ಮೈಸೂರಲ್ಲಿ ಭಯೋತ್ಪಾದನೆ ನಿಗ್ರಹಿಸಿ
ಮೈಸೂರು

ಮೈಸೂರಲ್ಲಿ ಭಯೋತ್ಪಾದನೆ ನಿಗ್ರಹಿಸಿ

March 13, 2019

ಮೈಸೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿ ಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಮೈಸೂರು ನಗರ ಹಾಗೂ ಜಿಲ್ಲೆಯಾ ದ್ಯಂತ ಭಯೋತ್ಪಾದನೆಯನ್ನು ನಿಗ್ರಹಿಸಿ ಎಂದು ರಾಜ್ಯ ಆಂತರಿಕ ಭದ್ರತಾ ವಿಭಾ ಗದ ಐಜಿಪಿ ಸೌಮೇಂದರ್ ಮುಖರ್ಜಿ ಅವರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ.

ಮೈಸೂರಿನ ಎಸ್ಪಿ ಕಚೇರಿ ಸಭಾಂಗಣ ದಲ್ಲಿ ಮೈಸೂರು ನಗರದಲ್ಲಿ ಸ್ಥಾಪಿತ ವಾಗಿರುವ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗ ಳೊಂದಿಗೆ ಇಂದು ಬೆಳಿಗ್ಗೆ 10.30ರಿಂದ ಸಂಜೆ 5 ಗಂಟೆವರೆಗೂ ಭಯೋತ್ಪಾದನಾ ನಿಗ್ರಹ ಹಾಗೂ ಭಯೋತ್ಪಾದಕರನ್ನು ಬಗ್ಗುಬಡಿಯುವ ಸಂಬಂಧ ಐಜಿಪಿಯ ವರು ಸಭೆ ನಡೆಸಿದರು.

ಪ್ರತೀ ಠಾಣಾ ವ್ಯಾಪ್ತಿಯಲ್ಲಿ ಸ್ಪೆಷಲ್ ಬ್ರಾಂಚ್ ಕಾನ್ಸ್‍ಟೇಬಲ್‍ಗಳು ಗಸ್ತು ತಿರುಗಿ ಮಫ್ತಿಯಲ್ಲಿ ಮಾಹಿತಿ ಸಂಗ್ರಹಿಸಬೇಕು, ಲಾಡ್ಜ್‍ಗಳು, ವಸತಿ ಗೃಹಗಳು, ಪೇಯಿಂಗ್ ಗೆಸ್ಟ್‍ಗಳ ಮೇಲೆ ನಿಗಾ ಇರಿಸಿ ಅಪರಿಚಿತರು ಹಾಗೂ ಶಂಕಿತರ ಮೇಲೆ ನಿಗಾ ಇರಿಸಲು ಆಯಾ ಠಾಣಾ ಇನ್ಸ್‍ಪೆಕ್ಟರ್‍ಗಳು ಕಾರ್ಯಪ್ರವೃತ್ತರಾಗಬೇಕೆಂದು ಮುಖರ್ಜಿ ಸಲಹೆ ನೀಡಿದರು.

ಬೆಂಗಳೂರು ಹೊರತುಪಡಿಸಿದರೆ ಮೈಸೂರು ನಗರದಲ್ಲಿ ಮಾತ್ರ ಭಯೋ ತ್ಪಾದನಾ ನಿಗ್ರಹ ದಳ ಸ್ಥಾಪಿಸಲಾಗಿದೆ. 58 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಸ್ಕ್ವಾಡ್‍ನಲ್ಲಿ ಕೆಲಸ ಮಾಡು ತ್ತಿದ್ದು, ಮೈಎಲ್ಲಾ ಕಣ್ಣಾಗಿದ್ದು, ಯಾವುದೇ ವಿಧ್ವಂಸಕ ಕೃತ್ಯ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಅವರು ತಿಳಿಸಿದರು.

ಆಂಟಿ ಟೆರರಿಸಂ ಸ್ಕ್ವಾಡ್‍ನ ಹಿರಿಯ ರಾಜ್ಯ ಮತ್ತು ಕೇಂದ್ರದ ಅಧಿಕಾರಿಗ ಳೊಂದಿಗೆ ಸಮನ್ವಯ ಸಾಧಿಸಿ, ಕಾಲ ಕಾಲಕ್ಕೆ ಹೊರಡಿಸುವ ಸೂಚನೆ, ನಿರ್ದೇ ಶನಗಳಂತೆ ಎಚ್ಚರಿಕೆಯಿಂದ ಕೆಲಸ ಮಾಡಿ, ತಮಗೆ ಬೇಕಾದ ಸಲಕರಣೆಗಳು, ತಂತ್ರ ಜ್ಞಾನಗಳ ಬಗ್ಗೆ ಕೇಳಿ ಪಡೆದು ಭಯೋ ತ್ಪಾದನಾ ನಿಗ್ರಹ ಕಾರ್ಯವನ್ನು ಯಶಸ್ವಿ ಯಾಗಿ ನಿರ್ವಹಿಸಿ ಎಂದು ಐಜಿಪಿಯವರು ಅಧೀನಾಧಿಕಾರಿಗಳಿಗೆ ಸೂಚಿಸಿದರು.

ಕ್ಷಿಪ್ರ ಕಾರ್ಯಾಚರಣೆ ತಂಡ (Sಂಖಿ)ದ 32 ಸಿಬ್ಬಂದಿ ಹಾಗೂ ಆಂಟಿ ಟೆರರಿಸಂ ಟೀಂನ 58 ಮಂದಿಗೆ ಭಯೋತ್ಪಾದಕರು ಮತ್ತು ಭಯೋತ್ಪಾದನೆಯನ್ನು ಹತ್ತಿಕ್ಕುವ ಬಗ್ಗೆ ಸೂಕ್ತ ತರಬೇತಿ ಕೊಡಿಸಿ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲ ಕೃಷ್ಣ ಅವರಿಗೆ ಸೌಮೇಂದರ್ ಮುಖರ್ಜಿ ಸಲಹೆ ನೀಡಿದರು.

ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಡಿಸಿಪಿ ಮುತ್ತುರಾಜ್, ಎಸ್ಪಿ ಅಮಿತ್ ಸಿಂಗ್, ಎಎಸ್ಪಿ ಸ್ನೇಹಾ, ಎಸಿಪಿಗಳು, ಇನ್ಸ್‍ಪೆಕ್ಟರ್‍ಗಳು, ಸ್ಪೆಷಲ್ ಬ್ರಾಂಚ್ ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.

Translate »