ಮೈಸೂರಲ್ಲಿ ಸಾವಯವ, ನೈಸರ್ಗಿಕ ಕೃಷಿಕರ ಸಂತೆ
ಮೈಸೂರು

ಮೈಸೂರಲ್ಲಿ ಸಾವಯವ, ನೈಸರ್ಗಿಕ ಕೃಷಿಕರ ಸಂತೆ

December 10, 2018

ಮೈಸೂರು: ಸಾವಯವ ಬೇಸಾಯ ಪದ್ಧತಿಯಲ್ಲಿ ಬೆಳೆದ ತರಕಾರಿ, ಸೊಪ್ಪು, ಹಣ್ಣು ಹಾಗೂ ಸಿರಿಧಾನ್ಯಗಳಿಂದ ತಯಾರಿಸಿದ ತಿಂಡಿ-ತಿನಿಸು ಮತ್ತು ಗಿಡಮೂಲಿಕೆಗಳ ಪಾನೀಯಗಳನ್ನು ಸ್ವತಃ ರೈತರು ಹಾಗೂ ಉತ್ಪಾದಕರೇ ಮಾರಾಟ ಮಾಡಿದರು. ಇದಕ್ಕೆ ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮೈಸೂರು ಜೆಪಿ ನಗರದ ಪುಟ್ಟರಾಜ ಗವಾಯಿ ಕ್ರೀಡಾಂ ಗಣದಲ್ಲಿ ಭಾನುವಾರ ಸ್ವದೇಶಿ ಜಾಗರಣ ಮಂಚ್-ಮೈಸೂರು ಹಾಗೂ ಜನಚೇತನ ಟ್ರಸ್ಟ್ ಜಂಟಿ ಆಶ್ರಯ ದಲ್ಲಿ ಆಯೋಜಿಸಿದ್ದ ಸಾವಯವ ಹಾಗೂ ನೈಸರ್ಗಿಕ ಕೃಷಿಕರ ಸಂತೆಯಲ್ಲಿ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ ರೈತರು ಸಾವಯವ ಪದ್ಧತಿ ಯಲ್ಲಿ ಬೆಳೆದ ತರಕಾರಿ-ಹಣ್ಣು ಮಾರಾಟ ಮಾಡಿದರೆ, ಮೈಸೂರಿನ ಸುತ್ತಮುತ್ತಲ ಸ್ಥಳೀಯರು ರಸಾಯನಿಕ ಮುಕ್ತವಾದ ಪಾನೀಯ, ತಿಂಡಿ-ತಿನಿಸು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಿದರು.

ಬೆಳಿಗ್ಗೆ 8ರಿಂದಲೇ ಸಂತೆ ಆರಂಭಗೊಂಡಿದ್ದ ಹಿನ್ನೆಲೆ ಯಲ್ಲಿ ಕ್ರೀಡಾಂಗಣಕ್ಕೆ ವಾಯುವಿಹಾರಕ್ಕೆ ಬಂದಿ ಸ್ಥಳೀಯ ನಿವಾಸಿಗಳು ರೈತರು ತಂದಿದ್ದ ವಿವಿಧ ತರ ಕಾರಿ ಹಾಗೂ ನಾನಾ ಬಗೆಯ ಸೊಪ್ಪನ್ನು ಮುಗಿಬಿದ್ದು ಖರೀದಿಸಿದರು. ಬದನೆಕಾಯಿ, ತೊಗರಿಕಾಯಿ, ಬೆಂಡೆ ಕಾಯಿ, ಬಾಳೆದಿಂಡು ಸೇರಿದಂತೆ ವಿವಿಧ ಬಗೆಯ ತರಕಾರಿಗಳು ಹಾಗೂ ವಿವಿಧ ರೀತಿ ಸೊಪ್ಪನ್ನು ಬೆಳೆ ದಿರುವ ರೈತರೇ ಮಾರಾಟ ಮಾಡಿದರು.

ಜೊತೆಗೆ ಸಾವಯವ ಪದ್ಧತಿಯಲ್ಲಿ ಬೆಳೆದ ಪದಾರ್ಥ ಗಳಿಂದ ಸ್ಥಳೀಯರೇ ಉತ್ಪಾದಿಸಿದ ಅಡುಗೆ ಎಣ್ಣೆ, ತೆಂಗಿನ ಕಾಯಿ ಎಣ್ಣೆ ಸೇರಿದಂತೆ ಹಲವು ಉತ್ಪನ್ನಗಳ ಮಾರಾ ಟವೂ ಜೋರಾಗಿತ್ತು. ಅಲ್ಲದೆ, ವಿವಿಧ ಗಿಡಮೂಲಿಕೆಗಳಿಂದ ನಾನಾ ಬಗೆಯಲ್ಲಿ ಸ್ಥಳೀಯರೇ ತಯಾರಿಸಿದ ಪಾನೀಯಗಳ ತ್ತಲೂ ಗ್ರಾಹಕರು ಆಕರ್ಷಿತರಾದರು. 14 ಮಂದಿ ರೈತರು ತಾವು ಬೆಳೆದ ತರಕಾರಿ-ಹಣ್ಣು ಹಂಪಲು ಮಾರಾಟ ಮಾಡಿದರೆ, ನಾಲ್ವರು ಸ್ಥಳೀಯರು ರಸಾಯನಿಕ ಮುಕ್ತವಾದ ಸಾಬೂನು, ತಪ್ಪು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಿದರು. ಪಾಂಡವಪುರದ ರೈತ ಲೋಕೇಶ್, ವಿವಿಧ ತರಕಾರಿ, ಬೆಲ್ಲ, ಹಣಬೆ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಮಾರಾಟ ಮಾಡಿದರು. ಲೋಕೇಶ್ ತಾವು ಬೆಳೆದ ತರಕಾರಿ ಮಾತ್ರವಲ್ಲದೆ, ತಮ್ಮ ಬಯಲು ಸೀಮೆ ಬೆಳೆಗಾರರ ಸಂಘದ ಸದಸ್ಯರಾದ ರೈತರು ಬೆಳೆದಿ ರುವ ತರಕಾರಿಯನ್ನೂ ತಂದು ಮಾರಾಟ ಮಾಡಿದರು.

ನಾಟಿ ಕೋಳಿ ಮೊಟ್ಟೆ (ಒಂದಕ್ಕೆ 12 ರೂ.), ಚಿಕ್ಕಚ್ಚು ಬೆಲ್ಲ (ಕೆಜಿಗೆ 80 ರೂ.), ಎಳ್ಳು-ಕಡಲೆ ಸೇರಿದಂತೆ ವಿವಿಧ ಪದಾರ್ಥಗಳ ಮಿಶ್ರಣದಿಂದ ತಯಾರಿಸಿದ ಮಿಟಾಯಿ (ಒಂದು ಮಿಠಾಯಿ ಕಾಲು ಕೆಜಿ ಬರುತ್ತದೆ, ಒಂದಕ್ಕೆ 30 ರೂ.), ಬೆಲ್ಲದ ಪುಡಿ (ಒಂದು ಕೆಜಿ ಪೊಟ್ಟಣಕ್ಕೆ 100 ರೂ.), ವಿವಿಧ ಬಗೆಯ ಸೊಪ್ಪು (ಕಂತೆಗೆ 10 ರೂ.) ಸೇರಿದಂತೆ ವಿವಿಧ ತರಕಾರಿ ಗಳನ್ನು ಲೋಕೇಶ್ ಮಾರಾಟ ಮಾಡಿದರು.

ಪಾನೀಯಕ್ಕೆ ಬೇಡಿಕೆ: ವಿವಿಧ ಗಿಡಮೂಲಿಕೆಗಳಿಂದ ತಯಾರು ಮಾಡಿದ ನಾನಾ ರೀತಿಯ ಪಾನೀಯ ಗಳನ್ನು ಇಬ್ಬರು ಸ್ಥಳೀಯರು ಮಾರಾಟ ಮಾಡಿದರು. ಸ್ವತಃ ಇವರೇ ತಯಾರು ಮಾಡಿದ ಪಾನೀಯ ಇದಾ ಗಿದ್ದವು. ತರಕಾರಿ ಸೂಪು, ಸಿರಿಧಾನ್ಯ ಮಾಲ್ಟ್, ಗ್ರೀನ್ ಟೀ ಸೇರಿದಂತೆ ವಿವಿಧ ರೀತಿಯ ಪಾನೀಯದತ್ತ ಜನತೆ ಆಕರ್ಷಿತರಾದರು. ಮೈಸೂರು ಜೆಪಿ ನಗರ ಎ.ಕೆ.ಪಾಟೀಲ್ ಮತ್ತು ದೀಪಾ ಪಾಟೀಲ್ ದಂಪತಿ ತಾವೇ ತಯಾರಿಸುವ ಗಿಡಮೂಲಿಕೆ ಪಾನೀಯವನ್ನು ಲೋಟವೊಂದಕ್ಕೆ 10 ರೂ.ನಂತೆ ಮಾರಾಟ ಮಾಡಿ ದರೆ, ಎಸ್‍ಎಸ್‍ವಿ ನ್ಯಾಚ್ಯೂರಲ್ ಜ್ಯೂಸಸ್ ಅಂಡ್ ಹರ್ಬಲ್ ಪ್ರಾಡೆಕ್ಟ್ ಎಂಬ ಸ್ಥಳೀಯ ಉತ್ಪಾದಕರ ಮಳಿಗೆಯಲ್ಲಿ ಮಳಿಗೆದಾರ ಅಪ್ಪಾಸ್ವಾಮಿ, ಗರಿಕೆ ಜ್ಯೂಸ್, ಬ್ರಾಹ್ಮೀ ಜ್ಯೂಸ್ ಸೇರಿದಂತೆ ನಾನಾ ಜ್ಯೂಸ್‍ಗಳನ್ನು ಚಿಕ್ಕ ಲೋಟದಲ್ಲಿ 10 ರೂ. ಹಾಗೂ ದೊಡ್ಡ ಲೋಟ ದಲ್ಲಿ 20 ರೂ. ನಂತೆ ಮಾರಾಟ ಮಾಡಿದರು.

ಸಾಂಪ್ರದಾಯಿಕ ವಿಧಾನವಾದ ಗಾಣದಿಂದ ಉತ್ಪಾದಿ ಸಿದ ಅಡುಗೆ ಎಣ್ಣೆಯನ್ನು ಶ್ಯಾದನಹಳ್ಳಿಯ ಆನಂದ ಮಾರಾಟ ಮಾಡಿದರು. ಶ್ರೀಶ್ರೀತತ್ವ ಕಂಪನಿಯ ರಸಾಯ ನಿಕ ಮುಕ್ತವಾಗಿ ಹೊರ ತಂದಿರುವ ಪದಾರ್ಥಗಳಾದ ಗೋಧಿಹಿಟ್ಟು, ಜೇನುತುಪ್ಪ, ವಿವಿಧ ರೀತಿಯ ಕುಕೀಸ್, ಸಾಬೂನು, ಶಾಂಪು ಮಾರಾಟಗೊಂಡವು. ಬೆಳಿಗ್ಗೆ 8ರಿಂದ ಬೆಳಿಗ್ಗೆ 11ರವರೆಗೆ ಸಂತೆ ನಡೆಯಿತು. ಸ್ವದೇಶಿ ಜಾಗರಣ ಮಂಚ್ ರಾಜ್ಯ ಸಂಯೋಜಕ ಎನ್.ಆರ್. ಮಂಜುನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »