ಚರ ವಹಿಸು ವುದು ಮುಖ್ಯ ಎಂದು ತಿಳಿ ಹೇಳಿದರು.

ಬದುಕಿನಲ್ಲಿ ಎದುರಾಗುವ ಸಂಕಷ್ಟ ಗಳನ್ನು ಸಮರ್ಥವಾಗಿ ಎದುರಿಸುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು. ಸಣ್ಣ ಸಣ್ಣ ಸಂಕಷ್ಟಗಳನ್ನು ಎದುರಿಸಿ ಮುಂದೆ ಸಾಗಿ ದರೆ ಎಂತಹ ದೊಡ್ಡ ಸಂಕಷ್ಟವನ್ನೂ ಮೆಟ್ಟಿ ಜೀವನದಲ್ಲಿ ಯಶಸ್ಸು ಗಳಿಸಬಹುದು. ಸಮಾಜದಲ್ಲಿ ನಡೆಯುವ ಅನ್ಯಾಯ ಗಳನ್ನು ನೋಡಿಯೂ ಸುಮ್ಮನಿದ್ದರೆ ಅದರ ದುಷ್ಪರಿಣಾಮ ಸಮಾಜದ ಮೇಲೆ ಉಂಟಾಗುತ್ತದೆ. ಪ್ರಸ್ತುತ ದೇಶವನ್ನು ಕಾಡುತ್ತಿರುವ ಸಮಸ್ಯೆಗಳನ್ನು ನಿವಾರಿ ಸುವಲ್ಲಿ ಯುವ ಸಮುದಾಯ ತನ್ನ ಕೊಡುಗೆ ನೀಡಬೇಕಿದೆ ಎಂದರು.

ಸುಗಮ ಸಾರಿಗೆ ವ್ಯವಸ್ಥೆ ಮತ್ತು ಸಾರ್ವ ಜನಿಕ ಸುರಕ್ಷತೆಯಲ್ಲಿ ಸಂಚಾರ ನಿಯಮ ಗಳು’ ಹಾಗೂಬದಲಾಗುತ್ತಿರುವ ಸನ್ನಿ ವೇಶದಲ್ಲಿ ಸಾರಿಗೆ ನಿಯಮಗಳು-ಪ್ರಸ್ತು ತತೆ ಮತ್ತು ಸವಾಲುಗಳು’ ಕುರಿತಂತೆ ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯ ಕ್ರಮಗಳು ನಡೆದವು. 100ಕ್ಕೂ ಹೆಚ್ಚು ಮಂದಿ ವಿವಿಧ ಕಾಲೇಜುಗಳ ಎನ್‍ಎಸ್‍ಎಸ್ ಸ್ವಯಂ ಸೇವಕರು ಕಾರ್ಯಾಗಾರದಲ್ಲಿ ಪಾಲ್ಗೊಂ ಡಿದ್ದರು. ದಿ ಇನ್‍ಸ್ಟಿಟ್ಯೂಟ್ ಆಫ್ ಎಜು ಕೇಷನ್ ಟ್ರಸ್ಟ್‍ನ ವ್ಯವಸ್ಥಾಪಕ ಟ್ರಸ್ಟಿ ಡಾ. ಎಂ.ಪುಟ್ಟಸ್ವಾಮಿ, ಕಾಲೇಜಿನ ಪ್ರಾಂಶು ಪಾಲ ಡಾ.ಎಂ.ಮಹದೇವಯ್ಯ, ಕುವೆಂಪು ನಗರ ಸಂಚಾರ ಠಾಣೆಯ ಪಿಎಸ್‍ಐ ಶಿವ ಕುಮಾರ್, ಕಾರ್ಯಕ್ರಮ ಸಂಯೋಜಕ ಡಾ.ಟಿ.ರಮೇಶ್ ಮತ್ತಿತರರು ಹಾಜರಿದ್ದರು.

Translate »