ಉಚಿತ, ಕಡ್ಡಾಯ ಶಿಕ್ಷಣ ಸಂಬಂಧ ಜಾಗೃತಿ ಜಾಥಾ
ಮೈಸೂರು

ಉಚಿತ, ಕಡ್ಡಾಯ ಶಿಕ್ಷಣ ಸಂಬಂಧ ಜಾಗೃತಿ ಜಾಥಾ

December 10, 2018

ಮೈಸೂರು:  ಉಚಿತ ಮತ್ತು ಕಡ್ಡಾಯ ಶಿಕ್ಷಣ ಕುರಿತು ಕಿರಿಯ ಪುಷ್ಪ ಕುಟುಂಬ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರು ಮೈಸೂರಿನ ಅಶೋಕಪುರಂನ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ, ಜಾಗೃತಿ ಮೂಡಿಸಿದರು.

ವಿದ್ಯಾರ್ಥಿಗಳು ‘ಕಲಿಕೆ ಎಂಬುದು ನಿತ್ಯ ನಿರಂತರ, ಶಿಕ್ಷಣ ಕೊಡಿಸಿ ಮಕ್ಕಳ ಬಾಳು ಬೆಳಗಿಸಿ, ಪ್ರತಿಭಾ ಕಾರಂಜಿ ಮಕ್ಕಳಿಗೆ ಅಪರಂಜಿ, ಉತ್ತಮ ಗ್ರಂಥಾಲಯ ಶಾಲೆಯ ಹೃದಯವಿದ್ದಂತೆ, ಮಾಡದಿರಿ ಬಾಲ ಕಾರ್ಮಿಕ, ಕೊಡಿಸಿ ಕಡ್ಡಾಯ ಶಿಕ್ಷಣ’ ಘೋಷಣಾ ಫಲಕಗಳನ್ನು ಹಿಡಿದು ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಿ ಎಂದು ತಿಳಿಸಿದರು.

ಇದಕ್ಕೂ ಮೊದಲು ಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಜಿ.ವಿ.ಪಿಂಟೋ ಮಾತನಾಡಿ, ಮಕ್ಕಳು ಖಾಲಿ ಸ್ಲೇಟ್ ಇದ್ದಂತೆ. ತಂದೆ-ತಾಯಂ ದಿರು ಅದರ ಮೇಲೆ ಬರೆಯುವುದೇ ಶಾಶ್ವತ ವಾಗಿ ಉಳಿಯುತ್ತದೆ. ಹಿಂದಿನ ಕಾಲದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಇರಲಿಲ್ಲ. ಆದರೆ, ಇಂದು ಕಡ್ಡಾಯ ಶಿಕ್ಷಣ ಜಾರಿಗೊಳಿಸಿ ಶಿಕ್ಷಣಕ್ಕೆ ಮಹತ್ವ ನೀಡಲಾಗುತ್ತಿದೆ.

ಶಿಕ್ಷಣ ಇಲ್ಲದಿದ್ದರೆ ಮಕ್ಕಳಿಗೆ ಜೀವನವೇ ಇಲ್ಲ. ಪೋಷಕರು ಮಕ್ಕಳ ಜೀವನವನ್ನು ರೂಪಿಸಬೇಕು. ಇತ್ತೀಚಿನ ದಿನಗಳಲ್ಲಿ ಶಿಕ್ಷಣವೂ ದುಬಾರಿಯಾಗಿದೆ. ಇದನ್ನು ಮನಗಂಡ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಗೆ ತಂದು, ಎಲ್ಲರಿಗೂ ಶಿಕ್ಷಣ ದೊರಕು ವಂತೆ ಮಾಡಲಾಗಿದೆ. ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ. ಇದರಿಂದ ಮಕ್ಕಳ ವಿಕಾಸ ಸಾಧ್ಯವಾಗು ತ್ತಿದೆ. ಹಾಗೆಯೇ ಸರ್ಕಾರ ಬಾಲ ಕಾರ್ಮಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಲಗಿ ಸಬೇಕು. ಆಗ ಮಾತ್ರ ಕಡ್ಡಾಯ ಶಿಕ್ಷಣ ಪೂರ್ಣ ಪ್ರಮಾಣದಲ್ಲಿ ಜಾರಿಯಾದಂತಾ ಗುತ್ತದೆ ಎಂದು ತಿಳಿಸಿದರು. ಕಿರಿಯ ಪುಷ್ಪ ಕುಟುಂಬ ಕಲ್ಯಾಣ ಕೇಂದ್ರದ ನಿರ್ದೇಶಕ ಫಾ.ಎಂ.ಮಾರ್ಟಿನ್, ಸದಸ್ಯೆ ಶೈಲ ಲಾರೆನ್ಸ್, ಅಲೆಗ್ಸಾಂಡರ್, ಸಂಯೋಜಕ ರಾದ ಅಂಜಲಿ, ಮೋನಿಕಾ, ಡ್ಯಾನಿಯಲ್ ಜಾನ್, ಮೀನಾಕ್ಷಿ ಭಾಗವಹಿಸಿದ್ದರು.

Translate »