ಮೈಸೂರು: ನಂಜನಗೂಡಿನಲ್ಲಿ ರೆಸಿ ಕ್ರಿಯೇಷನ್ಸ್ ಆಯೋಜಿಸಿದ್ದ ರಾಜ್ಯ ಮಟ್ಟದ ಮಿಸ್ಟರ್ ಮತ್ತು ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಕ್ರಮವಾಗಿ ನಂಜನಗೂಡಿನ ಡಿ.ಸಿ.ನಾಗೇಶ್ ಹಾಗೂ ಮಂಡ್ಯದ ಸ್ನೇಹ ಗೌಡ ಮಿಸ್ಟರ್ ಹಾಗೂ ಮಿಸಸ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ರೆಸಿ ಕ್ರಿಯೇಷನ್ಸ್‍ನ ಆಯೋಜಕಿ ಸಿಂಧೂ ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಈ ವಿಷಯ ತಿಳಿಸಿದರು. 18ರಿಂದ 25 ವರ್ಷ ವಯೋಮಾನದವರಿಗಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ 28 ಮಂದಿ ಭಾಗವಹಿಸಿದ್ದರು. ಅಂತಿಮವಾಗಿ ಡಿ.ಸಿ.ನಾಗೇಶ್ ಮಿಸ್ಟರ್ ಕರ್ನಾಟಕ ಹಾಗೂ ಸ್ನೇಹ ಗೌಡ ಮಿಸ್ ಕರ್ನಾಟಕ…
ಶಾಲಾ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಕ್ರಮ ಶೀಘ್ರ ಆರಂಭ
September 7, 2018ಮೈಸೂರು: ಮೊಬೈಲ್ ಸೈನ್ಸ್ ಲ್ಯಾಬ್ ಮೂಲಕ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಲ್ಲಿ ವಿಜ್ಞಾ ನದ ಬಗ್ಗೆ ಆಸಕ್ತಿ ಮೂಡಿಸಲು ಶೀಘ್ರದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಮೈಸೂರು ವಿವಿ ಶಾಲೆಗಳಲ್ಲಿ ವಿಜ್ಞಾನಾ ಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ತಿಳಿಸಿದರು. ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದ ಹಾಲ್‍ನಲ್ಲಿ ಗುರುವಾರ ಮೈಸೂರು ವಿವಿಯ ಶಾಲೆಗಳಲ್ಲಿ ವಿಜ್ಞಾ ನಾಭಿ ವೃದ್ಧಿ ಸಮಿತಿ (ಸಿಡಿಎಸ್‍ಎಸ್) ವತಿಯಿಂದ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಪ್ರೌಢ ಶಾಲಾ…
ಕನ್ನಡ ಶಾಸ್ತ್ರೀಯ ಚಟುವಟಿಕೆ ಇಡೀ ರಾಜ್ಯಕ್ಕೆ ವಿಸ್ತಾರವಾಗಬೇಕು
September 7, 2018ಮೈಸೂರು: ಮೈಸೂರಿಗೆ ಮಾತ್ರ ಸೀಮಿತ ವಾದ ಕನ್ನಡ ಶಾಸ್ತ್ರೀಯ ಸ್ಥಾನಮಾನ, ಚಟುವಟಿಕೆ ಇಡೀ ರಾಜ್ಯಕ್ಕೆ ವಿಸ್ತರಿಸಬೇಕು ಎಂದು ಉದಯಭಾನು ಉನ್ನತ ಅಧ್ಯಯನ ಕೇಂದ್ರದ ಗೌರವ ಡೀನ್ ಡಾ. ನಾ.ಗೀತಾಚಾರ್ಯ ಅಭಿಪ್ರಾಯಪಟ್ಟರು. ಮೈಸೂರು ಮಹಾರಾಜ ಕಾಲೇಜು ಜೂನಿಯರ್ ಬಿಎ ಹಾಲ್‍ನಲ್ಲಿ ಮಹಾರಾಜ ಕಾಲೇಜು ಕನ್ನಡ ಸಂಘ, ಉದಯಭಾನು ಕಲಾಸಂಘ, ಉದಯಭಾನು ಭಾಷೆ-ಸಾಹಿತ್ಯ-ಸಂಸ್ಕøತಿ ಅಧ್ಯಯನಾಂಗ ಸಂಯುಕ್ತವಾಗಿ ಗುರುವಾರ ಆಯೋಜಿಸಿದ್ದ `ಹಳಗನ್ನಡ ಗದ್ಯ ಸಾಹಿತ್ಯದ ಅವಲೋಕನ’ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದರೂ, ಕೇಂದ್ರ…
ದೇಶದ ಪುನರ್ ನಿರ್ಮಾಣ ಶಿಕ್ಷಕರ ಹೊಣೆ
September 6, 2018ಮೈಸೂರು: ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಸಮರ್ಥವಾಗಿ ಬಳಸಿಕೊಂಡು ದೇಶದ ಪುನರ್ ನಿರ್ಮಾಣ ಮಾಡುವ ಹೊಣೆ ಶಿಕ್ಷಕರದ್ದಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ನರಹರಿ ಇಂದಿಲ್ಲಿ ಅಭಿಪ್ರಾಯ ಪಟ್ಟರು. ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ಭಾರತ ವನ್ನು ಪುನರ್ ನಿರ್ಮಾಣ ಮಾಡುವ ಕೆಲಸ ಶಿಕ್ಷಕರ ಮೇಲಿದ್ದು, ನಾವೆಲ್ಲರೂ ತಂಡದ ರೀತಿಯಲ್ಲಿ ಕೆಲಸ ಮಾಡಿದರೆ ದೇಶ ಕಟ್ಟುವ ಕೆಲಸ…
ಮೈಸೂರು ವಿವಿ ಅಂತರ ಕಾಲೇಜುಗಳ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ
September 6, 2018ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಹಮ್ಮಿಕೊಂಡಿರುವ ವಿವಿಯ ಅಂತರ ಕಾಲೇಜುಗಳ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಬುಧವಾರ ಚಾಲನೆ ದೊರೆಯಿತು. ಮೈಸೂರಿನ ಸ್ಪೋಟ್ರ್ಸ್ ಪೆವಿಲಿಯನ್ ಮೈದಾನದಲ್ಲಿರುವ ದೈಹಿಕ ಶಿಕ್ಷಣ ವಿಭಾಗದ ಜಿಮ್ನಾಷಿಯಂ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಟಿ.ಕೆ.ಉಮೇಶ್ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇಂದು ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಮಹಾನ್ ತತ್ವಜ್ಞಾನಿಯಾದ ದೇಶದ ಮೊದಲ ಉಪರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನವನ್ನು ದೇಶದಲ್ಲಿ ಶಿಕ್ಷಕರ ದಿನವಾಗಿ…
ಕೂದಲು ಉದುರುವಿಕೆಯಿಂದ ಕಂಗಾಲಾದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು
September 3, 2018ಮೈಸೂರು: ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಂಡ ಬೆನ್ನಲ್ಲೆ ಕೂದಲು ಉದು ರಿದಕ್ಕೆ ಕಂಗಾಲಾದ ವಿದ್ಯಾರ್ಥಿಯೋರ್ವಳು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನಲ್ಲಿ ಕಾಣೆಯಾಗಿದ್ದ ಕೊಡಗಿನ ವಿದ್ಯಾರ್ಥಿನಿ ಜಿ.ನೇಹಾ ಗಂಗಮ್ಮ(19) ಕೊಡಗಿನ ಗೋಣಿಕೊಪ್ಪ ಸಮೀಪದ ನಿಟ್ಟೂರು ಲಕ್ಷ್ಮಣ ತೀರ್ಥ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮೃತ ಯುವತಿ ನಿಟ್ಟೂರು ಗ್ರಾಮದ ಪ್ರಭಾ, ಶೈಲಾ ದಂಪತಿಯ ಪುತ್ರಿ. ಶವ ಹೊರ ತೆಗೆದಿರುವ ಪೊನ್ನಂಪೇಟೆ ಪೊಲೀಸರು ಶವವನ್ನು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಿದ್ದಾರೆ. ಶನಿವಾರ ಸಂಜೆ ಹೊಳೆಯಲ್ಲಿ…
ನ್ಯಾಯಾಧೀಶರುಗಳಿಗೆ ಪುನಶ್ಚೇತನ ತರಬೇತಿ: ಮಧ್ಯಸ್ಥಿಕೆ ವಿಧಾನದಿಂದ ಸಿವಿಲ್ ಮೊಕದ್ದಮೆ ಒತ್ತಡ ನಿವಾರಣೆ ಜಿಲ್ಲಾ ಪ್ರಧಾನ ನ್ಯಾಯಾಧೀಶ ಎಸ್.ಕೆ. ವೆಂಟಿಗೋಡಿ
September 3, 2018ಮೈಸೂರು: ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆಗಳ ಒತ್ತಡ ನಿವಾರಿಸಲು ಹಾಗೂ ತ್ವರಿತ ನ್ಯಾಯ ಒದಗಿಸಲು `ಮಧ್ಯಸ್ಥಿಕೆ ವಿಧಾನ’ ಪ್ರಮುಖ ಪಾತ್ರ ವಹಿಸಲಿದ್ದು, ಹೀಗಾಗಿ ನ್ಯಾಯಾಧೀಶರು ಈ ವಿಧಾನದ ಬಗ್ಗೆ ವಿಸ್ತøತ ಜ್ಞಾನ ಸಂಪಾದನೆಗೆ ಒತ್ತು ನೀಡುವ ಅಗತ್ಯವಿದೆ ಎಂದು ಮೈಸೂರು ಜಿಲ್ಲೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಅಭಿಪ್ರಾಯಪಟ್ಟರು. ಕರ್ನಾಟಕ ಹೈಕೋರ್ಟ್‍ನ ಬೆಂಗಳೂರು ಮಧ್ಯಸ್ಥಿಕಾ ಕೇಂದ್ರದ ವತಿಯಿಂದ ಮೈಸೂರಿನ ಜಿಪಂ ಕಚೇರಿ ಸಭಾಂಗಣದಲ್ಲಿ `ಸಿವಿಲ್ ಪ್ರಕರಣದಲ್ಲಿ ಮಧ್ಯಸ್ಥಿಕಾ ವಿಧಾನ’ ಕುರಿತಂತೆ ಮೈಸೂರು ಮತ್ತು ಕೊಡಗು ಜಿಲ್ಲೆಯ…
ಡಾ.ಬಾಬು ಜಗಜೀವನ ರಾಂ ಪ್ರತಿಮೆ ಧ್ವಂಸ: ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗ ಖಂಡನೆ
September 3, 2018ಮೈಸೂರು: ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ ಪ್ರತಿಮೆ ಧ್ವಂಸಗೊಳಿಸಿ ರುವುದನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಬಿ.ಪ್ರಸಾದ್ ಖಂಡಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರು ದಲಿತ ಸಮು ದಾಯದ ಎರಡು ಕಣ್ಣುಗಳಿದ್ದಂತೆ. ಇಂತಹ ಮಹಾನ್ ವ್ಯಕ್ತಿಗಳ ಭಾವಚಿತ್ರಗಳಿಗೆ ಅಪಮಾನ ಮಾಡುವುದು ಹಾಗೂ…
ಶಿಕ್ಷಣ ಪದವಿಗೆ ಮಾತ್ರ ಸೀಮಿತವಾಗಬಾರದು
September 2, 2018ಮೈಸೂರು: ಶಿಕ್ಷಣ ಪದವಿ ಪ್ರಮಾಣ ಪತ್ರಗಳಿಗೆ ಸೀಮಿತವಾಗದೆ ಮಾನವೀಯ ಮೌಲ್ಯಗಳನ್ನು ಎಲ್ಲೆಡೆ ಬಿತ್ತಬೇಕು ಎಂದು ರಾಮಕೃಷ್ಣ ಆಶ್ರಮದ ಸ್ವಾಮಿ ಮಹೇಶಾತ್ಮಾನಂದ ಹೇಳಿದರು. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಶನಿವಾರ ಮೈಸೂರು ವೈದ್ಯಕೀಯ ಕಾಲೇಜು ಅಮೃತಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ನೂತನ ವೈದ್ಯಕೀಯ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕೇವಲ ಪ್ರಮಾಣ ಪತ್ರ ಪಡೆಯಲು ಸೀಮಿತ ವಾಗಿದ್ದು, ವಿದ್ಯಾರ್ಥಿಗಳು ಸಮಾಜದಲ್ಲಿ ರುವ ಮಾನವೀಯ ಸಂಬಂಧ ಬೆಳೆಸಿ ಕೊಳ್ಳವುದರಲ್ಲಿ ಹಿಂದೆ…
ಮುಕ್ತ ವಿವಿ ಆವರಣದಲ್ಲಿ ಎನ್‍ಸಿಸಿ ವಾರ್ಷಿಕ ತರಬೇತಿ ಶಿಬಿರ
September 2, 2018ಮೈಸೂರು: ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಆವರಣದಲ್ಲಿ ಎನ್‍ಸಿಸಿ 13 ಕರ್ನಾಟಕ ಬೆಟಾಲಿಯನ್(ಆರ್ಮಿ) ವಾರ್ಷಿಕ ತರಬೇತಿ ಶಿಬಿರ ನಡೆಯುತ್ತಿದೆ. ಸಿಎ ಟಿಎಲ್ (ಕಂಬೈನ್ಡ್ ಆನ್ಯುಯಲ್ ಟ್ರೇನಿಂಗ್ ಕ್ಯಾಂಪ್)ನಲ್ಲಿ ಮೈಸೂರು, ಕೆ.ಆರ್.ನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಇತರ ಕಾಲೇಜುಗಳ 600 ಮಂದಿ ಎನ್‍ಸಿಸಿ ಕೆಡೆಟ್‍ಗಳು ತರಬೇತಿ ಶಿಬಿರ ದಲ್ಲಿ ಪಾಲ್ಗೊಂಡಿದ್ದಾರೆ. ಕರ್ನಲ್ ಮಂಜಿತ್‍ಸಿಂಗ್ ಟಡ್ಡ್, ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಜಗದೀಶ್ ನಾಯರ್ ನೇತೃತ್ವದ ಎನ್‍ಸಿಸಿ ಆರ್ಮಿಯ 30 ಮಂದಿ ಸಿಬ್ಬಂದಿ ಹಾಜರಿದ್ದು, ಕೆಡೆಟ್‍ಗಳಿಗೆ ತರಬೇತಿ…