ಕೊಡಗು, ಕೇರಳ ಸಂತ್ರಸ್ತರಿಗೆ ಎಐಟಿಯುಸಿ ಸಂಘಟನೆಯಿಂದ 2.74 ಲಕ್ಷ ರೂ. ದೇಣಿಗೆ
ಮೈಸೂರು

ಕೊಡಗು, ಕೇರಳ ಸಂತ್ರಸ್ತರಿಗೆ ಎಐಟಿಯುಸಿ ಸಂಘಟನೆಯಿಂದ 2.74 ಲಕ್ಷ ರೂ. ದೇಣಿಗೆ

September 8, 2018

ಮೈಸೂರು: ಪ್ರಕೃತಿ ವಿಕೋಪ, ಜಲ ಪ್ರಳಯದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಕೊಡಗು ಜಿಲ್ಲೆ ಹಾಗೂ ನೆರೆಯ ಕೇರಳದ ಸಂತ್ರ ಸ್ತರಿಗೆ ಅಖಿಲ ಭಾರತ ಟ್ರೇಡ್ ಯೂನಿ ಯನ್ ಕಾಂಗ್ರೆಸ್ (ಎಐಟಿಯುಸಿ) ಜಿಲ್ಲಾ ಘಟಕವು ನೆರವು ನೀಡಿದೆ.

ಎಐಟಿಯುಸಿ ಮೈಸೂರು ಜಿಲ್ಲಾಧ್ಯಕ್ಷ ರಾಜು ಮತ್ತು ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ ಅವರು ಶುಕ್ರವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರಿಗೆ ನೆರವಿನ ಚೆಕ್ ನೀಡಿದರು.

ನಮ್ಮ ಸಂಘಟನೆಗೆ ಕಾರ್ಯಕರ್ತರು ಸ್ಪಂದಿಸಿದ್ದು, ಮೈಸೂರು ಜಿಲ್ಲೆಯ ಕಾರ್ಮಿಕ ರಿಂದ ಸಂಗ್ರಹಿಸಿದ 2,74,706 ರೂ. ಗಳಲ್ಲಿ ಕೊಡಗು ಜಿಲ್ಲೆಗೆ 1,37,350 ಹಾಗೂ ಕೇರಳ ರಾಜ್ಯಕ್ಕೆ 1.37,350 ರೂ.ಗಳ 2 ಚೆಕ್‍ಗಳನ್ನು (ಇಂಡಿಯನ್ ಓವರ್‍ಸೀಸ್ ಬ್ಯಾಂಕ್) ಮುಖ್ಯಮಂತ್ರಿಗಳ ಪರಿಹಾರ ನಿಧಿಗೆಂದು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

Translate »