ಮುಕ್ತ ವಿವಿ ಆವರಣದಲ್ಲಿ ಎನ್‍ಸಿಸಿ ವಾರ್ಷಿಕ ತರಬೇತಿ ಶಿಬಿರ
ಮೈಸೂರು

ಮುಕ್ತ ವಿವಿ ಆವರಣದಲ್ಲಿ ಎನ್‍ಸಿಸಿ ವಾರ್ಷಿಕ ತರಬೇತಿ ಶಿಬಿರ

September 2, 2018

ಮೈಸೂರು: ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಆವರಣದಲ್ಲಿ ಎನ್‍ಸಿಸಿ 13 ಕರ್ನಾಟಕ ಬೆಟಾಲಿಯನ್(ಆರ್ಮಿ) ವಾರ್ಷಿಕ ತರಬೇತಿ ಶಿಬಿರ ನಡೆಯುತ್ತಿದೆ. ಸಿಎ ಟಿಎಲ್ (ಕಂಬೈನ್ಡ್ ಆನ್ಯುಯಲ್ ಟ್ರೇನಿಂಗ್ ಕ್ಯಾಂಪ್)ನಲ್ಲಿ ಮೈಸೂರು, ಕೆ.ಆರ್.ನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಇತರ ಕಾಲೇಜುಗಳ 600 ಮಂದಿ ಎನ್‍ಸಿಸಿ ಕೆಡೆಟ್‍ಗಳು ತರಬೇತಿ ಶಿಬಿರ ದಲ್ಲಿ ಪಾಲ್ಗೊಂಡಿದ್ದಾರೆ. ಕರ್ನಲ್ ಮಂಜಿತ್‍ಸಿಂಗ್ ಟಡ್ಡ್, ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಜಗದೀಶ್ ನಾಯರ್ ನೇತೃತ್ವದ ಎನ್‍ಸಿಸಿ ಆರ್ಮಿಯ 30 ಮಂದಿ ಸಿಬ್ಬಂದಿ ಹಾಜರಿದ್ದು, ಕೆಡೆಟ್‍ಗಳಿಗೆ ತರಬೇತಿ ನೀಡುತ್ತಿದ್ದಾರೆ. ಆಗಸ್ಟ್ 26ರಿಂದ ಆರಂಭ ವಾಗಿರುವ ಶಿಬಿರವು ಸೆಪ್ಟೆಂಬರ್ 4ರಂದು ಮುಕ್ತಾಯಗೊಳ್ಳುವುದು. ಡ್ರಿಲ್, ಫೈರಿಂಗ್, ವ್ಯಕ್ತಿತ್ವ ವಿಕಸನ, ರಕ್ಷಣಾ ತರಬೇತಿ, ರಾಷ್ಟ್ರೀಯ ಭಾವೈಕ್ಯತೆ, ಸಂಜೆ ವೇಳೆ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರತಿದಿನ ನಡೆಯುತ್ತದೆ. ಎನ್‍ಸಿಸಿ ಹಿರಿಯ ಅಧಿಕಾರಿಗಳನ್ನು ಕರೆಸಿ ‘ಡಿ’ ಮತ್ತು ‘ಸಿ’ ಸರ್ಟಿಫಿಕೇಟ್ ಪರೀಕ್ಷೆ ಎದುರಿಸುವ ಬಗ್ಗೆ ಸೂಕ್ತ ಬೋಧನೆಯನ್ನೂ ಶಿಬಿರದಲ್ಲಿ ಮಾಡಲಾಗುತ್ತಿದೆ. ಅದೇ ರೀತಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋ ತ್ಸವ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಿಬಿರದಲ್ಲಿ ಎನ್‍ಸಿಸಿ ಕೆಡೆಟ್ ಗಳ ಆಯ್ಕೆ ಪ್ರಕ್ರಿಯೆಯೂ ನಡೆಯಲಿದೆ. ಶಿಬಿರಾರ್ಥಿಗಳಿಗೆ ಊಟ, ವಸತಿ ಹಾಗೂ ಇನ್ನಿತರ ಸೌಲಭ್ಯವನ್ನು ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿ ಒದಗಿಸಲಾಗಿದೆ.

Translate »