ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಶೋಧನಾ ಸಮಿತಿಗೆ ಪ್ರತಿನಿಧಿ ಆಯ್ಕೆ
ಮೈಸೂರು

ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಶೋಧನಾ ಸಮಿತಿಗೆ ಪ್ರತಿನಿಧಿ ಆಯ್ಕೆ

September 8, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಖಾಯಂ ಕುಲಪತಿ ನೇಮಕ ಸಂಬಂಧ ಶೋಧನಾ ಸಮಿತಿಗೆ ವಿಶ್ವವಿದ್ಯಾನಿಲಯವು ಇಂದು ತಮ್ಮ ಪ್ರತಿನಿಧಿ ಯನ್ನು ಆಯ್ಕೆ ಮಾಡಿತು. ಇಂದು ಕ್ರಾಫರ್ಡ್ ಭವನದಲ್ಲಿ ಈ ಸಂಬಂಧ ಕರೆಯಲಾಗಿದ್ದ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಶೋಧನಾ ಸಮಿತಿ ಸದಸ್ಯ ಸ್ಥಾನಕ್ಕೆ ವಿಶ್ವವಿದ್ಯಾ ನಿಲಯದಿಂದ ಓರ್ವ ಹಿರಿಯ ಪ್ರಾಧ್ಯಾಪಕರನ್ನು ಪ್ರತಿನಿಧಿಯಾಗಿ ಆಯ್ಕೆ ಮಾಡಲಾಯಿತು.

ಉನ್ನತ ಶಿಕ್ಷಣ ಇಲಾಖೆಯು ಹೊಸದಾಗಿ ಖಾಯಂ ಕುಲಪತಿಗಳ ಆಯ್ಕೆಗಾಗಿ ಶೋಧನಾ ಸಮಿತಿ ರಚಿಸಲು ಸೋಮವಾರದೊಳಗೆ ತಮ್ಮ ಪ್ರತಿನಿಧಿ ಹೆಸರು ಕಳುಹಿಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿಗಳ ಅಧ್ಯಕ್ಷತೆಯಲ್ಲಿ ತುರ್ತು ವಿಶೇಷ ಸಿಂಡಿಕೇಟ್ ಸಭೆ ನಡೆಯಿತು. ಆಯ್ಕೆಯಾದ ಪ್ರತಿನಿಧಿ ಹೆಸರನ್ನು ಸೀಲ್ ಮಾಡಿದ ಲಕೋಟೆಯಲ್ಲಿ ಸರ್ಕಾರಕ್ಕೆ ಕಳುಹಿಸಿ ಕೊಡಲಾ ಗಿದ್ದು, ಅದರ ಮಾಹಿತಿಯನ್ನು ಗೌಪ್ಯವಾಗಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Translate »