ಮೈಸೂರು: ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ಹಿನ್ನೆಲೆ ಯಲ್ಲಿ ಸ್ಥಗಿತಗೊಂಡಿದ್ದ ಸಾರಿಗೆ ಬಸ್ ಸಂಚಾರ ಮಧ್ಯಾಹ್ನ 3.30ರ ನಂತರ ಆರಂಭವಾಯಿತು. ಬಂದ್ ಬಿಸಿ ಕಡಿಮೆ ಯಾಗುತ್ತಿದ್ದಂತೆಯೇ ಕೆಎಸ್‍ಆರ್‍ಟಿಸಿ ನಗರ ಹಾಗೂ ಗ್ರಾಮಾಂತರ ವಿಭಾಗ ಗಳ ಬಸ್ಸುಗಳು ಕಾರ್ಯಾರಂಭ ಮಾಡಿದ್ದು, ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ ದಿಂದ ಬಸ್‍ಗಳು ನಾನಾ ತಾಲೂಕು ಹಾಗೂ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಿ ದವು. ಬೆಳಿಗ್ಗೆಯಿಂದ ಬಸ್ ಇಲ್ಲದೇ ಕಾಯುತ್ತಿದ್ದ ಪ್ರಯಾಣಿಕರು ಮಧ್ಯಾಹ್ನದ ನಂತರ ತಮ್ಮ ಸ್ಥಳಗಳಿಗೆ ತೆರಳಿದರು. ನಗರ ಸಾರಿಗೆ ಬಸ್ಸುಗಳೂ…
ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕಮೀಷ್ನರ್ ಡಾ.ಎ.ಎಸ್.ರಾವ್
September 10, 2018ಮೈಸೂರು: ತೈಲ ಬೆಲೆ ಏರಿಕೆ ಹಿನ್ನೆಲೆ ನಾಳೆ(ಸೆ.10) ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಕರೆ ನೀಡಿರುವ ಭಾರತ್ ಬಂದ್‍ಗೆ ಮೈಸೂರು ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವವರ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ಮೈಸೂರು ನಗರ ಮತ್ತು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಯಾವುದೇ ಸಂಘಟನೆಗಳು ಭಾರತ್ ಬಂದ್ ನೆಪದಲ್ಲಿ ಗಲಾಟೆ, ಸಾರ್ವಜನಿಕ…
ರಾಸಾಯನಿಕ ರಹಿತ ಗಣೇಶ ಮೂರ್ತಿ ತಯಾರಕ ಕಲಾವಿದರಿಗೆ ಸನ್ಮಾನ
September 10, 2018ಮೈಸೂರು: ರಾಸಾಯನಿಕ ರಹಿತ ಗಣೇಶ ಮೂರ್ತಿಗಳನ್ನು ತಯಾರಿಸಲು ಒತ್ತು ನೀಡುತ್ತಿರುವ ಹಲವು ಕಲಾವಿದರರನ್ನು ಮೈಸೂರಿನ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈಸೂರಿನ ಕುಂಬಾರಗೇರಿಯ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು. ಇಂದಿನ ಯಾಂತ್ರಿಕ ಯುಗದಲ್ಲಿ ಕೈಯಿಂದ ಮೂರ್ತಿ ತಯಾರಿಸುವ ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಕಲಾವಿದರ ಪ್ರೋತ್ಸಾಹಕ್ಕೆ ಸರ್ಕಾರ ಯಾವುದೇ ಯೋಜನೆ ರೂಪಿಸಿಲ್ಲ. ಹೀಗಾಗಿ ನಮ್ಮ ಸಂಸ್ಥೆ ಗಣೇಶ ಮೂರ್ತಿ ತಯಾರಕ ಕಲಾವಿದರಾದ ರೇವಣ್ಣ, ಸುಬ್ಬಮ್ಮ, ನಿಂಗಮ್ಮ, ಸಿದ್ದಪ್ಪ, ಸಾಕಮ್ಮ ಅವರನ್ನು sಆತ್ಮೀಯವಾಗಿ ಸನ್ಮಾನಿಸಲಾಯಿತು. ಸಂಸದರ ಪತ್ನಿ ಅರ್ಪಿತಾ ಪ್ರತಾಪ್‍ಸಿಂಹ,…
ಮೈಸೂರು ವಿವಿ ಮಹಿಳಾ ಪೌರ ಕಾರ್ಮಿಕ ಅನಿರ್ಧಿಷ್ಟಾವಧಿ ಧರಣಿ ಮುಂದುವರಿಕೆ
September 9, 2018ಮೈಸೂರು ನಗರ ಪಾಲಿಕೆ ಪೌರ ಕಾರ್ಮಿಕರ ಬೆಂಬಲ ಮೈಸೂರು: ಕನಿಷ್ಠ ಕೂಲಿ, ಇಎಸ್‍ಐ, ಪಿಎಫ್ ಸೌಲಭ್ಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಐದು ದಿನಗಳಿಂದ ಮೈಸೂರು ವಿಶ್ವವಿದ್ಯಾನಿಲಯದ ಮಹಿಳಾ ಪೌರಕಾರ್ಮಿಕರು ನಡೆಸುತ್ತಿರುವ ಧರಣಿಯಲ್ಲಿ ಶನಿವಾರ ಮೈಸೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಮುಖಂಡರು ಪಾಲ್ಗೊಂಡು ಬೆಂಬಲ ಸೂಚಿಸಿದರಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮುಖ್ಯ ದ್ವಾರದ ಬಳಿ ಅಹೋರಾತ್ರಿ ಧರಣಿ ಮುಂದುವರೆಸಿದ್ದ ವಿವಿಯ ಪೌರಕಾರ್ಮಿಕರು ವಿವಿಧ ಆಡಳಿತ ಮಂಡಳಿಯ ವಿರುದ್ದ…
ದೇಶದ ಕಾನೂನು ಗೌರವಿಸಿ, ಸ್ಥಳೀಯರೊಂದಿಗೆ ಸೌಹಾರ್ದತೆಯಿಂದಿರಿ
September 9, 2018ಮೈಸೂರು: ಮೈಸೂ ರಿನ ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು ನಮ್ಮ ಕಾನೂನನ್ನು ಗೌರವಿಸುವುದರೊಂದಿಗೆ ಸ್ಥಳೀಯರೊಂದಿಗೆ ಸೌಹಾರ್ದಯುತ ವಾಗಿ ನಡೆದುಕೊಳ್ಳುವಂತೆ ಎಸಿಬಿ ಎಸ್ಪಿ ಡಾ.ಹೆಚ್.ಟಿ.ಶೇಖರ್ ಸಲಹೆ ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಶನಿವಾರ ಮೈಸೂರು ವಿವಿಯ ಅಂತರರಾಷ್ಟ್ರೀಯ ಕೇಂದ್ರವು ಆಯೋಜಿ ಸಿದ್ದ ವಿದೇಶಿ ವಿದ್ಯಾರ್ಥಿಗಳ ಒಂದು ದಿನದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ವಿದೇಶಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಭಾರತ, ಅದರಲ್ಲಿಯೂ ಕರ್ನಾಟಕದ ಮೈಸೂರು ಜಿಲ್ಲೆ ಸುರಕ್ಷಿತವಾಗಿದೆ. ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ…
ಮೈಸೂರು ವಿವಿ ಮಹಿಳಾ ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಆಗ್ರಹ
September 9, 2018ಮೈಸೂರು: ಕನಿಷ್ಠ ಕೂಲಿ ಮತ್ತಿತರ ಬೇಡಿಕೆ ಈಡೇರಿಸುವಂತೆ ಮೈಸೂರು ವಿವಿ ಮಹಿಳಾ ಪೌರಕಾರ್ಮಿಕರ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಐದನೇ ದಿನಕ್ಕೆ ಕಾಲಿರಿಸಿದ್ದರೂ ವಿವಿಯ ಆಡಳಿತ ಮಂಡಳಿ ಹಾಗೂ ಉನ್ನತ ಶಿಕ್ಷಣ ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷರೂ ಆದ ಮಾಜಿ ಮೇಯರ್ ನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯರೇ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಈ ಪ್ರತಿಭಟನೆಯನ್ನು…
ಮೈಸೂರಲ್ಲಿ ಮಾವುತರು, ಕಾವಾಡಿಗಳಿಗೆ ಕಾರ್ಯಾಗಾರ
September 8, 2018ಮೈಸೂರು: ಸಾಕಾನೆ ಗಳ ಮಾವುತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಸಾಮರಸ್ಯ ಮೂಡಿಸುವ ಸಲುವಾಗಿ ಮೈಸೂರಿನಲ್ಲಿ ನಡೆದ ಎರಡು ದಿನಗಳ ಮಾವುತರ ತರಬೇತಿ ಕಾರ್ಯಾ ಗಾರದಲ್ಲಿ ರಾಜ್ಯದ ವಿವಿಧ ಆನೆ ಶಿಬಿರಗಳ 40ಕ್ಕೂ ಅಧಿಕ ಮಾವುತರು ಪಾಲ್ಗೊಂಡು, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂ ದಿಗೆ ಮುಖಾಮುಖಿಯಾಗಿ ಸಮಸ್ಯೆಗಳ ತೋಡಿಕೊಂಡಿದ್ದಾರೆ. ಮೈಸೂರಿನ ಕೆಎಸ್‍ಟಿಡಿಸಿ ಹೊಟೇಲ್ ಸಭಾಂಗಣದಲ್ಲಿ ಏಷ್ಯನ್ ಎಲಿಫೆಂಟ್ ಸಪೋರ್ಟ್ ಸಂಸ್ಥೆ, ಕರ್ನಾಟಕದ ಅರಣ್ಯ ಇಲಾಖೆ ಹಾಗೂ ಡಿ ಪಾಲ್ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಮೈಸೂರಿ…
ವಸತಿ ಗೃಹ ಖಾಲಿ ಮಾಡಿಸಲು ಮಾಜಿ ಪೊಲೀಸನ ಬೆನ್ನತ್ತಿದ ಪೊಲೀಸರು
September 8, 2018ಮೈಸೂರು: ಅಧಿಕೃತ ವಸತಿ ಗೃಹದಿಂದ ಮಾಜಿ ಪೊಲೀಸ್ ಕಾನ್ಸ್ ಟೇಬಲ್‍ನನ್ನು ತೆರವುಗೊಳಿಸಲು ಪೊಲೀಸರು ಆತನ ಬೆನ್ನತ್ತಿದ್ದಾರೆ. ಸಶಸ್ತ್ರ ಮೀಸಲು ಪಡೆ ಪೊಲೀಸ್ ಕಾನ್ಸ್ ಟೇಬಲ್ (ಎಪಿಸಿ) ಪ್ರಸನ್ನ ಕುಮಾರ್ ಪೊಲೀಸ್ ಇಲಾಖೆಯ ಅಧಿಕೃತ ವಸತಿ ಗೃಹ ಖಾಲಿ ಮಾಡದೇ ಸತಾಯಿಸುತ್ತಿರುವವರು. ಕರ್ತವ್ಯ ಲೋಪದ ಮೇಲೆ ಪ್ರಸನ್ನ ಕುಮಾರ್ನನ್ನು 2015ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಆದರೆ ಅವರು ತಮಗೆ ಮಂಜೂರಾಗಿದ್ದ ಮೈಸೂರಿನ ಹೂಟಗಳ್ಳಿಯ ಸರ್ಕಾರಿ ವಸತಿ ಸಮುಚ್ಛಯದ ಮನೆಯನ್ನು ಇದುವರೆಗೂ ತೆರವುಗೊಳಿಸಿಲ್ಲ. ಮನೆ ಖಾಲಿ ಮಾಡುವಂತೆ ತಿಳಿಸಲಾಗಿತ್ತಲ್ಲದೆ, 2017ರ ಏಪ್ರಿಲ್…
ಕೊಡಗು, ಕೇರಳ ಸಂತ್ರಸ್ತರಿಗೆ ಎಐಟಿಯುಸಿ ಸಂಘಟನೆಯಿಂದ 2.74 ಲಕ್ಷ ರೂ. ದೇಣಿಗೆ
September 8, 2018ಮೈಸೂರು: ಪ್ರಕೃತಿ ವಿಕೋಪ, ಜಲ ಪ್ರಳಯದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಕೊಡಗು ಜಿಲ್ಲೆ ಹಾಗೂ ನೆರೆಯ ಕೇರಳದ ಸಂತ್ರ ಸ್ತರಿಗೆ ಅಖಿಲ ಭಾರತ ಟ್ರೇಡ್ ಯೂನಿ ಯನ್ ಕಾಂಗ್ರೆಸ್ (ಎಐಟಿಯುಸಿ) ಜಿಲ್ಲಾ ಘಟಕವು ನೆರವು ನೀಡಿದೆ. ಎಐಟಿಯುಸಿ ಮೈಸೂರು ಜಿಲ್ಲಾಧ್ಯಕ್ಷ ರಾಜು ಮತ್ತು ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ ಅವರು ಶುಕ್ರವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರಿಗೆ ನೆರವಿನ ಚೆಕ್ ನೀಡಿದರು. ನಮ್ಮ ಸಂಘಟನೆಗೆ ಕಾರ್ಯಕರ್ತರು ಸ್ಪಂದಿಸಿದ್ದು, ಮೈಸೂರು ಜಿಲ್ಲೆಯ ಕಾರ್ಮಿಕ…
ಮೈಸೂರು ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ
September 8, 2018ಮೈಸೂರು: ಮೈಸೂರು ಮಹಾನಗರಪಾಲಿಕೆ ಮೇಯರ್ ಸ್ಥಾನವನ್ನು ಈ ಬಾರಿ ಪರಿಶಿಷ್ಟ ಪಂಗಡಕ್ಕೆ ನೀಡಬೇಕು ಎಂದು ಆಗ್ರಹಿಸಿ ಮೈಸೂರು ಜಿಲ್ಲಾ ನಾಯಕ ಯುವಕರ ಸಂಘದ ಕಾರ್ಯಕರ್ತರು ಶುಕ್ರವಾರ ಮೈಸೂರು ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದರು. ಮೈಸೂರು ಮಹಾನಗರಪಾಲಿಕೆ ಅಸ್ತಿತ್ವಕ್ಕೆ ಬಂದಾಗಿನಿಂದ ಇದುವರೆಗೂ ನಾಯಕ ಜನಾಂಗದ ಯಾರೊಬ್ಬರಿಗೂ ಮೇಯರ್ ಸ್ಥಾನ ದೊರೆತಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ 50 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ನಾಯಕ ಸಮುದಾಯಕ್ಕೆ ಇದರಿಂದ ಅನ್ಯಾಯವಾಗಿದೆ. ಇದನ್ನು ಮನಗಂಡು ಸರ್ಕಾರ ನಾಯಕ ಜನಾಂಗದವರಿಗೆ ಮೇಯರ್ ಸ್ಥಾನ…