ಮೈಸೂರು: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮೈಸೂರು-ತಿ.ನರಸೀಪುರ ಮುಖ್ಯ ರಸ್ತೆಯಲ್ಲಿ ಸೋಮವಾರ ನಡೆದಿದೆ. ತಿ.ನರಸೀಪುರ ತಾಲೂಕು, ಸೋಸಲೆ ವ್ಯಾಸರಾಜಪುರದ ನಿವಾಸಿ ಸಿದ್ದಪ್ಪಾಜಿಚಾರಿ(52) ಅಪಘಾತದಲ್ಲಿ ಮೃತಪಟ್ಟವರು. ಮತ್ತೊಂದು ಕಾರಿನಲ್ಲಿದ್ದ ಯಳಂದೂರು ನಿವಾಸಿ ಶ್ರೀನಿವಾಸ್ ಹಾಗೂ ಅವರ ತಂದೆ ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿದ್ದಪ್ಪಾಜಿಚಾರಿ ಅವರು ಸೋಮವಾರ ಮಧ್ಯಾಹ್ನ ತಮ್ಮ ಮಹೀಂದ್ರ ಎಕ್ಸ್‍ಯೂವಿ 500 ಕಾರಿನಲ್ಲಿ ಮೈಸೂರಿನಿಂದ ತಿ.ನರಸೀಪುರಕ್ಕೆ ಹೋಗುತ್ತಿದ್ದಾಗ, ಗುರುಕಾರಪುರದ ಬಳಿ ಎದುರಿನಿಂದ ಬಂದ ಶ್ರೀನಿವಾಸ್ ಅವರ ಟಾಟಾ ಟಿಯಾಗೋ…
ಜಯಪುರದಲ್ಲಿ ಜನ ಸಂಪರ್ಕ ಸಭೆ
December 12, 2018ಮೈಸೂರು: ಮೈಸೂರು ತಾಲೂಕಿನ ಜಯಪುರ ಹೋಬಳಿಯಲ್ಲಿ ಕಂದಾಯ ಅದಾಲತ್ ಮತ್ತು ಜನ ಸಂಪರ್ಕ ಸಭೆ ನಡೆಯಿತು. ಮೈಸೂರು ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಎ.ಸಿ.ಶಿವೇಗೌಡ, ತಹ ಶೀಲ್ದಾರ್ ರಮೇಶ್ ಬಾಬು, ಜಯಪುರ ಗ್ರಾಪಂ ಅಧ್ಯಕ್ಷ ದಾರಿಪುರ ಬವಸಣ್ಣ ಸಭೆ ಯನ್ನು ಉದ್ಘಾಟಿಸಿದರು. ಹೋಳಿಯ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿ ತಮ್ಮ ಕುಂದು-ಕೊರತೆ ಗಳನ್ನು ಹೇಳಿಕೊಂಡರು. ಕೆಂಚಲಗೂಡಿ ನಲ್ಲಿ ವೈನ್ಸ್ ತೆರವುಗೊಳಿಸಲು ಗ್ರಾಮಸ್ಥರು ಆಗ್ರಹಿಸಿದರು. ಮದ್ದೂರು ಗ್ರಾಮಸ್ಥರಿಂದ ಶಾಲಾ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗು ತ್ತಿಲ್ಲ ಎಂಬ ದೂರು ಕೇಳಿ ಬಂತು….
ಹಸಿದ ಜನತೆ, ರೈತರ ಕಡೆಗಣನೆ ಬಿಜೆಪಿ ಸೋಲಿಗೆ ಕಾರಣ
December 12, 2018ಕೆ.ಆರ್.ನಗರ: ಪ್ರಧಾನಿ ನರೇಂದ್ರ ಮೋದಿ ಅವರು ಹಸಿದ ಜನರು ಹಾಗೂ ಮತ್ತು ರೈತರನ್ನು ಕಡೆಗಣಿಸಿದ್ದೇ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಎಂದು ಸ್ವರಾಜ್ ಇಂಡಿಯಾ ಪಕ್ಷದ ತಾಲೂಕ ಅಧ್ಯಕ್ಷ ಗರಡುಗಂಭಸ್ವಾಮಿ ಆರೋಪಿಸಿದರು. ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶ ಸುತ್ತುವುದರಲ್ಲೇ ಕಾಲ ಕಳೆಯುತ್ತಿದ್ದು, ಅಧಿಕಾರಕ್ಕೆ ಬರುವ ಮುನ್ನ ಘೋಷಿಸಿದ ಉದ್ಯೋಗ ಸೃಷ್ಟಿ, ಬಡವರ ಖಾತೆಗೆ ಹಣ ವರ್ಗಾವಣೆ, ರೈತರ ಸಮಸ್ಯೆ ನಿವಾರಣೆ ಮಾಡುವಂತಹ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ….
ಡಿ. 16ಕ್ಕೆ ಹಿನಕಲ್ ಫ್ಲೈ ಓವರ್ ಉದ್ಘಾಟನೆ
December 11, 2018ಮೈಸೂರು: ಮೈಸೂರಿನ ಹಿನಕಲ್ ಬಳಿ ನಿರ್ಮಿಸಿರುವ ಸಾಂಸ್ಕೃತಿಕ ನಗರಿಯ ಮೊದಲ ಫ್ಲೈಓವರ್ ಡಿಸೆಂಬರ್ 16 ರಿಂದ ಸಾರ್ವಜನಿಕರ ಸೇವೆಗೆ ಮುಕ್ತಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಫ್ಲೈಓವರ್ ಅನ್ನು ಭಾನುವಾರ ಬೆಳಿಗ್ಗೆ ಉದ್ಘಾಟನೆ ಮಾಡುವರು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಕೇಂದ್ರದ ನರ್ಮ್ ಯೋಜನೆಯಡಿ ಶೇ.60ರಷ್ಟು ಅನುದಾನ, ರಾಜ್ಯ ಸರ್ಕಾರದ ಶೇ.20 ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಶೇ.20ರಷ್ಟು ಹಣದಿಂದ ನಿರ್ಮಿಸಿರುವ ಫ್ಲೈಓವರ್ ಕಾಮಗಾರಿ ಸಂಪೂರ್ಣ ಗೊಂಡಿದ್ದು, ಬೀದಿ ದೀಪ,…
30 ಮಂದಿ ಸಾವಿಗೆ ಕಾರಣನಾಗಿದ್ದ ಬಸ್ ಚಾಲಕನ ಬಂಧನ
December 11, 2018ಮಂಡ್ಯ: ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ನಾಲೆಗೆ ಬಸ್ ಉರುಳಿ 30 ಜನರನ್ನು ಬಲಿ ಪಡೆದಿದ್ದ ಬಸ್ ಚಾಲಕನನ್ನು ಭಾನುವಾರ ಬಂಧಿಸಲಾಗಿದೆ. ಬಂಧಿತ ಬಸ್ ಚಾಲಕ ಶಿವಣ್ಣ ಪೊಲೀಸರ ತನಿಖೆ ವೇಳೆ ಅಪಘಾತಕ್ಕೆ ಕಾರಣವನ್ನು ಬಿಚ್ಚಿಟ್ಟಿದ್ದಾನೆ. ಚಾಲಕ ಹೇಳಿದ್ದೇನು?: ನ.24 ರಂದು ಬೆಳಿಗ್ಗೆ ಕನಗನಮರಡಿ ನಾಲೆಯ ಬಳಿ ಬರುತ್ತಿದ್ದಾಗ ಬಸ್ ನನ್ನ ನಿಯಂತ್ರಣ ತಪ್ಪಿತು. ಅದು ನಾಲೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುತ್ತಿತ್ತು. ನಾನು ಅದನ್ನು ತಪ್ಪಿಸಲು ಪ್ರಯತ್ನಿಸಿದೆ. ಆದರೆ ದುರದೃಷ್ಟವ ಶಾತ್ ಬಸ್ ನಾಲೆಗೆ…
ಭಾರತದ ಅಲೆಮಾರಿ ಸಮುದಾಯಗಳ ಜೀವನ ಕ್ರಮ ಅನಾವರಣಗೊಳಿಸುವ ವಸ್ತು ಪ್ರದರ್ಶನಕ್ಕೆ ಚಾಲನೆ
December 11, 2018ಮೈಸೂರು: ಭಾರತದ ಅಲೆಮಾರಿ ಸಮುದಾಯಗಳ ಜೀವನ ಕ್ರಮ ಮತ್ತು ವೈವಿಧ್ಯಮಯ ಬದುಕನ್ನು ಸಾರುವ ವಸ್ತು ಪ್ರದರ್ಶನಕ್ಕೆ ಮಾನವ ಶಾಸ್ತ್ರ ಸಂಸ್ಥೆ ಅಧ್ಯಕ್ಷ ಪ್ರೊ. ಪ್ರಮೋದೆ ಕುಮಾರ್ ಮಿಶ್ರಾ ಸೋಮವಾರ ಚಾಲನೆ ನೀಡಿದರು. ಮೈಸೂರಿನ ಇರ್ವಿನ್ ರಸ್ತೆ ವೆಲ್ಲಿಂಗ್‍ಟನ್ ಹೌಸ್‍ನಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದ ದಕ್ಷಿಣ ಪ್ರಾದೇ ಶಿಕ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ `ಭಾರತದ ಅಲೆಮಾರಿಗಳು’ ಈ ವರ್ಷದ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು. ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯ ಗಳ ಬುಡಕಟ್ಟು ಮತ್ತು…
`ಬೆಳಕು’ ವಿಷಯದ ಸಂಚಾರಿ ವಿಜ್ಞಾನ ಪ್ರಯೋಗಾಲಯಕ್ಕೆ ಚಾಲನೆ
December 11, 2018ಮೈಸೂರು: ವಿಜ್ಞಾನ ಕಲಿಕೆ ಬಗ್ಗೆ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಆಸಕ್ತಿ ಉಂಟು ಮಾಡುವ ನಿಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿತಿ (ಸಿಡಿ ಎಸ್‍ಎಸ್) ಮತ್ತು ಎಕ್ಸೆಲ್ ಟ್ರಸ್ಟ್ ಜಂಟಿ ಯಾಗಿ 2018-19ನೆ ಸಾಲಿನ ವಿಜ್ಞಾನ ಕಾರ್ಯಕ್ರಮಗಳು ಮತ್ತು `ಬೆಳಕು’ ವಿಷ ಯದ ಸಂಚಾರಿ ವಿಜ್ಞಾನ ಪ್ರಯೋಗಾ ಲಯಕ್ಕೆ ಮೈಸೂರಿನ ಹೊರವಲಯದ ಹೂಟಗಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಗಣಿತ, ಪ್ರಾಣಿಶಾಸ್ತ್ರಗಳಲ್ಲಿ ಬೆಳಕಿನ ಮಹತ್ವ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾತ್ಯ…
ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆ ಮಾನವ ಹಕ್ಕು ಆಯೋಗ ಅಸ್ತಿತ್ವಕ್ಕೆ ಕಾರಣವಾಯಿತು
December 11, 2018ಮೈಸೂರು: ದೇಶದಲ್ಲಿ ಮಾನವ ಹಕ್ಕುಗಳನ್ನು ಸಂರಕ್ಷಿಸಬೇಕಾದ ಸರ್ಕಾರದ ಅಧೀನದ ಸಂಸ್ಥೆಗಳಿಂದಲೇ ಮಾನವ ಹಕ್ಕುಗಳ ಉಲ್ಲಂಘನೆ ವ್ಯಾಪಕ ವಾದ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಅಗತ್ಯ ವೆಂದು ಮಾನವ ಹಕ್ಕುಗಳ ಸಂರಕ್ಷಣೆಗೆ ಆಯೋಗವನ್ನು ಅಸ್ತಿತ್ವಕ್ಕೆ ತರಲಾಯಿತು ಎಂದು ನಿವೃತ್ತ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರೂ ಆದ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಚಂದ್ರಶೇಖರ್ ಹುನಗುಂದ ಹೇಳಿದರು. ಮೈಸೂರಿನ ಪುರಭವನದಲ್ಲಿ ಮಾನವ ಹಕ್ಕುಗಳ ಸೇವಾ ಸಮಿತಿ ವತಿಯಿಂದ ಸೋಮವಾರ ಹಮ್ಮಿ ಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ…
ಭೈರಪ್ಪ ಅಕ್ರಮ ಬಯಲಿಗೆಳೆದು ಕಾನೂನು ಹೋರಾಟ
December 11, 2018ಶಾಸಕ ರಾಮದಾಸ್ ವಿರುದ್ಧದ ಆರೋಪ ಸತ್ಯಕ್ಕೆ ದೂರ; ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಸ್ಪಷ್ಪನೆ ಮೈಸೂರು: ಜೆ.ಪಿ.ನಗರದ ಅಭಿವೃದ್ಧಿಗೆ ಯಾವುದೇ ಅನುದಾನ ತರದೇ ಕೇವಲ ಸುಳ್ಳು ಪ್ರಚಾರ ಪಡೆಯುತ್ತಿದ್ದಾರೆ ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಶಾಸಕ ಎಸ್.ಎ.ರಾಮದಾಸ್ ವಿರುದ್ಧ ಮಾಡಿರುವ ಆರೋಪವನ್ನು ಬಿಜೆಪಿ ಮುಖಂಡ, ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಖಂಡಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೈರಪ್ಪ ಮೇಯರ್ ಆಗಿದ್ದ ಅವಧಿಯಲ್ಲಿ ಜೆ.ಪಿ.ನಗರದ ಸಮಸ್ಯೆಗಳನ್ನು ಕಡೆಗಣಿಸಿದ್ದಲ್ಲದೆ, ತಮ್ಮ ಸಮಸ್ಯೆ ಹೇಳಲು ಹೋಗಿದ್ದ ನಾಚನಹಳ್ಳಿ…
ಸುತ್ತೂರು ಶ್ರೀ ಶಿವರಾತ್ರೀಶ್ವರರ 1059ನೆಯ ಜಯಂತಿ ಸಭಾಮಂಟಪಕ್ಕೆ ಭೂಮಿಪೂಜೆ
December 11, 2018ಮೈಸೂರು: ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಸಂಸ್ಥಾಪಕರಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಗಳವರ 1059ನೆಯ ಜಯಂತಿ ಮಹೋ ತ್ಸವದ ಸಭಾಮಂಟಪ ಪೂಜೆಯನ್ನು ನಿನ್ನೆ (ಭಾನುವಾರ) ಶಿವಮೊಗ್ಗದ ರಾಜೇಂದ್ರ ನಗರದ ಹಳೆಯ ಜಿಲ್ಲಾ ಕಾರಾ ಗೃಹ ಆವರಣದ ಅಲ್ಲಮಪ್ರಭು ಬಯಲಿನÀಲ್ಲಿ ನೆರವೇರಿಸಲಾಯಿತು. ಜಯಂತಿ ಮಹೋ ತ್ಸವವು 2019ರ ಜನವರಿ 4ರಿಂದ 10 ರವ ರೆಗೆ ನಡೆಯಲಿದೆ. ಕಳೆದ ಕೆಲವಾರು ವರ್ಷ ಗಳ ಹಿಂದೆಯೇ ನೆರವೇರಬೇಕಾಗಿದ್ದ ಜಯಂತಿ ಮಹೋತ್ಸವ ಕಾರಣಾಂತರ ಗಳಿಂದ ಮುಂದೂಡಲ್ಪಟ್ಟಿತ್ತು….










