ಮೈಸೂರು: ಮೈಸೂರಿನ ಭಾರತ್ ನಗರದಲ್ಲಿ ಆಕಸ್ಮಿಕ ಬೆಂಕಿ ಯಿಂದ ಗುಡಿಸಲೊಂದು ಭಸ್ಮವಾಗಿದ್ದು, ಈ ಸಂಬಂಧ ಮೈಸೂರು ಗ್ರಾಮಾಂ ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತ್‍ನಗರದ ಸ್ಲಂ ಬೋರ್ಡ್ ಕಾಂಪ್ಲೆಕ್ಸ್ ಸಮೀಪ ಆಟೋ ಚಾಲಕ ಸೈಯ್ಯದ್ ರಫೀಕ್ ಅಹಮದ್ ಕುಟುಂಬ ಗುಡಿಸಲು ನಿರ್ಮಿಸಿಕೊಂಡು ವಾಸವಿತ್ತು. ಮಾ.16 ರಂದು ಸೈಯ್ಯದ್ ಕೆಲಸಕ್ಕೆ ಹೋದ ಬಳಿಕ ಅವರ ಪತ್ನಿ ಮುಬೀನಾ ತಾಜ್ ಗಂಧದ ಕಡ್ಡಿ ವ್ಯಾಪಾರಕ್ಕೆ ತೆರಳಿ ದ್ದರು. ಮಕ್ಕಳು ಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ಗುಡಿಸಲು ಬೆಂಕಿಗೆ ಆಹುತಿಯಾಗಿದೆ. ಪರಿಣಾಮ…
ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಅಭಿನಂದನಾ ಸಮಾರಂಭ
March 22, 2019ಮೈಸೂರು: ಮೈಸೂರಿನ ಸಂಗೀತ ಮತ್ತು ನೃತ್ಯ ಸಂಸ್ಥೆಗಳ ಒಕ್ಕೂಟದ ವತಿಯಿಂದ ಮಾ. 25ರಂದು ಸಂಜೆ 6.30 ಗಂಟೆಗೆ ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂ ಗಣದಲ್ಲಿ ಪದ್ಮಶ್ರೀ ಪುರಸ್ಕøತ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಅಭಿ ನಂದನಾ ಸಮಾರಂಭವನ್ನು ಏರ್ಪಡಿಸ ಲಾಗಿದೆ. ಸಾನ್ನಿಧ್ಯವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ಉಸ್ತಾದ್ ಫಯಾಜ್ ಖಾನ್, ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಭಾಗವಹಿಸಲಿದ್ದು, ಕಲಾ ಪೋಷಕರಾದ ಕೆ.ವಿ. ಮೂರ್ತಿ ಅಧ್ಯಕ್ಷತೆ ವಹಿಸುವರು.
ಮಾ.24ರಂದು ವಿಶೇಷ ‘ಸ್ವಾತಿ’ ಪೂಜೆ
March 22, 2019ಮೈಸೂರು: ಮೈಸೂರು ನಗರದ ಜಯಲಕ್ಷ್ಮೀಪುರಂ, ಕಾಳಿದಾಸ ರಸ್ತೆ ಯಲ್ಲಿರುವ ಮೇಲುಕೋಟೆಯ ಯದುಗಿರಿ ಯತಿ ರಾಜ ಮಠದ ಶಾಖಾ ಮಠದಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮಾ.24ರಂದು ಶ್ರೀ ವಿಳಂಭಿ ನಾಮಸಂವತ್ಸರ, ಶುಕ್ಲ ಪಕ್ಷ, ಪಾಲ್ಗುಣ ಮಾಸ ಭಾನುವಾರ ‘ಸ್ವಾತಿ’ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ. ಶ್ರೀ ಶ್ರೀಯವರ ಆದೇಶಾನುಸಾರ ಅಂದು ಬೆಳಿಗ್ಗೆ 7.30 ಗಂಟೆಗೆ ಮಹಾ ಸುದರ್ಶನ ಸಂಕಲ್ಪ ಹೋಮ, ವಿಶೇಷ ಅಭಿಷೇಕ ಸೇವೆ, ಬೆಳಿಗ್ಗೆ 12.30 ಗಂಟೆಗೆ ಶ್ರೀಯವರಿಗೆ ವಿಶೇಷ ಅಲಂಕಾರ ಸೇವೆ, ಮಧ್ಯಾಹ್ನ 1.00 ಗಂಟೆಗೆ…
ಸುಮಲತಾ ನಾಮಪತ್ರ ಸಲ್ಲಿಕೆ
March 21, 2019ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿ ಸಿದ ಸುಮಲತಾ ಅಂಬರೀಷ್ ಅವರು, ಕಾಂಗ್ರೆಸ್, ರೈತ ಸಂಘದ ಕಾರ್ಯಕರ್ತರು, ಅಂಬರೀಷ್ ಅಭಿಮಾನಿ ಗಳಲ್ಲದೆ ಎಲ್ಲಾ ಸಮಾಜದ ಜನಸಾಗರದ ನಡುವೆ ಬೃಹತ್ ರ್ಯಾಲಿ ನಡೆಸಿ ಶಕ್ತಿ ಪ್ರದರ್ಶನ ನಡೆಸಿದರು. ಇಂದು ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ಚಾಮುಂಡೇ ಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಮಂಡ್ಯಕ್ಕೆ ಆಗಮಿಸಿದ ಸುಮಲತಾ, ಬೆಳಿಗ್ಗೆ 11.20ರಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ, ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು….
ಮಂಡ್ಯ ಜನತೆಗಾಗಿ ನನ್ನ ಸ್ಪರ್ಧೆ
March 21, 2019ಮಂಡ್ಯ: ಅಂಬರೀಷ್ ತಮ್ಮ ಜೀವನದಲ್ಲಿ ಯಾರ ಬಳಿಯೂ ಕೈಚಾಚಿಲ್ಲ. ಶತ್ರುಗಳಿಗೂ ಕೊಡುತ್ತಿದ್ದ ಕೊಡುಗೈ ದಾನಿ ಅವರು. ಆದರೆ ಅವರ ಧರ್ಮಪತ್ನಿಯಾಗಿ ನಾನು ನಿಮ್ಮ ಬಳಿ ಕೈಚಾಚುತ್ತಿದ್ದೇನೆ. ನನ್ನನ್ನು ಆಶೀರ್ವದಿಸಿ. ಜೀವನ ಪೂರ್ತಿ ನಿಮ್ಮ ಸೇವೆ ಮಾಡುತ್ತೇನೆ. ನಿಮ್ಮನ್ನು ಬಿಟ್ಟು ನಾನು ಎಲ್ಲೂ ಹೋಗಲ್ಲ ಎಂದು ಮಂಡ್ಯ ಲೋಕ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಭಾವುಕರಾಗಿ ನುಡಿದರು. ಇಂದು ಬೆಳಿಗ್ಗೆ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಮಧ್ಯಾಹ್ನ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ನಡೆದ…
ಚಾಮುಂಡೇಶ್ವರಿಗೆ ಸುಮಲತಾ ಪೂಜೆ ಸಲ್ಲಿಕೆ
March 21, 2019ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಸುಮಲತಾ ಅಂಬ ರೀಷ್ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಬುಧವಾರ ಬೆಳಿಗ್ಗೆ ಪೂಜೆ ಸಲ್ಲಿಸಿದರು. ನಿನ್ನೆ ತಿರುಪತಿಗೆ ತೆರಳಿ ವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ವಾಪಸ್ಸಾದ ನಂತರ ಇಂದು ಬೆಳಿಗ್ಗೆ 8.30ಕ್ಕೆ ಚಾಮುಂಡಿ ಬೆಟ್ಟಕ್ಕೆ ಪುತ್ರ ಅಭಿಷೇಕ್ ಹಾಗೂ ನಿರ್ಮಾ ಪಕ ರಾಕ್‍ಲೈನ್ ವೆಂಕಟೇಶ್ ಅವ ರೊಂದಿಗೆ ಆಗಮಿಸಿದ ಸುಮಲತಾ, ಮೊದ ಲಿಗೆ ಗಣಪತಿಗೆ ಪೂಜೆ, ಬಳಿಕ ಚಾಮುಂಡೇ ಶ್ವರಿ ದೇವಿಗೆ ಪೂಜೆ…
ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡುವ ಮಾತೇ ಇಲ್ಲ
March 21, 2019ಮೈಸೂರು: ರಾಜ್ಯ ದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಕಾರ್ಯಕರ್ತರು ಒಂದಾಗು ತ್ತಾರೆ ಎಂಬ ಗ್ಯಾರಂಟಿಯೇ ಇಲ್ಲ ಎಂದು ಶಾಸಕ ಎಲ್.ನಾಗೇಂದ್ರ ಹೇಳಿದರು. ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ 1,2,3,4,5 ಮತ್ತು 20ನೇ ವಾರ್ಡ್‍ನ ಬಿಜೆಪಿ ಕಾರ್ಯಕರ್ತರ ಸಭೆ ಯಲ್ಲಿ ಮಾತನಾಡಿದ ಅವರು, ಈಗಾ ಗಲೇ ಜೆಡಿಎಸ್-ಕಾಂಗ್ರೆಸ್ ಪ್ರಬಲವಾ ಗಿದ್ದ ಜಾಗದಲ್ಲಿಯೇ ಕಿತ್ತಾಡಿಕೊಂಡಿ ದ್ದಾರೆ. ಅಧಿಕಾರ ದಾಹದಿಂದ ಹೊಂದಾ ಣಿಕೆ ಮಾಡಿಕೊಂಡಿದ್ದಾರೆ. ಆದರೆ, ಕಾರ್ಯಕರ್ತರ ಮನಸ್ಥಿತಿಯನ್ನು ಬದ ಲಾಯಿಸಲು ಸಾಧ್ಯವಿಲ್ಲ ಎಂದರು. ಮಂಡ್ಯದಲ್ಲಿ ಕಾಂಗ್ರೆಸ್ ಸುಮಲತಾ ಅಂಬರೀಶ್ ಅವರಿಗೆ…
ಎರಡನೇ ದಿನ ಮೂವರು ನಾಮಪತ್ರ ಸಲ್ಲಿಕೆ
March 21, 2019ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಮೂವರು ಸ್ವತಂತ್ರ ಅಭ್ಯರ್ಥಿಗಳಾಗಿ ಎರಡನೇ ದಿನವಾದ ಇಂದು ನಾಮಪತ್ರಗಳನ್ನು ಸಲ್ಲಿಸಿದರು. ಮೈಸೂರಿನ ಶ್ರೀನಿವಾಸಯ್ಯ ಹಾಗೂ ಪಿರಿಯಾ ಪಟ್ಟಣದ ಪಿ.ಯಡೂರಪ್ಪ ಅವರು ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಪಕ್ಷೇತರರಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಮಂಗಳವಾರ ಕಾಂಗ್ರೆಸ್ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿ 2 ನಾಮಪತ್ರ ಸಲ್ಲಿಸಿದ್ದ ಅಯೂಬ್‍ಖಾನ್ ಅವರು ಇಂದೂ ಪಕ್ಷೇತರನಾಗಿ ಎರಡು ಉಮೇದುವಾರಿಕೆಯನ್ನು ಸಲ್ಲಿಸಿದರು. ಅದರನ್ವಯ ಎರಡು ದಿನಗಳಲ್ಲಿ ಒಟ್ಟು ಐದು ಮಂದಿ ಯಿಂದ…
ಜೆಡಿಎಸ್-ಕಾಂಗ್ರೆಸ್ ಒಡಕೇ ಬಿಜೆಪಿ ಗೆಲುವಿಗೆ ವರದಾನ
March 21, 2019ಮೈಸೂರು: ಜೆಡಿಎಸ್-ಕಾಂಗ್ರೆಸ್ ಮೇಲ್ನೋಟಕ್ಕೆ ಒಂದಾಗಿದ್ದರೂ ಕೆಳ ಹಂತದಲ್ಲಿರುವ ಒಡಕೇ ಮೋದಿಯವರು ಮತ್ತೆ ಪ್ರಧಾನಿಯಾಗಲು ಅನುಕೂಲ ವಾಗಲಿದೆ ಎಂದು ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು. ಮೈಸೂರಿನ ಟಿ.ಕೆ.ಬಡಾವಣೆ ಯಲ್ಲಿ ಟೀಮ್ ಮೋದಿ ಕಾರ್ಯಾಲಯವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಜೆಡಿಎಸ್‍ನವರಿಗೆ ಕಾಂಗ್ರೆಸ್‍ನ ವಿರೋಧವಿದ್ದು, ಮೋದಿಯವರಿಗೆ ಮತ ನೀಡುತ್ತಾರೆ. ಇದೇ ಬಿಜೆಪಿಗೆ ಲಾಭವಾಗುತ್ತದೆ ಎಂದರು. ರಾಜ್ಯದಲ್ಲಿ ಬಿಜೆಪಿ 22 ಸ್ಥಾನ ಗೆಲ್ಲುವುದು ಖಚಿತವಾಗಿದ್ದು, ಮತ್ತೆ ಮೋದಿಯವರು ಪ್ರಧಾನಿಯಾಗುತ್ತಾರೆ. ಕಳೆದ ಐದು ವರ್ಷದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ…
ಸ್ಪರ್ಧಾತ್ಮಕ ಪರೀಕ್ಷೆಗಳತ್ತ ವಿದ್ಯಾರ್ಥಿಗಳ ಸೆಳೆಯಲು ಮೈವಿವಿ ಯತ್ನ
March 21, 2019ಮೈಸೂರು: ದೇಶದ ಆಡಳಿತ ವ್ಯವಸ್ಥೆಯ ಉನ್ನತ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಆಸಕ್ತಿ ಇಲ್ಲವಾಗುತ್ತಿದ್ದು, ಸಂಬಂಧಿಸಿದ ಆಯೋಗ ಹಾಗೂ ಪ್ರಾಧಿಕಾರಿಗಳು ಸಕಾಲದಲ್ಲಿ ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆ ನಡೆಸದಿರುವುದೇ ಇದಕ್ಕೆ ಕಾರಣವಾಗಿ ರಬಹುದು ಎಂದು ಕಲಬುರ್ಗಿ ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ಎಸ್.ಆರ್. ನಿರಂಜನ ಅಭಿಪ್ರಾಯಪಟ್ಟರು. ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ವಿವಿಯ ಪರಿಶಿಷ್ಟ ಜಾತಿ ಮತ್ತು ವರ್ಗದ ವಿಶೇಷ ಘಟಕ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾ ಲಯದ ಜಂಟಿ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ…