ಡಿ.ಸಿ.ನಾಗೇಶ್- ಮಿಸ್ಟರ್ ಕರ್ನಾಟಕ, ಸ್ನೇಹ ಗೌಡ- ಮಿಸ್ ಕರ್ನಾಟಕ
ಮೈಸೂರು

ಡಿ.ಸಿ.ನಾಗೇಶ್- ಮಿಸ್ಟರ್ ಕರ್ನಾಟಕ, ಸ್ನೇಹ ಗೌಡ- ಮಿಸ್ ಕರ್ನಾಟಕ

September 8, 2018

ಮೈಸೂರು: ನಂಜನಗೂಡಿನಲ್ಲಿ ರೆಸಿ ಕ್ರಿಯೇಷನ್ಸ್ ಆಯೋಜಿಸಿದ್ದ ರಾಜ್ಯ ಮಟ್ಟದ ಮಿಸ್ಟರ್ ಮತ್ತು ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಕ್ರಮವಾಗಿ ನಂಜನಗೂಡಿನ ಡಿ.ಸಿ.ನಾಗೇಶ್ ಹಾಗೂ ಮಂಡ್ಯದ ಸ್ನೇಹ ಗೌಡ ಮಿಸ್ಟರ್ ಹಾಗೂ ಮಿಸಸ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ರೆಸಿ ಕ್ರಿಯೇಷನ್ಸ್‍ನ ಆಯೋಜಕಿ ಸಿಂಧೂ ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಈ ವಿಷಯ ತಿಳಿಸಿದರು. 18ರಿಂದ 25 ವರ್ಷ ವಯೋಮಾನದವರಿಗಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ 28 ಮಂದಿ ಭಾಗವಹಿಸಿದ್ದರು. ಅಂತಿಮವಾಗಿ ಡಿ.ಸಿ.ನಾಗೇಶ್ ಮಿಸ್ಟರ್ ಕರ್ನಾಟಕ ಹಾಗೂ ಸ್ನೇಹ ಗೌಡ ಮಿಸ್ ಕರ್ನಾಟಕ ಆಗಿ ಆಯ್ಕೆ ಹೊಂದಿದರು. ಇಬ್ಬರಿಗೂ ತಲಾ 25 ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸಲಾಯಿತು. ಬೆಂಗಳೂರಿನಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುವ ದಕ್ಷಿಣ ಭಾರತ ಮಿಸ್ಟರ್ ಕರ್ನಾಟಕ ಮತ್ತು ಮಿಸ್ ಕರ್ನಾಟಕ ಸ್ಪರ್ಧೆಗೆ ಈ ಇಬ್ಬರೂ ನೇರವಾಗಿ ಆಯ್ಕೆ ಯಾಗಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿಜೇತ ಇಬ್ಬರು ಉಪಸ್ಥಿತರಿದ್ದರು.

Translate »