ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ ವಿಶೇಷಚೇತನ ಜೋಡಿ
ಮೈಸೂರು

ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ ವಿಶೇಷಚೇತನ ಜೋಡಿ

December 11, 2018

ಮೈಸೂರು: ಮೈಸೂರಿನ ಅಗ್ರಹಾರದ ಹೊಸಮಠದ ಆವರಣದಲ್ಲಿರುವ ನಟರಾಜ ಸಭಾಂಗಣದಲ್ಲಿ ಸೋಮವಾರ ವಿಶೇಷಚೇತನ ಜೋಡಿಯೊಂದು ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.

ಶರಣು ವಿಶ್ವ ವಚನ ಫೌಂಡೇಶನ್ ವತಿಯಿಂದ ನಡೆದ ವಚನ ಮಾಂಗಲ್ಯ ಕಾರ್ಯಕ್ರಮದಲ್ಲಿ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಮ್ಮುಖದಲ್ಲಿ ಚಾಮರಾಜನಗರ ಜಿಲ್ಲೆಯ ಮಂಚಹಳ್ಳಿ ಗ್ರಾಮದ ವಿಕಲಚೇತನರಾದ ಎಂ.ಮಾದೇಶ್ ಹಾಗೂ ಹೆಗ್ಗಡ ಹಳ್ಳಿ ಗ್ರಾಮದ ಪುಟ್ಟ ಶಶಿಕಲಾ ವಿವಾಹವಾದರು. ವರ ಎಂ. ಮಾದೇಶ್ ಬಾಲ್ಯದಲ್ಲಿ ಕಾಲಿನ ಸ್ವಾಧೀನ ಕಳೆದುಕೊಂಡಿದ್ದರೆ, ನವ ವಧು ಪುಟ್ಟ ಶಶಿಕಲಾ ಹುಟ್ಟಿನಿಂದಲೇ ಮಾತು ಬಾರದವರಾಗಿ ದ್ದಾರೆ. ಈ ಇಬ್ಬರ ಮನೆಯವರ ಒಪ್ಪಿಗೆಯ ಮೇರೆಗೆ ಶರಣು ವಿಶ್ವ ವಚನ ಫೌಂಡೇಶನ್ ಸಂಸ್ಥೆ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಬಸವ ತತ್ವದಲ್ಲಿ ನಂಬಿಕೆ ಇಟ್ಟು ಇಬ್ಬರು ವಚನ ಮಾಂಗಲ್ಯದ ಮೂಲಕ ನವ ಜೀವನಕ್ಕೆ ಪಾದಾರ್ಪಣೆ ಮಾಡಿದರು. ವಿವಾಹದ ವೇಳೆ ಬಸವಣ್ಣನವರ ವಚನವನ್ನು ವಾಚಿಸುವ ಮೂಲಕ ವಧು-ವರರಿಗೆ ಶುಭ ಕೋರಲಾಯಿತು. ನವ ವಧು-ವರರ ಹೆತ್ತವರು ಮನಃಪೂರ್ತಿಯಾಗಿ ಈ ಮದುವೆಗೆ ಒಪ್ಪಿz್ದÉೀವೆ ಮತ್ತು ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ಮಾಡುತ್ತೇವೆ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಮನೇಶ್ವರನಗರದ ಶ್ರೀ ಬಸವಜ್ಞಾ ಮಂದಿರದ ಡಾ.ಮಾತೆ ಬಸವಾಂಜಲಿದೇವಿ, ವಿಶ್ವ ವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಸಾಕ್ಷಿಯಾದರು. ಮೈಸೂರಿನ ಸಾಹಿತಿ ಪುಟ್ಟಪ್ಪ, ಮೈಸೂರು ಆರ್ಟ್ ಗ್ಯಾಲರಿಯ ಶಿವಲಿಂಗಯ್ಯ, ಪಂಪಾಪತಿ, ಲಿಂಗಣ್ಣ ಗಿರೀಶ್, ಪೂರ್ಣಿಮ, ಪ್ರೇಮ, ಹುಡುಗನ ಮತ್ತು ಹುಡುಗಿಯ ಕುಟುಂಬ ಸ್ಥರನ್ನು ಸೇರಿದಂತೆ 300ಕ್ಕೂ ಹೆಚ್ಚು ಜನ ಉಪಸ್ಥಿತರಿದ್ದು, ಹರಸಿದರು.

Translate »