ಕೌಟಿಲ್ಯ ವಿದ್ಯಾಲಯದಲ್ಲಿ ಸಂಸ್ಕøತ ದಿನಾಚರಣೆ
ಮೈಸೂರು

ಕೌಟಿಲ್ಯ ವಿದ್ಯಾಲಯದಲ್ಲಿ ಸಂಸ್ಕøತ ದಿನಾಚರಣೆ

September 8, 2018

ಮೈಸೂರು: ಸಂಸ್ಕೃತವನ್ನು ನೂರಾರು ಮಹಾಕವಿಗಳು, ದಾರ್ಶನಿಕರು ಸಮೃದ್ಧ ಗೊಳಿಸಿದ್ದಾರೆ. ವಿಶ್ವದ ಯಾವ ಭಾಷೆಗಳಲ್ಲಿಯೂ ರಚಿತವಾಗದ ಅತಿ ಹೆಚ್ಚು ಗ್ರಂಥಗಳ ರಚನೆಯನ್ನು ನಾವು ಸಂಸ್ಕೃತದಲ್ಲಿ ಮಾತ್ರ ನೋಡಲು ಸಾಧ್ಯ. ಆ ಕಾರಣದಿಂದಲೆ ಸಂಸ್ಕೃತವನ್ನು ನಾವು ದೇವಭಾಷೆ, ಗೀರ್ವಾಣ ಭಾಷೆ ಎಂದು ಕರೆಯುತ್ತೇವೆ. ಆ ಮೂಲಕ ಅದು ಇತರೆ ಎಲ್ಲಾ ಭಾಷೆಗೂ ‘ತಾಯಿ ಬೇರಾಗಿದೆ’ ಎಂದ ುಮೈಸೂರಿನ ವಿಶ್ವ ಭಾರತಿ ಸಂಸ್ಕøತ ಪಾಠಶಾಲೆ ಅಧ್ಯಾಪಕರೂ ಸಂಸ್ಕೃತ ವಿದೂಷಿ ಶ್ರೀಮತಿ ಲಲಿತಾ ತಿಳಿಸಿದರು.

ನಗರದ ಕೌಟಿಲ್ಯ ವಿದ್ಯಾಲಯದಲ್ಲಿ ನಡೆದ ‘ಸಂಸ್ಕೃತ ದಿನಾಚರಣೆ’ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಸ್ಕೃತ ಭಾಷೆಯ ಹಿರಿಮೆ ಗರಿಮೆಯನ್ನು ತಿಳಿಯಲು ಮಕ್ಕಳು ಸಂಸ್ಕೃತ ಭಾಷಾಧ್ಯಯನವನ್ನು ಚಿಕ್ಕವರಿಂದಲೆ ಕಲಿತು ಪರಿಪಕ್ವತೆಯನ್ನು ಹೊಂದಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ವಿದ್ಯಾಲಯದ ಹಿರಿಯ ಪ್ರಾಂಶುಪಾಲರಾದ ಡಾ.ಎಲ್.ಸವಿತರವರು ‘ಸಂಸ್ಕೃತಾಧ್ಯಯನ ನಮ್ಮ ಮೌಲ್ಯವನ್ನು ಹೆಚ್ಚಿಸುವುದಲ್ಲದೆ ಸಮಾಜದ ಇತರೆ ಕ್ಷೇತ್ರಗಳಲ್ಲ್ಲೂ ನಮ್ಮನ್ನು ಗುರುತಿಸಿಕೊಳ್ಳಲು ಸಹಾಯಕವಾಗುತ್ತದೆ’ ಎಂದು ತಿಳಿಸಿದರು. ಇದೇ ವೇಳೆ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ವಿದ್ಯಾಲಯದ ಉಪಪ್ರಾಂಶು ಪಾಲರಾದ ಶ್ರೀಮತಿ ರಾಧಿಕ ಉಪಸ್ಥಿತರಿದ್ದರು. ಸಂಸ್ಕೃತ ಅಧ್ಯಾಪಕರಾದ ಶ್ರೀಮತಿ ಶಾಲಿನಿ. ವಿ, ಶ್ರೀಮತಿ ಗೌರಿ ಸಿಂಹ ಹಾಗೂ ಗಣೇಶ್ ಹಾಜರಿದ್ದರು.

Translate »