ಮೈಸೂರು: ತಮಿಳುನಾಡು ಮತ್ತು ನಗರದ ವಿವಿಧ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಬೆಲೆಬಾಳುವ ಲ್ಯಾಪ್‍ಟಾಪ್ ಮತ್ತು ಮೊಬೈಲ್‍ಗಳನ್ನು ಕಳವು ಮಾಡುತ್ತಿದ್ದ ಅಂತಾರಾಜ್ಯ ಖದೀಮನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಈತನಿಂದ 9 ಲ್ಯಾಪ್‍ಟಾಪ್, 29 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಗ್ರಾಮದ ಲೇಟ್ ಅಬ್ಬಯ್ಯ ಅವರ ಪುತ್ರ, ಮೈಸೂರಿನ ಸಾತಗಳ್ಳಿ 2ನೇ ಹಂತದ ನಿವಾಸಿ ಡಿ.ಎ.ರಂಗಸ್ವಾಮಿ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಡಿ.7ರಂದು ಸಿಸಿಬಿ ಪೊಲೀಸರು ವಿಶೇಷ ಕಾರ್ಯಾ ಚರಣೆ ನಡೆಸಿ ಮೈಸೂರಿನ ನಿವಾಸದಲ್ಲಿ…
ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ ವಿಶೇಷಚೇತನ ಜೋಡಿ
December 11, 2018ಮೈಸೂರು: ಮೈಸೂರಿನ ಅಗ್ರಹಾರದ ಹೊಸಮಠದ ಆವರಣದಲ್ಲಿರುವ ನಟರಾಜ ಸಭಾಂಗಣದಲ್ಲಿ ಸೋಮವಾರ ವಿಶೇಷಚೇತನ ಜೋಡಿಯೊಂದು ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಶರಣು ವಿಶ್ವ ವಚನ ಫೌಂಡೇಶನ್ ವತಿಯಿಂದ ನಡೆದ ವಚನ ಮಾಂಗಲ್ಯ ಕಾರ್ಯಕ್ರಮದಲ್ಲಿ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಮ್ಮುಖದಲ್ಲಿ ಚಾಮರಾಜನಗರ ಜಿಲ್ಲೆಯ ಮಂಚಹಳ್ಳಿ ಗ್ರಾಮದ ವಿಕಲಚೇತನರಾದ ಎಂ.ಮಾದೇಶ್ ಹಾಗೂ ಹೆಗ್ಗಡ ಹಳ್ಳಿ ಗ್ರಾಮದ ಪುಟ್ಟ ಶಶಿಕಲಾ ವಿವಾಹವಾದರು. ವರ ಎಂ. ಮಾದೇಶ್ ಬಾಲ್ಯದಲ್ಲಿ ಕಾಲಿನ ಸ್ವಾಧೀನ ಕಳೆದುಕೊಂಡಿದ್ದರೆ, ನವ ವಧು ಪುಟ್ಟ ಶಶಿಕಲಾ ಹುಟ್ಟಿನಿಂದಲೇ…
ಕಾರಂಜಿಕೆರೆ, ಕುಕ್ಕರಹಳ್ಳಿ, ಲಿಂಗಾಂಬುಧಿ ಕೆರೆ ಅಭಿವೃದ್ಧಿಗೆ ಸರ್ಕಾರ ಬದ್ಧ
December 10, 2018ಮೈಸೂರು: ಮೈಸೂರು ನಗರದ ಮೂರು ಪ್ರಮುಖ ಕೆರೆಗಳಾದ ಕಾರಂಜಿಕೆರೆ, ಕುಕ್ಕರಹಳ್ಳಿ ಹಾಗೂ ಲಿಂಗಾಂಬುಧಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದ್ದು, ಅಗತ್ಯ ಅನುದಾನ ಬಿಡುಗಡೆ ಮಾಡಿದೆ ಎಂದು ಪ್ರವಾಸೋಮ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. ಕಾರಂಜಿಕೆರೆಗೆ ಭಾನುವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಮೈಸೂರಿಗೆ ಬರುವ ಪ್ರವಾಸಿಗರು ಹಾಗೂ ಮೈಸೂರಿನ ನಿವಾಸಿಗಳಿಗೆ ಈ ಮೂರು ಕೆರೆಗಳಲ್ಲಿ ಉತ್ತಮವಾದ ವಾತಾವರಣ ಸೃಷ್ಟಿಸಿ ಕೊಡುಗೆ ನೀಡುವುದರೊಂದಿಗೆ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳುವುದಕ್ಕಾಗಿ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾ ಗಿದೆ. ಕುಕ್ಕರಹಳ್ಳಿ,…
ಅರಣ್ಯ ಇಲಾಖೆಯಿಂದ ಮೈಸೂರಿನ ಎರಡು ಉದ್ಯಾನಗಳ ಅಭಿವೃದ್ಧಿ
December 10, 2018ಮೈಸೂರು: ಮೈಸೂರಿನ ರಾಮಕೃಷ್ಣನಗರದ ಲಿಂಗಾಂ ಬುಧಿ ನಗರ ಉದ್ಯಾನವನ ಹಾಗೂ ಜಯನಗರ ಮಳಲವಾಡಿ ಕೆರೆ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿದ್ದು, ಈ ಎರಡೂ ಉದ್ಯಾನವನಗಳನ್ನು ಭಾನುವಾರ ಸಾರ್ವ ಜನಿಕರಿಗೆ ಸಮರ್ಪಿಸಲಾಯಿತು. ಕೇಂದ್ರ ಸರ್ಕಾರದ 139 ಲಕ್ಷ ರೂ. ಹಾಗೂ ರಾಜ್ಯ ಸರ್ಕಾರದ 35 ಲಕ್ಷ ಸೇರಿ ದಂತೆ ಒಟ್ಟು 174 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿರುವ ಲಿಂಗಾಂಬುದಿ ನಗರ ಉದ್ಯಾನವನವನ್ನು ಸಂಸದ ಪ್ರತಾಪಸಿಂಹ ಉದ್ಘಾಟಿಸಿದರೆ, ರಾಜ್ಯ ಸರ್ಕಾರದ 61 ಲಕ್ಷ ರೂ….
ಮೈಸೂರಿನ ವಿಮಾನ ನಿಲ್ದಾಣ, ರೈಲ್ವೆ ಅಭಿವೃದ್ಧಿಗೆ ಹೆಚ್ಚು ಸ್ಪಂದಿಸಿದ ಜಿಟಿಡಿ
December 10, 2018ಸಂಸದ ಪ್ರತಾಪಸಿಂಹರಿಂದ ಜಿ.ಟಿ. ದೇವೇಗೌಡರ ಗುಣಗಾನ ಮೈಸೂರು: ವಾರ್ಷಿಕ 33 ಲಕ್ಷ ಪ್ರವಾಸಿಗರು ಭೇಟಿ ನೀಡುವ ಮೈಸೂರಿನ ವಿಮಾನ ನಿಲ್ದಾಣ ಮತ್ತು ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂ ಸ್ವಾಧೀನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಉತ್ತಮವಾಗಿ ಸ್ಪಂದಿಸಿದ್ದರ ಪರಿಣಾಮವಾಗಿ ವಿಮಾನ ನಿಲ್ದಾಣ ಮತ್ತು ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ತ್ವರಿತವಾಗಿ ನಡೆಯಲು ನೆರವಾಗಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಇಂದಿಲ್ಲಿ ಸಚಿವ ಜಿ.ಟಿ.ದೇವೇಗೌಡರ ಬಗ್ಗೆ ಅಪಾರ ಗುಣಗಾನ ಮಾಡಿದರು. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಎ-3, ಎ-4 ವಿಮಾನಗ ಳನ್ನು…
ಉಚಿತ, ಕಡ್ಡಾಯ ಶಿಕ್ಷಣ ಸಂಬಂಧ ಜಾಗೃತಿ ಜಾಥಾ
December 10, 2018ಮೈಸೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣ ಕುರಿತು ಕಿರಿಯ ಪುಷ್ಪ ಕುಟುಂಬ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರು ಮೈಸೂರಿನ ಅಶೋಕಪುರಂನ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ, ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ‘ಕಲಿಕೆ ಎಂಬುದು ನಿತ್ಯ ನಿರಂತರ, ಶಿಕ್ಷಣ ಕೊಡಿಸಿ ಮಕ್ಕಳ ಬಾಳು ಬೆಳಗಿಸಿ, ಪ್ರತಿಭಾ ಕಾರಂಜಿ ಮಕ್ಕಳಿಗೆ ಅಪರಂಜಿ, ಉತ್ತಮ ಗ್ರಂಥಾಲಯ ಶಾಲೆಯ ಹೃದಯವಿದ್ದಂತೆ, ಮಾಡದಿರಿ ಬಾಲ ಕಾರ್ಮಿಕ, ಕೊಡಿಸಿ ಕಡ್ಡಾಯ ಶಿಕ್ಷಣ’ ಘೋಷಣಾ ಫಲಕಗಳನ್ನು ಹಿಡಿದು ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಿ ಎಂದು ತಿಳಿಸಿದರು….
ಮೈಸೂರಲ್ಲಿ ಸಾವಯವ, ನೈಸರ್ಗಿಕ ಕೃಷಿಕರ ಸಂತೆ
December 10, 2018ಮೈಸೂರು: ಸಾವಯವ ಬೇಸಾಯ ಪದ್ಧತಿಯಲ್ಲಿ ಬೆಳೆದ ತರಕಾರಿ, ಸೊಪ್ಪು, ಹಣ್ಣು ಹಾಗೂ ಸಿರಿಧಾನ್ಯಗಳಿಂದ ತಯಾರಿಸಿದ ತಿಂಡಿ-ತಿನಿಸು ಮತ್ತು ಗಿಡಮೂಲಿಕೆಗಳ ಪಾನೀಯಗಳನ್ನು ಸ್ವತಃ ರೈತರು ಹಾಗೂ ಉತ್ಪಾದಕರೇ ಮಾರಾಟ ಮಾಡಿದರು. ಇದಕ್ಕೆ ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮೈಸೂರು ಜೆಪಿ ನಗರದ ಪುಟ್ಟರಾಜ ಗವಾಯಿ ಕ್ರೀಡಾಂ ಗಣದಲ್ಲಿ ಭಾನುವಾರ ಸ್ವದೇಶಿ ಜಾಗರಣ ಮಂಚ್-ಮೈಸೂರು ಹಾಗೂ ಜನಚೇತನ ಟ್ರಸ್ಟ್ ಜಂಟಿ ಆಶ್ರಯ ದಲ್ಲಿ ಆಯೋಜಿಸಿದ್ದ ಸಾವಯವ ಹಾಗೂ ನೈಸರ್ಗಿಕ ಕೃಷಿಕರ ಸಂತೆಯಲ್ಲಿ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ ರೈತರು…
ಜನರಲ್ಲಿ ಭಯವುಂಟು ಮಾಡುವ `ವಾಹಿನಿ’ಗಳು
December 10, 2018ಮೈಸೂರು: ದೃಶ್ಯ ಮಾಧ್ಯಮಗಳು ಬೇಡವಾದ ವಿಚಾರ ಗಳನ್ನು ಪ್ರಸಾರ ಮಾಡಿ ಜನರಲ್ಲಿ ಭಯ ಉಂಟು ಮಾಡುತ್ತಿವೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಜಿಲ್ಲಾ ಗ್ರಾಮಾಂ ತರ ಘಟಕ ಅಧ್ಯಕ್ಷ ಎಂ.ಶಿವಣ್ಣ ಬೇಸರ ವ್ಯಕ್ತಪಡಿಸಿದರು. ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ ಭಾನುವಾರ ಆಯೋ ಜಿಸಿದ್ದ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾ ಚರಣೆ, ಪ್ರತಿಷ್ಠಾನದ ಸಂಸ್ಥಾಪಕ ಎಂ.ಬಿ. ಸಂತೋಷ್ ಅವರ ಕೃತಿಗಳ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತ…
ನಾಳೆ ಕಾವೇರಿ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಎದುರು ಅಧಿಕಾರಿ, ನೌಕರರ ಧರಣಿ
December 10, 2018ಮೈಸೂರು: ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕಾವೇರಿ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘ ಮತ್ತು ಕಾವೇರಿ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಆಶ್ರಯದಲ್ಲಿ ಡಿ.11ರಂದು ಬೆಳಿಗ್ಗೆ 10ರಿಂದ ಸಂಜೆ 5.30 ಗಂಟೆವರೆಗೆ ವಿಜಯನಗರ 2ನೇ ಹಂತದಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಅಧಿಕಾರಿಗಳ ಸಂಘಗಳ ಪ್ರಧಾನ ಕಾರ್ಯದರ್ಶಿ ಕೆ.ಆರ್. ಕೃಷ್ಣಮೂರ್ತಿ, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಆರ್.ಶ್ರೀನಿವಾಸ್ ತಿಳಿಸಿದ್ದಾರೆ. ಗ್ರಾಮೀಣ ಬ್ಯಾಂಕ್‍ಗಳಲ್ಲಿ ದಿನಗೂಲಿ, ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸ ಬೇಕು…
ಟೆಲಿಕಾಂ ಬಡಾವಣೆಯಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ
December 10, 2018ಮೈಸೂರು: ಮೈಸೂರಿನ 44ನೇ ವಾರ್ಡ್ ವ್ಯಾಪ್ತಿಯ ಬೋಗಾದಿ 2ನೇ ಹಂತದ ಟೆಲಿಕಾಂ ಬಡಾವಣೆಯಲ್ಲಿ 17.50 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವ ಗ್ರಂಥಾ ಲಯ ಕಟ್ಟಡಕ್ಕೆ ಪಾಲಿಕೆ ಸದಸ್ಯೆ ಸವಿತಾ ಸುರೇಶ್ ಭಾನುವಾರ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾ ಡಿದ ಅವರು, ಹೆಚ್ಚು ಜನಸಂಖ್ಯೆ ಇರುವ ಬಡಾವಣೆಯಲ್ಲಿ ಸಾರ್ವ ಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೊಸ ಗ್ರಂಥಾ ಲಯ ತೆರೆಯಲಾಗುತ್ತಿದ್ದು, ಆದಷ್ಟು ಶೀಘ್ರ ಕಟ್ಟಡ ನಿರ್ಮಿಸ ಲಾಗುವುದು ಎಂದರು. ಈ ಸಂಧರ್ಭದಲ್ಲಿ ಟೆಲಿಕಾಂ ಬಡಾವಣೆ ನಿವಾಸಿಗಳ…










