ಮೈಸೂರು: ಬಿಸಿಲಿಗೆ ಒಣಗಿ ನಿಂತಿದ್ದ ಪೊದೆಗೆ ತಗುಲಿದ ಬೆಂಕಿ ಯನ್ನು ಕೆಲವೇ ಕ್ಷಣಗಳಲ್ಲಿ ನಂದಿಸಿದ ಕಾರಣ ಭಾರೀ ಅವಘಡ ಸಂಭವಿಸುವುದು ತಪ್ಪಿದೆ. ನಗರದ ಬೋಗಾದಿ ರಸ್ತೆ, ಗಂಗೋತ್ರಿ ಬಡಾ ವಣೆಯ ವಾಗ್ದೇವಿನಗರದಲ್ಲಿರುವ ಶ್ರೀಮತಿ ಪುಟ್ಟೀರಮ್ಮ ಕಿವುಡ ಹೆಣ್ಣು ಮಕ್ಕಳ ವಸತಿ ಶಾಲೆ ಹಿಂಭಾಗ ಪೊದೆ ಬೆಳೆದಿತ್ತು. ಬುಧವಾರ ಮಧ್ಯಾಹ್ನದ ವೇಳೆಗೆ ಬೆಂಕಿ ಹತ್ತಿಕೊಂಡಿತ್ತು. ವಿಷಯ ತಿಳಿದ ತಕ್ಷಣ ಸರಸ್ವತಿಪುರಂ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿದ್ದಾರೆ. ವಸತಿ ಶಾಲೆಯಲ್ಲಿ ನೂರಾರು ವಿಶೇಷ ಚೇತನ…
`ಪ್ರಸ್ತುತ ಪ್ರದರ್ಶಕ ಕಲೆಗಳ ಮುಂದಿರುವ ಸವಾಲುಗಳು’ ಮಾ.26, 27ರಂದು ರಾಷ್ಟ್ರಮಟ್ಟದ ವಿಚಾರ ಸಂಕಿರಣ
March 14, 2019ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳಿಂದ ಪ್ರಬಂಧ ಆಹ್ವಾನ ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಬೆಂಗಳೂರಿನ ಥಿಯೇಟರ್ ರಿಸರ್ಚ್ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಮಾ.26 ಮತ್ತು 27ರಂದು `ಪ್ರಸ್ತುತ ಪ್ರದರ್ಶಕ ಕಲೆಗಳ ಮುಂದಿರುವ ಸವಾಲುಗಳು’ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪ್ರದರ್ಶಕ ಕಲೆಗಳ ಸ್ವರೂಪ, ವ್ಯಾಪ್ತಿ ಕೂಡ ಬದಲಾಗುತ್ತಿದ್ದು, ಪ್ರತಿ ಕಲಾ ಪ್ರಕಾರಗಳು ಅನೇಕ ಸವಾಲುಗಳನ್ನು ಎದು ರಿಸುತ್ತಿವೆ. ಈ ನಿಟ್ಟಿನಲ್ಲಿ ಪ್ರದರ್ಶಕ ಕಲೆಗಳು…
ಡಾ. ವೆಂಕಟೇಶ್ ನೂತನ ಜಿಲ್ಲಾ ಆರೋಗ್ಯಾಧಿಕಾರಿ
March 14, 2019ಮೈಸೂರು: ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ವೆಂಕಟೇಶ್ ಅಧಿಕಾರ ವಹಿಸಿಕೊಂಡರು. ಡಾ. ಬಿ.ಬಸವರಾಜು ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಹಾಸನದಲ್ಲಿ ಆರೋಗ್ಯಾಧಿಕಾರಿಯಾಗಿದ್ದ ಡಾ. ವೆಂಕಟೇಶ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರು ಸೋಮವಾರ ಮೈಸೂರಿನ ನಜರ್ ಬಾದಿನಲ್ಲಿರುವ ಡಿಹೆಚ್‍ಓ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ನಂತರ ಮಾತನಾಡಿದ ಅವರು, ಮೈಸೂರು ಜಿಲ್ಲೆ ವೈದ್ಯಕೀಯ ಸೇವೆಯಲ್ಲಿ ಮುಂಚೂಣಿ ಯಲ್ಲಿದೆ. ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಗ್ರಾಮೀಣ ಪ್ರದೇಶದ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಗಳಲ್ಲಿ ಉತ್ತಮ ವೈದ್ಯಕೀಯ ಸೇವೆ ಒದಗಿಸಲು…
ಜೆಡಿಎಸ್-ಕಾಂಗ್ರೆಸ್ ಮೈತ್ರಿ ನಗಣ್ಯ ಮತ್ತೆ ಮೋದಿ ಪ್ರಧಾನಿ: ಈಶ್ವರಪ್ಪ ವಿಶ್ವಾಸ
March 13, 2019ಮೈಸೂರು: ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ದೇಶವೇ ಒಂದಾಗಿರುವಾಗ ಜೆಡಿಎಸ್, ಕಾಂಗ್ರೆಸ್‍ನಂತಹ ಚಿಲ್ಲರೆ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ನಗಣ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಲು ಮಂಗಳವಾರ ಮೈಸೂರಿಗೆ ಆಗಮಿಸಿದ್ದ ಕೆ.ಎಸ್.ಈಶ್ವರಪ್ಪ ಖಾಸಗಿ ಹೋಟೆಲ್‍ವೊಂದರಲ್ಲಿ ಪತ್ರಕರ್ತರೊಂದಿಗೆ ಮಾತ ನಾಡಿ, ಕಳೆದ ಐದು ವರ್ಷಗಳಿಂದ ದೇಶದ ಪ್ರಧಾನಿಯಾಗಿ ಉತ್ತಮ ಆಡಳಿತ ನಡೆಸಿರುವ ನರೇಂದ್ರ ಮೋದಿ ಅವರು ದೇಶದ ಪ್ರಗತಿಗೆ ನೀಡಿರುವ ಆದ್ಯತೆಯನ್ನು ಮನಗಂಡು ಮತ್ತೊಮ್ಮೆ…
ಬಿಜೆಪಿ ವೈಫಲ್ಯ ಮುಚ್ಚಿಕೊಳ್ಳಲು ‘ಸರ್ಜಿಕಲ್ ಸ್ಟ್ರೈಕ್’ ಬಿಂಬಿಸಲಾಗುತ್ತಿದೆ
March 13, 2019ಮೈಸೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ವೈಫಲ್ಯ ಗಳನ್ನು ಮುಚ್ಚಿಕೊಳ್ಳಲು ಸರ್ಜಿಕಲ್ ಸ್ಟ್ರೈಕ್ ಮತ್ತು ರೈತರ ಖಾತೆಗೆ 6 ಸಾವಿರ ಹಾಕುವು ದಾಗಿ ಹೇಳಿಕೊಳ್ಳುತ್ತಿದೆ ಎಂದು ಸಂಸದ ಆರ್.ಧ್ರುವನಾರಾಯಣ್ ಟೀಕಿಸಿದರು. ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಮೈಸೂರು ಜಿಲ್ಲಾ ಪದವೀಧರ ಮತ್ತು ಶಿಕ್ಷಕರ ಕಾಂಗ್ರೆಸ್ ಘಟಕ ಉದ್ಘಾಟನೆ, ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಜಿಕಲ್ ಸ್ಟ್ರೈಕ್ ಕುರಿತು ನಮ್ಮ ಅಪಸ್ವರವಿಲ್ಲ. ಆದರೆ, ಉಗ್ರರು ದೇಶದ ಒಳಗೆ ನುಗ್ಗದಂತೆ…
ಮನೆಗಳ ಮೇಲೆ ಹಾಕಲಾದ ಬಿಜೆಪಿ ಬಾವುಟ ತೆರವು ವೇಳೆ ಮಾತಿನ ಚಕಮಕಿ: ಕೆಲಕಾಲ ಗೊಂದಲ
March 13, 2019ಮೈಸೂರು: ಕೆ.ಆರ್.ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ಮನೆ ಮೇಲೆ ಹಾರಿಸಿದ್ದ ಬಿಜೆಪಿ ಬಾವುಟ ತೆರವುಗೊಳಿ ಸುವ ಸಂಬಂಧ ಚುನಾವಣಾ ಸಿಬ್ಬಂದಿ ಮತ್ತು ಕಾರ್ಯಕರ್ತರ ನಡುವೆ ಇಂದು ಸಂಜೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಮೈಸೂರಿನ ಅಗ್ರಹಾರದ ತ್ಯಾಗರಾಜ ರಸ್ತೆಯ ನಿವಾಸಿ, ಬಿಜೆಪಿ ಕಾರ್ಯಕರ್ತ ಪ್ರಭುಸ್ವಾಮಿ, ಚುನಾವಣಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಕೆಲಕಾಲ ಗೊಂದಲಮಯ ವಾಯಿತು. ಚುನಾವಣಾ ಸಿಬ್ಬಂದಿ ಮತ್ತು ಅಭಯ ತಂಡದೊಂದಿಗೆ ಕೆ.ಆರ್.ಕ್ಷೇತ್ರ ವ್ಯಾಪ್ತಿಯ ತ್ಯಾಗರಾಜ ರಸ್ತೆಯಲ್ಲಿ ಅಳವಡಿ ಸಿದ್ದ ಬಾವುಟ,…
ಸರ್ಕಾರಿ ಕಚೇರಿ ವಾಹನದ ವಿವರ ಸಲ್ಲಿಸಿ
March 13, 2019ಮೈಸೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಸಂಬಂಧ ಚುನಾವಣಾ ಕಾರ್ಯಕ್ಕೆ ಸರ್ಕಾರಿ ವಾಹನಗಳನ್ನು ಬಳಸಿಕೊಳ್ಳಬೇಕಾಗಿರುವುದರಿಂದ ಇಲಾಖಾ ಅಧಿಕಾರಿಗಳು ಸರ್ಕಾರಿ ವಾಹನಗಳು ದರುಸ್ತಿಯಲ್ಲಿದ್ದಲ್ಲಿ ಅದನ್ನು ದುರಸ್ತಿ ಪಡಿಸಿ ಸುಸ್ಥಿತಿಯಲ್ಲಿಟ್ಟು ಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಿಂದ ವಾಹನ ಕೋರಿಕೆ ಅಥವಾ ಆದೇಶಗಳು ಬಂದಲ್ಲಿ ವಿಳಂಬ ಮಾಡದೇ ಸಕಾಲದಲ್ಲಿ ವಾಹನಗಳನ್ನು ನಿರ್ದೇಶಿಸುವ ಅಧಿಕಾರಿಗಳ ಬಳಿ ಚುನಾವಣಾ ಕಾರ್ಯಕ್ಕೆ ನಿಯೋಜಿಸಲು ಜಿಲ್ಲಾ ಮಟ್ಟದ/ತಾಲೂಕು ಮಟ್ಟದ ಎಲ್ಲಾ ಕೇಂದ್ರ/ರಾಜ್ಯ ಸರ್ಕಾರ/ ಮಂಡಳಿ/ನಿಗಮ ಮತ್ತು ಸ್ವಾಯತ್ತತಾ ಸಂಸ್ಥೆಗಳ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಧಿಕಾರಿಗಳು…
ಶಿಕ್ಷಣ ಸಂಸ್ಥೆಗಳು ಪದವಿ ನೀಡಿದರೆ ಸಾಲದು, ವೃತ್ತಿ ಕೌಶಲ್ಯ ಬೆಳೆಸುವುದು ಅವಶ್ಯ
March 13, 2019ಮೈಸೂರು: ಪ್ರಸ್ತುತ ದಲ್ಲಿ ಶಿಕ್ಷಣ ಸಂಸ್ಥೆಗಳು ಕೇವಲ ಪದವೀ ಧರರನ್ನಷ್ಟೇ ಸೃಷ್ಟಿ ಮಾಡಿದರೆ ಸಾಲದು. ಅವರಿಗೆ ವೃತ್ತಿಕೌಶಲ್ಯ ಹಾಗೂ ಸ್ಪರ್ಧಾತ್ಮಕ ಜಗತ್ತು ಅಪೇಕ್ಷಿಸುವ ಚಾಕಚಕ್ಯತೆ ಬೆಳೆ ಸುವ ಮಹತ್ವದ ಜವಾಬ್ದಾರಿ ವಹಿಸಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಅಭಿಪ್ರಾಯಪಟ್ಟರು. ಮೈಸೂರಿನ ವಿದ್ಯಾವಿಕಾಸ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿರುವ `ಇಗ್ನೈಟ್-2019’ ಎರಡು ದಿನಗಳ ರಾಜ್ಯ ಮಟ್ಟದ ವಾಣಿಜ್ಯ, ನಿರ್ವಹಣೆ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ (ಐಟಿ) ಸಂಬಂಧಿಸಿದ ವಿವಿಧ ಸ್ಪರ್ಧೆಗಳ ಅಂತರ ಕಾಲೇಜು ಉತ್ಸವಕ್ಕೆ ಮಂಗಳವಾರ ಕಾಲೇಜಿನ…
ಮೈಸೂರಲ್ಲಿ ಭಯೋತ್ಪಾದನೆ ನಿಗ್ರಹಿಸಿ
March 13, 2019ಮೈಸೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿ ಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಮೈಸೂರು ನಗರ ಹಾಗೂ ಜಿಲ್ಲೆಯಾ ದ್ಯಂತ ಭಯೋತ್ಪಾದನೆಯನ್ನು ನಿಗ್ರಹಿಸಿ ಎಂದು ರಾಜ್ಯ ಆಂತರಿಕ ಭದ್ರತಾ ವಿಭಾ ಗದ ಐಜಿಪಿ ಸೌಮೇಂದರ್ ಮುಖರ್ಜಿ ಅವರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ. ಮೈಸೂರಿನ ಎಸ್ಪಿ ಕಚೇರಿ ಸಭಾಂಗಣ ದಲ್ಲಿ ಮೈಸೂರು ನಗರದಲ್ಲಿ ಸ್ಥಾಪಿತ ವಾಗಿರುವ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗ ಳೊಂದಿಗೆ ಇಂದು ಬೆಳಿಗ್ಗೆ 10.30ರಿಂದ ಸಂಜೆ 5 ಗಂಟೆವರೆಗೂ…
ಮೈಸೂರಲ್ಲಿ ಟಿಬೆಟಿಯನ್ ಮಹಿಳೆಯರಿಂದ ನ್ಯಾಯಕ್ಕಾಗಿ ಧರಣಿ
March 13, 2019ಮೈಸೂರು: ಹದಿನಾಲ್ಕನೇ ದಲೈಲಾಮಾ ಅವರು ಗುರುತಿಸಿದ್ದ ವಿಧಾನ ಆಧರಿಸಿ ಚೀನಿ ನಾಯಕರೊಂದಿಗೆ ಮಾತುಕತೆ ನಡೆಸಬೇಕು. ಟಿಬೆಟ್‍ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ತಡೆಗಟ್ಟಬೇಕು. 11ನೇ ಪಂಚನ್ ಲಾಮಾರನ್ನು ಪತ್ತೆ ಹಚ್ಚಬೇಕು. ನಮ್ಮ ಧಾರ್ಮಿಕ ಸ್ವಾತಂತ್ರ್ಯ ರಕ್ಷಿಸಬೇಕು ಎಂದು ಆಗ್ರಹಿಸಿ ರೀಜನಲ್ ಟಿಬೆಟ್ ವುಮೆನ್ ಅಸೋಸಿಯೇಷನ್ ವತಿಯಿಂದ ಮಂಗಳವಾರ ಮೈಸೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. 60ನೇ ಟಿಬೆಟಿಯನ್ ಮಹಿಳಾ ಬಂಡಾಯ ದಿನದ ಅಂಗವಾಗಿ ನಡೆದ ಈ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಮಂದಿ ಟಿಬೆಟಿಯನ್ ಮಹಿಳೆಯರು ಪಾಲ್ಗೊಂಡಿದ್ದರು. ಮೈಸೂರಿನ ಅರಮನೆ ಕೋಟೆ…