ಅಂಧ ಸಹಾಯಕ ಪ್ರಾಧ್ಯಾಪಕ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ
ಮೈಸೂರು

ಅಂಧ ಸಹಾಯಕ ಪ್ರಾಧ್ಯಾಪಕ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ

September 8, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯವು ಅಂಧ ಸಹಾಯಕ ಪ್ರಾಧ್ಯಾಪಕರನ್ನು ಸ್ನಾತಕೋತ್ತರ ವಿಭಾಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ಪೊಲಿಟಿಕಲ್ ಸೈನ್ಸ್ ಅಧ್ಯಯನ ವಿಭಾಗಕ್ಕೆ ಸಹಾಯಕ ಪ್ರಾಧ್ಯಾಪಕ ಕೃಷ್ಣ ಆರ್. ಹೊಂಬಾಳೆ ಅವರನ್ನು ಅಧ್ಯಕ್ಷರಾಗಿ ನೇಮಿಸ ಲಾಗಿದೆ. 102 ವರ್ಷಗಳ ಇತಿಹಾಸದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಮೊದಲ ಬಾರಿ ಅಂಧರನ್ನು ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಿದೆ.

1999ರಲ್ಲಿ ಸೇವೆ ಆರಂಭಿಸಿದ ಅವರು, 2010ರಲ್ಲಿ ಪಿಹೆಚ್‍ಡಿ ಪದವಿ ಪಡೆದರ ಲ್ಲದೆ, ಧಾರವಾಡದ ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ಎಂ.ಎ. ಮತ್ತು ಎಂ.ಫಿಲ್. ಗಳಿಸಿದ್ದರು. ರಾಜ್ಯಶಾಸ್ತ್ರ ವಿಭಾಗಕ್ಕೆ ಎರಡು ವರ್ಷಕ್ಕೊಮ್ಮೆ ರೊಟೇಷನ್ ಆಧಾರದಂತೆ ಪ್ರಾಧ್ಯಾಪಕರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತಿತ್ತು. ಯುಜಿಸಿ ಮಾರ್ಗಸೂಚಿಯಂತೆ ಪ್ರಾಧ್ಯಾಪಕರಾದವರನ್ನು ಮಾತ್ರ ವಿಭಾಗದ ಅಧ್ಯಕ್ಷರನ್ನಾಗಿ ನೇಮಿಸಬೇಕು. ಆದರೆ ಈ ಭಾಗದಲ್ಲಿ ಮೂವರು ಪ್ರಾಧ್ಯಾಪಕರಿದ್ದು, ಆ ಪೈಕಿ ಇಬ್ಬರು ಬೇರೆ ವಿಭಾಗದಿಂದ ನಿಯುಕ್ತಿಗೊಂಡವರು. ಈ ಬಗ್ಗೆ ಕಳೆದ ಸಿಂಡಿಕೇಟ್‍ನಲ್ಲಿ ಚರ್ಚಿಸಿ ಪ್ರೊ. ಕೃಷ್ಣ ಹೊಂಬಾಳೆ ಅವರು ಅನುಭವ ಹೊಂದಿರುವುದರಿಂದ ಅವರನ್ನೇ ವಿಭಾಗದ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಕೆಲ ಸದಸ್ಯರು ಸಲಹೆ ನೀಡಿದರು.

`ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ಹೊಂಬಾಳೆ ಅವರು, ಇಂದು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. 1999ರಲ್ಲಿ ಪ್ರೊ. ಎಸ್.ಎನ್.ಹೆಗ್ಡೆ ಅವರು ನನ್ನನ್ನು ಉಪನ್ಯಾಸಕರನ್ನಾಗಿ ನೇಮಿಸಿದ್ದರು ಎಂದರು. ನಾನು ಅಂಧನಾದರೂ, ನನ್ನ ಪ್ರತಿಭೆ, ಮೆರಿಟ್ ಅನ್ನು ಗುರ್ತಿಸಿ ನೇಮಕ ಮಾಡುವ ಮೂಲಕ ನನ್ನನ್ನು ಪ್ರೋತ್ಸಾಹಿಸಿ ವಿಶ್ವವಿದ್ಯಾನಿಲಯದ ಸೇವೆ ಮಾಡಲು ಅವಕಾಶ ನೀಡಿದೆ ಎಂದು ಹೊಂಬಾಳೆ ತಿಳಿಸಿದರು.

Translate »