Tag: Mysuru

ಸಾಮಾಜಿಕ ಬಹಿಷ್ಕಾರ: ಕುಟುಂಬದವರ ಪ್ರತಿಭಟನೆ
ಮೈಸೂರು

ಸಾಮಾಜಿಕ ಬಹಿಷ್ಕಾರ: ಕುಟುಂಬದವರ ಪ್ರತಿಭಟನೆ

August 19, 2018

ಮೈಸೂರು:  ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ಹಂದನಹಳ್ಳಿ ಗ್ರಾಮದಲ್ಲಿ ಮೇಲ್ಜಾತಿಯವರು ತಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿ ಗ್ರಾಮದ ಪರಿಶಿಷ್ಟ ವರ್ಗದ ನಾಯಕ ಸಮುದಾಯದ ಕುಟುಂಬವೊಂದು ಮೈಸೂರು ಜಿಲ್ಲಾ ನಾಯಕ ಯುವಕರ ಸಂಘದ ಆಶ್ರಯದಲ್ಲಿ ಶನಿವಾರ ಪ್ರತಿಭಟನೆ ನಡೆಸಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನೊಂದ ಕುಟುಂಬ ದವರು, ಗ್ರಾಮ ಮುಖಂಡರೊಬ್ಬರ ಹಣಬಲ ಹಾಗೂ ರಾಜಕೀಯ ಬಲದಿಂದ ನಾಯಕ ಸಮುದಾಯದ ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಇದರ ಪರಿಣಾಮ ಕಳೆದ…

ಸಂವಿಧಾನ ಸುಟ್ಟವರ  ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಸಂವಿಧಾನ ಸುಟ್ಟವರ  ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ

August 19, 2018

ಮೈಸೂರು: ನವದೆಹಲಿಯ ಜಂತರ್-ಮಂತರ್ ಮೈದಾನದಲ್ಲಿ ಭಾರತದ ಸಂವಿಧಾನದ ಪ್ರತಿಗಳನ್ನು ಸುಟ್ಟ ದುಷ್ಕರ್ಮಿಗಳನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸೇನೆ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಪುರಭವನದ ಡಾ.ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಜಂತರ್ ಮಂತರ್ ಮೈದಾನದಲ್ಲಿ ದೇಶದ ಸಂವಿಧಾನದ ಪ್ರತಿಗಳನ್ನು ಸುಟ್ಟು ಕಿಡಿಗೇಡಿಗಳು ಸಂವಿಧಾನ ಬಗ್ಗೆ ತಮ್ಮ ಅಗೌರವ ತೊರಿದ್ದಾರೆ. ಇದು ದೇಶದ್ರೋಹದ ಕೃತ್ಯವಾಗಿದ್ದು, ಇವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸೇನೆ ರಾಜ್ಯಾಧ್ಯಕ್ಷ…

ನಾಳೆ ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥರಿಗೆ ಸನ್ಮಾನ
ಮೈಸೂರು

ನಾಳೆ ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥರಿಗೆ ಸನ್ಮಾನ

August 18, 2018

ಹಳೆ ಚಿತ್ರಗೀತೆಗಳ ಸ್ವರ ಸಂಗಮ ಸಂಗೀತ ಮೈಸೂರು:  ಮೈಸೂರಿನ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಆ.19ರಂದು ಸಂಜೆ 5ಕ್ಕೆ ಹಳೇಬೇರು ಹೊಸಚಿಗುರು ಗಾಯಕರ ಗೆಳೆಯರ ಬಳಗದಿಂದ ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಹಾಗೂ ಶಾಸಕ ಅಡಗೂರು ಹೆಚ್.ವಿಶ್ವನಾಥ್ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಹಳೆಯ ಚಿತ್ರಗೀತೆಗಳ ಸ್ವರ ಸಂಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಳಗದ ಪ್ರಧಾನ ಕಾರ್ಯದರ್ಶಿ ರೇವಣ್ಣ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗನ್ಮೋಹನ ಅರಮನೆಯಲ್ಲಿ ಆ.19ರಂದು ಸಂಜೆ…

ಮೈಸೂರು ವಿವಿ ಆಡಳಿತಾತ್ಮಕ ವಿಷಯದಲ್ಲಿ ಹಸ್ತಕ್ಷೇಪ ಆರೋಪ: ಸಂಶೋಧನಾ ವಿದ್ಯಾರ್ಥಿ ಮಹೇಶ್ ಸೋಸಲೆ ವಿರುದ್ಧ ಕೇಸು ದಾಖಲು
ಮೈಸೂರು

ಮೈಸೂರು ವಿವಿ ಆಡಳಿತಾತ್ಮಕ ವಿಷಯದಲ್ಲಿ ಹಸ್ತಕ್ಷೇಪ ಆರೋಪ: ಸಂಶೋಧನಾ ವಿದ್ಯಾರ್ಥಿ ಮಹೇಶ್ ಸೋಸಲೆ ವಿರುದ್ಧ ಕೇಸು ದಾಖಲು

August 18, 2018

ಮೈಸೂರು:  ಮೈಸೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕರು, ಸಂಶೋಧನಾ ವಿದ್ಯಾರ್ಥಿ ವಿರುದ್ಧ ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿ ಸ್ನಾತಕೋತ್ತರ ಪುರುಷರ ವಿದ್ಯಾರ್ಥಿನಿಲಯದಲ್ಲಿ ಅನಧಿಕೃತವಾಗಿ ವಾಸವಿರುವ ಇತಿಹಾಸ ವಿಭಾಗದ ಸಂಶೋಧನಾ ವಿದ್ಯಾರ್ಥಿ ಮಹೇಶ್ ಸೋಸಲೆ, ಮೈಸೂರು ವಿವಿ ಆಡಳಿತಾತ್ಮಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಲ್ಲದೆ ಸಂಸ್ಥೆ ವಿರುದ್ಧ ವಿದ್ಯಾರ್ಥಿಗಳನ್ನು ಪ್ರಚೋದಿಸಿ, ಕ್ಯಾಂಪಸ್‍ನಲ್ಲಿ ಉನ್ನತ ಅಧಿಕಾರಿಗಳಿಗೆ ಘೇರಾವ್ ಹಾಕಿಸುವುದು ಹಾಗೂ ಮುಷ್ಕರ ಮಾಡಿಸುತ್ತಿದ್ದಾರೆ ಎಂದು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಡಾ.ಪ್ರವೀಣ್,…

ಮೈಸೂರಿನ ಮೂವರು ಪೊಲೀಸರಿಗೆ ರಾಷ್ಟ್ರಪತಿ ಪದಕ
ಮೈಸೂರು

ಮೈಸೂರಿನ ಮೂವರು ಪೊಲೀಸರಿಗೆ ರಾಷ್ಟ್ರಪತಿ ಪದಕ

August 15, 2018

ಮೈಸೂರು: 72ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪೊಲೀಸ್ ಸೇವೆಗೆ ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ ಕರ್ನಾಟಕದ 18 ಪೊಲೀಸ್ ಅಧಿಕಾರಿಗಳ ಪೈಕಿ ಮೈಸೂರಿನ ಮೂವರು ಪೊಲೀಸರು ಆಯ್ಕೆಯಾಗಿದ್ದಾರೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ 942 ಪೊಲೀಸರು ಮತ್ತು ಅರೆಸೇನಾ ಸಿಬ್ಬಂದಿಗೆ ರಾಷ್ಟ್ರಪತಿ ಶ್ಲಾಘ ನೀಯ ಸೇವಾ ಪದಕ ನೀಡಿ ಗೌರವಿಸಲಿ ದ್ದಾರೆ. ಪೊಲೀಸ್ ಶೌರ್ಯ ಪ್ರಶಸ್ತಿಗೆ 177 ಮಂದಿ. ವಿಶೇಷ ಸೇವೆಗೆ 88 ಮಂದಿ ಹಾಗೂ ಉತ್ತಮ ಸೇವೆಗೆ 675 ಪೆÇಲೀಸ್ ಸಿಬ್ಬಂದಿ…

ಕೊಲ್ಲಿ ಸೇತುವೆ ಜಲಾವೃತ: ರಸ್ತೆ ಸಂಚಾರ ಸ್ಥಗಿತ
ಮೈಸೂರು

ಕೊಲ್ಲಿ ಸೇತುವೆ ಜಲಾವೃತ: ರಸ್ತೆ ಸಂಚಾರ ಸ್ಥಗಿತ

August 15, 2018

ಬೈಲಕುಪ್ಪೆ:  ಧಾರಾಕಾರ ವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಪ್ಪದಿಂದ ಗೋಲ್ಡನ್ ಟೆಂಪಲ್‍ಗೆ ಹೋಗುವ ಮಾರ್ಗ ಮಧ್ಯೆ ರಸ್ತೆಯ ಕೊಲ್ಲಿ ಸೇತುವೆ ತುಂಬಿ ಜಲಾವೃತಗೊಂಡಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಪಿರಿಯಾಪಟ್ಟಣ ತಾಲೂಕು ಕೊಪ್ಪ ಗ್ರಾಮದಿಂದ ಗೋಲ್ಡನ್ ಟೆಂಪಲ್‍ಗೆ ಹೋಗುವ ರಸ್ತೆ ಮಾರ್ಗದ ಮಧ್ಯೆಭಾಗದಲ್ಲಿರುವ ಕೊಲ್ಲಿ ಸೇತುವೆ ಜಲಾವೃತದಿಂದ ಮುಚ್ಚಿ ಹೋಗಿದ್ದು, ಗಿರಗೂರು, ದೊಡ್ಡಹೊಸೂರು, ಚಿಕ್ಕ ಹೊಸೂರು, ದೊಡ್ಡಹರವೆ, ರಾಣಿ ಗೇಟ್, ಮಾರ್ಗ ಸಂಪೂರ್ಣ ಬಂದ್ ಆಗಿದೆ ಹಾಗೂ ಗಿರಗೂರು ಶಾಲೆಗೆ ತೆರಳಿದ್ದ ಶಾಲೆಯ ಮಕ್ಕಳು ಮನೆಗೆ ಹಿಂತಿರುಗಿಬರುವುದನ್ನು ಪೋಷಕರು ಕಾತುರದಿಂದ…

ಮಹಿಳೆಯರು ಸ್ವಯಂ ಉದ್ಯೋಗದ  ಮೂಲಕ ಆದಾಯ ಗಳಿಸಲು ಸಲಹೆ
ಮೈಸೂರು

ಮಹಿಳೆಯರು ಸ್ವಯಂ ಉದ್ಯೋಗದ  ಮೂಲಕ ಆದಾಯ ಗಳಿಸಲು ಸಲಹೆ

August 14, 2018

ಮೈಸೂರು:  ಎಲ್ಲರಿಗೂ ಸರ್ಕಾರಿ ಉದ್ಯೋಗ ಲಭಿಸದ ಹಿನ್ನೆಲೆಯಲ್ಲಿ ಮಹಿಳೆಯರು ಸ್ವಯಂ ಉದ್ಯೋಗ ಮಾಡುವ ಮೂಲಕ ಆದಾಯ ಗಳಿಸುವತ್ತ ಗಮನ ಹರಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಕೆ.ರಾಧ ಸಲಹೆ ನೀಡಿದರು. ಮೈಸೂರಿನ ವಿಜಯನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಎಸ್.ಎಸ್. ಟ್ರಸ್ಟ್ ಮತ್ತು ಮೈಸೂರು ಜಿಲ್ಲಾ ಮಹಿಳಾ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಸೋಮವಾರ ಮಹಿಳೆಯರಿಗಾಗಿ ಆಯೋಜಿಸಿದ್ದ ಮೂರು ದಿನಗಳ ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ…

ಮನೆಗೊಂದು ಮರ, ಊರಿಗೊಂದು ತೋಪು…
ಮೈಸೂರು

ಮನೆಗೊಂದು ಮರ, ಊರಿಗೊಂದು ತೋಪು…

August 14, 2018

ಮೈಸೂರು:  ರಾಜ್ಯ ಸರ್ಕಾರದ `ಹಸಿರು ಕರ್ನಾಟಕ’ ಯೋಜನೆಯಡಿ `ಮನೆಗೊಂದು ಮರ, ಊರಿಗೊಂದು ತೋಪು, ತಾಲೂಕಿಗೊಂದು ಕಿರು ಅರಣ್ಯ, ಜಿಲ್ಲೆಗೊಂದು ವನ’ ಧ್ಯೇಯ ವಾಕ್ಯದಡಿ ಆ.15ರಿಂದ 18ರವರೆಗೆ ವಿವಿಧೆಡೆ ಸಸಿ ನೆಡುವ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ವೆಂಕಟೇಸನ್, ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ದ್ವಜಾರೋಹಣದ ನಂತರ ಉನ್ನತ ಶಿಕ್ಷಣ ಸಚಿವರೂ ಆದ…

ಭಾರತ ಕಮ್ಯುನಿಸ್ಟ್ ಪಕ್ಷದ  ಕಾರ್ಯಕರ್ತರ ಪ್ರತಿಭಟನೆ
ಮೈಸೂರು

ಭಾರತ ಕಮ್ಯುನಿಸ್ಟ್ ಪಕ್ಷದ  ಕಾರ್ಯಕರ್ತರ ಪ್ರತಿಭಟನೆ

August 14, 2018

ಮೈಸೂರು:  ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಜನವಿರೋಧಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಮೈಸೂರು ಜಿಲ್ಲಾ ಸಮಿತಿ ಆಶ್ರಯದಲ್ಲಿ ಸೋಮವಾರ ಮೈಸೂರಿನ ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು. ಮೋದಿ ಆಡಳಿತ ಕಾರ್ಪೊರೇಟ್ ಕಂಪನಿಗಳ ಪರವಾಗಿದೆ. ಜೀವನಾಶ್ಯಕ ವಸ್ತುಗಳ ಬೆಲೆ ಏರಿಕೆ ತಡೆಯಲು ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ದುಡಿಯುವ ಕೈಗಳಿಗೆ ಅಗತ್ಯ ಉದ್ಯೋಗ ನೀಡುವ ನೀತಿ ಜಾರಿಗೊಳಿಸಬೇಕು. ರೈತರ…

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಮೈಸೂರು

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

August 14, 2018

ಮೈಸೂರು:  ಮೈಸೂರಿನ ಶ್ರೀ ಸ್ಥಾನಿಕವಾಸಿ ಜೈನ್ ಯುವ ಸಂಘಟನೆ ವತಿಯಿಂದ ಹಳ್ಳದಕೇರಿಯ ಮಹಾವೀರ ನಗರದಲ್ಲಿರುವ ಜೈನ್ ಸ್ಥಾನಕ್ ಸಂಸ್ಥೆಯ ಆವರಣದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಗೌರವಿಸಲಾಯಿತು. ಜೈನ್ ಮುನಿ ಡಾ. ಶ್ರೀ ಸಮಕಿತ್‍ಮುನೀಜಿ ಮಹಾರಾಜ್, ಶ್ರೀ ಭವಂತಮುನೀಜಿ ಮಹಾರಾಜ್ ಮತ್ತು ಶ್ರೀ ಜಯವಂತ ಮುನೀಜಿ ಮಹಾರಾಜ್ ಸಾನಿಧ್ಯ ವಹಿಸಿ ದ್ದರು. ಯುವ ಸಂಘಟನೆ ಅಧ್ಯಕ್ಷ ರಾಜನ್ ಬಾಗ್‍ಮಾರ್ ಸ್ವಾಗತಿಸಿದರು. 10ನೇ ತರಗತಿ, 12ನೇ ತರಗತಿ, ಪದವಿ ಮತ್ತು ವೃತ್ತಿಪರ ಶಿಕ್ಷಣಗಳಾದ ಡಿಪ್ಲೋಮಾ, ಬಿ.ಇ., ಎಂಬಿಬಿಎಸ್, ಎಂಬಿಎನಲ್ಲಿ ಅತೀ…

1 188 189 190 191 192 194
Translate »