ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ನಂಜನಗೂಡು ಬಂದ್ ಸಂಪೂರ್ಣ ಯಶಸ್ವಿ
ಮೈಸೂರು

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ನಂಜನಗೂಡು ಬಂದ್ ಸಂಪೂರ್ಣ ಯಶಸ್ವಿ

September 11, 2018

ನಂಜನಗೂಡು:  ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಬಂದ್‍ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ನೇತೃತ್ವದಲ್ಲಿ ನಡೆದ ಬಂದ್ ಯಶಸ್ವಿ ಯಾಯಿತು.
ಕಾಂಗ್ರೇಸ್ ಪಕ್ಷದ ಮುಖಂಡರು ಊಟಿ ರಸ್ತೆಯಲ್ಲಿರುವ ಚಿಂತಾಮಣಿ ಗಣಪತಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ನಗರದ ಪ್ರಮುಖ ಬೀದಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ದರು. ಕಾರ್ಯಕರ್ತರುಗಳು ಪೆಟ್ರೋಲ್ ಬೆಲೆ ಇಳಿಸುವ ಬಿತ್ತಿ ಪತ್ರವನ್ನು ಪ್ರದರ್ಶಿಸಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಯುಪಿಎ ಸರ್ಕಾರವಿದ್ದಾಗ 2014ರಲ್ಲಿ ಪೆಟ್ರೋಲ್ ಬೆಲೆ 63 ರೂಪಾಯಿ, ಡೀಸೆಲ್ ಬೆಲೆ 58 ರೂಪಾಯಿ, ಗ್ಯಾಸ್ ಬೆಲೆ 417 ರೂಪಾಯಿ ಇದ್ದದ್ದು, ಈಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬೆಲೆಯನ್ನು ಏರಿಸಿದ ಪರಿಣಾಮ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟು ಶ್ರೀಸಾಮಾನ್ಯರ ಬದುಕು ಹದಗೆಟ್ಟಿದೆ. ಕೇಂದ್ರ ಸರ್ಕಾರ ಮನವರಿಕೆ ಮಾಡಿಕೊಂಡು ಬೆಲೆಯನ್ನು ತಕ್ಷಣ ಇಳಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ತಾಲೂಕಿನಲ್ಲಿ ಕರೆ ಕೊಟ್ಟ ಬಂದ್‍ಗೆ ಆಟೋಚಾಲಕರು, ವರ್ತಕರು, ಖಾಸಗಿ ವಾಹನಗಳು, ಕನ್ನಡಪರ ಸಂಘಟನೆಗಳು, ಜೆಡಿಎಸ್ ಪಕ್ಷ, ಬಿ.ಎಸ್.ಪಿ., ಸಿ.ಪಿ.ಎಂ., ಸಿ.ಪಿ.ಐ., ಚಿತ್ರಮಂದಿರಗಳು, ಪೆಟ್ರೋಲ್ ಬಂಕ್‍ಗಳು ಬಂದ್‍ಗೆ ಬೆಂಬಲಿಸಿವೆ ಎಂದರು. ಬಂದ್‍ದಾಗಿ ಸದಾ ಗಿಜಿಗುಡುತ್ತಿದ್ದ ನಂಜನಗೂಡು ಬಿಕೋ ಎನ್ನುತ್ತಿತ್ತು. ಕೇಂದ್ರ ಮತ್ತು ರಾಜ್ಯ ಕಚೇರಿಗಳು, ಬ್ಯಾಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಬೆಳಿಗ್ಗೆಯಿಂದಲೇ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಸ್ಥಗಿತಗೊಂಡ ಕಾರಣ ಪ್ರಯಾಣಿಕರು ಪರದಾಡುವಂತಾಯಿತು.

ಪ್ರತಿಭಟನಾ ರ್ಯಾಲಿಯಲ್ಲಿ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಜಿ.ಪಂ ಸದಸ್ಯರಾದ ಲತಾ ಸಿದ್ದಶೆಟ್ಟಿ, ಪುಷ್ಪನಾಗೇಶ್ ರಾಜ್, ಬ್ಲಾಕ್ ಅಧ್ಯಕ್ಷರಾದ ಹೆಚ್.ಎಸ್. ಮೂಗಶೆಟ್ಟಿ, ಕೆ.ಪಿ.ಸಿ.ಸಿ. ಸದಸ್ಯ ಅಕ್ಬರ್ ಅಲೀಂ, ಗುರುಸ್ವಾಮಿ, ಶಂಕರಪುರ ಸ್ವಾಮಿ, ಹಾಡ್ಯ ರಂಗಸ್ವಾಮಿ, ಸೋಮೇಶ, ಉಪ್ಪನಹಳ್ಳಿ ಶಿವಣ್ಣ, ಪಿ.ಶ್ರೀನಿವಾಸ್, ಗೋವಿಂದನಾಯಕ, ನಗರಸಭಾಧ್ಯಕ್ಷೆ ಪುಷ್ಪಲತಾ, ಎಪಿಎಂಸಿ ಅಧ್ಯಕ್ಷ ಮಾದಪ್ಪ, ಉಪಾಧ್ಯಕ್ಷ ಸಿದ್ದರಾಜನಾಯಕ, ತಾಲೂಕು ಜೆ.ಡಿ.ಎಸ್. ಅಧ್ಯಕ್ಷ, ಆರ್.ವಿ.ಮಹದೇವ ಸ್ವಾಮಿ, ಅಲ್ಪಸಂಖ್ಯಾತರ ಅಧ್ಯಕ್ಷ ಅನ್ಸಾರ್ ಅಹಮ್ಮದ್, ಅಬ್ದುಲ್ ಖಾದರ್, ಮಂಜು ನಾಥ್, ನಗರಸಭಾ ಸದಸ್ಯರಾದ ಮಂಜು ನಾಥ್, ದೊಡ್ಡಮಾದಯ್ಯ, ಬಾಬು, ಸಿ.ಎಂ. ಶಂಕರ್, ಮೀನಾಕ್ಷಿ, ವಕೀಲ ನಾಗ ರಾಜಯ್ಯ, ನಟೇಶ, ಹಳ್ಳದಕೇರಿ ಶ್ರೀನಿವಾಸ್, ಗೋವಿಂದ, ಕೂಡ್ಲಾಪುರ ರಾಜು, ಶಂಕರ ಪುರ ಮರಿಸ್ವಾಮಿ, ಸ್ವಾಮಿ, ತಗಡೂರು ಹಿಂದುಳಿದ ವರ್ಗಗಳ ಅಧ್ಯಕ್ಷ ನಂಜಯ್ಯ, ರಾಚನಾಯಕ, ಸೋಭಾಗ್ಯ, ಹುಂಡಿ ಮಹದೇವು, ನಟರಾಜು, ಜಗದೀಶ್, ಶ್ರೀರಾಮಪುರ ಮಹದೇವು, ಪ್ರಕಾಶ್ ರಾಜ್ ಅರಸ್, ಮುದ್ದುಮಾದು, ಸೇರಿ ದಂತೆ ತಾಲೂಕಿನ ಕಾಂಗ್ರೇಸ್ ಮುಖಂಡರು ಗಳು, ಕಾರ್ಯಕರ್ತರು ಹಾಜರಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

Translate »