ಹೈವೇ ವೃತ್ತದಲ್ಲಿ ಅಡ್ಡಾದಿಡ್ಡಿ ಲಾರಿ ನಿಲ್ಲಿಸಿ, ಟೈರ್ ಸುಟ್ಟು ಕಾಂಗ್ರೆಸ್ ರಸ್ತೆತಡೆ
ಮೈಸೂರು

ಹೈವೇ ವೃತ್ತದಲ್ಲಿ ಅಡ್ಡಾದಿಡ್ಡಿ ಲಾರಿ ನಿಲ್ಲಿಸಿ, ಟೈರ್ ಸುಟ್ಟು ಕಾಂಗ್ರೆಸ್ ರಸ್ತೆತಡೆ

September 11, 2018

ಮೈಸೂರು: ಮೈಸೂರು ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯ ಕರ್ತರು ಮೈಸೂರಿನ ಹೈವೇ ವೃತ್ತದಲ್ಲಿ ಲಾರಿಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ, ಟೈರ್ ಸುಟ್ಟು ಪ್ರತಿಭಟನೆ ವ್ಯಕ್ತಪಡಿಸಿದರು.

ಅಜೀಜ್‍ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಶಾಹಿದ್ ಖಾದರ್ ನೇತೃತ್ವದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿ ಪ್ರತಿಭಟನೆ ನಡೆಸಿದರು. ಕೊನೆಗೆ ಟೈರ್ ಸುಟ್ಟು, ಕೇಂದ್ರದ ಬಿಜೆಪಿ ಸರ್ಕಾರ ಮತ್ತು ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕಾರ್ಪೊರೇಟರ್ ಗಳಾದ ಪುಷ್ಪಲತಾ ಜಗನ್ನಾಥ್, ಪ್ರದೀಪ್ ಚಂದ್ರ, ಸೈಯ್ಯದ್ ಹಸ್ರತ್, ಅಕ್ಮಲ್ ಪಾಷಾ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೌಖತ್ ಆಲಿಖಾನ್ ಇನ್ನಿತರರು ಭಾಗ ವಹಿಸಿದ್ದರು. ಇದಕ್ಕೂ ಮುನ್ನ ಶಾಸಕ ತನ್ವೀರ್ ಸೇಠ್ ಅವರು ಬನ್ನಿಮಂಟಪ ಕೆಎಸ್‍ಆರ್‍ಟಿಸಿ ಡಿಪೋ ಬಳಿ ಪ್ರತಿಭಟನೆ ನಡೆಸಿದರು.

Translate »