ಮೈಸೂರಲ್ಲಿ ಟಿಬೆಟಿಯನ್  ಮಹಿಳೆಯರಿಂದ ನ್ಯಾಯಕ್ಕಾಗಿ ಧರಣಿ
ಮೈಸೂರು

ಮೈಸೂರಲ್ಲಿ ಟಿಬೆಟಿಯನ್ ಮಹಿಳೆಯರಿಂದ ನ್ಯಾಯಕ್ಕಾಗಿ ಧರಣಿ

March 13, 2019

ಮೈಸೂರು: ಹದಿನಾಲ್ಕನೇ ದಲೈಲಾಮಾ ಅವರು ಗುರುತಿಸಿದ್ದ ವಿಧಾನ ಆಧರಿಸಿ ಚೀನಿ ನಾಯಕರೊಂದಿಗೆ ಮಾತುಕತೆ ನಡೆಸಬೇಕು. ಟಿಬೆಟ್‍ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ತಡೆಗಟ್ಟಬೇಕು. 11ನೇ ಪಂಚನ್ ಲಾಮಾರನ್ನು ಪತ್ತೆ ಹಚ್ಚಬೇಕು. ನಮ್ಮ ಧಾರ್ಮಿಕ ಸ್ವಾತಂತ್ರ್ಯ ರಕ್ಷಿಸಬೇಕು ಎಂದು ಆಗ್ರಹಿಸಿ ರೀಜನಲ್ ಟಿಬೆಟ್ ವುಮೆನ್ ಅಸೋಸಿಯೇಷನ್ ವತಿಯಿಂದ ಮಂಗಳವಾರ ಮೈಸೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

60ನೇ ಟಿಬೆಟಿಯನ್ ಮಹಿಳಾ ಬಂಡಾಯ ದಿನದ ಅಂಗವಾಗಿ ನಡೆದ ಈ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಮಂದಿ ಟಿಬೆಟಿಯನ್ ಮಹಿಳೆಯರು ಪಾಲ್ಗೊಂಡಿದ್ದರು. ಮೈಸೂರಿನ ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಬಳಿಯಿಂದ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿದ ಮೆರವಣಿಗೆ ಬಳಿಕ ಅಲ್ಲಿ ಕೆಲ ಹೊತ್ತು ಧರಣಿ ನಡೆಸಿದರು. ನಮ್ಮ ಸ್ವಂತ ದೇಶವಾದ ಟಿಬೆಟ್ ಸಮಸ್ಯೆಗಳತ್ತ ಗಮನ ಹರಿಸಬೇಕು. ಅಲ್ಲಿನ ಮಾನವ ಹಕ್ಕುಗಳ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.

1955ರಿಂದ ಟಿಬೆಟಿಯನ್ ಮಹಿಳಾ ಬಂಡಾಯದ ದಿನ ಆಚರಿಸುತ್ತಾ ಬರಲಾ ಗಿದ್ದು, 60ನೇ ಬಂಡಾಯ ದಿನದ ಸಂದರ್ಭದಲ್ಲಿ ಟಿಬೆಟ್‍ಗಾಗಿ ತ್ಯಾಗ, ಬಲಿದಾನ ಮಾಡಿದ ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಿದರು. ಚೀನಿಯರ ದುರಾಡಳಿತದಿಂದಾಗಿ ಟಿಬೆಟ್‍ನ ಸಂಸ್ಕøತಿ, ಪರಿಸರ, ಪ್ರಾಣಿ ಸಂಕುಲ ವಿನಾಶದ ಅಂಚಿನಲ್ಲಿದೆ. ಇದನ್ನು ರಕ್ಷಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿವಿಧ ಟಿಬೆಟಿಯನ್ ಮಹಿಳಾ ಸಂಘಟನೆಗಳ ಮುಖ್ಯಸ್ಥರಾದ ಬೈಲುಕುಪ್ಪೆ ಟಿಡಬ್ಲೂಎನ ತಷಿಚೊಡೊವ್, ಹುಣಸೂರಿನ ಆರ್‍ಟಿಡಬ್ಲೂಎನ ತಾಮ್ಡಿಂಗ್ ದೊಲ್ಮಾ, ಕೊಳ್ಳೇಗಾಲ ಆರ್‍ಟಿಡಬ್ಲೂಎನ ತಷಿ ಯಾಂಗ್‍ಜóಮ್ ಇನ್ನಿತರರು ಭಾಗವಹಿಸಿದ್ದರು.

Translate »