ಶ್ರೀರಂಗಪಟ್ಟಣ: ಪಶ್ಚಿಮವಾಹಿನಿ ಹೊರವಲಯ ದಲ್ಲಿರುವ ಡಿ.ಎಂ.ಎಸ್. ಚಂದ್ರವನ ಆಶ್ರಮದಲ್ಲಿ 75ನೇ ಬೆಳದಿಂಗಳ ದೀಪಾರತಿ, ಧಾರ್ಮಿಕ ಕಾರ್ಯಕ್ರಮ ಮತ್ತು ದಾಸೋಹವು ಪೀಠಾಧ್ಯಕ್ಷರಾದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರ ಸಾನಿಧ್ಯದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಶ್ರೀಗಳು, ಇಂದಿನ ಯುಗಮಾನ ದಲ್ಲಿ ಜನರಿಗೆ ದುಃಖ ಕಡಿಮೆ ಮಾಡಲು ಆಗುತ್ತಿಲ್ಲ. ಯಾರಿಗೂ ನೆಮ್ಮದಿ-ಶಾಂತಿ ಸಿಗುತ್ತಿಲ್ಲ. ಹಿಂದೆ ಶರಣರು ಎಷ್ಟೇ ಕಷ್ಟ ಬಂದರೂ ಹೆದರದೆ ದೇವರಲ್ಲಿ ಆ ಕಷ್ಟ ಎದುರಿಸುವ ಶಕ್ತಿ ಬೇಡುತ್ತಿದ್ದರು. ಇಂದು ಕೆಲವರು ಮಾನಸಿಕ…
ಚುನಾವಣೆ: ಮತದಾನ ಸಂಬಂಧ ಹಿಂದೆಂದೂ ಕಂಡು ಕೇಳರಿಯದಂತಹ ವಿಶಿಷ್ಟ ರೀತಿ `ಜಾಗೃತಿ’ ಕಾರ್ಯಕ್ರಮ
March 22, 2019ಮೈಸೂರು: ಎಲ್ಲಾ ಮತದಾರರು ಒಳಗೊಳ್ಳುವ ಸುಗಮ, ನೈತಿಕ ಚುನಾವಣೆ ಆಶಯ ದೊಂದಿಗೆ ಚುನಾವಣಾ ಆಯೋಗ ಸಕ್ರಿಯವಾಗಿದೆ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ಸ್ವೀಪ್ ಸಮಿತಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ `ಮಿಂಚಿನ ನೋಂದಣಿ’ ಕಾರ್ಯಕ್ರಮದ ಮೂಲಕ ಹೊಸ ಮತ ದಾರರ ಸೇರ್ಪಡೆ ಕಾರ್ಯ ಮುಗಿದಿದ್ದು, ಎಲ್ಲಾ ಅರ್ಹ ಮತದಾರರು ಕಡ್ಡಾಯವಾಗಿ, ನೈತಿಕ ಮತದಾನ ಮಾಡಬೇಕೆಂಬ ಜಾಗೃತಿ ಮೂಡಿಸುವ ಕಾರ್ಯ ಅವಿರತವಾಗಿ ನಡೆ ದಿದೆ. 2014ರ ಲೋಕಸಭೆ ಹಾಗೂ 2018ರ ವಿಧಾನಸಭಾ…
ಪ್ರಚಾರ ಸಾಮಗ್ರಿಗಳ ರೌದ್ರಾವತಾರಕ್ಕೆ ಬ್ರೇಕ್
March 22, 2019ಮೈಸೂರು: ಚುನಾವಣೆ ಎಂದರೆ ಸಾಕು ಒಂದು ಕಾಲದಲ್ಲಿ ಸಾರ್ವ ಜನಿಕ ಸ್ಥಳಗಳಲ್ಲಿ ಪ್ರಚಾರದ ಭರಾಟೆ ಬಲು ಜೋರಿರುತ್ತಿತ್ತು. ಎಲ್ಲಿ ನೋಡಿದರಲ್ಲಿ ರಾಜ ಕೀಯ ಪಕ್ಷಗಳ ಪೋಸ್ಟರ್‍ಗಳು, ಬಂಟಿಂಗ್ಸ್ ಗಳು, ಬ್ಯಾನರ್‍ಗಳು, ಕಟೌಟ್‍ಗಳು ಹಾಗೂ ಕರಪತ್ರಗಳು ಸೇರಿದಂತೆ ನಾನಾ ವಿಧದ ಪ್ರಚಾರ ಸಾಮಗ್ರಿ ರಾರಾಜಿಸುತ್ತಿದ್ದವು. ಆದರೆ ಕೆಲ ವರ್ಷಗಳಿಂದೀಚೆಗೆ ಚುನಾ ವಣಾ ಆಯೋಗದ ಕಟ್ಟುನಿಟ್ಟಿನ ನಿಯಮಾ ವಳಿಗಳು ಇಂತಹ ಸನ್ನಿವೇಶಕ್ಕೆ ಕಡಿವಾಣ ಹಾಕಿದೆ. ಇದರ ಪರಿಣಾಮ ಚುನಾವಣೆಯ ಅಂದಿನ ಅಬ್ಬರದ ಪ್ರಚಾರದ ಕಿರಿಕಿರಿಯಿಂದ ಸಾರ್ವಜನಿಕರು ಮುಕ್ತರಾಗಿದ್ದಾರೆ. ಅದಾಗ್ಯೂ ಪಕ್ಷ…
ಇಂದಿನಿಂದ ವರಕೋಡಿನ ಪುರಾತನ ವರದರಾಜಸ್ವಾಮಿ ದೇವಾಲಯದ ವಿಗ್ರಹ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ
March 22, 2019ಮೈಸೂರು: ಹೊಯ್ಸಳರ ಕಾಲ ದಲ್ಲಿ ನಿರ್ಮಾಣವಾಗಿರುವ ಪುರಾತನ ದೇವಾಲಯ ಗಳಲ್ಲಿ ಒಂದಾದ ವರಕೋಡಿನ ವರದರಾಜಸ್ವಾಮಿ ದೇವಾಲಯ ಹಾಗೂ ಕಲ್ಯಾಣಿ ಪುನರುತ್ಥಾನ ಕಾರ್ಯ ಪೂರ್ಣಗೊಂಡಿದ್ದು, ನಾಳೆ(ಮಾ.22)ಯಿಂದ ಮಾ.27ರವರೆಗೆ ದೇವಾಲಯದ ವಿಗ್ರಹ ಪುನರ್ ಪ್ರತಿಷ್ಠಾಪನೆ ಹಾಗೂ ಕಲ್ಯಾ ಣಿಯ ಸಂಪ್ರೋಕ್ಷಣಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಲಿದೆ. ಮೈಸೂರು ತಾಲೂಕು ವರುಣಾ ಹೋಬಳಿ ವರಕೋಡು ಗ್ರಾಮದಲ್ಲಿ ಸಾವಿರಾರು ವರ್ಷಗಳ ಹಿಂದೆ ಹೊಯ್ಸಳರ ಕಾಲದಲ್ಲಿ ಸುಂದರ, ಭವ್ಯವಾದ ವರದರಾಜ ಸ್ವಾಮಿ ದೇವಾಲಯವನ್ನು ನಿರ್ಮಿಸಲಾಗಿದ್ದು, ಅದೇ ಸಂದರ್ಭದಲ್ಲಿ ದೊಡ್ಡ ಕಲ್ಯಾಣಿಯನ್ನು ನಿರ್ಮಿಸಲಾಗಿದೆ. ಪಾಳೆಗಾರರ ಆಳ್ವಿಕೆಯ ಸಂದರ್ಭದಲ್ಲಿ…
ಮಾನವ ಹಕ್ಕುಗಳ ಬಗ್ಗೆ ಕಾನೂನು ವಿದ್ಯಾರ್ಥಿಗಳು ಅರಿಯಬೇಕು
March 22, 2019ಮೈಸೂರು: ಮಾನವ ಹಕ್ಕುಗಳ ಬಗ್ಗೆ ಕಾನೂನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಹಾಗಾದರೆ ಮಾತ್ರ ಮಾನವ ಹಕ್ಕುಗಳಿಗೆ ಭಂಗ ಬರದಂತೆ ನೋಡಿಕೊಳ್ಳಲು ಸಾಧ್ಯ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅಭಿಪ್ರಾಯಪಟ್ಟರು. ಮೈಸೂರಿನ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂ ಗಣದಲ್ಲಿ ಮೈಸೂರು ವಿವಿ ಕಾನೂನು ಶಾಲೆ ಗುರುವಾರ ಆಯೋ ಜಿಸಿದ್ದ `ನ್ಯೂ ಹಾರಿಜನ್ಸ್ ಇನ್ ಇಂಟರ್‍ನ್ಯಾಷನಲ್ ರೈಟ್ಸ್ ಲಾ -ಕ್ರಿಟಿಕಲ್ ಡಿಸ್‍ಕೋರ್ಸ್’ ಕುರಿತ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ಇಡೀ ವಿಶ್ವದಲ್ಲಿ ಪ್ರತೀ ವರ್ಷ ಡಿ.10 ರಂದು ಮಾನವ…
ಹಣ, ಪ್ರೇಯಸಿ ವಿಚಾರಕ್ಕೆ ಗೆಳೆಯನಿಂದ ಸುಪಾರಿ
March 22, 2019ಮೈಸೂರು: ಮಾರ್ಚ್ 13ರಂದು ಹತ್ಯೆ ಯಾದ ಮಹದೇಶ್ವರ ಬಡಾವಣೆಯ ಯುವಕ ರಾಘ ವೇಂದ್ರನ ಹತ್ಯೆಗೆ ಹಣಕಾಸು ಹಾಗೂ ಪ್ರೇಯಸಿಯ ವಿಚಾರ ಕ್ಕಾಗಿ ಆತನ ಗೆಳೆಯನೇ ಸುಪಾರಿ ನೀಡಿದ್ದ ಎಂಬುದು ಬೆಳಕಿಗೆ ಬಂದಿದೆ. ನಿಗೂಢ ಹತ್ಯೆ ಪ್ರಕರಣ ವನ್ನು ಭೇದಿ ಸಿರುವ ವಿಜಯನಗರ ಪೊಲೀಸರು, ಸುಪಾರಿ ಹಂತಕ ರಿಂದ ರಾಘವೇಂದ್ರ ಹತ್ಯೆಯಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ. ವಿಜಯನಗರ ಇನ್‍ಸ್ಪೆಕ್ಟರ್ ಬಿ.ಜಿ.ಕುಮಾರ್ ಮತ್ತು ತನಿಖಾ ತಂಡದ ಪೊಲೀಸರು, ರಾಘವೇಂದ್ರನ ಹತ್ಯೆಗೆ ಸುಪಾರಿ ನೀಡಿದ ಲೋಕನಾಯಕ ನಗರದ ಶಿವಮಾದೇಗೌಡರ ಮಗ ಎಸ್.ಎಂ.ರಜತ್, ಸುಪಾರಿ ಹಂತಕರಾದ…
ಅಮೆರಿಕ ಸಂಜಾತನ ಕನ್ನಡ ಪ್ರೇಮ `ತಿರುಗಾಟ’ದಲ್ಲಿ ಅನಾವರಣ
March 22, 2019ಮೈಸೂರು: ಯುವ ಬರಹಗಾರ ಕಿರಣ್ ಎಸ್. ಭಟ್ ರಚಿತ `ತಿರುಗಾಟ’ ಪ್ರವಾಸ ಕಥನ ಪುಸ್ತಕ ವನ್ನು `ಸ್ಟಾರ್ ಆಫ್ ಮೈಸೂರ್’ ಹಾಗೂ `ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಬಿಡುಗಡೆಗೊಳಿಸಿದರು. ಮೈಸೂರಿನ ರ್ಯಾಡಿಸನ್ ಬ್ಲ್ಯೂ ಪ್ಲಾಜಾ ಹೋಟೆಲ್‍ನಲ್ಲಿ ಬೆಂಗಳೂರಿನ ಚಿರಂತನ ಮೀಡಿಯಾ ಸಲ್ಯೂಷನ್ಸ್ ಪ್ರಕಾಶನ ಗುರು ವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ತಿರುಗಾಟ’ ಪ್ರವಾಸ ಕಥನ ಬಿಡುಗಡೆ ಗೊಳಿಸಿ ಮಾತನಾಡಿದರು. ಯುವ ಬರಹಗಾರ ಕಿರಣ್ ಎಸ್.ಭಟ್ ಅತೀ ಚಿಕ್ಕ ವಯಸ್ಸಿನಲ್ಲೇ 124 ದೇಶಗಳನ್ನು ಸುತ್ತಿ, ಅಲ್ಲಿನ ಪರಿಸರ, ಪ್ರವಾಸಿತಾಣಗಳ…
ಭಕ್ತ ಸಾಗರದ ನಡುವೆ ಶ್ರೀಕಂಠೇಶ್ವರ ಸ್ವಾಮಿ ತೆಪ್ಪೋತ್ಸವ
March 22, 2019ನಂಜನಗೂಡು: ಪಂಚ ಮಹಾರಥೋತ್ಸವದ ಅಂಗವಾಗಿ ಗುರುವಾರ ಕಪಿಲಾ ನದಿಯಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಯವರ ತೆಪ್ಪೋತ್ಸವ ವಿಜೃಂಭಣೆಯಿಂದ ನಡೆಯಿತು. ಗುರುವಾರ ಸಂಜೆ 7.30ಕ್ಕೆ ದೇಗುಲದ ಪ್ರಧಾನ ಅರ್ಚಕ ಶ್ರೀನಾಗಚಂದ್ರ ದೀಕ್ಷಿತ್ ಅವರು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಹೂವಿನ ಅಲಂಕಾರ, ಶ್ರೀಕಂಠಮುಡಿ ಧಾರಣೆ ಯಿಂದಾಗಿ ವಿಶೇಷವಾಗಿ ಕಂಗೊಳಿಸು ತ್ತಿದ್ದ ಉತ್ಸವ ಮೂರ್ತಿಯನ್ನು ನೋಡಿದ ಸಹಸ್ರಾರು ಭಕ್ತರು ಭಾವಪರವಶರಾದರು. ನಂತರ ವಿದ್ಯುದ್ದೀಪ ಅಲಂಕೃತ ತೇಲುವ ದೇವಾಲಯಲ್ಲಿ ಆಸೀನರಾದ ಶ್ರೀ ಕಂಠೇ ಶ್ವರಸ್ವಾಮಿಯನ್ನು ನದಿಯಲ್ಲಿ…
ನಾಲೆ ನೀರಿಗೆ ಆಗ್ರಹಿಸಿ ತುರಗನೂರಲ್ಲಿ ಪ್ರತಿಭಟನೆ
March 22, 2019ಬನ್ನೂರು: ಪಟ್ಟಣ ಸಮೀಪದ ತುರಗನೂರಿನ ವಿಸಿ ನಾಲೆಗೆ ತಕ್ಷಣವೇ ನೀರು ಹರಿಸುವಂತೆ ಆಗ್ರಹಿಸಿ ತುರಗನೂರು ರೈತ ಮುಖಂಡರು ಕಾವೇರಿ ನೀರಾವರಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಮುಖಂಡ ಬಿ.ಆರ್.ಮಂಜುನಾಥ್, ತಾಲೂಕಿನ ರೈತರು ನೀರಿಲ್ಲದೇ ಪರದಾಡುವಂತಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ, ಕೆರೆ-ಕಟ್ಟೆಗಳು ಬತ್ತಿ ಹೋಗಿವೆ. ಜನ-ಜಾನುವಾರುಗಳಿಗೆ ಕುಡಿ ಯಲೂ ನೀರಿಲ್ಲದೇ ನಿತ್ಯವೂ ಪರದಾಡುವ ಸ್ಥಿತಿ ಇದೆ. ಇಷ್ಟೆಲ್ಲಾ ಸಮಸ್ಯೆ ಇರುವುದು ಗೊತ್ತಿದ್ದರೂ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಕಿಡಿಕಾರಿದರು. ನಿಗಮದ ಅಧಿಕಾರಿಗಳು ಕೂಡಲೇ…
ಎಸ್‍ಎಸ್‍ಎಲ್‍ಸಿ ಪರೀಕ್ಷಾರ್ಥಿಗಳಿಗೆ ಶಾಸಕ ರಾಮದಾಸ್ ಶುಭ ಹಾರೈಕೆ
March 22, 2019ಮೈಸೂರು: ರಾಜ್ಯದಾದ್ಯಂತ ಇಂದಿನಿಂದ ಎಸ್‍ಎಸ್ ಎಲ್‍ಸಿ ಪರೀಕ್ಷೆ ಆರಂಭವಾಗಿದ್ದು, ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ರುವ ಸೇಂಟ್ ಮೇರೀಸ್ ಶಾಲೆಗೆ ಗುರು ವಾರ ಬೆಳಿಗ್ಗೆ ಶಾಸಕ ಎಸ್.ಎ.ರಾಮದಾಸ್ ಭೇಟಿ ನೀಡಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ, ಶುಭಕೋರಿದರು. ಗೊಂದಲ ಹಾಗೂ ಒತ್ತಡಕ್ಕೆ ಒಳಗಾಗದೇ ಪರೀಕ್ಷೆ ಎದುರಿಸುವಂತೆ ಸಲಹೆ ನೀಡಿದರು. ಮೊದಲ ದಿನ ಪ್ರಥಮ ಭಾಷೆಯ ಪರೀಕ್ಷೆ ನಡೆಯಿತು. ಈ ಹಿನ್ನೆಲೆಯಲ್ಲಿ ಕೆಲ ಬೆಂಬ ಲಿಗರೊಂದಿಗೆ ಸೇಂಟ್ ಮೇರೀಸ್ ಶಾಲೆಯ ಬಳಿ ಆಗಮಿಸಿದ ಎಸ್.ಎ.ರಾಮ ದಾಸ್ ಪರೀಕ್ಷಾ…










