ಮೈಸೂರು: ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಸಂಸ್ಥಾಪಕರಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಗಳವರ 1059ನೆಯ ಜಯಂತಿ ಮಹೋ ತ್ಸವದ ಸಭಾಮಂಟಪ ಪೂಜೆಯನ್ನು ನಿನ್ನೆ (ಭಾನುವಾರ) ಶಿವಮೊಗ್ಗದ ರಾಜೇಂದ್ರ ನಗರದ ಹಳೆಯ ಜಿಲ್ಲಾ ಕಾರಾ ಗೃಹ ಆವರಣದ ಅಲ್ಲಮಪ್ರಭು ಬಯಲಿನÀಲ್ಲಿ ನೆರವೇರಿಸಲಾಯಿತು. ಜಯಂತಿ ಮಹೋ ತ್ಸವವು 2019ರ ಜನವರಿ 4ರಿಂದ 10 ರವ ರೆಗೆ ನಡೆಯಲಿದೆ. ಕಳೆದ ಕೆಲವಾರು ವರ್ಷ ಗಳ ಹಿಂದೆಯೇ ನೆರವೇರಬೇಕಾಗಿದ್ದ ಜಯಂತಿ ಮಹೋತ್ಸವ ಕಾರಣಾಂತರ ಗಳಿಂದ ಮುಂದೂಡಲ್ಪಟ್ಟಿತ್ತು. ಇದೀಗ ನೆರವೇರುತ್ತಿರುವುದು ಜಿಲ್ಲೆಯ ಸಮಸ್ತ ರಿಗೂ ಸಂತಸವನ್ನುಂಟುಮಾಡಿದೆ ಎಂದು ಆನಂದಪುರದ ಶ್ರೀ ಮುರುಘರಾಜೇಂದ್ರ ಮಠದ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ತಿಳಿಸಿದರು. ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ರಾದ ಕೆ.ಎಸ್.ಈಶ್ವರಪ್ಪ ಜಿಲ್ಲೆಯ ಸಮ ಸ್ತರೂ ಸೇರಿ ಜಯಂತಿಯನ್ನು ಯಶಸ್ವಿ ಯಾಗಿ ನೆರವೇರಿಸಲಾಗುತ್ತದೆಂದು ತಿಳಿಸಿದರು. ಶಾಸಕ ರುದ್ರೇಗೌಡ ಪ್ರಾಸ್ತಾ ವಿಕ ಭಾಷಣ ಮಾಡಿದರು.
ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯಸಮ್ಮುಖದಲ್ಲಿ ನೆರ ವೇರಿದ ಕಾರ್ಯಕ್ರಮದಲ್ಲಿ ಬಸವ ಕೇಂದ್ರ, ಜಡೆಯ ಸಂಸ್ಥಾನ, ತೊಗರ್ಸಿ ಹಾಗೂ ಹಲವಾರು ಮಠಾಧೀಶ್ವರರು, ವಿಧಾನ ಪರಿ ಷತ್ ಸದಸ್ಯ ಅಯನೂರು ಮಂಜುನಾಥ್, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಸಭಾ ಸದಸ್ಯ ಕೆ.ಬಿ.ಅಶೋಕ ನಾಯ್ಕ, ಲೋಕಸೇವಾ ಆಯೋಗದ ಸದಸ್ಯ ಶ್ರೀ ಎಸ್.ಪಿ.ಷಡಕ್ಷರಿ ಸ್ವಾಮಿ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಉಪಮಹಾ ಪೌರ ಎಸ್.ಎನ್.ಚನ್ನಬಸಪ್ಪ, ವೀರಶೈವ ಸಮಾಜದ ಅಧ್ಯಕ್ಷ ಎನ್.ಜೆ.ರಾಜಶೇಖರ್, ಎಪಿಎಂಸಿ ಸದಸ್ಯ ಎಸ್.ಎಸ್. ಜ್ಯೋತಿ ಪ್ರಕಾಶ್ ಮೊದಲಾದವರು ಉಪಸ್ಥಿತರಿ ದ್ದರು. ಹೊಳಲೂರು ಕೆ.ಜಿ.ನಿಂಗಪ್ಪ ಸ್ವಾಗ ತಿಸಿದರು. ಎಚ್.ಎನ್.ಮಹಾರುದ್ರಯ್ಯ ಕಾರ್ಯಕ್ರಮ ನಿರೂಪಣೆ ಮಾಡಿದರೆ, ಅಕ್ಕನಬಳಗದ ಸದಸ್ಯರಾದ ಪುಷ್ಪಾ ಮತ್ತು ತಂಡದವರು ಪ್ರಾರ್ಥನೆ ಸಲ್ಲಿಸಿದರು.