ಶಾಸಕ ರಾಮದಾಸ್‍ರಿಂದ ಜಯನಗರದಲ್ಲಿ ಸ್ವಚ್ಛತಾ ಕಾರ್ಯ
ಮೈಸೂರು

ಶಾಸಕ ರಾಮದಾಸ್‍ರಿಂದ ಜಯನಗರದಲ್ಲಿ ಸ್ವಚ್ಛತಾ ಕಾರ್ಯ

December 10, 2018

ಮೈಸೂರು:  `ಸ್ವಚ್ಛ ಭಾನುವಾರ-ಹಸಿರು ಭಾನುವಾರ’ ಘೋಷಣೆ ವಾಕ್ಯದೊಂದಿಗೆ ಪ್ರತಿ ಭಾನುವಾರ ಸ್ವಚ್ಛತಾ ಅಭಿಯಾನ ಕೈಗೊಂಡಿರುವ ಶಾಸಕ ಎಸ್.ಎ.ರಾಮದಾಸ್ ಮೈಸೂರಿನ 48ನೇ ವಾರ್ಡ್ ವ್ಯಾಪ್ತಿಯ ಜಯನಗರದ ಇಸ್ಕಾನ್ ದೇವಸ್ಥಾನದ ಎದುರಿನ ಸಮುದಾಯ ಭವನ ಹಾಗೂ ಚಿನ್ನಗಿರಿಕೊಪ್ಪಲಿನ ಸುತ್ತ ಮುತ್ತ ಸ್ವಚ್ಛತಾ ಕಾರ್ಯ ನಡೆಸಿದರು.
ಪೌರಕಾರ್ಮಿಕರು, ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಒಟ್ಟುಗೂಡಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಸ್ವಚ್ಛತೆಯ ಬಗ್ಗೆ ಆಯಾ ಪ್ರದೇಶದ ಜನ ರಲ್ಲಿ ಜಾಗೃತಿ ಮೂಡಿಸುವುದು ಈ ಅಭಿ ಯಾನದ ಉದ್ದೇಶವಾಗಿದೆ ಎಂದು ಈ ಸಂದರ್ಭದಲ್ಲಿ ಶಾಸಕರು ತಿಳಿಸಿದರು.

ಜಯನಗರದ 16, 17 ಮತ್ತು 18ನೇ ಕ್ರಾಸ್ ನಲ್ಲಿ ಒತ್ತುವರಿಯಾಗಿರುವ ಮುಡಾ ಆಸ್ತಿ ಯನ್ನು ತೆರವುಗೊಳಿಸಿ, ವಶಕ್ಕೆ ತೆಗೆದು ಕೊಂಡು ಅಲ್ಲಿ ಗ್ರಂಥಾಲಯ ಮತ್ತು ಯೋಗ ಕೇಂದ್ರ ನಿರ್ಮಿಸಲು ಮುಡಾ ಅಯುಕ್ತರಿಗೆ ತಿಳಿಸಲಾಗಿದೆ ಎಂದರು.
ಜಯನಗರದ ಅಂಗನವಾಡಿ ಕೇಂದ್ರ ದಲ್ಲಿ ಮಹಿಳೆಯರಿಗೆ ಕೊಡುವ ಯೋಜನೆ ಗಳು ಸರಿಯಾದ ರೀತಿಯಲ್ಲಿ ದೊರಕದೇ ಕೆಲವೇ ಪ್ರದೇಶದ ಜನಗಳಿಗೆ ಮಾತ್ರ ದೊರೆ ಯುತ್ತಿರುವ ಬಗ್ಗೆ ದೂರುಗಳಿವೆ. ಹೀಗಾಗಿ ವಾರ್ಡ್‍ನ ಎಲ್ಲಾ ಪ್ರದೇಶಗಳನ್ನು ಅಂಗನ ವಾಡಿ ಕೇಂದ್ರ ವ್ಯಾಪ್ತಿಗೆ ತರಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಿಳಿಸ ಲಾಗುವುದು. ಅಂಗನವಾಡಿ ಕೇಂದ್ರವನ್ನು ಆಟದ ಮೈದಾನ, ಶೌಚಾಲಯ ಹಾಗೂ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒಳ ಗೊಂಡಿರುವ ಕಟ್ಟಡ ಖಾಲಿ ಇರುವುದ ರಿಂದ ಸರ್ಕಾರಿ ಶಾಲೆಯ ಕಟ್ಟಡಕ್ಕೆ ಅಂಗನ ವಾಡಿ ಕೇಂದ್ರವನ್ನು ವರ್ಗಾಯಿಸಲು ಕ್ರಮ ವಹಿಸುವುದಾಗಿ ತಿಳಿಸಿದರು. ಕಾರ್ಯಕ್ರಮ ದಲ್ಲಿ ನಗರಪಾಲಿಕೆ ಸದಸ್ಯೆ ಶೋಭಾ, ಬಿಜೆಪಿ ಮುಖಂಡರಾದ ಗೌರಿ, ಗಿರೀಶ್, ಸೋಮಣ್ಣ, ಕುಮಾರ್, ಮಹದೇವ್, ರಾಮಪ್ರಸಾದ್, ಸುಜಾತ ರಾಮಪ್ರಸಾದ್, ನಾಗರಾಜ್, ಪ್ರದೀಪ್, ಚಿನ್ಮಯಿ, ಪ್ರಸಾದ್, ಉಮೇಶ್, ಲೋಕೇಶ್, ಮಹೇಶ್, ಚಾವನ ಶೆಟ್ಟಿ, ಸಂತೋಷ್, ಪೃಥ್ವಿ, ಆರೋಗ್ಯ ಪರಿವೀಕ್ಷಕ ರಾದ ಪ್ರೀತಿ, ಪರಿಸರ ಅಭಿಯಂತರರಾದ ಸ್ಪೂರ್ತಿ ಇನ್ನಿತರರು ಭಾಗವಹಿಸಿದ್ದರು.

Translate »