ಜನರಲ್ಲಿ ಭಯವುಂಟು ಮಾಡುವ `ವಾಹಿನಿ’ಗಳು
ಮೈಸೂರು

ಜನರಲ್ಲಿ ಭಯವುಂಟು ಮಾಡುವ `ವಾಹಿನಿ’ಗಳು

December 10, 2018

ಮೈಸೂರು: ದೃಶ್ಯ ಮಾಧ್ಯಮಗಳು ಬೇಡವಾದ ವಿಚಾರ ಗಳನ್ನು ಪ್ರಸಾರ ಮಾಡಿ ಜನರಲ್ಲಿ ಭಯ ಉಂಟು ಮಾಡುತ್ತಿವೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಜಿಲ್ಲಾ ಗ್ರಾಮಾಂ ತರ ಘಟಕ ಅಧ್ಯಕ್ಷ ಎಂ.ಶಿವಣ್ಣ ಬೇಸರ ವ್ಯಕ್ತಪಡಿಸಿದರು. ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ ಭಾನುವಾರ ಆಯೋ ಜಿಸಿದ್ದ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾ ಚರಣೆ, ಪ್ರತಿಷ್ಠಾನದ ಸಂಸ್ಥಾಪಕ ಎಂ.ಬಿ. ಸಂತೋಷ್ ಅವರ ಕೃತಿಗಳ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ಪ್ರಳಯವಾಗು ತ್ತದೆ, ಪರ್ವತಗಳು ಉರುಳುತ್ತವೆ ಎಂದು ದೃಶ್ಯ ಮಾಧ್ಯಮಗಳು ನಿರಂತರ ಪ್ರಸಾರ ಮಾಡಿ ಜನರಲ್ಲಿ ಭಯ ಉಂಟು ಮಾಡು ತ್ತಿವೆ. ಆದರೆ ಪ್ರಳಯ ಆಗಲಿಲ್ಲ. ಆಕಾಶ ವಾಣಿ ಸುದ್ದಿಯನ್ನಷ್ಟೇ ಪ್ರಸಾರ ಮಾಡಿದರೆ, ದೃಶ್ಯ ಮಾಧ್ಯಮಗಳು ತಾವೇ ಸುದ್ದಿ ಹುಟ್ಟಿಸಿ ಕೊಂಡು ಹೇಳುತ್ತವೆ ಎಂದು ಕಿಡಿಕಾರಿದರು.
ಯಾವುದೋ ವಿಚಾರಕ್ಕೆ ಸಂಬಂಧಿಸಿ ದಂತೆ ಮಾಧ್ಯಮವೊಂದು ಧರ್ಮಾಧಿ ಕಾರಿಯೊಬ್ಬರನ್ನು 10 ಕೋಟಿ ರೂ. ನೀಡು ವಂತೆ ಕೇಳಿದ್ದನ್ನು ಅವರೇ (ಧರ್ಮಾಧಿಕಾರಿ) ನನಗೆ ತಿಳಿಸಿದ್ದರು. ಅವರು ಹಣ ನೀಡುವು ದಿಲ್ಲವೆಂದ ಮೇಲೆ ಆ ಮಾಧ್ಯಮ ದವರು ಸುಮ್ಮನಾದರು ಎಂದರು.

ಪ್ರಶಸ್ತಿಗಳ `ಬೆಲೆ’: ಇಂದು ಪ್ರಶಸ್ತಿಗಳಿ ಗಾಗಿ ಲಾಬಿ ನಡೆಯುತ್ತಿದ್ದು, ಅರ್ಹತೆ ಇಲ್ಲ ದಿದ್ದರೂ ಹಣ ನೀಡಿ ಪ್ರಶಸ್ತಿ ಪಡೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಹಿಂದೆ ಕೆಂಪೇ ಗೌಡರ ಜಯಂತಿಯಲ್ಲಿ ಭಾಗವಹಿಸಿದ್ದ ವೇಳೆ 150 ಮಂದಿಗೆ ಪ್ರಶಸ್ತಿ ನೀಡಲು ನಿರ್ಧ ರಿಸಲಾಗಿತ್ತು. ಆದರೆ ಕಾರ್ಯಕ್ರಮ ಮುಗಿ ಯುವ ವೇಳೆಗೆ 500 ಮಂದಿಗೆ ಪ್ರಶಸ್ತಿ ನೀಡ ಲಾಗಿತ್ತು. ಪ್ರಶಸ್ತಿಗಳಿಗೆ ಬೆಲೆಯೇ ಇಲ್ಲವಾ ಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಎಂ.ಬಿ. ಸಂತೋಷ್ ಅವರ ‘ಮನೋಲ್ಲಾಸ’ (ಕವನ ಸಂಕಲನ), ‘ಜೀವನ ಜೋಕಾಲಿ’ (ಸಣ್ಣ ಕಥೆಗಳು) ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ನಂತರ ಪ್ರತಿಭಾ ನ್ವಿತ ಮಕ್ಕಳಿಗೆ ಬಾಲಶ್ರೀ, ಯುವಶ್ರೀ ಪ್ರಶಸ್ತಿ ನೀಡಲಾಯಿತು. ಬಲ್ಲೇನಹಳ್ಳಿ ಶಂಕರ್ ಅವರಿಗೆ `ಸಾಹಿತ್ಯ ಸಿಂಧು ಪ್ರಶಸ್ತಿ’, ಜೆ.ವಿಜಯ ಲಕ್ಷಿ, ಪ್ರೇಮಾ ಮಂಜುನಾಥ್, ಜಿ.ಸುಧಾ ಕರ್, ಶ್ರೀಕಾಂತ್ ಪೂಜಾರಿ ಬಿರಾವು ಅವ ರಿಗೆ `ಸಾಧನಶ್ರೀ ಪ್ರಶಸ್ತಿ’ ಪ್ರದಾನ ಮಾಡ ಲಾಯಿತು. ಡಾ.ಎಂ.ಜಿ.ಆರ್.ಅರಸ್, ಡಾ.ಸಿ.ತೇಜೋವತಿ, ಡಾ.ಅನುಸೂಯಾ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಂ.ಎನ್. ಜಯಂತಿ ಮತ್ತಿತರರು ಉಪಸ್ಥಿತರಿದ್ದರು.

Translate »