ಸಾರಿಗೆ ಬಸ್ ಸಂಚಾರ ಪುನಾರಂಭ: ಸಹಜ ಸ್ಥಿತಿಗೆ ಜನ ಜೀವನ
ಮೈಸೂರು

ಸಾರಿಗೆ ಬಸ್ ಸಂಚಾರ ಪುನಾರಂಭ: ಸಹಜ ಸ್ಥಿತಿಗೆ ಜನ ಜೀವನ

September 11, 2018

ಮೈಸೂರು: ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ಹಿನ್ನೆಲೆ ಯಲ್ಲಿ ಸ್ಥಗಿತಗೊಂಡಿದ್ದ ಸಾರಿಗೆ ಬಸ್ ಸಂಚಾರ ಮಧ್ಯಾಹ್ನ 3.30ರ ನಂತರ ಆರಂಭವಾಯಿತು. ಬಂದ್ ಬಿಸಿ ಕಡಿಮೆ ಯಾಗುತ್ತಿದ್ದಂತೆಯೇ ಕೆಎಸ್‍ಆರ್‍ಟಿಸಿ ನಗರ ಹಾಗೂ ಗ್ರಾಮಾಂತರ ವಿಭಾಗ ಗಳ ಬಸ್ಸುಗಳು ಕಾರ್ಯಾರಂಭ ಮಾಡಿದ್ದು, ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ ದಿಂದ ಬಸ್‍ಗಳು ನಾನಾ ತಾಲೂಕು ಹಾಗೂ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಿ ದವು. ಬೆಳಿಗ್ಗೆಯಿಂದ ಬಸ್ ಇಲ್ಲದೇ ಕಾಯುತ್ತಿದ್ದ ಪ್ರಯಾಣಿಕರು ಮಧ್ಯಾಹ್ನದ ನಂತರ ತಮ್ಮ ಸ್ಥಳಗಳಿಗೆ ತೆರಳಿದರು. ನಗರ ಸಾರಿಗೆ ಬಸ್ಸುಗಳೂ ರಸ್ತೆಗಿಳಿದಿದ್ದು, ಮೈಸೂ ರಿನ ವಿವಿಧ ಬಡಾವಣೆಗಳಲ್ಲಿ ಸಂಚಾರ ಆರಂಭಿಸಿದವು. ಅದೇ ರೀತಿ ಅಂಗಡಿ, ಸಿನೆಮಾ ಮಂದಿರ, ಖಾಸಗಿ ಬಸ್ಸುಗಳು, ಲಾರಿ, ಸರಕು ಸಾಗಾಣೆ ವಾಹನಗಳು, ಟ್ಯಾಕ್ಸಿ, ಆಟೋರಿಕ್ಷಾಗಳು ಸೇವೆ ಆರಂ ಭಿಸಿರುವುದರಿಂದ ಮೈಸೂರಲ್ಲಿ ಜನ ಜೀವನ ಸಹಜ ಸ್ಥಿತಿಗೆ ಮರಳಿತು. ಪ್ರಮುಖ ವಾಣಿಜ್ಯ ಕೇಂದ್ರಗಳು, ಮಾರುಕಟ್ಟೆಗಳು, ಉದ್ದಿಮೆಗಳು, ತೆರೆದುಕೊಂಡಿದ್ದು, ಚಟು ವಟಿಕೆ ಎಂದಿನಂತೆ ನಡೆಯುತ್ತಿದೆ. ಆದರೆ ಶಾಲಾ-ಕಾಲೇಜು, ಬಲವಂತವಾಗಿ ಮುಚ್ಚಿಸಿದ್ದ ಸರ್ಕಾರಿ ಕಚೇರಿಗಳು ಮಾತ್ರ ಇಂದು ದಿನಪೂರ್ತಿ ತೆರೆಯಲಿಲ್ಲ. ಹಾಗೆಯೇ ಬಂದ್‍ಗೆ ಬೆಂಬಲ ಸೂಚಿಸಿ ಕಲಾಪದಿಂದ ವಕೀಲರು ದೂರ ಉಳಿದಿ ದ್ದರಿಂದ ಮೈಸೂರಿನ ನ್ಯಾಯಾಲಯ ಗಳಲ್ಲಿ ನಡೆಯಬೇಕಿದ್ದ ವಿಚಾರಣೆಗಳನ್ನು ಮುಂದೂಡಲಾಯಿತು. ಇದರಿಂದ ಕಕ್ಷಿದಾರ ರಿಗೆ ತೊಂದರೆ ಉಂಟಾಯಿತು.

Translate »